ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Solar Eclipse 2022: ವರ್ಷದ ಮೊದಲ ಸೂರ್ಯ ಗ್ರಹಣ: ಯಾವ ಸಮಯ, ಹೇಗೆ ನೋಡುವುದು?

|
Google Oneindia Kannada News

ಈ ವರ್ಷ ಮೊದಲ ಸೂರ್ಯಗ್ರಹಣ ಈ ತಿಂಗಳಿನಲ್ಲಿ ಸಂಭವಿಸಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 30ರಂದು ಮಧ್ಯರಾತ್ರಿಯಲ್ಲಿ ನಡೆಯಲಿದೆ. 2022ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದೆ. ಈ ಪೈಕಿ ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರ ಗ್ರಹಣವಾಗಿದೆ. ಈ ವರ್ಷದ ಮೊದಲ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ.

ಧಾರ್ಮಿಕ ವಿಚಾರದಲ್ಲಿ ಈ ಸೂರ್ಯಗ್ರಹಣವು ಬಹಳ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಆದರೆ ಈ ಸೂರ್ಯ ಗ್ರಹಣವು ಜ್ಯೋತಿಷ್ಯ ಹಾಗೂ ಖಗೋಳಶಾಸ್ತ್ರದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ. ಧರ್ಮ ಹಾಗೂ ಜ್ಯೋತಿಷ್ಯದ ಪ್ರಕಾರ ಈ ಗ್ರಹಣವನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಖಗೋಳಶಾಸ್ತ್ರದಲ್ಲಿ ಇದೊಂದು ಪ್ರಕ್ರಿಯೆಯಷ್ಟೇ.

Solar Eclipse April 2022: ಈ ವರ್ಷದ ಮೊದಲ ಸೂರ್ಯಗ್ರಹಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವುSolar Eclipse April 2022: ಈ ವರ್ಷದ ಮೊದಲ ಸೂರ್ಯಗ್ರಹಣದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು, ಸೂರ್ಯಗ್ರಹಣವನ್ನು ನೋಡಬಾರದು, ಅದು ಮೈಗೆ ಸೋಕಬಾರದು ಎಂದು ಜ್ಯೋತಿಷ್ಯಗಳು ಹೇಳುತ್ತದೆ. ಹಾಗೆಯೇ ಈ ಗ್ರಹಣವು ಎಲ್ಲಾ ರಾಶಿಗಳ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೆ ವಿಜ್ಞಾನಿಗಳು ಸೂರ್ಯಗ್ರಹಣವನ್ನು ಬರೀ ಕಣ್ಣಿನಿಂದ ನೋಡಬೇಡಿ ಎಂದಷ್ಟೇ ಹೇಳುತ್ತಾರೆ. ಹಲವಾರು ಮಂದಿ ಈ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡುತ್ತಾರೆ. ಹಾಗಾದರೆ ಈ ವರ್ಷದ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ, ನಾವು ನೋಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಸೂರ್ಯಗ್ರಹಣ ಎಂದರೇನು?

ಸೂರ್ಯಗ್ರಹಣ ಎಂದರೇನು?

ನಾವು ಸೂರ್ಯಗ್ರಹಣವನ್ನು ನೋಡುವುದು ಹೇಗೆ ಹಾಗೂ ಅದು ಎಲ್ಲಿ ಕಾಣಲಿದೆ ಎಂಬ ಬಗ್ಗೆ ತಿಳಿಯುವುದಕ್ಕಿಂತ ಮೊದಲು ಸೂರ್ಯ ಗ್ರಹಣ ಎಂದರೆ ಏನು ಎಂಬವುದನ್ನು ತಿಳಿಯೋಣ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಖಗೋಳಶಾಸ್ತ್ರದ (astronomy) ಅನುಸಾರ ಚಂದ್ರ ಭೂಮಿ ಮಧ್ಯ ಸೂರ್ಯನಿಗೆ ಅಡ್ಡ ಬಂದರೆ ಸೂರ್ಯಗ್ರಹಣ ಎನ್ನಲಾಗುತ್ತದೆ. ಸೂರ್ಯನಿರುವ ಪ್ರದೇಶದಲ್ಲಿ ಆ ಸಮಯದಲ್ಲಿ ಕತ್ತಲು ಆವರಿಸಲಿದೆ. ಚಂದ್ರನು ಒಂದು ಭಾಗದಲ್ಲಿ ಮಾತ್ರ ಹಾದು ಹೋದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ನಾಸಾ ಪ್ರಕಾರ ಈ ಘಟನೆಯಲ್ಲಿ ಸೂರ್ಯನ ಸುಮಾರು ಶೇಕಡ 64 ಭಾಗ ಚಂದ್ರ ಹಾದು ಹೋಗಲಿದೆ.

 ಸೂರ್ಯ ಗ್ರಹಣ ಸಮಯ

ಸೂರ್ಯ ಗ್ರಹಣ ಸಮಯ

ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 30ರ ಮಧ್ಯರಾತ್ರಿ 12:15ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಗ್ಗೆ 4:07 ರವರೆಗೆ ಇರುತ್ತದೆ. ಗ್ರಹಣದ ಒಟ್ಟು ಅವಧಿ 3 ಗಂಟೆ 52 ನಿಮಿಷಗಳಾಗಿವೆ. ಆದರೆ, ಭಾರತಕ್ಕೆ ಈ ಗ್ರಹಣವು ಕಾಣುವುದಿಲ್ಲ.

 ಸೂರ್ಯ ಗ್ರಹಣ ವೀಕ್ಷಣೆ ಹೇಗೆ?

ಸೂರ್ಯ ಗ್ರಹಣ ವೀಕ್ಷಣೆ ಹೇಗೆ?

ಭಾರತದಲ್ಲಿ ಗ್ರಹಣ ಕಾಣಿಸದಿದ್ದರೂ, ದಕ್ಷಿಣ ಮತ್ತು ಪಶ್ಚಿಮ ಅಮೆರಿಕ, ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಸಾಗರ ಮತ್ತು ಅಂಟಾರ್ಕ್ಟಿಕ್ ಸಾಗರದಲ್ಲಿ ಗ್ರಹಣವನ್ನು ವೀಕ್ಷಿಸಬಹುದಾಗಿದೆ. ಚಿಲಿ, ಅರ್ಜೆಂಟೀನಾ, ಉರುಗ್ವೆಯ ಹೆಚ್ಚಿನ ಭಾಗಗಳು, ಪಶ್ಚಿಮ ಪರಾಗ್ವೆ, ನೈಋತ್ಯ ಬೊಲಿವಿಯಾ, ಆಗ್ನೇಯ ಪೆರು ಮತ್ತು ನೈಋತ್ಯ ಬ್ರೆಜಿಲ್‌ನ ಒಂದು ಸಣ್ಣ ಭಾಗದಲ್ಲಿ ಸೂರ್ಯ ಗ್ರಹಣ ಕಾಣಲಿದೆ. ಆದರೆ ನಾವು ಆನ್‌ಲೈನ್ ಮೂಲಕವೂ ಸೂರ್ಯ ಗ್ರಹಣವನ್ನು ವೀಕ್ಷಣೆ ಮಾಡಬಹುದು. ನಾಸಾ ಸೈಟ್‌ನಲ್ಲಿ ಸೇರಿದಂತೆ ಹಲವಾರು ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ.

 ಎರಡನೇ ಸೂರ್ಯ ಗ್ರಹಣ ಯಾವಾಗ?

ಎರಡನೇ ಸೂರ್ಯ ಗ್ರಹಣ ಯಾವಾಗ?

ಈ ವರ್ಷದ ಎರಡನೇ ಸೂರ್ಯ ಗ್ರಹಣವು ಈ ಅಕ್ಟೋಬರ್‌ನಲ್ಲಿ ಕಾಣಿಸಿಕೊಳ್ಳಲಿದೆ. ಅಕ್ಟೋಬರ್ 25ರಂದು ಕಾಣಿಸಿಕೊಳ್ಳಲಿದೆ. ಈ ಗ್ರಹಣವು ಕೂಡಾ ಭಾರತದಲ್ಲಿ ಕಾಣುವುದಿಲ್ಲ. ಮುಂಜಾನೆ 4:29ಕ್ಕೆ ಗ್ರಹಣ ಆರಂಭವಾಗಿ ಸಂಜೆ 5:42ಕ್ಕೆ ಮುಕ್ತಾಯವಾಗುವ ಹಿನ್ನೆಲೆಯಿಂದಾಗಿ ಎರಡನೇ ಸೂರ್ಯ ಗ್ರಹಣವು ಕೂಡಾ ಭಾರತದಲ್ಲಿ ಕಾಣುವುದಿಲ್ಲ. ಈ ಗ್ರಹಣವು ಕೂಡಾ ಭಾಗಶಃ ಗ್ರಹಣ ಇದಾಗಿದ್ದು, ಯೂರೋಪ್, ಈಶಾನ್ಯ ಆಫ್ರಿಕಾ, ಅಟ್ಲಾಂಟಿಕ್ ಸಾಗರ (Atlantic Ocean) ಹಾಗೂ ರಷ್ಯಾದ ಕೆಲ ರಾಷ್ಟ್ರಗಳಲ್ಲಿ ಕಂಡು ಬರಲಿದೆ.

English summary
Partial Solar Eclipse 2022: Where to Watch, India Time, Here's a Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X