ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಜೆತನಕ್ಕೆ ಪ್ರಮುಖ ಕಾರಣ ಪಿಸಿಒಎಸ್: ಡಾ. ವಿದ್ಯಾ

By ಡಾ.ವಿದ್ಯಾ ವಿ ಭಟ್, ಬೆಂಗಳೂರು
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಶೇ.85ರಷ್ಟು ಅಂಡೋತ್ಪತ್ತಿ ಅಸ್ವಸ್ಥತೆ ಕಾರಣದಿಂದಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಎನ್ನುವುದು ಮಹಿಳೆಯರಲ್ಲಿ ಬಂಜೆತನಕ್ಕೆ ಪ್ರಮುಖ ಕಾರಣವಾಗಿದೆ. ಆದರೂ ಪಿಸಿಒಎಸ್‍ನಿಂದ ಬಳಲುತ್ತಿರುವ ಶೇ.60ರಷ್ಟು ಮಹಿಳೆಯರು ಯಾವುದೇ ವೈದ್ಯಕೀಯ ನೆರವಿಲ್ಲದೆ ಗರ್ಭಿಣಿಯರಾಗುತ್ತಾರೆ ಎಂದು ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಲಾರ್ಪೊಸ್ಕೋಪಿಕ್ ಶಸ್ತ್ರಚಿಕಿತ್ಸೆ ತಜ್ಞರು ಮತ್ತು ಫಲವತ್ತತೆ (ಫರ್ಟಿಲಿಟಿ) ತಜ್ಞರಾದ ಡಾ. ವಿದ್ಯಾ ವಿ ಭಟ್‍ಅವರು ಹೇಳಿದ್ದಾರೆ.

2020ರಲ್ಲಿ ಭಾರತದಲ್ಲಿ ನಡೆಸಿದ ಅತಿದೊಡ್ಡ ಮಟ್ಟದ ಸಮೀಕ್ಷೆಯೊಂದರ ಪ್ರಕಾರ, 20-29 ವಯಸ್ಸಿನ ಶೇ.16ರಷ್ಟು ಮಹಿಳೆಯರು ಪಿಸಿಒಎಸ್‍ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ''ಹೆಚ್ಚಿನ ಮಟ್ಟದ ಪುರುಷ ಲೈಂಗಿಕ ಹಾರ್ಮೋನುಗಳು (ಆಂಡ್ರೋಜೆನ್‍ಗಳು) ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟದಲ್ಲಿ ಉಂಟಾಗುವ ಅನಿಶ್ಚಿತತೆಗಳಿಂದಾಗಿ ಮಹಿಳೆಯರ ಋತುಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಇದು ಗರ್ಭಪಾತಕ್ಕೂ ಕಾರಣವಾಗಬಹುದು. ಇದನ್ನು ತಡೆಯಲು ನಿಯಮಿತವಾಗಿ ಮೊಟ್ಟೆಗಳ ಬಿಡುಗಡೆ ಅಥವಾ ಅದನ್ನು ಸಂಪೂರ್ಣವಾಗಿ ತಡೆಯುವುದರಿಂದ ಮಾಡಬಹುದು. ಇದರಿಂದ ಪಿಸಿಒಎಸ್ ರೋಗಿಗಳಿಗೆ ಸವಾಲಾಗಿರುವುದನ್ನು ತಡೆದು ಸುಲಭವಾಗಿ ಗರ್ಭ ಧರಿಸಲು ಅನುಕೂಲ ಮಾಡಿಕೊಡುತ್ತದೆ.'' ಎಂದಿದ್ದಾರೆ ಡಾ.ವಿದ್ಯಾ ವಿ ಭಟ್.

ಪಿಸಿಒಸ್ ಇರುವ ಮಹಿಳೆಯರಲ್ಲಿ ಸ್ಥೂಲಕಾಯತೆಯೂ ಸಮಸ್ಯೆಯಾಗಿದ್ದು, ಶೇ.40-ಶೇ.80ರಷ್ಟು ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ಹಾರ್ಮೋನ್ ವ್ಯತ್ಯಯ, ಒತ್ತಡ, ಜೀವನಶೈಲಿಯ ಬದಲಾವಣೆ, ಇನ್ಸುಲಿನ್ ಪ್ರತಿರೋಧ, ಮೆಟಬಾಲಿಕ್ (ಚಯಾಪಚಯ) ದೋಷಗಳೂ ಕಾರಣವಾಗುತ್ತವೆ. ಪಿಸಿಒಎಸ್ ಕುರಿತ ಚಿಕಿತ್ಸೆಯು ಬಂಜೆತನವನ್ನು ಕಡಿಮೆಗೊಳಿಸುವಂತೆ ಅಂಡೋತ್ಪತ್ತಿಯ ಮೇಲ್ವಿಚಾರಣೆ, ಫಲವತ್ತತೆಯನ್ನು ಸುಧಾರಿಸುವುದಕ್ಕೆ ತಂತ್ರಜ್ಞಾನ ನೆರವಿನಿಂದ ಶಸ್ತ್ರಚಿಕಿತ್ಸೆ, ಔಷಧ ನೀಡಿಕೆ ಮತ್ತು ದೇಹದ ತೂಕ ನಿರ್ವಹಣೆಯನ್ನು ಒಳಗೊಂಡಿರುತ್ತದೆ.

PCOS leading cause of Infertility among Women

ಜೀವನವಿಡೀ ಸಮಸ್ಯೆಗೆ ಕಾರಣವಾಗಬಹುದು:
ಸಂತಾನೋತ್ಪತ್ತಿಗೆ ಸಾಧ್ಯವಿರುವ ವಯಸ್ಸಿನ ಮಹಿಳೆಯರಲ್ಲಿ ಪಿಸಿಒಎಸ್ ಎನ್ನುವುದು ಸಾಮಾನ್ಯವಾದ ಅದೇ ರೀತಿ ಗಂಭೀರವಾದ ಎಂಡೋಕ್ರೈನ್ (ನಿರ್ನಾಳ ಗ್ರಂಥಿಯ) ಅಸ್ವಸ್ಥತೆಯಾಗಿದ್ದು, ಇದು ಜೀವನವಿಡೀ ಸಮಸ್ಯೆಗೆ ಕಾರಣವಾಗಬಹುದು. ಆರಂಭದಲ್ಲಿ ಸಣ್ಣ ವಯಸ್ಸಿನ ಹುಡುಗಿಯರಲ್ಲಿ ಇದು ಲಕ್ಷಣ ರಹಿತವಾಗಿದ್ದು ಬಳಿಕ ಮುಟ್ಟಿನಲ್ಲಿ ಆಗುವ ತೊಂದರೆಗಳು, ಸ್ಥೂಲಕಾಯತೆ, ಪ್ರೌಢಾವಸ್ಥೆಗೆ ತಡವಾಗುವುದು ಮತ್ತು ಹೈಪರ್ ಆಂಡ್ರೋಜೆನಿಸಮ್‍ನತ್ತ ಸಾಗುತ್ತದೆ.

ಅಂತಿಮವಾಗಿ ಇದು ಇನ್ಸುಲಿನ್ ಪ್ರತಿರೋಧ ಕುಂದುವಿಕೆ, ಅಧಿಕ ರಕ್ತದೊತ್ತಡ, ಟೈಪ್ 2 ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಧ್ಯ ವಯಸ್ಸಿನಲ್ಲಿ ಬಂಜೆತನದ ಸಮಸ್ಯೆಗೆ ಕಾರಣವಾಗುತ್ತದೆ. ಆದರೂ ಮಹಿಳೆಯರಿಗೆ ಅವರು ಪಿಸಿಒಎಸ್‍ನಿಂದ ಬಳಲುತ್ತಿರುವುದರ ಬಗ್ಗೆ ತಿಳಿದಿರುವುದಿಲ್ಲ. ಪಿಸಿಒಎಸ್ ರೋಗಿಗಳಿಗೆ ಉತ್ತಮ ಆಹಾರ, ದೈಹಿಕ ವ್ಯಾಯಾಮ ಮತ್ತು ರಕ್ತದಲ್ಲಿ ಸಕ್ಕರೆ ಅಂಶ ಮತ್ತು ಹೆಚ್ಚಿನ ರಕ್ತದೊತ್ತಡ ನಿಯಂತ್ರಣ ಅಗತ್ಯವಾಗಿದೆ.

''ವಿಶೇಷವಾಗಿ ಫಲವತ್ತತೆಗೆ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು ಕೋವಿಡ್ ಸಂದರ್ಭದಲ್ಲಿ ವೈದ್ಯರನ್ನು ನಿಯಮಿತವಾಗಿ ಭೇಟಿಯಾಗದೇ ಇರುವುದು ಪಿಸಿಒಎಸ್ ಹೆಚ್ಚಳಗೊಳ್ಳಲು ಕಾರಣವಾಗುತ್ತಿದೆ. ಈ ಅಸ್ವಸ್ಥತೆ ಇನ್ಸುಲಿನ್ ಪರಿಚಲನೆಯೊಂದಿಗೆ ಸಂಬಂಧ ಹೊಂದಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಸಕ್ಕರೆಕಾಯಿಲೆ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದನ್ನೂ ಗಮನಿಸಬಹುದು. ಜಡವಾದ, ವ್ಯಾಯಾಮರಹಿತ ಜೀವನಶೈಲಿಯು ಪಿಸಿಒಎಸ್ ಹೆಚ್ಚಿನ ರೋಗಲಕ್ಷಣಗಳೊಂದಿಗೆ ತೀವ್ರವಾಗಲು ಕಾರಣವಾಗುತ್ತದೆ,''ಎಂದು ಡಾ. ವಿದ್ಯಾ ವಿ ಭಟ್‍ ತಿಳಿಸಿದರು.

ಕೋವಿಡ್ 19: ತಾಯಂದಿರು ಮಗುವಿಗೆ ಹಾಲುಣಿಸಬಹುದು: ಡಾ.ವಿದ್ಯಾಭಟ್ಕೋವಿಡ್ 19: ತಾಯಂದಿರು ಮಗುವಿಗೆ ಹಾಲುಣಿಸಬಹುದು: ಡಾ.ವಿದ್ಯಾಭಟ್

ಹಾಲುಣಿಸುವ ಮಹಿಳೆಯರಿಗೆ ಕಿವಿಮಾತು:
ಎಚ್‍ಐವಿ ಪಾಸಿಟಿವ್ ಇರುವ ಅಥವಾ ಸ್ತನ ಕ್ಯಾರ್ಸಿನೋಮಾ ಅಥವಾ ಆಕ್ಟೀವ್ ಪಲ್ಮನರಿ ಟಿಬಿಯಂತಹ ರೋಗಗಳಿಂದ ಬಳಲುತ್ತಿರುವ ಮಹಿಳೆಯರು ಹಾಲುಣಿಸುವಂತಿಲ್ಲ. ಇನ್ನುಳಿದಂತೆ ಎಲ್ಲಾ ಸಂದರ್ಭಗಳಲ್ಲಿ ಸ್ತನ್ಯಪಾನ ಅತ್ಯುತ್ತಮ ಆಯ್ಕೆಯಾಗಿದೆ.

ಕೋವಿಡ್ ಲಸಿಕೆಗಳಿಂದ ಹಾಲುಣಿಸುವ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಯಾವುದೇ ಅಪಾಯವಿಲ್ಲ ಎಂಬುದು ದೃಢವಾಗಿರುವ ಹಿನ್ನೆಲೆಯಲ್ಲಿ ಈ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ.

ಲಸಿಕೆ ತೆಗೆದುಕೊಂಡ ನಂತರ ಸ್ತನ್ಯಪಾನವನ್ನು ಮುಂದುವರಿಸಬಹುದಾಗಿದೆ. ಲಸಿಕೆ ಪಡೆದ ಕಾರಣಕ್ಕೆ ಸ್ತನ್ಯಪಾನವನ್ನು ನಿರ್ಬಂಧಿಸುವ ಅಗತ್ಯವಿಲ್ಲ. ಕೋವಿಡ್ ಲಸಿಕೆಯು ತಾಯಿಯ ಆರೋಗ್ಯಕ್ಕೆ ಮಾತ್ರವಲ್ಲದೇ, ಮಗುವಿನ ಆರೋಗ್ಯಕ್ಕೂ ಒಳ್ಳೆಯದು. ಲಸಿಕೆಯನ್ನು ಪಡೆದುಕೊಂಡ ನಂತರ ತಾಯಿಯ ದೇಹದಲ್ಲಿ ಬೆಳವಣಿಗೆಯಾಗುವ ಪ್ರತಿಕಾಯಗಳು ಮಗುವಿನ ಹಾಲಿನೊಂದಿಗೆ ವರ್ಗಾವಣೆಯಾಗುತ್ತವೆ. ಇದರಿಂದ ಮಗುವಿಗೂ ಕೋವಿಡ್ ವಿರುದ್ಧ ರಕ್ಷಣೆ ದೊರೆಯುತ್ತದೆ.

English summary
Polycystic Ovary Syndrome (PCOS) is the leading cause of female infertility as it is responsible for 85% of ovulatory disorders in women according to Dr. Vidya V Bhat, Laparoscopic Surgeon and Fertility Specialist and Medical Director of RadhaKrishna Multispecialty Hospital, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X