ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬೆಗಾಲಿಡುತ್ತಾ ಮಂಗಳನ ಮೇಲೆ ‘ನಾಸಾ’ ರೋವರ್ ಹೆಜ್ಜೆ

|
Google Oneindia Kannada News

ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ರವಾನಿಸಿದ್ದ 'ಪೆರ್‌ಸೆವೆರನ್ಸ್' ರೋವರ್ ಅಂಬೆಗಾಲು ಇಡುತ್ತಾ ಅಧ್ಯಯನ ಆರಂಭಿಸಿದೆ. ಫೆಬ್ರವರಿ 19ರ ಬೆಳಗಿನ ಜಾವ ಮಂಗಳ ಗ್ರಹದ ನೆಲದ ಮೇಲೆ ಲ್ಯಾಂಡ್ ಆಗಿದ್ದ 'ಪೆರ್‌ಸೆವೆರನ್ಸ್' ಅದೇ ಜಾಗದಿಂದಲೇ ಇಷ್ಟುದಿನ ಫೋಟೋ ಕಳಿಸುತ್ತಿತ್ತು. ಇದೀಗ ತನ್ನ ಬುದ್ಧಿಶಕ್ತಿ ಬಳಸಿ, ಮಂಗಳನ ಮೇಲೆ ಸ್ವಯಂ ನಿಯಂತ್ರಣದ ಮೂಲಕ ಚಲಿಸುತ್ತಿದೆ.

ಪೆರ್‌ಸೆವೆರನ್ಸ್ ಉಡಾವಣೆ ಮಾಡಿದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇವೆ, ಹಾಗೇ 6 ಚಕ್ರಗಳನ್ನೂ ಪೆರ್‌ಸೆವೆರನ್ಸ್ ಹೊಂದಿದೆ. 2020ರ ಜುಲೈ ತಿಂಗಳಲ್ಲಿ ಬಾಹ್ಯಾಕಾಶಕ್ಕೆ ಹಾರಿತ್ತು.

 'ಕೊರೊನಾ’ ನಡುವೆ ದಿನಕ್ಕೆ 25 ಗಂಟೆ ಕೆಲಸ..! ಭಾರತೀಯರು ಇಲ್ಲದೆ 'ನಾಸಾ’ಗೆ ಬಲವಿಲ್ಲ..! 'ಕೊರೊನಾ’ ನಡುವೆ ದಿನಕ್ಕೆ 25 ಗಂಟೆ ಕೆಲಸ..! ಭಾರತೀಯರು ಇಲ್ಲದೆ 'ನಾಸಾ’ಗೆ ಬಲವಿಲ್ಲ..!

ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ 'ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ. ಮಂಗಳನ 'ಜೆಝೀರೋ' ಕುಳಿಯಲ್ಲಿ ಜೀವಿಗಳ ಸುಳಿವು ಸಿಗಬಹುದು ಎಂಬ ಆಶಯದಿಂದ ನಾಸಾ ರೋವರ್‌ನ ಇಲ್ಲೇ ಲ್ಯಾಂಡ್ ಮಾಡಿಸಿದೆ.

200 ಕೋಟಿ ವರ್ಷಗಳಷ್ಟು ಹಳೇ ಕೆರೆ

200 ಕೋಟಿ ವರ್ಷಗಳಷ್ಟು ಹಳೇ ಕೆರೆ

ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. 'ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ.

ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.?ಭೂಮಿಗೂ ಕೇಳಿಸಿದ ಮಂಗಳ ಗ್ರಹದ ಸದ್ದು..! ಶತಮಾನದ ವಿಸ್ಮಯ ನಡೆದಿದ್ದೇಗೆ.?

2026ಕ್ಕೆ ಮತ್ತೊಂದು ರೋವರ್..!

2026ಕ್ಕೆ ಮತ್ತೊಂದು ರೋವರ್..!

ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ 'ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ 'ಪೆರ್‌ಸೆವೆರನ್ಸ್' ಬಿಟ್ಟುಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನ ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನ ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೇಟ್‌ಗೆ ವರ್ಗಾಯಿಸಲಿದೆ.

ರಾಕೆಟ್ ಲಾಂಚ್ ಮಾಡಲಿದೆ ರೋವರ್

ರಾಕೆಟ್ ಲಾಂಚ್ ಮಾಡಲಿದೆ ರೋವರ್

ಇದು ಊಹೆಗೂ ನಿಲುಕದ ಅಚ್ಚರಿ. ರೋವರ್ ಮೂಲಕ ರಾಕೆಟ್ ಲಾಂಚ್ ಮಾಡುವ ಸಾಹಸಕ್ಕೆ ನಾಸಾ ಹಾಗೂ ಇಎಸ್‌ಎ ಕೈಹಾಕಿವೆ. ಮಂಗಳನ ಮಣ್ಣು ತುಂಬಿದ ಪುಟಾಣಿ ರಾಕೇಟ್ ಅನ್ನು 2026ರ ವೇಳೆಗೆ ಲಾಂಚ್ ಮಾಡಲಾಗುವುದು. ಈ ಕೆಲಸವನ್ನು ಯುರೋಪಿಯನ್ ರೋವರ್ ಮಾಡಲಿದೆ. ಹೀಗೆ ಪುಟಾಣಿ ರಾಕೆಟ್ ಲಾಂಚ್ ಮಾಡಲು ನಾಸಾ, ಇಎಸ್‌ಎ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಳ್ಳಲಿವೆ. ರಾಕೆಟ್ ಲಾಂಚರ್‌ಗೆ ಸ್ಫೋಟಕ ತುಂಬಿ ಬ್ಲಾಸ್ಟ್ ಮಾಡಲಾಗುವುದು. ಹೀಗೆ ಬ್ಲಾಸ್ಟ್ ಮಾಡಿ ಸೂಕ್ಷ್ಮವಾಗಿ ಪುಟಾಣಿ ರಾಕೆಟ್ ಅನ್ನ ಬಾಹ್ಯಾಕಾಶಕ್ಕೆ ಹಾರಿಸಲಾಗುವುದು. ಮಣ್ಣು ಹೊತ್ತು ಮಂಗಳನ ಬಾಹ್ಯಾಕಾಶದ ಕಡೆಗೆ ನುಗ್ಗುವ ರಾಕೆಟ್‌ಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಯೂರೋಪ್‌ನ ಉಪಗ್ರಹವೇ ಟಾರ್ಗೆಟ್.

ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..!ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..!

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಕೊನೆಯದಾಗಿ ತನ್ನಲ್ಲಿರುವ ಎಲ್ಲಾ ಸ್ಯಾಂಪಲ್‌ಗಳನ್ನ ಈ ಪುಟಾಣಿ ರಾಕೆಟ್ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ ಸ್ಯಾಟಲೈಟ್‌ಗೆ ಶಿಫ್ಟ್ ಮಾಡಲಿದೆ. ಹೀಗೆ ಅಂಗಾರಕನ ಮಣ್ಣಿನ ಸ್ಯಾಂಪಲ್ ಹೊತ್ತು ಹೊರಡುವ ಉಪಗ್ರಹ 2032ರ ವೇಳೆಗೆ ಭೂಮಿಯನ್ನು ತಲುಪುವ ನಿರೀಕ್ಷೆ ಇದೆ. ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ ಉತ್ತರ ಅಮೆರಿಕದ ಕಡೆಗೆ ಮಂಗಳನ ಕಲ್ಲು ಹಾಗೂ ಮಣ್ಣು ಇರುವ ಕಂಟೇನರ್ ಅನ್ನು ಉಪಗ್ರಹ ಎಸೆಯಲಿದೆ. ಹೀಗೆ ಭೂಮಿ ಮೇಲಿಂದ ಬೀಳುವ ಕಂಟೇನರ್ ಉತ್ತರ ಅಮೆರಿಕದಲ್ಲಿಯೇ ಬೀಳುವಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

English summary
Perseverance rover begins riding on planet Mars to find the hints of life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X