ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ತಪ್ಪಿಸಿಕೊಳ್ಳೋಕೆ ಮನೇಲಿರಿ ಅಂದ್ರೆ ಹೆಚ್ಐವಿ ಅಂಟಿಸಿಕೊಳ್ಳುವುದೇ!?

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಏಪ್ರಿಲ್ 28: ಕೊರೊನಾವೈರಸ್ ಅಂಟಿಕೊಳ್ಳುತ್ರಪ್ಪಾ ಮನೆಯಿಂದ ಹೊರಗೆ ಹೋಗಬೇಡಿ. ದೇಶವೇ ಲಾಕ್ ಡೌನ್ ಆಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಅಂತಾ ಸರ್ಕಾರಗಳು ಬಡಾಯಿ ಬಾರಿಸಿದ್ದೇ ಬಂತು. ನಮ್ಮ ಜನರು ಮಾಡಿಕೊಳ್ಳುವ ಯಡವಟ್ಟುಗಳು ಒಂದು ಎರಡೆಲ್ಲ. ಊದೋದು ಕೊಟ್ಟು, ಬಾರಿಸೋದು ತೆಗೆದುಕೊಂಡಂಗೆ ಆಗಿದೆ.

ಕಳೆದ 2020-21ನೇ ಸಾಲಿನಲ್ಲಿ ಕೊರೊನಾವೈರಸ್ ಹೆಚ್ಚಾಗಿತ್ತು. ದೇಶ ಲಾಕ್ ಡೌನ್ ಆಗಿತ್ತು. ಜನರು ಮನೆಯಲ್ಲೇ ಇರುವಂತೆ ಮೇಲಿಂದ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಇಂಥದರ ಮಧ್ಯೆ ಇದೇ ಅವಧಿಯಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ 85,000 ಗಡಿ ದಾಟಿದೆ.

ಪತಿಗೆ ವಂಚನೆ: ಫ್ರೆಂಚ್ ಡೇಟಿಂಗ್ ಆ್ಯಪ್ ಸಮೀಕ್ಷೆ ವರದಿ ಬಹಿರಂಗ ಪತಿಗೆ ವಂಚನೆ: ಫ್ರೆಂಚ್ ಡೇಟಿಂಗ್ ಆ್ಯಪ್ ಸಮೀಕ್ಷೆ ವರದಿ ಬಹಿರಂಗ

ಕೋವಿಡ್-19 ಸೋಂಕಿನಿಂದ ತಪ್ಪಿಸಿಕೊಳ್ಳೋಕೆ ತೆಪ್ಪಗೆ ಮನೇಲಿರಿ ಅಂದ್ರೆ ಜನರು ಹೆಚ್ಐವಿ ಅಂಟಿಸಿಕೊಳ್ಳುತ್ತೀನಿ ಅನ್ನೋ ಹಾಗಾಗಿದೆ. ಆರ್‌ಟಿಐ ಅಡಿ ಪಡೆದುಕೊಂಡ ಮಾಹಿತಿ ಅಂಕಿ-ಅಂಶಗಳನ್ನು ನೋಡುತ್ತಿದ್ದರೆ ತಲೆ ತಿರುಗುತ್ತೆ. ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಅತಿಹೆಚ್ಚು ಹೆಚ್ಐವಿ ಪ್ರಕರಣಗಳು ವರದಿಯಾಗಿರುವುದು ಗೊತ್ತಾಗಿದೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಟಾಪ್ ಆಗಿರುವ ರಾಜ್ಯ ಯಾವುದು?, ಕರ್ನಾಟಕವು ಎಷ್ಟನೇ ಸ್ಥಾನದಲ್ಲಿದೆ?, ಕಳೆದೊಂದು ವರ್ಷದಲ್ಲಿ ಪತ್ತೆಯಾಗಿರುವ ಹೆಚ್ಐವಿ ಪ್ರಕರಣಗಳ ಸಂಖ್ಯೆ ಎಷ್ಟು?, ಹತ್ತು ವರ್ಷಗಳ ಅಂತರದಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಹೇಗೆಲ್ಲಾ ಏರಿಳಿತ ಕಂಡಿದೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ಭಾರತ ಲಾಕ್‌ಡೌನ್‌ನಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಳ!

ಭಾರತ ಲಾಕ್‌ಡೌನ್‌ನಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಳ!

ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಭಾರತದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. 2020-21 ಅವಧಿಯಲ್ಲಿ ಸೋಂಕಿತರ ಸಂಖ್ಯೆಯೇನೋ ಇಳಿಕೆ ಆಯ್ತು, ಆದರೆ ಅಸುರಕ್ಷಿತ ಲೈಂಗಿಕತೆಯಿಂದಾಗಿ ಹೆಚ್ಐವಿ ಸೋಂಕು ಅಂಟಿಕೊಳ್ಳುವುದಕ್ಕೆ ಶುರುವಾಯಿತು. ಒಂದು ಮಗ್ಗಲಿನಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿದ್ದರೆ, ಏಡ್ಸ್ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿತ್ತು. ಕಳೆದೊಂದು ವರ್ಷದಲ್ಲಿ ಒಟ್ಟು 85,268 ಏಡ್ಸ್ ಪ್ರಕರಣಗಳು ಪತ್ತೆಯಾಗಿವೆ.

ಏಡ್ಸ್ ಪ್ರಕರಣಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರವೇ ಟಾಪ್!

ಏಡ್ಸ್ ಪ್ರಕರಣಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರವೇ ಟಾಪ್!

ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಹೇರಲಾಗಿತ್ತು. ಇದೇ ಗ್ಯಾಪಿನಲ್ಲಿ ಹೆಚ್ಐವಿ ಸೋಂಕಿತರ ಸಂಖ್ಯೆ ಮಿತಿ ಮೀರಿ ಏರಿಕೆಯಾಗಿದೆ. ಕಳೆದೊಂದು ವರ್ಷದಲ್ಲಿ ಅತಿಹೆಚ್ಚು ಏಡ್ಸ್ ಪ್ರಕರಣಗಳನ್ನು ವರದಿ ಮಾಡಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ನಂಬರ್ 1 ಸ್ಥಾನದಲ್ಲಿದೆ. ಒಂದು ವರ್ಷದ ಅವಧಿಯಲ್ಲಿ 10,498 ಮಂದಿಗೆ ಹೆಚ್ಐವಿ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಆಂಧ್ರ ಪ್ರದೇಶದಲ್ಲಿ 9,521 ಏಡ್ಸ್ ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ 8947 ಏಡ್ಸ್ ಪ್ರಕರಣಗಳು ವರದಿಯಾಗಿದ್ದು, ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಮಧ್ಯಪ್ರದೇಶದಲ್ಲಿ 3,037 ಮತ್ತು ಪಶ್ಚಿಮ ಬಂಗಾಳದಲ್ಲಿ 2,757 ಏಡ್ಸ್ ಪ್ರಕರಣಗಳು ವರದಿಯಾಗಿವೆ.

ಕಳೆದ 10 ವರ್ಷದಲ್ಲಿ 17 ಲಕ್ಷ ಏಡ್ಸ್ ಪ್ರಕರಣ ವರದಿ

ಕಳೆದ 10 ವರ್ಷದಲ್ಲಿ 17 ಲಕ್ಷ ಏಡ್ಸ್ ಪ್ರಕರಣ ವರದಿ

ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಸಲ್ಲಿಸಿದ RTI ಪ್ರಶ್ನೆಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಪ್ರತಿಕ್ರಿಯೆಯಾಗಿ ಈ ವಿವರಗಳನ್ನು ನೀಡಿದೆ. ಅದರ ಪ್ರಕಾರ, ಕಳೆದ 10 ವರ್ಷದಲ್ಲಿ ಭಾರತದಲ್ಲಿ ಒಟ್ಟು 17 ಲಕ್ಷ ಏಡ್ಸ್ ಪ್ರಕರಣಗಳು ವರದಿಯಾಗಿವೆ. 2011-12ರ ಅವಧಿಯಲ್ಲಿ ಅಸುರಕ್ಷಿತ ಸಂಭೋಗದಿಂದ ಏಡ್ಸ್ ಅಂಟಿಸಿಕೊಂಡವರ ಸಂಖ್ಯೆ 2.4 ಲಕ್ಷ ಆಗಿತ್ತು. 2020-21ರ ಅವಧಿಯಲ್ಲಿ ಆ ಸಂಖ್ಯೆಯು 85,268ಕ್ಕೆ ತಗ್ಗಿದೆ.

ಕಳೆದ 10 ವರ್ಷಗಳ ಏಡ್ಸ್ ಅಂಕಿ-ಸಂಖ್ಯೆಗಳ ಲೆಕ್ಕಾಚಾರ

ಕಳೆದ 10 ವರ್ಷಗಳ ಏಡ್ಸ್ ಅಂಕಿ-ಸಂಖ್ಯೆಗಳ ಲೆಕ್ಕಾಚಾರ

ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ ವರದಿಯಾಗಿರುವ ಏಡ್ಸ್ ಪ್ರಕರಣಗಳ ಏರಿಳಿತದ ಕುರಿತು ಅಂಕಿ-ಅಂಶಗಳನ್ನು ಗಮನಿಸುವುದಾದರೆ, ಈ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. 10 ವರ್ಷದ ಅವಧಿಯಲ್ಲಿ ಆಂಧ್ರ ಪ್ರದೇಶದಲ್ಲಿ ಒಟ್ಟು 3,18,814 ಏಡ್ಸ್ ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 2,84,577, ಕರ್ನಾಟಕದಲ್ಲಿ 2,12,982, ತಮಿಳುನಾಡಿನಲ್ಲಿ 1,16,536, ಉತ್ತರ ಪ್ರದೇಶದಲ್ಲಿ 1,10,911 ಮತ್ತು ಗುಜರಾತ್‌ನಲ್ಲಿ 87,440 ಏಡ್ಸ್ ಪ್ರಕರಣಗಳು ಪತ್ತೆಯಾಗಿವೆ. 2020ರ ಹೊತ್ತಿಗೆ, ದೇಶದಲ್ಲಿ 81,430 ಮಕ್ಕಳು ಸೇರಿದಂತೆ 23,18,737 ಜನರು HIV ಸೋಂಕು ಹೊಂದಿದ್ದಾರೆ ಎಂದು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

English summary
According to an RTI response, over 85000 Indian people caught HIV through unprotected intercourse in 2020-21 during Covid-19 lockdown. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X