ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ.. ಭಾರತದಲ್ಲಿ 42 ಲಕ್ಷ ಜನರ ಜೀವ ಉಳಿಸಿತು ಕೊರೊನಾ ವೈರಸ್ ಲಸಿಕೆ!?

|
Google Oneindia Kannada News

ನವದೆಹಲಿ, ಜೂನ್ 24: ಭಾರತದಲ್ಲಿ ಅದು ಕೊರೊ ನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಕಾಲ. ಉಸಿರಾಟದ ಸಮಸ್ಯೆಯಿಂದ ಜನರು ಸಾಲು ಸಾಲಾಗಿ ಸಾವಿನ ಮನೆ ಸೇರುತ್ತಿದ್ದರು. ಆಕ್ಸಿಜನ್ ಕೊರತೆ, ಬೆಡ್ ಸಮಸ್ಯೆ, ವೈದ್ಯಕೀಯ ಸೌಲಭ್ಯಗಳು ಸೂಕ್ತ ಅವಧಿಯಲ್ಲಿ ಸಿಗದೇ ಸಾವಿನ ಸಂಖ್ಯೆ ಪ್ರತಿನಿತ್ಯ ಸಾವಿರದ ಗಡಿ ದಾಟುತ್ತಿತ್ತು.

ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಪ್ರತಿನಿತ್ಯ ಸಾವಿರ ಸಾವಿರ ಮಂದಿ ಉಸಿರು ಚೆಲ್ಲುತ್ತಿದ್ದ ಅವಧಿಯಲ್ಲೇ ಜೀವಗಳಿಗೆ ಲಸಿಕೆಗಳು ಸಂಜೀವಿನಿ ಆಗಿ ಬಂದಿತು. ಕಳೆದ 2021ರಲ್ಲಿ ಲಸಿಕೆಗಳಿಂದಲೇ 42 ಲಕ್ಷ ಮಂದಿಯ ಪ್ರಾಣ ಉಳಿದುಕೊಂಡಿದೆ ಎಂಬ ಸಮೀಕ್ಷೆಯೊಂದು ಇದೀಗ ಹೊರ ಬಿದ್ದಿದೆ.

ಕೊರೊನಾವೈರಸ್ 2ನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರ ತಗ್ಗಿಸುವ ಸಾಧ್ಯತೆಕೊರೊನಾವೈರಸ್ 2ನೇ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ಅಂತರ ತಗ್ಗಿಸುವ ಸಾಧ್ಯತೆ

ಕೊರೊನಾ ವೈರಸ್ ಮೊದಲ ಅಲೆ ಮುಗೀತು, ಎರಡನೇ ಅಲೆಯೂ ಬಂದು ಹೋಯಿತು, ಮೂರನೇ ಅಲೆಯೂ ಮಂಕಾಯಿತು. ಈಗ ನಾಲ್ಕನೇ ಅಲೆಯ ಆಟ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಮಧ್ಯೆ ಮನಸ್ಸನ್ನು ನಿರಾಳಗೊಳಿಸುವ ಸಮೀಕ್ಷೆಯೊಂದು ಹೊರ ಬಿದ್ದಿದೆ. ದಿ ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಉಲ್ಲೇಖಿಸಿದ ಸಮೀಕ್ಷೆಯ ಅಂಶಗಳ ಕುರಿತು ಈ ವರದಿಯು ತಿಳಿಸಿ ಕೊಡಲಿದೆ.

ಕೊರೊನಾ ವೈರಸ್ ಲಸಿಕೆಯಿಂದ ತಗ್ಗಿದ ಸಾವಿನ ಸಂಖ್ಯೆ

ಕೊರೊನಾ ವೈರಸ್ ಲಸಿಕೆಯಿಂದ ತಗ್ಗಿದ ಸಾವಿನ ಸಂಖ್ಯೆ

ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಎರಡನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ಕಾಲದಲ್ಲಿ ಸಾವಿನ ಸಂಖ್ಯೆ ಗಗನಮುಖಿಯಾಗಿ ಏರಿಕೆ ಆಗುತ್ತಿತ್ತು. 2021ರ ಈ ಅವಧಿಯಲ್ಲಿ ಸಾವಿನ ಸಂಖ್ಯೆಯನ್ನು ತಗ್ಗಿಸುವುದರಲ್ಲಿ ಕೋವಿಡ್-19 ಲಸಿಕೆಗಳು ಬಹುಮುಖ್ಯ ಪಾತ್ರ ವಹಿಸಿದವು. ಲಸಿಕೆಯನ್ನು ಸಂಶೋಧಿಸಿದ ನಂತರದ ಒಂದು ವರ್ಷದ ಅವಧಿಯಲ್ಲಿ ಜಗತ್ತಿನಲ್ಲಿ ಒಟ್ಟು 20 ದಶಲಕ್ಷ ಜನರನ್ನು ಸಾವಿನ ದವಡೆಯಿಂದ ಇದೇ ಲಸಿಕೆಗಳು ರಕ್ಷಿಸಿವೆ ಎಂದು ಸಮೀಕ್ಷೆಯು ತಿಳಿಸಿದೆ.

ಕೊರೊನಾ ವೈರಸ್ ಲಸಿಕೆ ವಿತರಣೆಯನ್ನು ಶುರು ಮಾಡಿದ ಮೊದಲ ವರ್ಷದಲ್ಲಿ, ಜಗತ್ತಿನ 185 ರಾಷ್ಟ್ರಗಳಲ್ಲಿನ ಸಾವಿನ ಸಂಖ್ಯೆಗಳ ಬಗ್ಗೆ ಅಂದಾಜು ಹಾಕಲಾಗಿದೆ. ಅದರ ಪ್ರಕಾರ, ವಿಶ್ವದಾದ್ಯಂತ 31.4 ದಶಲಕ್ಷ ಸಾವಿನ ಪ್ರಕರಣಗಳ ಪೈಕಿ 19.8 ದಶಲಕ್ಷ ಜನರನ್ನು ಸಾವಿನಿಂದ ರಕ್ಷಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಕ್ಕಳಿಗೆ ಕೋವ್ಯಾಕ್ಸಿನ್ ಬೂಸ್ಟರ್; ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ಕೋರಿದ ಭಾರತ್ ಬಯೋಟೆಕ್ಮಕ್ಕಳಿಗೆ ಕೋವ್ಯಾಕ್ಸಿನ್ ಬೂಸ್ಟರ್; ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ಕೋರಿದ ಭಾರತ್ ಬಯೋಟೆಕ್

ಕೋವಿಡ್-19 ಸಾವಿನ ಪ್ರಕರಣ ತಗ್ಗಿಸಲು ಲೆಕ್ಕಾಚಾರ

ಕೋವಿಡ್-19 ಸಾವಿನ ಪ್ರಕರಣ ತಗ್ಗಿಸಲು ಲೆಕ್ಕಾಚಾರ

ಕಳೆದ 2021ರ ಅಂತ್ಯದ ವೇಳೆಗೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ತಮ್ಮ ಜನಸಂಖ್ಯೆಯಲ್ಲಿ ಶೇ.40ರಷ್ಟು ಜನರಿಗೆ ಮೊದಲ ಅಥವಾ ಎರಡನೇ ಡೋಸ್ ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದರೆ, ಸುಮಾರು 5,99,300 ಜನರ ಪ್ರಾಣವನ್ನು ಉಳಿಸಬಹುದಿತ್ತು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರವಾಗಿತ್ತು ಎಂದು ಅಧ್ಯಯನವು ಅಂದಾಜು ಹಾಕಿದೆ.

ಸಾವಿನ ಲೆಕ್ಕಾಚಾರ ಹಾಕಿದ ಅವಧಿ ಯಾವುದು?

ಸಾವಿನ ಲೆಕ್ಕಾಚಾರ ಹಾಕಿದ ಅವಧಿ ಯಾವುದು?

ಕಳೆದ 2020ರ ಡಿಸೆಂಬರ್ 8 ರಿಂದ 2021ರ ಡಿಸೆಂಬರ್ 8ನೇ ತಾರೀಖಿನ ನಡುವೆ ವರದಿಯಾಗಿರುವ ಕೋವಿಡ್-19 ಸಾವಿನ ಪ್ರಕರಣಗಳ ಆಧಾರದ ಮೇಲೆ ಅಧ್ಯಯನವನ್ನು ನಡೆಸಲಾಗಿದೆ. ಈ ಅವಧಿಯಲ್ಲಿ ಲಸಿಕೆ ಪಡೆದುಕೊಂಡ ಅವಧಿ ಮತ್ತು ಲಸಿಕೆ ತೆಗೆದುಕೊಳ್ಳದ ಅವಧಿಯಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳ ಮೇಲೆ ಸಮೀಕ್ಷೆಯನ್ನು ನಡೆಸಲಾಯಿತು.

"ಭಾರತಕ್ಕೆ ಸಂಬಂಧಿಸಿದಂತೆ, ಈ ಅವಧಿಯಲ್ಲಿ ಕೊರೊನಾ ವೈರಸ್ ಲಸಿಕೆಯನ್ನು ನೀಡುವುದರ ಮೂಲಕ 42,10,000 ಸಾವುಗಳನ್ನು ತಡೆಗಟ್ಟಲಾಗಿದೆ ಎಂದು ನಾವು ಅಂದಾಜು ಮಾಡುತ್ತೇವೆ. ಈ ಅಂದಾಜಿನಲ್ಲಿನ ಅನಿಶ್ಚಿತತೆಯು 36,65,000 ರಿಂದ 43,70,000ರ ನಡುವೆ ಇದೆ," ಎಂದು ಅಧ್ಯಯನದ ಪ್ರಮುಖ ಲೇಖಕ ಆಲಿವರ್ ವ್ಯಾಟ್ಸನ್ ತಿಳಿಸಿದ್ದಾರೆ.

ಕೋವಿಡ್-19 ಸಾವು ಕಡಿಮೆಯಾಗಲು ಲಸಿಕೆಯೇ ಕಾರಣ

ಕೋವಿಡ್-19 ಸಾವು ಕಡಿಮೆಯಾಗಲು ಲಸಿಕೆಯೇ ಕಾರಣ

"ಈ ಮಾದರಿಯ ಅಧ್ಯಯನವು ಭಾರತದಲ್ಲಿನ ಲಸಿಕೆ ಅಭಿಯಾನವು ಲಕ್ಷಾಂತರ ಜೀವಗಳನ್ನು ಉಳಿಸಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದು ಕೋವಿಡ್-19 ಲಸಿಕೆಯು ಹೊಂದಿರುವ ಗಮನಾರ್ಹ ಪರಿಣಾಮವನ್ನು ತೋರಿಸುತ್ತದೆ, ವಿಶೇಷವಾಗಿ ಭಾರತದಲ್ಲಿ ಡೆಲ್ಟಾ ರೂಪಾಂತರದ ಪರಿಣಾಮವನ್ನು ಅನುಭವಿಸಿದ ಮೊದಲ ದೇಶವಾಗಿದೆ," ಎಂದು ವ್ಯಾಟ್ಸನ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ 51,60,000 ಜನರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿನ ಸಾವಿನ ಸಂಖ್ಯೆ 5,24,941 ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಆದರೆ, ಅಧ್ಯಯನದ ಪ್ರಕಾರ, ಸಾವಿನ ಸಂಖ್ಯೆಯು ಸರ್ಕಾರ ನೀಡಿದ್ದಕ್ಕಿಂತ 10 ಪಟ್ಟು ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿದೆ.

ಭಾರತ ಸರ್ಕಾರದ ಹೇಳಿದ್ದಕ್ಕಿಂತ 10 ಪಟ್ಟು ಮಂದಿ ಸಾವು

ಭಾರತ ಸರ್ಕಾರದ ಹೇಳಿದ್ದಕ್ಕಿಂತ 10 ಪಟ್ಟು ಮಂದಿ ಸಾವು

"ಈ ಅಂದಾಜುಗಳು COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿನ ಹೆಚ್ಚಿನ ಸಾವಿನ ಅಂದಾಜು ಸಂಖ್ಯೆಗಳನ್ನೇ ಆಧರಿಸಿದೆ. ನಾವು ದಿ ಎಕನಾಮಿಸ್ಟ್‌ನಿಂದ ಈ ಮಾಹಿತಿ ಅನ್ನು ಪಡೆದುಕೊಂಡಿದ್ದೇವೆ. ಅಲ್ಲದೇ ಈ ಅಂಕಿ-ಸಂಖ್ಯೆಗಳು ವಿಶ್ವ ಆರೋಗ್ಯ ಸಂಸ್ಥೆಯು ನೀಡುವ ಮಾಹಿತಿಯನ್ನು ಹೋಲುತ್ತದೆ. ಅದಾಗ್ಯೂ, ಸ್ವತಂತ್ರವಾಗಿ, ನಮ್ಮ ತಂಡವು ಹೆಚ್ಚುವರಿ ಸಾವಿನ ಪ್ರಕರಣಗಳ ಬಗ್ಗೆ ಸಮೀಕ್ಷೆ ವರದಿಗಳ ಆಧಾರದ ಮೇಲೆ COVID-19 ಸಾವಿನ ಸಂಖ್ಯೆಯನ್ನು ತನಿಖೆ ಮಾಡಿದೆ. ಈ ವೇಳೆ ಸರ್ಕಾರದ ಅಧಿಕೃತ ಎಣಿಕೆಗಿಂತ ಸುಮಾರು 10 ಪಟ್ಟು ಹೆಚ್ಚಾಗಿರುವ ಬಗ್ಗೆ ಅಂದಾಜಿಸಲಾಗಿದೆ," ಎಂದು ವ್ಯಾಟ್ಸನ್ ಹೇಳಿದ್ದಾರೆ.

ದಿ ಎಕನಾಮಿಸ್ಟ್‌ನ ಅಂದಾಜಿನ ಪ್ರಕಾರ, ಮೇ 2021ರ ಆರಂಭದ ವೇಳೆಗೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನಿಂದ 23 ಲಕ್ಷ ಜನರು ಸಾವನ್ನಪ್ಪಿದ್ದಾರೆ, ಆದರೆ ಸರ್ಕಾರದ ಅಧಿಕೃತ ಅಂಕಿ-ಅಂಶಗಳು 2 ಲಕ್ಷದ ಆಸುಪಾಸಿನಲ್ಲಿವೆ. ದೇಶದಲ್ಲಿ 47 ಲಕ್ಷ ಮಂದಿ ಕೋವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂಕಿ-ಅಂಶಗಳನ್ನು ನೀಡಿದೆ. ಆದರೆ ಕೇಂದ್ರ ಸರ್ಕಾರವು ಇದನ್ನು ನಿರಾಕರಿಸಿದೆ.

ಒಂದು ವರ್ಷದಲ್ಲಿ 20 ದಶಲಕ್ಷ ಜೀವಗಳನ್ನು

ಒಂದು ವರ್ಷದಲ್ಲಿ 20 ದಶಲಕ್ಷ ಜೀವಗಳನ್ನು

ಕೊರೊನಾ ವೈರಸ್ ಲಸಿಕೆಗಳನ್ನು ಪರಿಚಯಿಸಿದ ನಂತರದ ಮೊದಲ ವರ್ಷದಲ್ಲಿ ಸುಮಾರು 20 ದಶಲಕ್ಷ ಸಾವುಗಳನ್ನು ನಿಯಂತ್ರಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಕೋವ್ಯಾಕ್ಸ್ ಅಡಿಯಲ್ಲಿ ಲಸಿಕೆಯನ್ನು ವಿತರಿಸಿದ ರಾಷ್ಟ್ರಗಳಲ್ಲಿ ಒಟ್ಟು 75 ಲಕ್ಷ ಜನರನ್ನು ಸಾವಿನ ದವಡೆಯಿಂದ ರಕ್ಷಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಉಪಕ್ರಮವು ಕಡಿಮೆ ಆದಾಯದ ದೇಶಗಳಿಗೆ ಅಸಮಾನತೆಗಳನ್ನು ಕಡಿಮೆ ಮಾಡಲು ಕೈಗೆಟುಕುವ ದರದಲ್ಲಿ ಲಸಿಕೆಯನ್ನು ನೀಡುವುದಕ್ಕೆ ಸಹಕಾರಿ ಆಯಿತು.

2021ರ ಅಂತ್ಯದ ಕೊವ್ಯಾಕ್ಸ್ ವ್ಯಾಪ್ತಿಯಡಿ ಬರುವ ರಾಷ್ಟ್ರಗಳಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.20ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿತ್ತು. 2020ರ ಡಿಸೆಂಬರ್ 8ರಂದು ಮೊದಲ COVID-19 ಲಸಿಕೆಯ ವೈದ್ಯಕೀಯ ಪ್ರಯೋಗವನ್ನು ಯಶಸ್ವಿಗೊಳಿಸಿದ ನಂತರದಲ್ಲಿ ಜಗತ್ತಿನ ಒಟ್ಟು ಶೇ.66ರಷ್ಟು ಅಂದರೆ ಜನಸಂಖ್ಯೆಯಲ್ಲಿ ಮೂರರ ಎರಡರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ದೇಶದಲ್ಲಿ ಎಷ್ಟು ಹಂತಗಳಲ್ಲಿ ಕೋವಿಡ್-19 ಲಸಿಕೆ ವಿತರಣೆ

ದೇಶದಲ್ಲಿ ಎಷ್ಟು ಹಂತಗಳಲ್ಲಿ ಕೋವಿಡ್-19 ಲಸಿಕೆ ವಿತರಣೆ

ಕಳೆದ 2021ರ ಜನವರಿ 16ರಂದು ಮೊದಲ ಬಾರಿಗೆ ಕೋವಿಡ್-19 ಲಸಿಕೆಯ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಫೆಬ್ರವರಿ 2ರಂದು ಎರಡನೇ ಹಂತದಲ್ಲಿ ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಿಸಲಾಯಿತು. ಮಾರ್ಚ್ 1ರಿಂದ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥತೆಯನ್ನು ಹೊಂದಿರುವವರಿಗೆ ಕೋವಿಡ್-19 ಲಸಿಕೆ ವಿತರಿಸಲು ಶುರು ಮಾಡಲಾಯಿತು. ತದನಂತರ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಿಸಲು ಅನುಮತಿ ನೀಡಲಾಗಿತ್ತು.

ಮೇ 1ರ ನಂತರದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ವೈರಸ್ ಲಸಿಕೆ ವಿತರಿಸುವುದಕ್ಕೆ ಅನುಮತಿಸಲಾಗಿತ್ತು. 2022ರ ಜನವರಿ 3ರಂದು 15 ರಿಂದ 18 ವಯೋಮಾನದವರಿಗೆ ಕೊರೊನಾ ವೈರಸ್ ಲಸಿಕೆಯನ್ನು ನೀಡುವುದಕ್ಕೆ ಕೇಂದ್ರ ಸರ್ಕಾರವು ಅನುಮೋದನೆಯನ್ನು ನೀಡಿತು. ಇದರ ಬೆನ್ನಲ್ಲೇ ಮಾರ್ಚ್ 16ರಂದು 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ವಿತರಿಸುವುದಕ್ಕೆ ಅನುಮತಿ ನೀಡಲಾಯಿತು. ಹೀಗೆ ಹಂತ-ಹಂತವಾಗಿ ಲಸಿಕೆ ವಿತರಣೆಗೆ ದೇಶದಲ್ಲಿ ಅನುಮತಿ ನೀಡಲಾಗಿದೆ.

ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಂಡವರು?

ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಪ್ರಾಣ ಕಳೆದುಕೊಂಡವರು?

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಶುರುವಾದ ದಿನದಿಂದ ಇದುವರೆಗೂ ಭಾರತದಲ್ಲಿ 524,954 ಮಂದಿ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ 43,365,016 ಮಂದಿಗೆ ಕೋವಿಡ್-19 ಸೋಂಕು ತಗುಲಿದ್ದು, 42,749,056 ಸೋಂಕಿತರು ಗುಣಮುಖರಾಗಿದ್ದಾರೆ. ಅದಾಗ್ಯೂ, 91,006 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆ ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 547,492,868 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,347,816 ಮಂದಿ ಪ್ರಾಣ ಬಿಟ್ಟಿದ್ದಾರೆ. 522,833,075 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 18,311,977 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

English summary
Covid-19 vaccines prevented over 42 lakh potential deaths in India in 2021, said a study published in The Lancet Infectious Diseases journal. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X