• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲೋ.. ನಾನು ಬದುಕಿದ್ದೀನಿ..! 20 ಕೋಟಿ ಕಿ.ಮೀ. ದೂರದಿಂದ ಮೆಸೇಜ್..!

|

ಭಾರತೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವದ ಹೊತ್ತಿಗೆ ಅಮೆರಿಕದ ನಾಸಾ ವಿಜ್ಞಾನಿಗಳ ಉಸಿರು ಏರುಪೇರಾಗಿತ್ತು. ಏಕೆಂದರೆ ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ರವಾನಿಸಿದ್ದ 'ಪೆರ್‌ಸೆವೆರನ್ಸ್' ಗುರಿ ಮುಟ್ಟಲು ಕೌಂಟ್‌ಡೌನ್ ಶುರುವಾಗಿತ್ತು. ಅಬ್ಬಬ್ಬಾ ಎಲ್ಲವೂ ಅಂದುಕೊಂಡಂತೆ ನೆರವೇರಿತ್ತು. ನಾಸಾ ಸಂಸ್ಥೆ ಮತ್ತೊಮ್ಮೆ ಮಂಗಳ ಗ್ರಹದ ನೆಲ ಮುಟ್ಟಲು ಯಶಸ್ವಿಯಾಗಿತ್ತು. ಆದರೆ ಅಲ್ಲಿ ಲ್ಯಾಂಡ್ ಆದ ಪೆರ್‌ಸೆವೆರನ್ಸ್ ರೋವರ್ ಕೆಲಸ ಮಾಡುತ್ತಿದೆಯಾ ಇಲ್ಲವಾ, ಜೀವಂತವಾಗಿ ಉಳಿದಿದೆಯಾ ಎಂಬುದರ ಮಾಹಿತಿ ಬೇಕಿತ್ತು.

ಇದೀಗ ಅದು ಕೂಡ ದೃಢವಾಗಿದೆ. 'ಪೆರ್‌ಸೆವೆರನ್ಸ್' ತಾನು ಜೀವಂತವಾಗಿ ಇದ್ದೀನಿ ಎಂಬುದಕ್ಕೆ ಕುರುಹು ಕಳುಹಿಸಿದೆ. ಮಂಗಳ ಗ್ರಹದ ನೆಲದ ಅತ್ಯದ್ಭುತ ಚಿತ್ರವನ್ನ ಭೂಮಿಗೆ ರವಾನಿಸಿದೆ. ಆದರೆ ಮಂಗಳ ಗ್ರಹದಲ್ಲಿ ತೆಗೆದ ಚಿತ್ರ ಭೂಮಿಗೆ ಬರಲು ಬರೋಬ್ಬರಿ 11 ನಿಮಿಷ 22 ಸೆಕೆಂಡ್ ಕಾಲಾವಕಾಶ ಬೇಕು. ಹೀಗಾಗಿ ಅಲ್ಲಿ ಏನಾಗುತ್ತಿದೆ ಎಂಬುದು ವಿಜ್ಞಾನಿಗಳಿಗೆ ತಕ್ಷಣಕ್ಕೆ ತಿಳಿಯದು. ಮಂಗಳ ಗ್ರಹ ಹಾಗೂ ಭೂ ಗ್ರಹದ ಮಧ್ಯೆ 20 ಕೋಟಿ ಕಿಲೋ ಮೀಟರ್‌ ಅಂತರ ಇರುತ್ತದೆ. ವರ್ಷದಲ್ಲಿ ಕೆಲವು ತಿಂಗಳು ಮಾತ್ರ ಎರಡೂ ಗ್ರಹಗಳು ಹತ್ತಿರ ಬರುತ್ತವೆ. ಆದರೆ ಮಿಕ್ಕಂತೆ ಸಾಕಷ್ಟು ಅಂತರದಲ್ಲಿ ಎರಡೂ ಗ್ರಹಗಳು ಸೂರ್ಯನನ್ನು ಸುತ್ತುತ್ತಿರುತ್ತವೆ.

ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..! ಭವಿಷ್ಯ ಬದಲಿಸಬಲ್ಲ ಯೋಜನೆ ಸಕ್ಸಸ್, ನಾಸಾ ಸಾಧನೆ ಅವಿಸ್ಮರಣೀಯ..!

200 ಕೋಟಿ ವರ್ಷಗಳಷ್ಟು ಹಳೇ ಕೆರೆ

200 ಕೋಟಿ ವರ್ಷಗಳಷ್ಟು ಹಳೇ ಕೆರೆ

ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ ‘ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, ‘ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲನ್ನು ಗೆದ್ದಿದೆ. ಪೆರ್‌ಸೆವೆರನ್ಸ್ ರೋವರ್ ಇದೀಗ ಲ್ಯಾಂಡ್ ಆಗಿರುವುದು ಮಂಗಳನ ‘ಜೆಝೀರೋ' ಕುಳಿ ಮೇಲೆ. ಈವರೆಗೂ ಯಾರೂ ಈ ಸಾಹಸ ಮಾಡಿರಲಿಲ್ಲ. ಏಕೆಂದರೆ ‘ಜೆಝೀರೋ' ಕುಳಿಯಲ್ಲಿ ತನ್ನ ಬಿಡಾರ ಹೂಡುವುದು ಯಾವುದೇ ದೇಶಕ್ಕೂ ಸಾಧ್ಯವಿರದ ಮಾತು. ಅಲ್ಲಿನ ಇಕ್ಕಟ್ಟಾದ ಪರಿಸ್ಥಿತಿ ಹಾಗೂ ವ್ಯತಿರಿಕ್ತ ವಾತಾವರಣ ಅಧ್ಯಯನಕ್ಕೆ ಸಹಕಾರಿ ಆಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾಸಾ, ತನ್ನ ರೋವರ್ ಲ್ಯಾಂಡ್ ಮಾಡುವಲ್ಲಿ ಯಶಸ್ಸು ಕಂಡಿದೆ.

ಅಬ್ಬಾ.. ಅಂತೂ ಫೋಟೋ ಸಿಕ್ಕಿತು..!

ಅಬ್ಬಾ.. ಅಂತೂ ಫೋಟೋ ಸಿಕ್ಕಿತು..!

ನಾಸಾ ವಿಜ್ಞಾನಿಗಳು ರೋವರ್ ಲ್ಯಾಂಡ್ ಆಗುವ ಕೊನೆ ಕ್ಷಣದ ಚಿತ್ರವನ್ನ ಕಂಡು ಖುಷಿ ಹಂಚಿಕೊಂಡಿದ್ದರು. ಆದರೆ ರೋವರ್‌ ಲ್ಯಾಂಡ್ ಆದ ಬಳಿಕ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸ್ಪಷ್ಟನೆ ಬೇಕಿತ್ತು. ಇದೀಗ ಸ್ಪಷ್ಟನೆ ಸೂಕ್ತವಾಗಿ ಸಿಕ್ಕಿದೆ. ನಾಸಾ ರೋವರ್ ಮಂಗಳನ ಮೇಲೆ ಇಳಿದು ಅತ್ಯುತ್ತಮ ಫೋಟೋಗಳನ್ನ ಭೂ ಗ್ರಹಕ್ಕೆ ರವಾನಿಸಿದೆ. ಕಲ್ಲು ಬಂಡೆಗಳು, ಮರುಭೂಮಿ ರೀತಿ ಬೋಳು ಬೋಳಾದ ಪ್ರದೇಶಗಳ ಚಿತ್ರವನ್ನು ‘ಪೆರ್‌ಸೆವೆರನ್ಸ್' ರೋವರ್ ನಾಸಾ ಕೇಂದ್ರಕ್ಕೆ ಕಳುಹಿಸಿದೆ. ಇದು ವಿಜ್ಞಾನಿಗಳ ಅಧ್ಯಯನಕ್ಕೆ ಪೂರಕವಾಗಿದೆ.

6 ಚಕ್ರದ ರೋವರ್..!

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ ‘ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

English summary
NASA’s Perseverance rover has sent the photo of planet Mars land to Earth after successful landing on Mars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X