ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆರಾರಿವಾಳ್‌ಗೆ ಜೈಲಿನಿಂದ ಮುಕ್ತಿ: ರಾಜೀವ್ ಗಾಂಧಿ ಹತ್ಯೆ ನಂತರದ ಘಟನೆಗಳ ಟೈಮ್‌ಲೈನ್

|
Google Oneindia Kannada News

ನವದೆಹಲಿ, ಮೇ 18: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್ ಸುಮಾರು 30 ವರ್ಷಗಳಿಂದ ಜೈಲಿನಲ್ಲಿದ್ದು, ಸದ್ಯ ಜಾಮೀನು ಮಂಜೂರು ಆಗಿದೆ. ನ್ಯಾಯಮೂರ್ತಿ ನಾಗೇಶ್ವರರಾವ್ ಮತ್ತು ನ್ಯಾಯಮೂರ್ತಿ ಬಿ. ಆರ್. ಗಾವಿ ಅವರಿದ್ದ ವಿಭಾಗೀಯ ಪೀಠ ಬುಧವಾರ ಎ. ಜಿ. ಪೇರರಿವಾಲನ್‌ಗೆ ಜಾಮೀನು ನೀಡಿದೆ. 32 ವರ್ಷಗಳಿಂದ ಜೈಲಿನಲ್ಲಿದ್ದ ಎ. ಜಿ. ಪೇರರಿವಾಲನ್‌ ಅವರನ್ನು ಜೈಲಿನಿಂದ ಹೊರ ಬರುತ್ತಿದ್ದಾರೆ. ಜೀವಾವಧಿ ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೇರರಿವಾಲನ್ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ(ಮೇ 18) ತೀರ್ಪು ನೀಡಿದೆ.

ರಾಜೀವ್‌ ಗಾಂಧಿ ಪ್ರಧಾನ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರ ಹತ್ಯೆ ಮಾಡಿದ ಆರೋಪದ ಮೇಲೆ 19 ವರ್ಷದ ಯುವಕನಾಗಿದ್ದಾಗ ಎಜಿ ಪೆರಾರಿವಾಲನ್‌ರನ್ನು ಬಂಧನ ಮಾಡಲಾಗಿತ್ತು. ಆ ಬಳಿಕ ಸುಮಾರು 32 ವರ್ಷಗಳಿಂದ ಎ. ಜಿ. ಪೇರರಿವಾಲನ್‌ ಜೈಲಿನಲ್ಲಿದ್ದು, ಈಗ ಜಾಮೀನು ಲಭ್ಯವಾಗಿದೆ.

Breaking; ರಾಜೀವ್ ಗಾಂಧಿ ಹಂತಕ ಪೇರರಿವಾಲನ್‌ಗೆ ಜಾಮೀನು Breaking; ರಾಜೀವ್ ಗಾಂಧಿ ಹಂತಕ ಪೇರರಿವಾಲನ್‌ಗೆ ಜಾಮೀನು

ಎ. ಜಿ. ಪೇರರಿವಾಲನ್‌ 2016ರಲ್ಲಿಯೇ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗೆ ಜಾಮೀನು ನೀಡುವ ವಿಚಾರದಲ್ಲಿ ವಿವರವಾದ ವಿಚಾರಣೆ ನಡೆಯಬೇಕು ಎಂಬ ಕಾರಣದಿಂದ ಅರ್ಜಿ ವಿಲೇವಾರಿ ವಿಳಂಬವಾಯಿತು. ಈ ಪ್ರಕರಣದ ಕುರಿತು ಟೈಮ್‌ಲೈನ್ ಇಲ್ಲಿದೆ ಮುಂದೆ ಓದಿ....

Perarivalan Gets Bail: A Timeline of Events Since Rajiv Gandhi Assassination

ಮೇ 1991- ಪ್ರಧಾನಿ ರಾಜೀವ್ ಗಾಂಧಿ ಹತ್ಯೆ

ಭಾರತದ ಪ್ರಧಾನಿ ರಾಜೀವ್ ಗಾಂಧಿ ಅವರು ಮೇ 21, 1991 ರಂದು ಚೆನ್ನೈ ಬಳಿಯ ಶ್ರೀಪೆರಂಬದೂರ್‌ಗೆ ಭೇಟಿ ನೀಡುತ್ತಿದ್ದಾಗ ಆತ್ಮಹತ್ಯಾ ಬಾಂಬರ್‌ನಿಂದ ಹತ್ಯೆಗೀಡಾದರು. ಹಿರಿಯ ಕಾಂಗ್ರೆಸ್ ನಾಯಕ ಜಿಕೆ ಮೂಪನಾರ್ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿದ್ದ ಅವರು ವಿಶಾಖಪಟ್ಟಣಂ ಪ್ರವಾಸದ ನಂತರ ಚೆನ್ನೈನಲ್ಲಿದ್ದರು. ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಧನು (ತೆನ್ಮೋಳಿ ರಾಜರತ್ನಂ) ರ ಹಂತಕರು ರಾಜೀವ್‌ ಗಾಂಧಿಯ ಹತ್ಯೆ ಮಾಡಿದ್ದಾರೆ. ರಾಜೀವ್‌ ಗಾಂಧಿಗೆ ನಮಿಸುವ ನೆಪದಲ್ಲಿ ಸ್ಫೋಟಕ ತುಂಬಿದ ಬೆಲ್ಟ್ ಅನ್ನು ಸ್ಫೋಟಿಸಿದರು. ಸ್ಫೋಟದಲ್ಲಿ ರಾಜೀವ್ ಗಾಂಧಿ ಮತ್ತು ಧನು ಸೇರಿದಂತೆ 16 ಜನರು ಸಾವನ್ನಪ್ಪಿದರು ಮತ್ತು ಸುಮಾರು 45 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜೂನ್ 1991 - ಪೆರಾರಿವಾಲನ್ ಬಂಧನ

ಜೂನ್‌ನಲ್ಲಿ, ಮಾಜಿ ಪ್ರಧಾನಿಯ ಹತ್ಯೆಗೆ ಸಹಕಾರ ನೀಡಿದ ಕಾರಣಕ್ಕೆ ಎಜಿ ಪೆರಾರಿವಾಲನ್ ಅವರನ್ನು ಸಿಬಿಐ ಅಧಿಕಾರಿಗಳು ಚೆನ್ನೈನಲ್ಲಿ ಬಂಧಿಸಿದ್ದರು. ಶಿವರಸನ್‌ಗೆ ಎರಡು ಒಂಬತ್ತು ವೋಲ್ಟ್ ಬ್ಯಾಟರಿಗಳನ್ನು ಒದಗಿಸಿದ ಆರೋಪವನ್ನು ಅವರು ಹೊಂದಿದ್ದಾರೆ. ಅದನ್ನು ಸ್ಫೋಟಕದಲ್ಲಿ ಬಳಸಲಾಗಿದೆ. ತಮ್ಮ ಹೆಸರಿನಲ್ಲಿ ಮೋಟರ್ ಸೈಕಲ್ ಖರೀದಿಸಿದ್ದರೂ ತಪ್ಪು ವಿಳಾಸ ನೀಡಿದ್ದಾರೆ ಎಂಬ ಆರೋಪವೂ ಅವರ ಮೇಲಿತ್ತು.

ಜನವರಿ 1998 - ಟಾಡಾ ನ್ಯಾಯಾಲಯದಿಂದ ಮರಣದಂಡನೆ

ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ವಿಚಾರಣಾ ನ್ಯಾಯಾಲಯವು ಪೆರಾರಿವಾಲನ್ ಮತ್ತು ಇತರ 25 ಜನರಿಗೆ ಮರಣದಂಡನೆ ವಿಧಿಸಿತು.

ಮೇ 1999 - ಮರಣದಂಡನೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಏಳು ಆರೋಪಿಗಳ ಪೈಕಿ ನಳಿನಿ, ಮುರುಗನ್ ಅಲಿಯಾಸ್ ಶ್ರೀಹರನ್, ಸಂತನ್ ಮತ್ತು ಪೆರಾರಿವಾಲನ್ ಎಂಬ ನಾಲ್ವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಆದರೆ, ಸುಪ್ರೀಂ ಕೋರ್ಟ್ 19 ಮಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಉಳಿದ ಮೂವರಾದ ರವಿಚಂದ್ರನ್, ರಾಬರ್ಟ್ ಪಾಯಸ್ ಮತ್ತು ಜಯಕುಮಾರ್ ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿಸಲಾಗಿದೆ. ಪೆರಾರಿವಾಲನ್ ಪ್ರಕರಣದಲ್ಲಿ, ಅವರ 'ತಪ್ಪೊಪ್ಪಿಗೆ ಹೇಳಿಕೆ'ಯೇ ನ್ಯಾಯಮೂರ್ತಿಗಳಾದ ಕೆಟಿ ಥಾಮಸ್, ಡಿಪಿ ವಾಧ್ವಾ ಮತ್ತು ಎಸ್‌ಎಸ್‌ಎಂ ಕ್ವಾದ್ರಿ ಅವರು ರಾಜೀವ್ ಗಾಂಧಿ ದಾಳಿಯ ಗುರಿ ಎಂದು ಪೆರಾರಿವಾಲನ್‌ಗೆ ತಿಳಿದಿದ್ದರು ಎಂದು ತೀರ್ಮಾನಿಸಲು ಕಾರಣವಾಯಿತು.

2011: ಕ್ಷಮಾದಾನ ಅರ್ಜಿ ತಿರಸ್ಕಾರ

ಇದರ ನಂತರ, ಪೆರಾರಿವಾಲನ್, ನಳಿನಿ, ಮುರುಗನ್ ಮತ್ತು ಸಂತನ್ ಅವರು ತಮಿಳುನಾಡು ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದರು. ಆ ಅರ್ಜಿ ಪೈಕಿ 2000 ರಲ್ಲಿ ನಳಿನಿಗೆ ಮಾತ್ರ ಪರಿಹಾರ ದೊರಕಿತು. ಉಳಿದ ಮನವಿಗಳು 1999 ರಲ್ಲಿ ಭಾರತದ ರಾಷ್ಟ್ರಪತಿಗಳಿಗೆ ಸಲ್ಲಿಕೆ ಮಾಡಲಾಗಿದ್ದು, ಅವರು 2011 ರಲ್ಲಿ ತಿರಸ್ಕರಿಸಿದರು.

ಫೆಬ್ರವರಿ 2014 - ಮರಣದಂಡನೆಯನ್ನು ಬದಲಾಯಿಸಿದ ಸುಪ್ರೀಂ

ಅಪರಾಧಿಗಳು ಸಲ್ಲಿಸಿದ ಕ್ಷಮಾದಾನ ಅರ್ಜಿಗಳನ್ನು ನಿರ್ಧರಿಸುವಲ್ಲಿ ವಿಳಂಬವನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತನೆ ಮಾಡಿತು. ಅವರ ಶಿಕ್ಷೆಗೆ ರಾಜ್ಯದ ನಿಯಮಗಳು ಅನ್ವಯವಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ, ಇದು 14 ವರ್ಷಗಳ ಉತ್ತಮ ನಡವಳಿಕೆಯ ನಂತರ ಜೀವಾವಧಿ ಶಿಕ್ಷೆಯ ಬಳಿಕ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶವನ್ನು ಕೂಡಾ ನೀಡಿತು.

ಫೆಬ್ರವರಿ 2014 - ಜಯಲಲಿತಾರಿಂದ ಬಿಡುಗಡೆ ಘೋಷಣೆ

ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದ ಒಂದು ದಿನದ ನಂತರ, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ ಜಯಲಲಿತಾ ಅವರು ತಮ್ಮ ಸರ್ಕಾರವು ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 432 [ಅಮಾನತುಗೊಳಿಸುವ ಅಥವಾ ಶಿಕ್ಷೆಯನ್ನು ವಿಧಿಸುವ ಅಧಿಕಾರ] ಅಡಿಯಲ್ಲಿ ಎಲ್ಲಾ ಏಳು ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಫೆಬ್ರವರಿ 2014 - ಸುಪ್ರೀಂ ಕೋರ್ಟ್ ಬಿಡುಗಡೆಗೆ ತಡೆ

ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಘೋಷಿಸಿದಂತೆ ಎಲ್ಲಾ ಏಳು ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಡಿಸೆಂಬರ್ 2015 - ಪೆರಾರಿವಾಲನ್ ಮತ್ತೆ ಕ್ಷಮಾದಾನ ಅರ್ಜಿ ಸಲ್ಲಿಕೆ

24 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದೇನೆ ಎಂದು ಹೇಳಿ ಪೆರಾರಿವಾಲನ್ ಮತ್ತೊಮ್ಮೆ ತಮಿಳುನಾಡು ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರು.

ಮಾರ್ಚ್ 2016 - ತಮಿಳುನಾಡು ಸರ್ಕಾರದ ಅಧಿಕೃತ ಪ್ರಸ್ತಾವನೆ

ಪ್ರಕರಣದ ಎಲ್ಲಾ ಏಳು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವಂತೆ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.

ಅಕ್ಟೋಬರ್ 2017 - ಲೋಪವನ್ನು ಒಪ್ಪಿಕೊಂಡ ಮಾಜಿ ಸಿಬಿಐ ಅಧಿಕಾರಿ

1991 ರಲ್ಲಿ ಪೆರಾರಿವಾಲನ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ಮಾಜಿ ಸಿಬಿಐ ಅಧಿಕಾರಿ ವಿ ತ್ಯಾಗರಾಜನ್ ಅವರು ಹೇಳಿಕೆಯಲ್ಲಿ ತನ್ನದೇ ಆದ ಭಾಗವನ್ನು ಕೂಡಾ ಸೇರ್ಪಡೆ ಮಾಡಿದ್ದರೆ ಎಂದು ಒಪ್ಪಿಕೊಂಡರು. ಇದನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಎರಡು ಒಂಬತ್ತು ವೋಲ್ಟ್ ಬ್ಯಾಟರಿಗಳನ್ನು ಏಕೆ ಖರೀದಿಸಲಾಗಿದೆ ಎಂದು ನನಗೆ ತಿಳಿದಿಲ್ಲ ಎಂದು ತನ್ನದೇ ಆದ ವಿಚಾರವನ್ನು ಉಲ್ಲೇಖ ಮಾಡಿದ್ದರು.

ಏಪ್ರಿಲ್ 2018 - ಕೇಂದ್ರ ಗೃಹ ಸಚಿವಾಲಯ ಕ್ಷಮೆಗೆ ನಕಾರ

ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ನೀಡಿದ ಉತ್ತರದಲ್ಲಿ ತನ್ನ 2016ರ ಕ್ಷಮಾದಾನ ಪ್ರಸ್ತಾವನೆಯನ್ನು ಉಲ್ಲೇಖಿಸಿದೆ ಮತ್ತು ಪ್ರಸ್ತಾವನೆಯನ್ನು ತಾನು ಒಪ್ಪುವುದಿಲ್ಲ ಮತ್ತು ಆದ್ದರಿಂದ ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಿಲ್ಲ ಎಂದು ಹೇಳಿದೆ.

ಸೆಪ್ಟೆಂಬರ್ 2018 - ತಮಿಳುನಾಡು ಕ್ಯಾಬಿನೆಟ್‌ನಿಂದ ಎಲ್ಲಾ ಅಪರಾಧಿಗಳ ಬಿಡುಗಡೆಗೆ ನಿರ್ಧಾರ

ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ತಮಿಳುನಾಡು ಸರ್ಕಾರವು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಎಲ್ಲಾ ಏಳು ಅಪರಾಧಿಗಳನ್ನು ಆರ್ಟಿಕಲ್ 161 ರ ಅಡಿಯಲ್ಲಿ ಬಿಡುಗಡೆ ಮಾಡಲು ಶಿಫಾರಸು ಮಾಡುವ ಸಂಪುಟ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಈ ಶಿಫಾರಸನ್ನು ರಾಜ್ಯಪಾಲರಿಗೂ ಒಪ್ಪಿಗೆಗೆ ಕಳುಹಿಸಿತ್ತು.

ಮಾರ್ಚ್ 2022: ರಾಜೀವ್ ಗಾಂಧಿ ಹಂತಕ ಪೇರರಿವಾಲನ್‌ಗೆ ಜಾಮೀನು.

ಮೇ 2022: ಜೈಲಿನಿಂದ ಪೇರರಿವಾಲನ್‌ಗೆ ಮುಕ್ತಿ

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 31 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಜೀವಾವಧಿ ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೇರರಿವಾಲನ್ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ಈ ತೀರ್ಪು ಶ್ರೀಲಂಕಾ ಪ್ರಜೆಯಾದ ನಳಿನಿ ಶ್ರೀಹರನ್ ಮತ್ತು ಅವರ ಪತಿ ಮುರುಗನ್ ಸೇರಿದಂತೆ ಇತರ ಆರು ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ.

English summary
Perarivalan Gets Bail and release: A timeline of events since Rajiv Gandhi assassination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X