• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪದ ತಂತ್ರಾಂಶ-ಹೊಚ್ಚ ಹೊಸ ಆವೃತ್ತಿಯಲ್ಲಿ ಏನೇನಿದೆ?

By ವಿಕಾಸ್ ಹೆಗಡೆ
|
Google Oneindia Kannada News

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ 'ಪದ' ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ವಿಂಡೋಸ್ ಅಥವಾ ಲಿನಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಉಚಿತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಈ ತಂತ್ರಾಂಶದ ಹೊಸ ಆವೃತ್ತಿ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

ಕಂಪ್ಯೂಟರಲ್ಲಿ ನೇರವಾಗಿ ಕನ್ನಡ ಟೈಪಿಸಲು ಮತ್ತು ವರ್ಡ್ ಪ್ರೊಸೆಸಿಂಗ್ ಮಾಡಲು ಬೇರೆ ಬೇರೆ ತಂತ್ರಾಂಶಗಳು ಅನೇಕ ವರ್ಷಗಳಿಂದ ಬಳಕೆಯಾಗುತ್ತಿವೆ. ತಮ್ಮ ಅನುಕೂಲಕ್ಕೆ ಹೊಂದಿಕೆಯಾಗುವಂತೆ ಜನರು ಅವುಗಳನ್ನು ಬಳಸುತ್ತಿದ್ದಾರೆ. ಈ ಸಾಲಿನಲ್ಲಿ ಬಳಕೆಯಾಗುತ್ತಿರುವ ಜನಪ್ರಿಯ ತಂತ್ರಾಂಶ 'ಪದ'.

Exclusive : ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿExclusive : ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿ

ಸುಮಾರು ಹತ್ತು ವರ್ಷಗಳ ಹಿಂದೆ ವಿಂಡೋಸ್‌ಗಾಗಿ ಬಿಡುಗಡೆಯಾದ 'ಪದ' ತಂತ್ರಾಂಶವು ಬಹಳಷ್ಟು ಅನುಕೂಲಕರ ಸೌಲಭ್ಯಗಳನ್ನು ಹೊಂದಿತ್ತು. ನಂತರದ ವರ್ಷಗಳಲ್ಲಿ ಲಿನಕ್ಸ್ ಆವೃತ್ತಿ ಕೂಡ ಬಿಡುಗಡೆಯಾಗಿತ್ತು. ಇದೀಗ ಆ ತಂತ್ರಾಂಶದ ಹೊಸ ಆವೃತ್ತಿಯು ಬಿಡುಗಡೆಯಾಗಿದೆ. ವಿವಿಧ ಕ್ಷೇತ್ರಗಳ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹಲವು ಹೊಸ ಸೌಲಭ್ಯಗಳನ್ನು ಇದರಲ್ಲಿ ಅಳವಡಿಸಲಾಗಿರುವುದು ಇದರ ವಿಶೇಷ. ಈ 5.x.1 ಆವೃತ್ತಿಯಲ್ಲಿ ಹೊಸದಾಗಿ ಬಂದಿರುವ ಕೆಲವು ಮುಖ್ಯ ಸೌಲಭಗಳೆಂದರೆ

1. ಇನ್ ಸ್ಕ್ರಿಪ್ಟ್ ಕೀಬೋರ್ಡ್
2. IMEಯಲ್ಲಿ ಯುನಿಕೋಡ್ ಜೊತೆ ANSI ಆಯ್ಕೆ
3. IMEಯಲ್ಲೆ ನೇರ ANSI ಯಿಂದ ಯುನಿಕೋಡ್ ಪರಿವರ್ತನೆಗೆ ಅವಕಾಶ
4. ಪದ ಪ್ಯಾಡ್ ಮೂಲಕ ಹಳೆಯ ANSI ಪಠ್ಯದ ಫೈಲುಗಳನ್ನು ಒಟ್ಟಿಗೇ ಯುನಿಕೋಡ್ ಪಠ್ಯದ ಫೈಲುಗಳಾಗಿ ಪರಿವರ್ತಿಸುವ ಸೌಲಭ್ಯ.
5. ಟೈಪಿಂಗ್ ಕಲಿಕೆಗೆ ಟ್ಯೂಟರ್

ಕೆಲವೊಂದು ಗ್ರಾಫಿಕ್ ಡಿಸೈನಿಂಗ್ ಟೂಲುಗಳಲ್ಲಿ ಮತ್ತು ಮುಖ್ಯವಾಗಿ ಮುದ್ರಣಕ್ಕೆ ಬೇಕಾಗುವಂತೆ ಪುಸ್ತಕ ವಿನ್ಯಾಸದ ಹಳೆಯ ಡಿಟಿಪಿ ತಂತ್ರಾಂಶಗಳಿಗೆ ಹಳೆಯ 'ನುಡಿ' ತಂತ್ರಾಂಶದಲ್ಲಿ ಅಥವಾ ಇತರೆ ANSI ಫಾಂಟುಗಳಲ್ಲಿ ಬರೆದ ಪಠ್ಯವೇ ಬೇಕಾಗಿರುವುದರಿಂದ 'ಪದ'ದಲ್ಲಿ ಕೊಡಲಾಗಿರುವ 'ANSI' ಆಯ್ಕೆಯು ಪ್ರಯೋಜನವಾಗುತ್ತದೆ.

ಪೋರ್ಟೆಬಲ್ ಆವೃತ್ತಿಯ ವಿಶೇಷವೇನು?:
ಈ ಪೋರ್ಟೆಬಲ್ ಆವೃತ್ತಿಯ ವಿಶೇಷವೆಂದರೆ ಇದನ್ನು ಕಂಪ್ಯೂಟರಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ. ಡೌನ್ಲೋಡ್ ಮಾಡಿಟ್ಟುಕೊಂಡರೆ ಸಾಕು. ಅದರಲ್ಲೇ ತೆರೆದು ಬಳಸಬಹುದು. ಬೇಕಾದರೆ ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡರೆ ಯಾವ ಕಂಪ್ಯೂಟರಲ್ಲಾದರೂ ನೇರವಾಗಿ ಬಳಸಿಕೊಳ್ಳಬಹುದು. ಹಾಗಂತ ಇನ್ ಸ್ಟಾಲ್ ಮಾಡಿಕೊಳ್ಳುವ ಆವೃತ್ತಿ 4.1 ಸಹ ಬೇಕಾದರೂ ಇದೆ. ವಿಂಡೋಸ್ & ಲಿನಾಕ್ಸ್ ಎರಡಕ್ಕೂ ಇದೆ. ಅದರ ಹೊಸ ಆವೃತ್ತಿಯೂ ಅಭಿವೃದ್ಧಿಗೊಳ್ಳುತ್ತಿದೆ.

ಪ್ರಸ್ತುತ ಇದರಲ್ಲಿ ನುಡಿ (ಕೆಪಿ ರಾವ್), ಪೊನೆಟಿಕ್, ಟ್ರಾನ್ಸ್ಲಿಟೆರೇಶನ್, ಇನ್ ಸ್ಕ್ರಿಪ್ಟ್ ಕೀಬೋರ್ಡ್ ಲೇಔಟುಗಳಿವೆ, ನೇರ ಪಿಡಿಎಫ್ ಕನ್ವರ್ಶನ್ ಮಾಡಬಹುದು, ವಿವಿಧ ಫಾಂಟುಗಳನ್ನು ಹಾಕಿಕೊಳ್ಳಬಹುದು.

ಇದರ ಹೊರತಾಗಿ ಇನ್ನಿತರ ಸೌಲಭ್ಯಗಳೆಂದರೆ ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್, ನಿಘಂಟು , ಹಲವು ಫೈಲ್ ಮಾದರಿಗಳಲ್ಲಿ ಉಳಿಸಲು(save as) ಅವಕಾಶ, ಹುಡುಕು ಮತ್ತು ಬದಲಿಸು, ಲಿಪಿ ಪರಿವರ್ತಕ (Font convert) ಮುಂತಾದವು. ಬರಹ, ನುಡಿ ಮುಂತಾದ ತಂತ್ರಾಂಶಗಳಲ್ಲಿ ಉಳಿಸಿಟ್ಟಿರುವ ಕಡತಗಳನ್ನು ನೇರವಾಗಿ ಇದರಲ್ಲಿ ತೆರೆಯಬಹುದು. ಅದು ಯುನಿಕೋಡ್ ಅಕ್ಷರಗಳಾಗಿ ತೆರೆದುಕೊಳ್ಳುತ್ತದೆ. ಕನ್ನಡ ಮಾತ್ರವಲ್ಲದೆ ಇತರ ಹಲವು ಭಾಷೆಗಳ ಲಿಪಿಗಳನ್ನೂ ಟೈಪಿಸಬಹುದು.

ಒಟ್ಟಾರೆ ಬಹುತೇಕ ಅಗತ್ಯಗಳಿಗೆ ಹೊಂದಿಕೆಯಾಗುವಂತಹ ಸೌಲಭ್ಯಗಳು ಈ ತಂತ್ರಾಂಶದಲ್ಲಿ ಇವೆ. ಯಾವ ತೊಂದರೆಯಿಲ್ಲದೆ ಎಲ್ಲೆಡೆ ಬಳಸಬಹುದು ಎಂದು ಹಲವು ವರ್ಷಗಳಿಂದ ಇದರ ಬಳಸುತ್ತಿರುವವರ ಅಭಿಪ್ರಾಯವಾಗಿದೆ. ಈ ತಂತ್ರಾಂಶದ ಅಭಿವೃದ್ಧಿಗಾರರು ಕನ್ನಡಿಗ ಲೋಹಿತ್ ಡಿ. ಎಸ್. ಅವರು ದಾವಣಗೆರೆ ಮೂಲದ ಸಾಫ್ಟ್‌ವೇರ್ ತಂತ್ರಜ್ಞ. https://www.pada.pro/ ತಾಣದಿಂದ ತಂತ್ರಾಂಶವನ್ನುಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದು.

English summary
‘Pada Software’ is a popular Word processor for Indic Scripts, especially for Kannada script is now updated. Know what's new in latest Pada New version Android 5.x.1 developed by Lohith D Shivamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X