ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹದ ಮೇಲೆ ರಾತ್ರಿ ಆಕಾಶ, 360 ಡಿಗ್ರಿಯಲ್ಲಿ ತಿರುಗಿಸುವ ಅವಕಾಶ..!

|
Google Oneindia Kannada News

ಅಬ್ಬಬ್ಬಾ ನಾಸಾ 'ಪೆರ್‌ಸೆವೆರನ್ಸ್' ರೋವರ್ ಮೂಲಕ ಸಾಧಿಸುತ್ತಿರುವುದು ಅಷ್ಟಿಷ್ಟಲ್ಲ. ಈಗಾಗಲೇ ಮಂಗಳ ಗ್ರಹದ ಮೊಟ್ಟಮೊದಲ ಆಡಿಯೋ ಸಹಿತ ವಿಡಿಯೋ ರೆಕಾರ್ಡ್ ಮಾಡಿರುವ ಸಾಧನೆಗೈದ ನಾಸಾ, ಇದೀಗ ಮಂಗಳ ಗ್ರಹದ ಆಕಾಶದ 360 ಡಿಗ್ರಿ ಚಿತ್ರವನ್ನು ಯಶಸ್ವಿಯಾಗಿ ಕ್ಲಿಕ್ಕಿಸಿದೆ. 'ಪೆರ್‌ಸೆವೆರನ್ಸ್' ರೋವರ್ ಕ್ಲಿಕ್ ಮಾಡಿರುವ ಈ ಚಿತ್ರಕ್ಕೆ ಇಡೀ ಜಗತ್ತು ಫಿದಾ ಆಗಿದೆ. ಜಗತ್ತಿನಲ್ಲಿ ಸದ್ಯ ಲಭ್ಯವಿರುವ ಎಲ್ಲಾ ಅತ್ಯಾಧುನಿಕವಾದ ತಂತ್ರಜ್ಞಾನ ಬಳಸಿಕೊಂಡು ಪೆರ್‌ಸೆವೆರನ್ಸ್ ರೋವರ್ ಸಿದ್ಧಪಡಿಸಲಾಗಿತ್ತು.

ಕ್ಯಾಮೆರಾದಿಂದ ಹಿಡಿದು, ಚಕ್ರದ ತನಕ ಪ್ರತಿಯೊಂದೂ ಆಧುನಿಕ ಕಾಲದ ಫಲಿತಾಂಶವೇ ಆಗಿತ್ತು. ಈ ಬಾರಿ ಹೇಗಾದರೂ ಮಾಡಿ ಮಂಗಳನ ಅಂಗಳದಲ್ಲಿ ಜೀವಿಗಳ ಕುರುಹು ಕಂಡುಹಿಡಿಯಬೇಕು ಎಂಬ ಛಲದಲ್ಲಿ ನಾಸಾ ಗೆದ್ದುಬೀಗುವ ಮುನ್ಸೂಚನೆ ಸಿಗುತ್ತಿದೆ.

ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.? ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.?

ಅತ್ಯಂತ ಸ್ಪಷ್ಟವಾದ ಚಿತ್ರಗಳು ಹಾಗೂ ವಿಡಿಯೋ ಭೂಮಿಗೆ ರವಾನೆ ಆಗುತ್ತಿದ್ದು, ಸುಮಾರು 200 ಕೋಟಿ ವರ್ಷಗಳಷ್ಟು ಹಳೆಯದಾದ ಮಂಗಳ ಗ್ರಹದ ಕೆರೆ 'ಜೆಝೀರೋ'ದಲ್ಲಿ ಅಧ್ಯಯನ ಮುಂದುವರಿದಿದೆ. ಇದರ ಜೊತೆಗೆ ಮಂಗಳನ ಆಕಾಶದಲ್ಲಿ ನಡೆಯುವ ವಿಸ್ಮಯಗಳನ್ನೂ 'ಪೆರ್‌ಸೆವೆರನ್ಸ್' ರೋವರ್ ಕ್ಲಿಕ್ ಮಾಡಿ ಭೂಮಿಗೆ ರವಾನಿಸುತ್ತಿದ್ದು, ಮಾನವ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.

ಮಿಲ್ಕಿವೇ ಗ್ಯಾಲಕ್ಸಿ, ಕೋಟಿ ಕೋಟಿ ನಕ್ಷತ್ರ..!

ಮಿಲ್ಕಿವೇ ಗ್ಯಾಲಕ್ಸಿ, ಕೋಟಿ ಕೋಟಿ ನಕ್ಷತ್ರ..!

ಅಯ್ಯೋ ಇತ್ತೀಚೆಗೆ ಆಕಾಶದಲ್ಲಿ ಸರಿಯಾಗಿ ನಕ್ಷತ್ರಗಳೇ ಕಾಣ್ತಾ ಇಲ್ಲ, ನಾವು ಚಿಕ್ಕವರಿದ್ದಾಗ ತುಂಬಾ ತುಂಬಾ ನಕ್ಷತ್ರಗಳು ಕಾಣ್ತಿದ್ವು ಅಂತಾ ಜನರು ಕೊರಗುವುದನ್ನ ಕೇಳಿರುತ್ತೇವೆ. ಹೌದು, ಭೂಮಿಯ ಆಕಾಶದಲ್ಲಿ ನಕ್ಷತ್ರ ನೋಡೋದೆ ಸಾಹಸವಾಗಿದೆ. ಹಾಗಂತ ನಕ್ಷತ್ರಗಳು ನಾಪತ್ತೆಯಾಗಿಲ್ಲ, ಬದಲಾಗಿ ಭೂಮಿ ಮೇಲಿನ ಮಾಲಿನ್ಯ ನಕ್ಷತ್ರಗಳನ್ನು ಮರೆಯಾಗುವಂತೆ ಮಾಡಿದೆ ಅಷ್ಟೇ. ಆದರೆ ಮಂಗಳ ಗ್ರಹದ ಮೇಲೆ ಯಾವುದೇ ಮಾಲಿನ್ಯವೂ ಇಲ್ಲ. ಏಕೆಂದರೆ ಅಲ್ಲಿ ಮನುಷ್ಯನ ಅಸ್ತಿತ್ವ ಇಲ್ಲವಲ್ಲ. ಹೀಗಾಗಿ ಮಂಗಳನಲ್ಲಿ ರಾತ್ರಿ ಆಕಾಶ ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಪೆರ್‌ಸೆವೆರನ್ಸ್ ರೋವರ್ ಸೆರೆ ಹಿಡಿದಿರುವ ಮಂಗಳ ಗ್ರಹದ ಆಕಾಶದಲ್ಲಿ ಸೌರಮಂಡಲ ಅಸ್ತಿತ್ವ ಪಡೆದಿರುವ ಗ್ಯಾಲಕ್ಸಿ ಅಥವಾ ನಕ್ಷತ್ರ ಪುಂಜ ಮಿಲ್ಕಿವೇ ಸ್ಪಷ್ಟವಾಗಿ ಕಾಣುತ್ತೆ. ಕೋಟಿ ಕೋಟಿ ನಕ್ಷತ್ರಗಳೂ ಮಂಗಳ ಗ್ರಹದ ಆಕಾಶದಲ್ಲಿ ಮಿನುಗುತ್ತಿವೆ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. 'ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

ಮಂಗಳದ ಅಂಗಳದಲ್ಲಿ ರೋವರ್: ಯೋಜನೆಯ ಹಿಂದಿನ ವಿಜ್ಞಾನಿ ಭಾರತ ಮೂಲದ ಸ್ವಾತಿ ಮೋಹನ್ಮಂಗಳದ ಅಂಗಳದಲ್ಲಿ ರೋವರ್: ಯೋಜನೆಯ ಹಿಂದಿನ ವಿಜ್ಞಾನಿ ಭಾರತ ಮೂಲದ ಸ್ವಾತಿ ಮೋಹನ್

200 ಕೋಟಿ ವರ್ಷಗಳಷ್ಟು ಹಳೆ ಕೆರೆ

200 ಕೋಟಿ ವರ್ಷಗಳಷ್ಟು ಹಳೆ ಕೆರೆ

ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

 6 ಚಕ್ರದ ರೋವರ್..!

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ 'ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

11 ವರ್ಷದ ಶ್ರಮ, ಸಾವಿರ ಕೋಟಿ, ಒಂದೇ ಯೋಜನೆ..!11 ವರ್ಷದ ಶ್ರಮ, ಸಾವಿರ ಕೋಟಿ, ಒಂದೇ ಯೋಜನೆ..!

ಧೂಳು, ಬೆಳಕಿನ ಅಟ್ಟಹಾಸ..!

ಧೂಳು, ಬೆಳಕಿನ ಅಟ್ಟಹಾಸ..!

ನಗರ ಪ್ರದೇಶಗಳಲ್ಲಿ ನಕ್ಷತ್ರಗಳು ಕಣ್ಣಿಗೆ ಬೀಳದೇ ಇರುವುದಕ್ಕೆ ಬೆಳಕು ಮತ್ತು ಧೂಳು ಕಾರಣ. ಈ ಎರಡೂ ಅಂಶಗಳಿಂದ ಬಾಲ್ಯದ ದಿನಗಳು ನೆನಪಿಗೆ ಬರುತ್ತಿವೆ. ಹಾಗೇ ಈಗಿನ ತಲೆಮಾರು ತಮ್ಮ ಬಾಲ್ಯದ ಸಂತಸವನ್ನೇ ಕಳೆದುಕೊಳ್ಳುವಂತಾಗಿದೆ. ಮಕ್ಕಳು ಹಠ ಮಾಡಿದರೆ ರಾತ್ರಿಯಲ್ಲಿ ನಕ್ಷತ್ರ ತುಂಬಿದ ಆಕಾಶವನ್ನು ತೋರಿಸುತ್ತಾ ಕೈತುತ್ತು ತಿನ್ನಿಸುವುದು ಶತಮಾನಗಳಿಂದ ರೂಢಿಯಲ್ಲಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಕೈತುತ್ತು ಬಿಡಿ, ನೆಟ್ಟಗೆ ಆಕಾಶವೇ ಕಾಣುವುದಿಲ್ಲ. ಧೂಳು ಹಾಗೂ ಬೆಳಕು ಆಕಾಶವನ್ನ ಮರೆಮಾಚಿಬಿಡುತ್ತದೆ. ಹೀಗಾಗಿ ವಿಜ್ಞಾನಿಗಳು ಅಧ್ಯಯನಕ್ಕಾಗಿ ಗುಡ್ಡಗಾಡು ಅಥವಾ ಮರುಭೂಮಿ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಜಗತ್ತಿನ ಬಹುತೇಕ ಬೃಹತ್ ಟೆಲಿಸ್ಕೋಪ್‌ಗಳು ಸ್ಥಾಪನೆ ಆಗಿರುವುದು ಇಂತಹ ಪ್ರದೇಶಗಳಲ್ಲೇ ಎಂಬುದು ವಿಶೇಷ.

ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!

English summary
NASA’s Perseverance rover has sent 360-degree photo of Mars night sky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X