ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಷ್ಪಂ ಪ್ರಿಯ ಪ್ಲೂರಲ್ಸ್ ಪಕ್ಷದ ''8 ದಿಶಾ'' ಪ್ರಣಾಳಿಕೆ

|
Google Oneindia Kannada News

ಲಂಡನ್ ನಿಂದ ಬಿಹಾರಕ್ಕೆ ಬಂದು ಸಿಎಂ ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕಿರುವ ಪುಷ್ಪಂ ಪ್ರಿಯ ಚೌಧರಿ ಅವರು ಬಿಹಾರ ವಿಧಾನಸಭಾ ಚುನಾವಣೆಗಾಗಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. 2020-2030ರ ತನಕದ 8 ಅಂಶ ಒಳಗೊಂಡ ಪ್ಲೂರಲ್ಸ್ ಪ್ರಣಾಳಿಕೆಯು ಬಿಹಾರಕ್ಕಾಗಿ ತನ್ನ ಮಾಸ್ಟರ್ ಪ್ಲಾನ್ ನಂತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಅಭ್ಯರ್ಥಿ ಪುಷ್ಪಂ ಪ್ರಿಯಾ ಚೌಧರಿ ಆಶಯದಂತೆ ಬಿಹಾರ ಪರಿವರ್ತನೆ ಹಾಗೂ ಎಲ್ಲರಿಗೂ ಆಡಳಿತ ಎಂಬ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಪ್ರಣಾಳಿಕೆಯ ಬಗ್ಗೆ ಎಂಟು ಉಪ-ಬಿಂದುಗಳಲ್ಲಿ ವಿವರವಾದ ಮಾಹಿತಿಯನ್ನು ನೀಡಲಾಗಿದೆ.

Plurals Pushpam Priya Choudhary Releases Manifesto For Bihar Assembly Election 2020

ನಿತೀಶ್‌ಗೆ ಸವಾಲು ಹಾಕಿ, ಬಿಹಾರಕ್ಕೆ ಬಂದಿಳಿದ ಯುವತಿ ಪುಷ್ಪಂ ನಿತೀಶ್‌ಗೆ ಸವಾಲು ಹಾಕಿ, ಬಿಹಾರಕ್ಕೆ ಬಂದಿಳಿದ ಯುವತಿ ಪುಷ್ಪಂ

ಬಹುವಚನ ಪಕ್ಷದ ಪ್ರಣಾಳಿಕೆಯ ಮುಖ್ಯಾಂಶಗಳು-
1. ಎಂಟು ಅಭಿವೃದ್ಧಿ ವಲಯಗಳಲ್ಲಿ ಬಿಹಾರ ಅಭಿವೃದ್ಧಿ, 8 ಹೊಸ ಎಕ್ಸ್ ಪ್ರೆಸ್ ವೇಗಳಿಗೆ 8 ನಗರಗಳನ್ನು ಸಂಪರ್ಕಿಸುವ ಯೋಜನೆ.
2. ಪ್ರತಿ ಅಭಿವೃದ್ಧಿ ವಲಯದಲ್ಲಿ ಎಂಟು ಕೈಗಾರಿಕಾ ವಲಯಗಳ ಸ್ಥಾಪನೆ.
3. ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿ ಮಾನ್ಯತೆ ನೀಡುವುದು.
4. ಕೃಷಿ, ಕೈಗಾರಿಕೆ, ಐಟಿ, ಹಣಕಾಸು ಸಂಬಂಧಿತ ಪ್ರತಿ ವಲಯದಲ್ಲಿ ಒಂದು ಲಕ್ಷ ಸ್ಟಾರ್ಟ್ ಅಪ್ ಗಳ ಸ್ಥಾಪನೆ.
5. ಪ್ರವಾಹ ಮತ್ತು ನೀರಾವರಿ ನಿಯಂತ್ರಣ ವ್ಯವಸ್ಥೆಯನ್ನು ಪ್ರತಿ ವಲಯದಲ್ಲೂ ಸ್ಥಾಪಿಸಲಾಗುವುದು.
6. ಪ್ರತಿ ಎಂಟು ವಲಯದಲ್ಲೂ ಕಲಾ ಶಿಕ್ಷಣ ಕೇಂದ್ರಗಳ ಸ್ಥಾಪನೆ.
7. ಪ್ರತಿ ವಾರ್ಡ್ ಮತ್ತು ಪಂಚಾಯತ್‌ನಲ್ಲಿ ಎಂಟು ಮೂಲ ಸೌಕರ್ಯ ಕೇಂದ್ರ.
8. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಎಂಟು ಮೂಲಭೂತ ಸೌಲಭ್ಯಗಳು

Plurals Pushpam Priya Choudhary Releases Manifesto For Bihar Assembly Election 2020

ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ

ಬಿಹಾರ: ಎಲ್ಲರಿಗೂ ಆಡಳಿತ
* ಎಲ್ಲರಿಗೂ ವರಮಾನಕ್ಕೆ ತಕ್ಕ ಸನ್ಮಾನ, ವಿದ್ಯೆಗೆ ತಕ್ಕ ಉದ್ಯೋಗ, ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ವೇತನ ತಾರತಮ್ಯಕ್ಕೆ ಬ್ರೇಕ್.
* ಪೊಲೀಸ್ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ, ಅತ್ಯಾಧುನೀಕರಣ ವ್ಯವಸ್ಥೆ ಜಾರಿ
* ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸಮಾನ ಶಾಲಾ ವ್ಯವಸ್ಥೆ ಜಾರಿಗೆ.
* ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ: ಕುಟುಂಬಕ್ಕೊಬ್ಬ ಡಾಕ್ಟರ್.
* ಆಲ್ಕೋಹಾಲ್ ಮೇಲೆ ನಿಯಂತ್ರಣ, ನಿಷೇಧ, ತ್ವರಿತ ಕ್ರಮ ಜಾರಿಗೆ
* ವಿಐಪಿ ಸಂಸ್ಕೃತಿ ನಿರ್ಮೂಲನೆ, ಬಂಗಲೆ, ಬಾಡಿಗಾರ್ಡ್, ಅನಗತ್ಯ ಖರ್ಚಿಗೆ ಕಡಿವಾಣ.
* ಮುಖ್ಯ ರಸ್ತೆ, ಗಲ್ಲಿ, ಬಡಾವಣೆ, ಗ್ರಾಮ, ಸರ್ಕಲ್ ಎಲ್ಲೆಡೆ ಸಿಸಿಟಿವಿ ಅಳವಡಿಕೆ, ಕಾನೂನು ಸುವ್ಯವಸ್ಥೆಗೆ ಒತ್ತು.
* ಪ್ರಜೆಗಳೇ ಪ್ರಭುಗಳು ಎಂಬ ಸಿದ್ಧಾಂತಕ್ಕೆ ಬದ್ಧ, ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ.

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್,28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್.10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ

English summary
Plurals Pushpam Priya Choudhary Releases Manifesto For Bihar Assembly Election 2020 gives Governance of all assurance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X