ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ರಾಜ್ಯಗಳ ಚುನಾವಣೆ ಫಲಿತಾಂಶ ಏನಾಗಲಿದೆ? ಜಗನ್ನಾಥ್ ಗುರೂಜಿ ಭವಿಷ್ಯ

|
Google Oneindia Kannada News

ಐದು ರಾಜ್ಯಗಳಲ್ಲಿ ಕೋವಿಡ್ 19 ಮಾರ್ಗಸೂಚಿಯಂತೆ ಚುನಾವಣೆ ಪ್ರಕ್ರಿಯೆ ನಡೆಸಲಾಗಿದೆ. ಐದು ರಾಜ್ಯಗಳಲ್ಲಿ 2022ರ ವಿಧಾನಸಭಾ ಚುನಾವಣೆ ನಡೆಸಲಾಗಿದ್ದು, ಮಾರ್ಚ್ 10ರಂದು ಎಲ್ಲಾ ಐದು ರಾಜ್ಯಗಳ ಫಲಿತಾಂಶ ಪ್ರಕಟಿಸಲಾಗುತ್ತದೆ. ಫೆಬ್ರವರಿ 10 ರಂದು ಪ್ರಾರಂಭವಾಗಿ ಮಾರ್ಚ್ 7ರಂದು 7ನೇ ಹಾಗೂ ಕೊನೆ ಹಂತದ ಮತದಾನ ಅಂತಿಮಗೊಂಡಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳ ಚುನಾವಣಾ ಭವಿಷ್ಯ ಏನಾಗಬಹುದು ಎಂಬ ಕುತೂಹಲ ದೇಶದೆಲ್ಲೆಡೆ ಇದೆ. ಈ ಸಂದರ್ಭದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೆನಿಸಿಕೊಂಡಿರುವ ಆಂಧ್ರಪ್ರದೇಶದ ಜಗನ್ನಾಥ್ ಗುರೂಜಿ ಅವರು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಯುಪಿ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಮತ್ತು ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂಬುದು ಇನ್ನಿತರ ರಾಜ್ಯಗಳಲ್ಲೂ ಕುತೂಹಲ ಮೂಡಿಸಿದೆ. ಕೆಲವು ಸ್ಪಷ್ಟ ಗೆಲುವುಗಳು ಇರಬಹುದು ಎಂದು ಎಕ್ಸಿಟ್ ಪೋಲ್ ಫಲಿತಾಂಶಗಳು ಹೇಳಿವೆ ಆದರೆ, ಯಾರ ಲಕ್ ಯಾವಾಗ ತಿರುಗುತ್ತವೆ ಎಂಬುದು ಅಂತಿಮ ಫಲಿತಾಂಶ ಬರುವ ತನಕ ತಿಳಿಯುವುದಿಲ್ಲ. ಇಂಥ ಸಂದರ್ಭದಲ್ಲಿ ಜ್ಯೋತಿಷಿ ಮತ್ತು ಫೇಸ್ ರೀಡರ್ ಪಂಡಿತ್ ಜಗನ್ನಾಥ್ ಗುರೂಜಿ ಅವರು ಸಾಕ್ಷಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, ಪ್ರತಿ ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬಿರೇನ್ ಸಿಂಗ್ ರಾಜ್ಯದ ಮುಖ್ಯಮಂತ್ರಿ

ಬಿರೇನ್ ಸಿಂಗ್ ರಾಜ್ಯದ ಮುಖ್ಯಮಂತ್ರಿ

ಮಣಿಪುರದಲ್ಲಿ ಚುನಾವಣಾ ಆಯೋಗವು ಚುರಾಚಂದ್‌ಪುರ ಜಿಲ್ಲೆಯ ಒಂಬತ್ತು ಬೂತ್‌ಗಳಲ್ಲಿ ಮರು ಮತದಾನ ನಡೆಸಿದ್ದು, ಎನ್. ಬಿರೇನ್ ಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯಿದೆ. ಪಂಡಿತ್‌ಜಿಯವರ ಭವಿಷ್ಯವಾಣಿಯ ಪ್ರಕಾರ 2017 ರಿಂದ ಮಣಿಪುರದ ಸಿಎಂ ಆಗಿರುವ ಮಾಜಿ ಫುಟ್‌ಬಾಲ್ ಆಟಗಾರ ರಾಜಕಾರಣಿಯಾಗಿ ಬದಲಾಗಿದ್ದಾರೆ. ಸ್ಥಾನಗಳ ಬಗ್ಗೆ ಹೇಳುವುದಾದರೆ, ಈಶಾನ್ಯ ರಾಜ್ಯದಲ್ಲಿ ಬಿಜೆಪಿ 25-35 ಸ್ಥಾನಗಳನ್ನು ಪಡೆಯಬಹುದು. ಚಿತ್ರದಲ್ಲಿ ಪಂಡಿಂತ್ ಜಗನ್ನಾಥ್ ಗುರೂಜಿ.

ಮತ್ತೆ ಎನ್‌ಡಿಎ ಆಡಳಿತ

ಮತ್ತೆ ಎನ್‌ಡಿಎ ಆಡಳಿತ

ಗೋವಾದಲ್ಲಿ, ರಾಜ್ಯದಲ್ಲಿ ಎನ್‌ಡಿಎ ಆಡಳಿತವನ್ನು ಮುಂದುವರಿಸುವ ಸಾಧ್ಯತೆಯಿದೆ. ಆದರೆ ಪಂಡಿತ್‌ಜೀಯವರು ಕಾಂಗ್ರೆಸ್‌ ಉತ್ತಮ ಸಾಧನೆ ಮಾಡುವುದನ್ನು ಊಹಿಸಿದ್ದಾರೆ. ಆದರೆ, ಇನ್ನೂ ಎನ್‌ಡಿಎ ಸರ್ಕಾರವೇ ಮೈತ್ರಿ ಸಾಧ್ಯತೆಗಳ ಮೂಲಕ ಸಾಧ್ಯವಾಗಿಸಿಕೊಳ್ಳಲಿದೆ. ಸ್ಥಾನಗಳ ಲೆಕ್ಕದಲ್ಲಿ ಬಿಜೆಪಿ 16 ರಿಂದ 18 ಸ್ಥಾನ, ಕಾಂಗ್ರೆಸ್ 15-17 ಸ್ಥಾನ, ಇತರೆ ಪಕ್ಷಗಳು 2-5 ಸ್ಥಾನ ಗಳಿಸಬಹುದು.

ಉತ್ತರಾಖಂಡದಲ್ಲಿ ಯಾರಿಗೆ ಗೆಲುವು

ಉತ್ತರಾಖಂಡದಲ್ಲಿ ಯಾರಿಗೆ ಗೆಲುವು

ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಡಳಿತ ವಿರೋಧಿ ಅಲೆ ಬಗ್ಗೆ ದನಿಯೆತ್ತಿದ್ದ ಬಿಜೆಪಿ ಈಗ ಅದೇ ಪರಿಸ್ಥಿತಿ ಎದುರಿಸುತ್ತಿದೆ. ಬಿಜೆಪಿ ಆಂತರಿಕ ಕಚ್ಚಾಟದಿಂದ ಮತದಾರರಿಗೆ ಗೊಂದಲ ಮೂಡಿಸಿದೆ. ಪಂಡಿತ್ ಜಗನ್ನಾಥ್ ಗುರೂಜಿಯವರ ಭವಿಷ್ಯವಾಣಿಯಂತೆ, ಪ್ರಸ್ತುತ ಬಿಜೆಪಿ ಸರ್ಕಾರ, ಬಹುಶಃ ಮುಂದಿನದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್‌ಗೆ 33-35 ಸ್ಥಾನಗಳು ಮತ್ತು ಬಿಜೆಪಿ 28-30 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿರುವುದರಿಂದ ತೀವ್ರ ಪೈಪೋಟಿ ಏರ್ಪಡಬಹುದು. ಎಎಪಿ ಬಗ್ಗೆ ಹೇಳುವುದಾದರೆ, ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಹಚರರು ನವೆಂಬರ್ 2012 ರಲ್ಲಿ ಸ್ಥಾಪಿಸಿದ ಪಕ್ಷವು 3-5 ಸ್ಥಾನಗಳನ್ನು ಪಡೆಯಬಹುದು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಭವಿಷ್ಯವಾಣಿಯ ಪ್ರಕಾರ, ಎಎಪಿ ಸರ್ಕಾರವು ಕಾಂಗ್ರೆಸ್‌ನ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಅಂತಿಮವಾಗಿ, ಎಲ್ಲಾ ಸಂಭವನೀಯತೆಗಳಲ್ಲಿ ಸರ್ಕಾರವು ಕಾಂಗ್ರೆಸ್‌ನದ್ದಾಗಿದೆ.

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ

ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ನಡುವೆ ಜಿದ್ದಾಜಿದ್ದಿನ ಹೋರಾಟವಿದೆ, ಆದರೆ, ಅಂತಿಮವಾಗಿ, ಊಹಿಸಿದಂತೆ, ಎಎಪಿ ಸೋಲಬಹುದು. ಕಾಂಗ್ರೆಸ್‌ನ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಪಂಚ ನದಿಗಳ ನಾಡು ಮುಖ್ಯಮಂತ್ರಿಯಾಗುವುದು ಖಚಿತ. ಕಾಂಗ್ರೆಸ್‌ಗೆ ಸಿಗಬಹುದಾದ ಸ್ಥಾನಗಳ ಸಂಖ್ಯೆಯನ್ನು ಊಹಿಸಿದರೆ, ಅದು 65 ರಿಂದ 75 ಕ್ಕಿಂತ ಹೆಚ್ಚು ಅಥವಾ ಕಡಿಮೆ ಸ್ಥಾನಗಳನ್ನು ಹೊಂದಿರಬಹುದು. ಎಎಪಿ ಸದ್ಯಕ್ಕೆ ಪ್ರತಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಆದರೆ, ಕೆಲವೆಡೆ ಅಚ್ಚರಿಯ ಫಲಿತಾಂಶವನ್ನು ನೀಡಲಿದೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ

ಬಿಜೆಪಿ ಮತ್ತೆ ಅಧಿಕಾರಕ್ಕೆ

ಯೋಗಿ ಆದಿತ್ಯನಾಥ್ ಅವರು ಆಡಳಿತದ ಚುಕ್ಕಾಣಿ ಹಿಡಿದಿರುವ ಉತ್ತರ ಪ್ರದೇಶದ ಫಲಿತಾಂಶದ ಬಗ್ಗೆ ಇಡೀ ದೇಶವೇ ಗಮನವಿಟ್ಟಿದೆ, 2022 ರಲ್ಲಿ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬಹುದು. ಪ್ರತಿ ಪಕ್ಷವು ಗಳಿಸುವ ಸ್ಥಾನಗಳು ರಾಜಕೀಯದ ಆಟ ಬದಲಾಯಿಸಬಹುದು ಮತ್ತು ಪಂಡಿತ್ ಜಗನ್ನಾಥ್ ಅವರ ಭವಿಷ್ಯದ ಪ್ರಕಾರ ಗುರೂಜಿ, ಬಿಜೆಪಿ 200-250 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಬಹುದು. ಕಾಂಗ್ರೆಸ್ ಸರಿ ಸುಮಾರು 20 ಅಥವಾ ಅದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಬಹುದು, ಸಮಾಜವಾದಿ ಪಕ್ಷವು 135-150 ಸ್ಥಾನಗಳನ್ನು ಪಡೆಯಬಹುದು, SBSP (ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ) ಬಹುಶಃ 6-10 ಸ್ಥಾನಗಳನ್ನು ಪಡೆಯಬಹುದು. ಮಿಕ್ಕ ಪಕ್ಷಗಳಿಂದ ಹೆಚ್ಚಿನ ನಿರೀಕ್ಷೆ ಇಲ್ಲ, ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಗಳಿಸಲು ಸಾಧ್ಯವಾಗದಿದ್ದರೂ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಲಿದೆ.

English summary
Famous celeb astrologer Pandit Jagannath Guruji Predicts the fate of Uttar Pradesh, Uttarakhand, Punjab, Manipur and Goa State Assembly Elections 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X