ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತ ತೈಲ ಉತ್ಪಾದನೆ ಕಡಿತಕ್ಕೆ ನಿರ್ಧಾರ; ಇತ್ತ ಪೆಟ್ರೋಲ್ ಬೆಲೆ ಏರಿಕೆ

|
Google Oneindia Kannada News

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC+) ಉತ್ಪಾದನೆಯನ್ನು ಕಡಿತ ಮಾಡಿಕೊಂಡಿದೆ ಇದರಿಂದ ನಮ್ಮ ದೇಶದಲ್ಲಿ ಮತ್ತೆ ಪೆಟ್ರೋಲ್‌- ಡೀಸೆಲ್‌ ಬೆಲೆಗೆ ನೇರ ಪರಿಣಾಮ ಬೀರಬಹುದು. ಒಪೆಕ್ + ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿವೆ. ಇದು ಇಂಧನ ಮಾರುಕಟ್ಟೆಗೆ ಆಘಾತಕಾರಿ ಸುದ್ದಿಯಾಗಿದೆ. ಪ್ರತಿನಿತ್ಯ 1 ಲಕ್ಷ ಬ್ಯಾರೆಲ್‌ಗಿಂತ ಕಡಿಮೆ ಕಚ್ಚಾ ತೈಲ ಉತ್ಪಾದಿಸಲು ನಿರ್ಧರಿಸಿವೆ. ಅಕ್ಟೋಬರ್ ತಿಂಗಳಿನಿಂದ ಇದು ಜಾರಿಗೆ ಬರಲಿದೆ. ಸದ್ಯಕ್ಕೆ ಉತ್ಪಾದನೆಯಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂದು ಇಂಧನ ವಿಶ್ಲೇಷಕರು ಅಭಿಪ್ರಾಯಪಟ್ಟಿರುವ ಸುದ್ದಿ ಮಾತ್ರ ನಿರಾಳವಾಗಿದೆ ಆದರೆ ಕಚ್ಚಾ ತೈಲ ಉತ್ಪಾದನೆ ಕಡೆಮೆಯಾದರೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿಂದ ಬೆಲೆ ಏರಿಕೆಯಾಗಬಹುದು ಎನ್ನಲಾಗುತ್ತಿದೆ.

ಇನ್ನು ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 84 ಪೈಸೆ ಏರಿಕೆಯಾಗಿದ್ದು, ₹119.67 ಕ್ಕೆ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ಗೆ 85 ಪೈಸೆಗೆ ಏರಿಕೆಯಾಗಿ ₹103.92 ಕ್ಕೆ ತಲುಪಿದೆ.

ಒಪೆಕ್ + ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿವೆ. ಇದು ಇಂಧನ ಮಾರುಕಟ್ಟೆಗೆ ಆಘಾತಕಾರಿ ಸುದ್ದಿಯಾಗಿದೆ. ಪ್ರತಿನಿತ್ಯ 1 ಲಕ್ಷ ಬ್ಯಾರೆಲ್‌ಗಿಂತ ಕಡಿಮೆ ಕಚ್ಚಾ ತೈಲ ಉತ್ಪಾದಿಸಲು ನಿರ್ಧರಿಸಿವೆ. ಅಕ್ಟೋಬರ್ ತಿಂಗಳಿನಿಂದ ಇದು ಜಾರಿಗೆ ಬರಲಿದೆ. ಸದ್ಯಕ್ಕೆ ಉತ್ಪಾದನೆಯಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂದು ಇಂಧನ ವಿಶ್ಲೇಷಕರು ನಂಬಿದ್ದಾರೆ. ಕಳೆದ ತಿಂಗಳು, ಈ ದೇಶಗಳು ಪ್ರತಿದಿನ 1 ಲಕ್ಷ ಬ್ಯಾರೆಲ್‌ಗಳಷ್ಟು ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದ್ದವು. ಯುಎಸ್ ಅಧ್ಯಕ್ಷ ಜೋ ಬೈಡನ್ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅಲ್ಲಿನ ಆಡಳಿತಗಾರರಿಗೆ ಮನವಿಯನ್ನು ಕೂಡ ನೀಡಿದ್ದರು.

ಅಕ್ಟೋಬರ್ 5ರಂದು ಒಪೆಕ್ + ರಾಷ್ಟ್ರಗಳ ಸಭೆ

ಅಕ್ಟೋಬರ್ 5ರಂದು ಒಪೆಕ್ + ರಾಷ್ಟ್ರಗಳ ಸಭೆ

OPEC+ ರಾಷ್ಟ್ರಗಳ ಮುಂದಿನ ಸಭೆಯನ್ನು ಈಗ ಅಕ್ಟೋಬರ್ 5 ರಂದು ನಡೆಸಲು ನಿರ್ಧರಿಸಲಾಗಿದೆ. ಉತ್ಪಾದನೆ ಕಡಿತದ ನಿರ್ಧಾರದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಜಿಗಿತವಾಗಿದೆ. ಬೆಳಿಗ್ಗೆ 8 ಗಂಟೆಗೆ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $ 96.43 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 3.41 ಶೇಕಡಾ ಏರಿಕೆಯಾಗಿದೆ. WTI ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $ 89.81 ರಷ್ಟು 2.94ರಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ.

ಕಚ್ಚಾ ತೈಲ ಬೆಲೆ ಕುಸಿತ: ಉತ್ಪಾದನೆ ಸ್ಥಗಿತ

ಕಚ್ಚಾ ತೈಲ ಬೆಲೆ ಕುಸಿತ: ಉತ್ಪಾದನೆ ಸ್ಥಗಿತ

ಆರ್ಥಿಕ ಚಟುವಟಿಕೆಯನ್ನು ಸುಧಾರಿಸಿದ ನಂತರ, ಮಾರ್ಚ್ 2022ರಲ್ಲಿ ಕಚ್ಚಾ ತೈಲದ ಬೆಲೆ ಹಲವು ವರ್ಷಗಳಲ್ಲಿ ಅತ್ಯಧಿಕ ಮಟ್ಟವನ್ನು ತಲುಪಿತು. ಅದರ ಬೆಲೆ ಕುಸಿತದ ಪ್ರವೃತ್ತಿ ಜೂನ್‌ನಿಂದ ಪ್ರಾರಂಭವಾಯಿತು. ಬೆಲೆಯು ಉನ್ನತ ಮಟ್ಟದಿಂದ ಶೇಕಡಾ 25ಕ್ಕಿಂತ ಹೆಚ್ಚು ಕುಸಿದಿದೆ. ಇಂದಿನ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಪರಸ್ಪರ ಬಿರುಕು ಇದಕ್ಕೆ ಪ್ರಮುಖ ಕಾರಣವಾಗಿದೆ.

ಯುರೋಪಿನಲ್ಲಿ ಅನಿಲ ಬಿಕ್ಕಟ್ಟಿನ ಸಾಧ್ಯತೆ

ಯುರೋಪಿನಲ್ಲಿ ಅನಿಲ ಬಿಕ್ಕಟ್ಟಿನ ಸಾಧ್ಯತೆ

ಯುರೋಪ್‌ನ ಹೆಚ್ಚಿನ ದೇಶಗಳು ಈ ವರ್ಷ ಚಳಿಗಾಲದ ಅವಧಿಯಲ್ಲಿ ಅನಿಲ ಪೂರೈಕೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳುತ್ತಾರೆ. ರಷ್ಯಾದ ಸರ್ಕಾರಿ-ಚಾಲಿತ ಇಂಧನ ಕಂಪನಿ ಗಜಾಪೊರಮ್ ಯುರೋಪ್‌ಗೆ ಮುಖ್ಯ ಅನಿಲ ಪೈಪ್‌ಲೈನ್ ಅನ್ನು ತೆರೆಯುವುದಿಲ್ಲ ಎಂದು ಹೇಳಿದೆ. ಈ ಘೋಷಣೆಯ ನಂತರ, ಯುರೋಪ್ನಲ್ಲಿ ಅನಿಲದ ಬೆಲೆ 25 ಪ್ರತಿಶತದಷ್ಟು ಜಿಗಿದಿದೆ. ನಾರ್ಡ್ ಸ್ಟ್ರೀಮ್ 1 ಪೈಪ್‌ಲೈನ್ ಮೂಲಕ ಜರ್ಮನಿಗೆ ಅನಿಲವನ್ನು ಸರಬರಾಜು ಮಾಡಲಾಗುತ್ತದೆ. ಮೂರು ದಿನಗಳ ನಿರ್ವಹಣೆಯ ಬಳಿಕ ಶನಿವಾರ ಮತ್ತೆ ತೆರೆಯಲಾಗುತ್ತಿದೆ.

ತೈಲದ ಮೇಲೆ ಮಾರುಕಟ್ಟೆಯ ಕಣ್ಣು

ತೈಲದ ಮೇಲೆ ಮಾರುಕಟ್ಟೆಯ ಕಣ್ಣು

ಆದಾಗ್ಯೂ, ಮಾರುಕಟ್ಟೆಯು ಇರಾನ್‌ನ ತೈಲದ ಮೇಲೆಯೂ ಕಣ್ಣಿಟ್ಟಿದೆ. ಶುಕ್ರವಾರ, ರಾಷ್ಟ್ರೀಯ ಇರಾನಿನ ತೈಲ ಕಂಪನಿಯ (NIOC) ಸಿಇಒ ಮಾರ್ಚ್ 2023ರ ವೇಳೆಗೆ, ಇರಾನ್ ತನ್ನ ತೈಲ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 4 ಮಿಲಿಯನ್ ಬ್ಯಾರೆಲ್‌ಗಳಿಗೆ ಹೆಚ್ಚಿಸಲಿದೆ ಎಂದು ಹೇಳಿದರು. ಪ್ರಸ್ತುತ ದಿನಕ್ಕೆ 3.83 ಮಿಲಿಯನ್ ಬ್ಯಾರೆಲ್‌ಗಳನ್ನು ಉತ್ಪಾದಿಸುತ್ತಿದೆ.

English summary
OPEC Plus Agrees to Cut Production by 100,000 Barrels a Day after oil price slump Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X