ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಹೊಸ ದಾಖಲೆ; ವಾರಕ್ಕೆ 60 ಗಂಟೆ ಕೆಲಸ: ಬೇರೆ ದೇಶಗಳಲ್ಲಿ ಹೇಗೆ?

|
Google Oneindia Kannada News

ಇಸ್ಲಾಮಾಬಾದ್, ಏ. 14: ಇಮ್ರಾನ್ ಖಾನ್ ನಂತರ ಪಾಕಿಸ್ತಾನದ ಪ್ರಧಾನಿಯಾಗಿರುವ ಶಹಬಾಜ್ ಷರೀಫ್ ಅವರು ಅಧಿಕಾರಕ್ಕೆ ಬಂದ ನಂತರ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅವುಗಳಲ್ಲಿ ಕೆಲಸದ ಅವಧಿ ಹೆಚ್ಚಿಸುವುದೂ ಒಂದು. ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ದಿನದಲ್ಲಿ ಕನಿಷ್ಠ 10 ಗಂಟೆ ಕೆಲಸ ಮಾಡುವಂತೆ ಫರ್ಮಾನು ಹೊರಡಿಸಿದ್ದಾರೆ. ಕೆಲ ಸರಕಾರಿ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ರಜೆಯ ಸೌಲಭ್ಯ ಅನುಭವಿಸುತ್ತಿದ್ದ ಪಾಕಿಸ್ತಾನಿ ಸರಕಾರಿ ನೌಕರರು ಈಗ ವಾರದಲ್ಲಿ ಆರು ದಿನ ಕೆಲಸ ಮಾಡಬೇಕಾಗಿದೆ. ಅಂದರೆ ವಾರಕ್ಕೆ 60 ಗಂಟೆಯಾದರೂ ಸರಕಾರಿ ನೌಕರರು ಕೆಲಸ ಮಾಡಬೇಕು. ಹೆಚ್ಚುತ್ತಿರುವ ಹಣದುಬ್ಬರಕ್ಕೆ (Inflation) ಕಡಿವಾಣ ಹಾಕಲು ಪಾಕಿಸ್ತಾನದ ಹೊಸ ಪ್ರಧಾನಿ ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.

ಪಾಕಿಸ್ತಾನದ ಹೊಸ ದಾಖಲೆ: ಸರಕಾರಿ ನೌಕರರು ವಾರದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ದೇಶಗಳ ಪೈಕಿ ಪಾಕಿಸ್ತಾನ ನಂಬರ್ ಒನ್ ಎನಿಸುತ್ತದೆ. ಅಧಿಕೃತವಾಗಿ ವಾರದಲ್ಲಿ 60 ಗಂಟೆ ಕೆಲಸ ಮಾಡುವುದು ಯಾವ ದೇಶದಲ್ಲೂ ಇಲ್ಲ. ಈಗ ವಿಶ್ವದ ಪ್ರಮುಖ ದೇಶಗಳಲ್ಲಿ ಕೆಲಸದ ಅವಧಿಯನ್ನು ಇಳಿಸುವ ನಿಟ್ಟಿನಲ್ಲಿ ಚಿಂತನೆಗಳು ಮತ್ತು ಪ್ರಯತ್ನಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಈ ಬೆಳವಣಿಗೆ ಗಮನ ಸೆಳೆಯುತ್ತದೆ.

 ಶಹಬಾಜ್ ಷರೀಫ್ ಪ್ರಧಾನಿ ಆದಾಗ ಭಾರತದ ಈ ಹಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ ಶಹಬಾಜ್ ಷರೀಫ್ ಪ್ರಧಾನಿ ಆದಾಗ ಭಾರತದ ಈ ಹಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ

 ಕಾಂಬೋಡಿಯಾದಲ್ಲಿ ಅತಿ ಹೆಚ್ಚು ಕೆಲಸದ ಅವಧಿ ನಿಗದಿ

ಕಾಂಬೋಡಿಯಾದಲ್ಲಿ ಅತಿ ಹೆಚ್ಚು ಕೆಲಸದ ಅವಧಿ ನಿಗದಿ

ಪೆನ್ ವರ್ಲ್ಡ್ ಟೇಬಲ್ (Penn World Table) ವರದಿ ಪ್ರಕಾರ ಕಾಂಬೋಡಿಯಾದಲ್ಲಿ ಅತಿ ಹೆಚ್ಚು ಕೆಲಸದ ಅವಧಿ ನಿಗದಿಯಾಗಿದೆ. ಅಲ್ಲಿ ವಾರಕ್ಕೆ ಸರಾಸರಿ 47.6 ಗಂಟೆ ಕೆಲಸ ಮಾಡಬೇಕು. ಟಾಪ್ 10 ಪಟ್ಟಿಯಲ್ಲಿ ಸಿಂಗಾಪುರ, ಮಲೇಷ್ಯಾ, ಸೌತ್ ಆಫ್ರಿಕಾ, ಚೀನಾ ದೇಶಗಳೂ ಇವೆ.

ಇನ್ನು, ಅತಿ ಕಡಿಮೆ ಕೆಲಸದ ಅವಧಿ ಇರುವ ದೇಶಗಳ ಪಟ್ಟಿಯಲ್ಲಿ ಜರ್ಮನಿ ಮೊದಲು ಬರುತ್ತದೆ. ಪೆನ್ ಪಟ್ಟಿ ಪ್ರಕಾರ ಜರ್ಮನಿಯಲ್ಲಿ ವಾರಕ್ಕೆ ಸರಾಸರಿ 25.6 ಗಂಟೆ ಮಾತ್ರ ಕೆಲಸ ಮಾಡಲಾಗುತ್ತದಂತೆ. ಈ ಪಟ್ಟಿಯಲ್ಲಿರುವ ಎಲ್ಲಾ 10 ದೇಶಗಳೂ ಐರೋಪ್ಯ ಖಂಡಕ್ಕೆ ಸೇರಿದವಾಗಿರುವುದು ಗಮನಾರ್ಹ. ಪೆನ್ ವರ್ಲ್ಡ್ ಟೇಬಲ್‌ನ ಈ ಮಾಹಿತಿ 2019ರಲ್ಲಿ ಪ್ರಕಟವಾಗಿದೆ.

ವಾರದಲ್ಲಿ ಅತಿ ಹೆಚ್ಚು ಅವಧಿ ಕೆಲಸ ಇರುವ ಟಾಪ್-10 ದೇಶಗಳು:

ವಾರದಲ್ಲಿ ಅತಿ ಹೆಚ್ಚು ಅವಧಿ ಕೆಲಸ ಇರುವ ಟಾಪ್-10 ದೇಶಗಳು:

1) ಕಾಂಬೋಡಿಯಾ (47.6 ಗಂಟೆ)
2) ಮಯನ್ಮಾರ್ (47.1 ಗಂಟೆ)
3) ಬಾಂಗ್ಲಾದೇಶ (46.5 ಗಂಟೆ)
4) ಸಿಂಗಾಪುರ್ (44.8 ಗಂಟೆ)
5) ಮಲೇಷ್ಯಾ (42.3 ಗಂಟೆ)
6) ದಕ್ಷಿಣ ಆಫ್ರಿಕಾ (42.10 ಗಂಟೆ)
7) ಚೀನಾ (41.70 ಗಂಟೆ)
8) ಫಿಲಿಪ್ಪೈನ್ಸ್ (41.70 ಗಂಟೆ)
9) ಹಾಂಕಾಂಗ್ (41.30 ಗಂಟೆ)
10) ಡಾಮಿನಿಕಲ್ ರಿಪಬ್ಲಿಕ್ (41.2 ಗಂಟೆ)
ಅತಿ ಕಡಿಮೆ ಅವಧಿ ಕೆಲಸ ಇರುವ ದೇಶಗಳು:
1) ಜರ್ಮನಿ (25.6 ಗಂಟೆ)
2) ಡೆನ್ಮಾರ್ಕ್ (25.9 ಗಂಟೆ)
3) ಬ್ರಿಟನ್ (26.29 ಗಂಟೆ)
4) ನಾರ್ವೆ (26.30 ಗಂಟೆ)
5) ನೆದರ್‌ಲ್ಯಾಂಡ್ಸ್ (26.90 ಗಂಟೆ)
6) ಆಸ್ಟ್ರಿಯಾ (26.92 ಗಂಟೆ)
7) ಫ್ರಾನ್ಸ್ (26.96 ಗಂಟೆ)
8) ಸ್ವೀಡನ್ (27.38 ಗಂಟೆ)
9) ಲುಕ್ಸೆಮ್‌ಬರ್ಗ್ (27.44 ಗಂಟೆ)
10) ಐಸ್‌ಲೆಂಡ್ (27.59 ಗಂಟೆ)

 ಭಾರತದಲ್ಲಿ ಎಷ್ಟಿದೆ ಕೆಲಸದ ಅವಧಿ?

ಭಾರತದಲ್ಲಿ ಎಷ್ಟಿದೆ ಕೆಲಸದ ಅವಧಿ?

ಪೆನ್ ವರ್ಲ್ಡ್ ಡೇಟಾದ ಟಾಪ್-10 ಪಟ್ಟಿಯಲ್ಲಿ ಭಾರತ ಇಲ್ಲ. ಆದರೆ 2021ರ ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ ಭಾರತದಲ್ಲಿ ವಾರದಲ್ಲಿ ಸರಾಸರಿ ಕೆಲಸದ ಅವಧಿ 48 ಗಂಟೆಗಳಂತೆ. ಪಾಕಿಸ್ತಾನ ಬಿಟ್ಟರೆ ಅತಿ ಹೆಚ್ಚು ಕೆಲಸದ ಅವಧಿ ಇರುವುದು ಭಾರತದಲ್ಲೇ.

ಸುಧಾರಿತ ದೇಶಗಳಲ್ಲಿ ಕೆಲಸದ ಅವಧಿ ಕಡಿಮೆಯಾ?

ಸುಧಾರಿತ ದೇಶಗಳಲ್ಲಿ ಕೆಲಸದ ಅವಧಿ ಕಡಿಮೆಯಾ?

ಪೆನ್ ವರ್ಲ್ಡ್ ಡೇಟಾದಲ್ಲಿ ಇರುವ ಅತಿ ಹೆಚ್ಚು ಕೆಲಸದ ಅವಧಿ ಇರುವ ದೇಶಗಳ ಪಟ್ಟಿ ಮತ್ತು ಅತಿ ಕಡಿಮೆ ಕೆಲಸದ ಅವಧಿ ಇರುವ ದೇಶಗಳ ಪಟ್ಟಿಯನ್ನು ಗಮನಿಸಿದರೆ ಒಂದು ವಿಚಾರ ಗಮನ ಸೆಳೆಯುತ್ತದೆ. ಮೊದಲ ಪಟ್ಟಿಯಲ್ಲಿರುವ 10 ದೇಶಗಳೆಲ್ಲವೂ ಏಷ್ಯನ್ ಅಥವಾ ಅಭಿವೃದ್ಧಿಶೀಲ ದೇಶಗಳಾಗಿವೆ. ಎರಡನೇ ಪಟ್ಟಿಯಲ್ಲಿರುವವು ಎಲ್ಲವೂ ಐರೋಪ್ಯ ದೇಶಗಳಾಗಿವೆ. ಅಂದರೆ ಹೆಚ್ಚು ತಲಾದಾಯ ಇರುವ ದೇಶಗಳಲ್ಲಿ ಕೆಲಸದ ಅವಧಿ ಕಡಿಮೆ ಮಾಡಲಾಗಿರುವುದನ್ನು ಗಮನಿಸಬಹುದು.

 ವಾರದಲ್ಲಿ ನಾಲ್ಕು ದಿನ ಕೆಲಸಕ್ಕೆ ಪ್ರಯತ್ನ:

ವಾರದಲ್ಲಿ ನಾಲ್ಕು ದಿನ ಕೆಲಸಕ್ಕೆ ಪ್ರಯತ್ನ:

ನೌಕರರು ವಾರದಲ್ಲಿ ಆರು ದಿನ ಕೆಲಸ ಮಾಡಿದರೆ ಮಾನಸಿಕವಾಗಿ ಬಳಲುತ್ತಾರೆ. ಅದರ ಬದಲು ವಾರದಲ್ಲಿ ಮೂರು ಅಥವಾ ನಾಲ್ಕು ದಿನಗಳು ಕೆಲಸ ಮಾಡಲಿ. ಅದಕ್ಕೆ ತಕ್ಕಂತೆ ದಿನದಲ್ಲಿ ಕೆಲಸದ ಅವಧಿ ಹೆಚ್ಚಿಸಲಿ ಎಂದು ಕೆಲ ತಜ್ಞರು ಶಿಫಾರಸು ಮಾಡುತ್ತಾರೆ.

ಈ ನಿಟ್ಟಿನಲ್ಲಿ ಕೆಲ ದೇಶಗಳಲ್ಲಿ ಕೆಲ ಕಂಪನಿಗಳು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಪ್ರಯೋಗ ನಡೆಸಿವೆ. ಸ್ಪೇನ್, ಸ್ವೀಡನ್, ಐಸ್‌ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಜಪಾನ್, ಯುಎಇ ಮೊದಲಾದ ಕಡೆ ಈ ಪ್ರಯತ್ನಗಳಾಗುತ್ತಿವೆ. (ಒನ್ಇಂಡಿಯಾ ಸುದ್ದಿ)

English summary
Pakistan new PM has implemented 10 hour long working hours for government employees. It comes to 60 hour work per week. Germany is lowest with 25.6 hours work week. India is said to have average 48 hours work per week in another report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X