ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ ಏಕೆ?

|
Google Oneindia Kannada News

ನವದೆಹಲಿ, ಫೆಬ್ರವರಿ 17: ದೇಶದೆಲ್ಲೆಡೆ ತೈಲ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಕಚ್ಚಾ ತೈಲ ಬೆಲೆ ಏರಿಕೆ, ಕೋವಿಡ್ ಸನ್ನಿವೇಶದಿಂದ ಹದಗೆಟ್ಟಿರುವ ಆರ್ಥಿಕತೆಯನ್ನು ಸರಿಪಡಿಸಲು ಹೆಚ್ಚಿನ ತೆರಿಗೆ ವಿಧಿಸಲಾಗಿದೆ ಇತ್ಯಾದಿ ಕಾರಣಗಳನ್ನು ನೀಡಲಾಗುತ್ತಿದೆ.

ಆದರೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯು ಕಡಿಮೆ ಇದ್ದರೂ ಅದರ ನಾಲ್ಕು ಪಟ್ಟು ಹೆಚ್ಚು ದರವನ್ನು ಭಾರತೀಯರು ತೆರುವಂತಾಗಿದೆ. ಅಂದಹಾಗೆ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಒಂದು ಲೀಟರ್ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಗಿಂತ ಕೊಂಚ ಹೆಚ್ಚಿದೆ ಅಷ್ಟೇ.

ಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ವಾಸ್ತವವಾಗಿ ದೇಶೀ ಮಾರುಕಟ್ಟೆಯಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಜಾಗತಿಕ ಕಚ್ಚಾ ತೈಲ ಬೆಲೆಯನ್ನು ಅವಲಂಬಿಸಿರುತ್ತದೆ. ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದರೆ, ದೇಶೀ ಮಾರುಕಟ್ಟೆಯಲ್ಲಿನ ಚಿಲ್ಲರೆ ತೈಲ ಬೆಲೆ ಸಹ ಇಳಿಕೆಯಾಗಬೇಕು. ಆದರೆ ಈ ಸಮಯದಲ್ಲಿ ಅದು ನಡೆಯುತ್ತಿಲ್ಲ.

ಈ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆಯಾಗಲು ಏನು ಕಾರಣ?ಈ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರುಗೆ ಏರಿಕೆಯಾಗಲು ಏನು ಕಾರಣ?

2020ರ ಜನವರಿಯಿಂದ 2021ರ ಜನವರಿಯವರೆಗೂ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯಲ್ಲಿ ಶೇ 13ರಷ್ಟು ಇಳಿಕೆಯಾಗಿದೆ. ಆದರೆ ಭಾರತೀಯರು ಶೇ 13ರಷ್ಟು ಹೆಚ್ಚುಪಟ್ಟು ಬೆಲೆ ತೆರುತ್ತಿದ್ದಾರೆ ಎಂದು 'ಇಂಡಿಯಾ ಟುಡೆ' ವರದಿ ತಿಳಿಸಿದೆ.

ಐದು ಪಟ್ಟು ಹೆಚ್ಚು ಹಣ

ಐದು ಪಟ್ಟು ಹೆಚ್ಚು ಹಣ

ಲಾಕ್‌ಡೌನ್‌ಗಿಂತಲೂ ಮುನ್ನ 2020ರ ಜನವರಿಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಲೀಟರ್‌ಗೆ 29 ರೂ ಆಸುಪಾಸಿನಲ್ಲಿತ್ತು. ಆಗ ಭಾರತೀಯರು ಮಾರುಕಟ್ಟೆಯಲ್ಲಿ ಲೀಟರ್ ಪೆಟ್ರೋಲ್‌ಗೆ 78 ರೂ ನೀಡಿದ್ದರು. ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ದಿಢೀರನೆ ಇಳಿಕೆಯಾದರೂ (ಲೀಟರ್‌ಗೆ 15.60 ರೂ) ಭಾರತದಲ್ಲಿನ ಗ್ರಾಹಕರು ಪ್ರತಿ ಲೀಟರ್‌ಗೆ 72.93 ರೂ ದಂತೆ ಐದು ಪಟ್ಟು ಹೆಚ್ಚು ಹಣ ನೀಡಿದ್ದರು.

ಸರ್ಕಾರದಿಂದ ಹೊಸ ತೆರಿಗೆ

ಸರ್ಕಾರದಿಂದ ಹೊಸ ತೆರಿಗೆ

ಲಾಕ್‌ಡೌನ್ ಕ್ರಮೇಣ ಸಡಿಲಗೊಂಡ ಬಳಿಕ ಈ ವರ್ಷದ ಜನವರಿಯಲ್ಲಿ ಕಚ್ಚಾ ತೈಲದ ಬೆಲೆ ಲೀಟರ್‌ಗೆ 25 ರೂ ತಲುಪಿದೆ. ಆದರೆ ಜನರು ಲೀಟರ್‌ಗೆ 87.57 ರೂ, ಅಂದರೆ ಮೂರು ಪಟ್ಟು ಅಧಿಕ ಬೆಲೆ ನೀಡುತ್ತಿದ್ದಾರೆ. ಕಚ್ಚಾ ತೈಲೆ ಬೆಲೆ ಇಳಿಕೆಯಾದಾಗಲೂ ಸರ್ಕಾರ ಹೊಸ ತೆರಿಗೆಗಳನ್ನು ವಿಧಿಸಿದ್ದು ಇದಕ್ಕೆ ಕಾರಣ.

ರಾಮ್‌ದೇವ್ ಬಳಿ ಯೋಗ ಕಲಿಯಿರಿ, ಪೆಟ್ರೋಲ್ ಬೆಲೆ 6 ಆಗುತ್ತದೆ: ತರೂರ್ ವ್ಯಂಗ್ಯರಾಮ್‌ದೇವ್ ಬಳಿ ಯೋಗ ಕಲಿಯಿರಿ, ಪೆಟ್ರೋಲ್ ಬೆಲೆ 6 ಆಗುತ್ತದೆ: ತರೂರ್ ವ್ಯಂಗ್ಯ

1.6 ಲಕ್ಷ ಕೋಟಿ ಆದಾಯದ ಗುರಿ

1.6 ಲಕ್ಷ ಕೋಟಿ ಆದಾಯದ ಗುರಿ

2020ರ ಮೇ 5 ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಲೀಟರ್‌ಗೆ 28.84 ರೂ ದಿಂದ 14.75ಕ್ಕೆ ಕುಸಿದಿತ್ತು. ಸರ್ಕಾರವು ಆಗ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 10 ರೂ ಮತ್ತು ಡೀಸೆಲ್‌ಗೆ 13 ರೂ. ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಇದರಿಂದ ಹೆಚ್ಚುವರಿಯಾಗಿ 1.6 ಲಕ್ಷ ಕೋಟಿ ರೂ ಆದಾಯ ಸಂಪಾದಿಸುವುದು ಅದರ ಗುರಿಯಾಗಿತ್ತು.

ತೈಲದಿಂದ ಅಧಿಕ ಸುಂಕ ಸಂಗ್ರಹ

ತೈಲದಿಂದ ಅಧಿಕ ಸುಂಕ ಸಂಗ್ರಹ

ಲಾಕ್‌ಡೌನ್ ಸಂದರ್ಭದಿಂದ ಪ್ರತಿ ವಲಯದ ತೆರಿಗೆ ಸಂಗ್ರಹದಲ್ಲಿ ಕುಸಿತವಾಗಿದೆ. ತೈಲವೊಂದನ್ನು ಹೊರತುಪಡಿಸಿ. 2019ರ ಏಪ್ರಿಲ್‌ನಿಂದ ನವೆಂಬರ್ ಅವಧಿಗೆ ಸಂಗ್ರಹಿಸಿದ ಅಬಕಾರಿ ಸುಂಕಕ್ಕೆ ಹೋಲಿಸಿದರೆ 2020ರ ಅದೇ ಅವಧಿಯಲ್ಲಿ ಶೇ 48ರಷ್ಟು ಹೆಚ್ಚು ಅಬಕಾರಿ ಸುಂಕವನ್ನು ಪೆಟ್ರೋಲ್ ಮತ್ತು ಡೀಸೆಲ್‌ ಮೂಲಕ ಸರ್ಕಾರ ಸಂಗ್ರಹಿಸಿದೆ. ತೆರಿಗೆ ಸಂಗ್ರಹವು 1,32,899 ಕೋಟಿಯಿಂದ 1,96,342 ಕೋಟಿಗೆ ಏರಿಕೆಯಾಗಿದೆ.

ತೈಲ ಬೆಲೆ ನಿರ್ಧಾರ

ತೈಲ ಬೆಲೆ ನಿರ್ಧಾರ

ಭಾರತವು ತನ್ನ ಅಗತ್ಯದ ಶೇ 80ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ತರಿಸಿಕೊಳ್ಳುತ್ತದೆ. ಕಚ್ಚಾ ತೈಲವನ್ನು ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿ) ಸಂಸ್ಕರಿಸುತ್ತವೆ. ದೇಶೀ ಮಾರುಕಟ್ಟೆಯಲ್ಲಿ ತೈಲ ಬೆಲೆಯು ವಾಸ್ತವ ಪೂರೈಕೆ ಮತ್ತು ಬೇಡಿಕೆಯಿಂದ ನಿರ್ಧರಿತವಾಗುತ್ತದೆ. ಅದಕ್ಕೂ ಮುಖ್ಯವಾಗಿ ತೆರಿಗೆ ಹಾಗೂ ಡೀಲರ್ ಕಮಿಷನ್ ಮೇಲೆ ಅವಲಂಬಿತ.

Recommended Video

Virat Kohli ಅವರ ನಡುವಳಿಕೆಗೆ ಶಿಕ್ಷೆ ಆಗಬೇಕು ಎಂದ ಮಾಜಿ ಕ್ರಿಕೆಟಿಗ | Oneindia Kannada
ತೈಲ ಬೆಲೆ ನಿರ್ಧಾರ ಹೇಗೆ?

ತೈಲ ಬೆಲೆ ನಿರ್ಧಾರ ಹೇಗೆ?

ಉದಾಹರಣೆಗೆ ದೆಹಲಿಯಲ್ಲಿ ಕಂಪೆನಿಗಳು ಕಚ್ಚಾ ತೈಲದ ಬೆಲೆ ಲೀಟರ್‌ಗೆ 29.34 ರೂ ಇದ್ದರೆ, ಒಎಂಸಿಗಳು ಡೀಲರ್‌ಗೆ 29.71ಕ್ಕೆ ಮಾರಾಟ ಮಾಡುತ್ತವೆ. ಸರ್ಕಾರ ಅದರ ಮೇಲೆ 32.98 ರೂ ಅಬಕಾರಿ ಸುಂಕ ವಿಧಿಸುತ್ತದೆ. ಡೀಲರ್‌ಗಳು 3.69 ರೂ ಕಮಿಷನ್ ಸೇರ್ಪಡೆ ಮಾಡುತ್ತಾರೆ. ಇದರ ಮೇಲೆ ರಾಜ್ಯಗಳ ವ್ಯಾಟ್ ಅಥವಾ ಮಾರಾಟ ತೆರಿಗೆ 19.92 ರೂ ಸೇರಿಕೊಳ್ಳುತ್ತದೆ. ಕೊನೆಗೆ ಪೆಟ್ರೋಲ್ ಪಂಪ್‌ನಲ್ಲಿ ಗ್ರಾಹಕರಿಗೆ ತಲುಪುವಾಗ ಲೀಟರ್‌ಗೆ 86.30 ರೂ ಆಗುತ್ತದೆ.

ದೇಶದಲ್ಲಿ ಸತತ ಒಂಬತ್ತನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಕೆಲವು ರಾಜ್ಯಗಳ ಪಟ್ಟಣಗಳಲ್ಲಿ ಲೀಟರ್‌ಗೆ 100 ರೂ ದಾಟಿದೆ.

English summary
People in India are paying more money in domestic market for fuel compared to international crude oil prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X