ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್‌ಸಿ ಪಾಸಾದವರಿಗೆ ಉದ್ಯೋಗಾಧಾರಿತ ಪ್ಯಾರಾ ಮೆಡಿಕಲ್ ಕೋರ್ಸ್!

|
Google Oneindia Kannada News

ಬೆಂಗಳೂರು ಜು. 27: ಕೋವಿಡ್ 19 ದೇಶದ ಅರೋಗ್ಯ ವ್ಯವಸ್ಥೆಯನ್ನು ಬೆತ್ತಲೆಗೊಳಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಟೆಕ್ನೀಷಿಯನ್‌ಗಳಿಗೆ ಬಹು ಬೇಡಿಕೆಯಿದೆ. ಎಸ್ಎಸ್ಎಲ್‌ಸಿ ಪಾಸಾಗಿ ಸಾಂಪ್ರದಾಯಿಕ ಕೋರ್ಸ್‌ಗಳನ್ನು ಮಾಡುವ ಬದಲಿಗೆ ಆರೋಗ್ಯ ಕ್ಷೇತ್ರದ ಡಿಪ್ಲೋಮಾ ಕೋರ್ಸ್ ಮುಗಿಸಿ ಅತಿ ಕಿರಿಯ ವಯಸ್ಸಿನಲ್ಲೇ ಉದ್ಯೋಗ ಪಡೆದುಕೊಳ್ಳುವ ಅವಕಾಶಗಳಿದ್ದು, ಅವುಗಳ ವಿವರ ಇಲ್ಲಿದೆ.

ಯಾವೆಲ್ಲಾ ಕೋರ್ಸ್ ಓದಬಹುದು

ಯಾವೆಲ್ಲಾ ಕೋರ್ಸ್ ಓದಬಹುದು

ದೇಶ- ರಾಜ್ಯದಲ್ಲಿ ವೈದ್ಯಕೀಯ ರಂಗ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಅಷ್ಟೇ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಲ್ಯಾಬ್ ಟೆಕ್ನೀಷಿಯನ್, ಡಯಾಲಿಸಿಸ್ ಟೆಕ್ನೀಷಿಯನ್, ಎಕ್ಸರೇ ಟೆಕ್ನೀಷಿಯನ್, ಮೆಡಿಕಲ್ ರೆಕಾರ್ಡ್ ಟೆಕ್ನೀಷಿಯನ್, ಆಪರೇಷನ್ ಥಿಯೇಟರ್ ಟೆಕ್ನೀಷಿಯನ್, ಅನಸ್ತೇಷಿಯಾ ಟೆಕ್ನೀಷಿಯನ್ ಡಿಪ್ಲೋಮಾ ಓದಿದವರಿಗೆ ಸಾಕಷ್ಟು ಅವಕಾಶಗಳು ಲಭ್ಯವಾಗಲಿವೆ.

ಈ ಕೋರ್ಸ್ ಗಳಿಗೆ ಸೇರುವುದು ಹೇಗೆ?

ಈ ಕೋರ್ಸ್ ಗಳಿಗೆ ಸೇರುವುದು ಹೇಗೆ?

ರಾಜ್ಯದಲ್ಲಿ ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ಇದೆ. ವೈದ್ಯ ಅಭ್ಯರ್ಥಿಗಳ ಆಯ್ಕೆ ಮಾದರಿಯಲ್ಲಿ ಸಿಇಟಿ ಮೂಲಕ ಈ ಕೋರ್ಸ್ ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚು ಅಂಕ ಗಳಿಸಿದವರಿಗೆ ಸರ್ಕಾರಿ ಕೋಟಾದಡಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಬಹುದು. ಇನ್ನು ಕೆಲವು ಖಾಸಗಿ ಕಾಲೇಜುಗಳಿಗೆ ಸರ್ಕಾರಿ ಕೋಟಾದಡಿ ಸೀಟು ಪಡೆದು ಕಡಿಮೆ ಶುಲ್ಕದಲ್ಲಿ ವ್ಯಾಸಂಗ ಮಾಡಬಹುದು. ಇಲ್ಲವೇ ಖಾಸಗಿ ಕಾಲೇಜುಗಳಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಕಲಿಸುವ ಕಾಲೇಜುಗಳಲ್ಲಿ ಖಾಸಗಿ ಸೀಟು ಪಡೆದು ಅಧ್ಯಯನ ಮಾಡಬಹುದು.

ಕೋರ್ಸ್ ಅವಧಿ ಮತ್ತು ಶುಲ್ಕ

ಕೋರ್ಸ್ ಅವಧಿ ಮತ್ತು ಶುಲ್ಕ

ಪ್ಯಾರಾ ಮೆಡಿಕಲ್ ವಿವಿಧ ಡಿಪ್ಲೋಮಾ ಕೋರ್ಸ್ ಎಸ್ಎಸ್ಎಲ್‌ಸಿ ಪಾಸಾದವರಿಗೆ ಮೂರು ವರ್ಷ. ಪಿಯುಸಿ ಆಧಾರದ ಮೇಲೆ ಈ ಕೋರ್ಸ್ ಗೆ ದಾಖಲಾತಿಯಾದರೆ ಕೇವಲ ಎರಡು ವರ್ಷಕ್ಕೆ ಕೋರ್ಸ್ ಮುಗಿಯುತ್ತದೆ. ಇದರಲ್ಲಿ ಆರು ತಿಂಗಳು ತರಬೇತಿ ಅವಧಿ ಇರುತ್ತದೆ. ಸಂಬಂಧ ಸರ್ಕಾರಿ ಕೋಟಾದಡಿ ಸೀಟು ಗಿಟ್ಟಿಸಿದರೆ ಮೂರು ವರ್ಷಕ್ಕೆ ಅಂದಾಜು 50 ರಿಂದ 60 ಸಾವಿರ ಶುಲ್ಕ ತಗಲಬಹುದು. ಇನ್ನು ಸರ್ಕಾರಿ ಕೋಟಾದಡಿ ಖಾಸಗಿ ಶಾಲೆಗಳಿಗೆ ಪ್ಯಾರಾ ಮೆಡಿಕಲ್ ಬೋರ್ಡ್ ನಿಗದಿ ಮಾಡಿರುವ ಶುಲ್ಕವನ್ನು ಪಾವತಿಸಬೇಕು. ಖಾಸಗಿ ಕಾಲೇಜುಗಳ ಶುಲ್ಕ ಆಯಾ ಕಾಲೇಜು ಆಡಳಿತ ಮಂಡಳಿ ತೀರ್ಮಾನಕ್ಕೆ ಬಿಟ್ಟಿರುತ್ತದೆ. ವಾರ್ಷಿಕ 30 ರಿಂದ 50 ಸಾವಿರ ರೂ. ಶುಲ್ಕ ತಗಲಬಹುದು.

ಟೆಕ್ನಿಕಲ್ ಸಿಬ್ಬಂದಿ ಕೊರತೆ

ಟೆಕ್ನಿಕಲ್ ಸಿಬ್ಬಂದಿ ಕೊರತೆ

ಕೊರೊನಾ ದಿಂದ ರಾಜ್ಯದಲ್ಲಿ ಎಲ್ಲಾ ವಲಯದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಮೊದಲಿನಿಂದಲೂ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಬಹು ಬೇಡಿಕೆ ಸೃಷ್ಟಿಯಾಗಲಿದೆ. ಲ್ಯಾಬ್ ಟೆಕ್ನೀಷಿಯನ್, ಡಯಾಲಿಸಿಸ್ ಟೆಕ್ನೀಷಿಯನ್, ಎಕ್ಸರೇ ಟೆಕ್ನೀಷಿಯನ್, ಮೆಡಿಕಲ್ ರೆಕಾರ್ಡ್ ಟೆಕ್ನೀಷಿಯನ್, ಆಪರೇಷನ್ ಥಿಯೇಟರ್ ಟೆಕ್ನೀಷಿಯನ್, ಅನಸ್ತೇಷಿಯಾ ಟೆಕ್ನೀಷಯನ್‌ಗಳಿಗೆ ತುಂಬಾ ಬೇಡಿಕೆಯಿದೆ. ವೃತ್ತಿಪರತೆಯಿಂದ ಕಲಿತರು ಖಾಲಿ ಕೈಯಲ್ಲಿ ಕೂರುವ ಪರಿಸ್ಥಿತಿಯೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ವೈದ್ಯಕೀಯ ರಂಗ ಇನ್ನಷ್ಟು ಬೆಳೆಯುತ್ತಿದೆ. ಕೊರೊನಾ ಕಲಿಸಿರುವ ಪಾಠದಿಂದ ಆರೋಗ್ಯ ವಲಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಪ್ಯಾರಾ ಮೆಡಿಕಲ್ ಬೋರ್ಡ್ ನಿವೃತ್ತ ಅಧಿಕಾರಿ ವೀರ ನಾಗಪ್ಪ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಈ ಕೋರ್ಸ್ ಗಳ ಬಗ್ಗೆ ಆಸಕ್ತಿಯುಳ್ಳವರು ಕೂಡಲೇ ಕರ್ನಾಟಕ ಪ್ಯಾರಾ ಮೆಡಿಕಲ್ ಬೊರ್ಡ್ ಸಂಪರ್ಕಿಸಿ ವಿವರ ಪಡೆಯಬಹುದು. ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ. 080 2670 2159

English summary
Paramedical courses after SSLC in India: Here we talking about the paramedical courses which can be pursued on the basis of SSLC. Read more details in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X