ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳುವೆರೆಗು ಎಡ್ಡೆ ಸುದ್ದಿ, ಪದ ತುಳು ಆಂಡ್ರಾಯ್ಡ್ App ತೂಲೆ

|
Google Oneindia Kannada News

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ text editor ಸಾಧ್ಯವಾಗಿಸಿರುವ 'ಪದ' ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ವಿಂಡೋಸ್ ಅಥವಾ ಲಿನಾಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಉಚಿತವಾಗಿ ಡೌನ್ ಲೋಡ್ ಗೆ ಲಭ್ಯವಿದೆ. ಆಂಡ್ರಾಯ್ಡ್ ಮಾರುಕಟ್ಟೆಗೂ ಪದ ಲಗ್ಗೆ ಇಟ್ಟು ಮೊಬೈಲ್ ಗಳಲ್ಲೂ ಕನ್ನಡ ಕೀಬೋರ್ಡ್ ಎಡಿಟರ್ ಕಾಣಿಸಿಕೊಂಡು ವರ್ಷಗಳೆ ಕಳೆದಿವೆ. ಈಗ ತುಳು ಭಾಷೆಯ ಎಡಿಟರ್ ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ ತಂತ್ರಜ್ಞ ಲೋಹಿತ್ ಡಿ.ಎಸ್.

ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ 'ಬರಹ' ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟು ಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. 'ನುಡಿ' ತಂತ್ರಾಂಶದಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ ಮತ್ತು ಡೌನ್ಲೋಡ್ ಮಾಡಲು ಬೇಕಾದ ತಾಣ ಅಂತೂ ಇದೆ ಸರಿಯಾಗಿದೆ ಎಂದು ತಂತ್ರಜ್ಞ ಮಿತ್ರರೊಬ್ಬರು ಇದೀಗ ತಿಳಿಸಿದರು.

ಗೂಗಲ್ ಟ್ರಾನ್ಸ್ ಲಿಟೇರೇಷನ್ ಬಳಕೆ ಎಲ್ಲರಿಗೂ ಒಗ್ಗುತ್ತಿಲ್ಲ. ಕುವೆಂಪು ತಂತ್ರಾಂಶ ಇತ್ತೀಚೆಗೆ ಬಿಡುಗಡೆಯಾದರೂ ಜನರಿಗೆ ತಲುಪುತ್ತಿಲ್ಲ. ಡಿಟಿಪಿಗೆ ಹೊಂದಿಕೊಳ್ಳುವ ತಂತ್ರಾಂಶ ಇನ್ನೂ ತಯಾರಿಕೆ ಹಂತದಲ್ಲೇ ಇದೆ. ಕನ್ನಡದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಎಂದರೆ ಫಾಂಟ್ ತಯಾರಿಕೆ, ಎಡಿಟರ್ ಅಪ್ಲಿಕೇಷನ್, ವರ್ಡ್ ಪ್ರೊಸೆಸರ್ ಮಾತ್ರ ಎಂಬಲ್ಲಿಗೆ ಬಂದು ನಿಂತಿದೆ.

Exclusive : ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿExclusive : ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿ

ಆದರೂ, ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ. ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ. ಬಳಕೆದಾರರ ಆಸಕ್ತಿ, ಅಭ್ಯಾಸ ಹಾಗೂ ಹಂಚಿಕೆ ಮೇಲೆ ಯಾವುದೆ ಭಾಷೆ ಆಧಾರಿತ ಅಪ್ಲಿಕೇಷನ್ ಬದುಕುಳಿಯಲು ಸಾಧ್ಯ.

ತುಳು ಅಪ್ಲಿಕೇಷನ್ ನಲ್ಲಿ ಏನಿದು ಲಿಪಿ

ತುಳು ಅಪ್ಲಿಕೇಷನ್ ನಲ್ಲಿ ಏನಿದು ಲಿಪಿ

ಗೂಗಲ್ ಪ್ಲೇಸ್ಟೋರಿನಲ್ಲಿ ಪದ ತುಳು ಹುಡುಕಿ ಡೌನ್ಲೋಡ್ ಮಾಡಿಕೊಂಡು ಸುಲಭವಾಗಿ ಪದ ಕನ್ನಡದಂತೆ ನಿಮ್ಮ ಆಯ್ಕೆಯ ಕೀಬೋರ್ಡ್ ಬಳಸಿ ಎಡಿಟರ್ ನಲ್ಲಿ ಟೈಪ್ ಮಾಡಬಹುದು. ಆದರೆ, ತುಳು ಅಕ್ಷರಗಳು ಮಲೆಯಾಳಂ ರೀತಿಯ ಲಿಪಿಯಲ್ಲಿ ಮೂಡುತ್ತದೆ. ತುಳು ಭಾಷೆಗೆ ಇದೇ ಲಿಪಿ ಹತ್ತಿರವಾಗಿದೆ ಎಂದು ಅಭಿವೃದ್ಧಿಗಾರರ ಅಭಿಮತ. ಈ ಕುರಿತಂತೆ ಹಿರಿಯ ತಂತ್ರಜ್ಞ ಕೆ.ಪಿ ರಾವ್ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದೇನೆ ಎಂದು ಲೋಹಿತ್ ಅವರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ನಾಲ್ಕು ಕೀ ಬೋರ್ಡ್ ಮಾದರಿ ಬಳಸಿ ಟೈಪಿಸಬಹುದು. ಟೈಪ್ ಮಾಡಿದ್ದನ್ನು ತಕ್ಷಣವೇ ಸಾಮಾಜಿಕ ಜಾಲ ತಾಣ, ಇಮೇಲ್ ಮೂಲಕ ಹಂಚಿಕೊಳ್ಳಬಹುದು. ಪದ ತುಳು ಡೌನ್ ಲೋಡ್ ಲಿಂಕ್ ಇಲ್ಲಿದೆ.

ಪದ ಕನ್ನಡ ಎಡಿಟರ್ ಜನಪ್ರಿಯವಾಗಿದೆ

ಪದ ಕನ್ನಡ ಎಡಿಟರ್ ಜನಪ್ರಿಯವಾಗಿದೆ

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ಈ ತಂತ್ರಾಂಶ(ಡೆಸ್ಕ್ ಟಾಪ್ ವರ್ಷನ್) ದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳಿವೆ. ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೌಲಭ್ಯಗಳಿವೆ. ಮೊತ್ತಮೊದಲ ಬಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ. ಇದೆಲ್ಲ ಹಾಗೂ ಇನ್ನಷ್ಟು ಮೊಬೈಲ್ ಆಪ್ ನಲ್ಲೂ ಲಭ್ಯವಾಗಲಿದೆ. ವಿಂಡೋಸ್ ಅಥವಾ ಲಿನಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಡೌನ್ ಲೋಡ್ ಮಾಡಿಕೊಳ್ಳುವ ತಾಣ ಇಲ್ಲಿದೆ.

'ಕನ್ನಡ ಪದ' ಶಬ್ದ ಸಂಪತ್ತು ವಿಸ್ತರಣೆಗೆ ಕೈ ಜೋಡಿಸಿ'ಕನ್ನಡ ಪದ' ಶಬ್ದ ಸಂಪತ್ತು ವಿಸ್ತರಣೆಗೆ ಕೈ ಜೋಡಿಸಿ

ಬರಹ, ನುಡಿ ಕಡತಗಳ ಹೊಂದಾಣಿಕೆ

ಬರಹ, ನುಡಿ ಕಡತಗಳ ಹೊಂದಾಣಿಕೆ

ಪದ ತಂತ್ರಾಂಶದ ಇನ್ನೊಂದು ವಿಶೇಷವೆಂದರೆ ಬರಹ, ನುಡಿ ಮುಂತಾದ ತಂತ್ರಾಂಶಗಳಲ್ಲಿ ಉಳಿಸಿಟ್ಟಿರುವ ಯಾವುದೇ ಕಡತಗಳನ್ನು ನೇರವಾಗಿ ಇದರಲ್ಲಿ ತೆರೆಯಬಹುದು. ಅದು ಯುನಿಕೋಡ್ ಅಕ್ಷರಗಳಾಗಿ ತೆರೆದುಕೊಳ್ಳುತ್ತದೆ.ಪದ ತಂತ್ರಾಂಶದ ಮೂಲಕ ರಚಿಸಿದ ಪಿಡಿಎಫ್ ಕಡತಗಳಲ್ಲಿ ಯಾವುದೇ ಪದವನ್ನು ಕೂಡ ಹುಡುಕಬಹುದು (find) ಹಾಗೂ ಪಿಡಿಎಫ್ ಕಡತದಲ್ಲಿರುವ ಪಠ್ಯವನ್ನು ಕಾಪಿ ಮಾಡಿ ಬೇರೆಡೆಗೆ ಪೇಸ್ಟ್ ಮಾಡಬಹುದು. ಯಾವುದೇ ಫಾಂಟ್ ಸಮಸ್ಯೆ ಉಂಟಾಗುವುದಿಲ್ಲ.

ಪದ ಆಪ್ ಬಳಸಲು ಬೇಕಾದ ಸೌಲಭ್ಯ

ಪದ ಆಪ್ ಬಳಸಲು ಬೇಕಾದ ಸೌಲಭ್ಯ

ಆಪ್ ಬಳಸಲು ಬೇಕಾದ ಅವಶ್ಯ ಸೌಲಭ್ಯ ಯಾವುದೇ ಕಂಪನಿ ಸ್ಮಾರ್ಟ್ ಫೋನ್, ಮೊಬೈಲ್ ಫೋನ್ ನಲ್ಲಿ ಇದು ಲಭ್ಯವಾಗಲಿದೆ, ಗೂಗಲ್ ಸ್ಟೋರ್ ನಲ್ಲಿ ಪದ ಆಂಡ್ರಾಯ್ಡ್ ಆಪ್ ಲಭ್ಯವಿರಲಿದೆ ಅಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. * ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 4.0 ಅಥವಾ ಹೆಚ್ಚಿನ OS ನಿಮ್ಮ ಮೊಬೈಲ್ ನಲ್ಲಿರಬೇಕು.
* ಸ್ಕ್ರೀನ್ ಸೈಜ್ 4 ಇಂಚು ಅಥವಾ ಹೆಚ್ಚಿದ್ದರೆ ಚೆನ್ನಾಗಿ ಕಾಣಿಸುತ್ತದೆ.
* ಆಂಡ್ರಾಯ್ಡ್ OS ಜತೆಗೆ ನಿಮ್ಮ ಫೋನ್ ಹಾರ್ಡ್ ವೇರ್ ಕೂಡಾ ಕನ್ನಡ/ಪ್ರಾದೇಶಿಕ ಅಕ್ಷರಗಳನ್ನು ತೋರಿಸುವ ಸಾಮರ್ಥ್ಯ ಹೊಂದಿರಬೇಕು.
* ಸದ್ಯಕ್ಕೆ ಮಲೆಯಾಳಂ ಲಿಪಿಯಂತೆ ಔಟ್ ಪುಟ್ ಕಾಣಸಲು ಸಾಧ್ಯ.
ಕೆಪಿ ರಾವ್, ಪದ ಫೋನೆಟಿಕ್, ಟ್ರಾನ್ಸ್ ಲಿಟರೇಷನ್ ಹಾಗೂ ಫೋನೆಟಿಕ್ ಮಾದರಿ ನಾಲ್ಕು ಕೀ ಬೋರ್ಡ್ ಮಾದರಿ ಬಳಸಿ ಮಾತ್ರ ಟೈಪಿಸಬಹುದು. ಇನ್ ಸ್ಕ್ರಿಪ್ ಸೇರಿದಂತೆ ಇನ್ನಷ್ಟು ಕೀ ಬೋರ್ಡ್ ಮಾದರಿ ಅಳವಡಿಕೆ ಅಗತ್ಯ
* ಹೆಚ್ಚಿನ ಫಾಂಟ್ ಗಳು ಲಭ್ಯವಿಲ್ಲ. ಫಾಂಟ್ ಸೇರಿಸಲು ಅಥವಾ ಆಯ್ಕೆ ಮಾಡುವ ಸ್ವಾತಂತ್ರ್ಯ ಸದ್ಯಕ್ಕಿಲ್ಲ
* ಕೀ ಬೋರ್ಡ್ ಉದಾಹರಣೆಗಳು ಅಗತ್ಯವಿದೆ. ಕನ್ನಡ ಪದ ವರ್ಡ್ ಪ್ರೊಸೆಸರ್ ನಂತೆ ಎಲ್ಲಾ ಸೌಲಭ್ಯದ ನಿರೀಕ್ಷೆಯಿದೆ. ಕೀ ಬೋರ್ಡ್ ಹೊರ ತಂದರೆ ನೇರವಾಗಿ ವಾಟ್ಸಾಪ್, ಫೇಸ್ಬುಕ್, ನೋಟ್ ಪ್ಯಾಡ್ ಸೇರಿದಂತೆ ಹಲವೆಡೆ ಟೈಪಿಸಲು ಇನ್ನೂ ಸುಲಭ ಎಂಬ ಅಭಿಪ್ರಾಯಗಳು ಸದ್ಯಕ್ಕೆ ಕೇಳಿ ಬಂದಿವೆ.

ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?

English summary
Pada Tulu App comes with dedicated Tulu text editor. which supports 4 different keyboard layouts and more options like Sharing the text via Bluetooth, or via social media like Twitter, WhatsApp etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X