ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ! ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿದ್ರೆ ಸಾವು ಪಕ್ಕಾ?

|
Google Oneindia Kannada News

ಜಗತ್ತಿನ ತುಂಬಾ ಕೊರೊನಾ ರಣಕೇಕೆ ಹಾಕುತ್ತಿರುವ ಈ ಸಂದರ್ಭದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ವಾರದಲ್ಲಿ 55 ಗಂಟೆಗಿಂತ ಹೆಚ್ಚು ಸಮಯ, ಅಂದರೆ ಪ್ರತಿದಿನ ಸರಾಸರಿ 8 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದರೆ ಹೃದಯಕ್ಕೆ ಅಪಾಯವಿದೆ ಎಂದು 'ಡಬ್ಲ್ಯೂಹೆಚ್‌ಒ' ಎಚ್ಚರಿಸಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜೊತೆಗೂಡಿ ವಿಶ್ವ ಆರೋಗ್ಯ ಸಂಸ್ಥೆ ಈ ಅಧ್ಯಯನ ನಡೆಸಿತ್ತು. ಸಮಸ್ಯೆ ಎದುರಿಸುತ್ತಿರುವವರ ಪೈಕಿ ಶೇ.72ರಷ್ಟು ಪುರುಷರೇ ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪರಿಸರ, ವಾತಾವರಣ ಬದಲಾವಣೆ ಮತ್ತು ಆರೋಗ್ಯ ವಿಭಾಗದ ನಿರ್ದೇಶಕಿ ಮೆರಿಯಾ ನೀರಾ ಈ ವರದಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ವಾತಾವರಣದ ಬದಲಾವಣೆ, ಆಹಾರ ಕ್ರಮದಲ್ಲಿ ವ್ಯತ್ಯಾಸ ಈಗಾಗಲೇ ಮಾನವನ ಬದುಕನ್ನು ದುಸ್ತರಗೊಳಿಸಿದೆ. ಈ ಹೊತ್ತಲ್ಲಿ ಕೆಲಸವೂ ಮಾನವನ ಜೀವಕ್ಕೆ ಕಂಟಕವಾಗಬಹುದು ಎಂದಿರುವುದು ದುರಂತವೇ ಸರಿ. ಹೀಗೆ ಹೆಚ್ಚು ಒತ್ತಡದ ಅವಧಿಯಲ್ಲಿ ಕೆಲಸ ಮಾಡುತ್ತಾ, ಪ್ರತಿವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಲಕ್ಷ ಲಕ್ಷ ಜನ ಬಲಿ

ಲಕ್ಷ ಲಕ್ಷ ಜನ ಬಲಿ

ಅತಿಹೆಚ್ಚು ಕೆಲಸದ ಒತ್ತಡದಿಂದ ಪ್ರತಿವರ್ಷ ಪ್ರಾಣ ಬಿಡುತ್ತಿರುವವರ ಸಂಖ್ಯೆ ಒಂದಲ್ಲ, ಎರಡಲ್ಲ ಬರೋಬ್ಬರಿ 7 ಲಕ್ಷವನ್ನೂ ಮೀರಿದೆ. ಎನ್ವಿರಾನ್ಮೆಂಟ್ ಜರ್ನಲ್ನಲ್ಲಿ ಪ್ರಕಟವಾಗಿದ್ದ ಅಧ್ಯಯನದಲ್ಲಿ 2016ರಲ್ಲೇ 7,45,000 ಜನರು ಕೆಲಸದ ಒತ್ತಡದಿಂದ ಸ್ಟ್ರೋಕ್ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು ಎನ್ನಲಾಗಿದೆ.

ಆರೋಗ್ಯ ಮರೆತು ಕೆಲಸ ಮಾಡುತ್ತಿದ್ದಾರೆ

ಆರೋಗ್ಯ ಮರೆತು ಕೆಲಸ ಮಾಡುತ್ತಿದ್ದಾರೆ

ವರ್ಷದಿಂದ ವರ್ಷಕ್ಕೆ ಈ ಸಾವಿನ ಪ್ರಮಾಣ ಏರುತ್ತಲೇ ಸಾಗುತ್ತಿದೆ. ಒಂದ್ಕಡೆ ಉದ್ಯೋಗ ಹೋಗುವ ಭೀತಿ, ಮತ್ತೊಂದ್ಕಡೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಡುವೆ ಉದ್ಯೋಗಿಗಳು ಆರೋಗ್ಯ ಮರೆತು ಕೆಲಸ ಮಾಡುತ್ತಿದ್ದಾರೆ. ಆದರೆ ಪ್ರಾಮಾಣಿಕ ಉದ್ಯೋಗಿಗಳ ಈ ಶ್ರದ್ಧೆಯೇ ಅವರ ಜೀವವನ್ನು ಕಸಿಯುತ್ತಿದೆ.

ಏಷ್ಯಾ, ಆಸ್ಟ್ರೇಲಿಯಾದಲ್ಲೇ ಒತ್ತಡ

ಏಷ್ಯಾ, ಆಸ್ಟ್ರೇಲಿಯಾದಲ್ಲೇ ಒತ್ತಡ

ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸುವಂತೆ ಏಷ್ಯಾದ ಹಲವು ರಾಷ್ಟ್ರಗಳು ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಪಶ್ಚಿಮ ಫೆಸಿಫಿಕ್ ಭಾಗದ ಜನ ಈ ವಿಚಾರದಲ್ಲಿ ಹೆಚ್ಚು ಶೋಷಣೆಗೆ ಒಳಗಾಗಿದ್ದಾರಂತೆ. 194 ದೇಶಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ವಾರದಲ್ಲಿ 55 ಗಂಟೆಗಿಂತ ಹೆಚ್ಚು ಕೆಲಸ ಮಾಡುವವವರು ಸ್ಟ್ರೋಕ್ ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವಿಗೆ ತುತ್ತಾಗುತ್ತಿದ್ದಾರೆ. ಕೆಲಸದ ಒತ್ತಡ, ನಿದ್ರಾಹೀನತೆಯೂ ಇದರಲ್ಲಿ ಬಹುದೊಡ್ಡ ಪಾಲು ಹೊಂದಿದೆ. ಕೆಲಸದ ಒತ್ತಡ ಹೆಚ್ಚಾದಷ್ಟು ಆರೋಗ್ಯ ಹಾಳಾಗಿ ಹೋಗುತ್ತಿದೆ.

Recommended Video

Black Fungus ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ | Oneindia Kannada
‘ಕೊರೊನಾ’ಗೂ ಇದಕ್ಕೂ ಸಂಬಂಧವಿಲ್ಲ

‘ಕೊರೊನಾ’ಗೂ ಇದಕ್ಕೂ ಸಂಬಂಧವಿಲ್ಲ

ವಿಶ್ವ ಆರೋಗ್ಯ ಸಂಸ್ಥೆಯ ಈ ಅಧ್ಯಯನ 2000ರಿಂದ 2016ರ ನಡುವೆ ನಡೆದಿದೆ. ಹೀಗಾಗಿ ಕೊರೊನಾ ಕಾಲ ಈ ಸಂಶೋಧನೆಗೆ ಸೇರಿಲ್ಲ. ವೇಗವಾಗಿ ಓಡುತ್ತಿರುವ ಕಾಲಕ್ಕೆ ಮನುಷ್ಯ ಕೂಡ ಹೊಂದಿಕೊಳ್ಳಬೇಕಿದೆ. ಇದರ ನಡುವೆ ಒತ್ತಡವೂ ಹೆಚ್ಚಾಗುತ್ತಿದ್ದು ಕೆಲಸ ನಿರ್ವಹಣೆ ದೊಡ್ಡ ಸವಾಲಾಗಿದೆ. ಅದರಲ್ಲೂ ಕೊರೊನಾ ವಕ್ಕರಿಸಿದ ನಂತರ ಮಹಾನ್ ಆರ್ಥಿಕ ಕುಸಿತ ಉಂಟಾಗುತ್ತಿದೆ. ಇದರಿಂದ ಕೊಟ್ಯಂತರ ಜನರು ಕೆಲಸ ಕಳೆದುಕೊಳ್ಳುತ್ತಿದ್ರೆ ಕೈಯಲ್ಲಿ ಕೆಲಸ ಇರುವವರು ಮತ್ತಷ್ಟು ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಇದು ಭವಿಷ್ಯದಲ್ಲಿ ಮತ್ತಷ್ಟು ಕರಾಳ ಪರಿಸ್ಥಿತಿ ಸೃಷ್ಟಿಸುವ ಮುನ್ಸೂಚನೆ ನೀಡಿದೆ.

English summary
WHO report suggests that work time not exceed average 55 hours per week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X