ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು

|
Google Oneindia Kannada News

ಕೊರೊನಾ ವೈರಸ್ ಸೋಂಕು ಇಳಿಮುಖವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಸಿಗಲಿದೆ ಎಂಬ ಭರವಸೆಗಳು ಸದ್ಯಕ್ಕೆ ನೆಮ್ಮದಿ ನೀಡಿದೆ. ಲಾಕ್‌ಡೌನ್‌ಗಳು, ಕ್ವಾರೆಂಟೈನ್, ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಹೆಚ್ಚಿನ ಆಸ್ಪತ್ರೆಗಳು ಮುಂತಾದ ಯಾವ ಕ್ರಮಗಳಿಂದಲೂ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇವುಗಳಿಂದ ಸೋಂಕಿನ ಹರಡುವಿಕೆ ವೇಗ ಮತ್ತು ಸಾವಿನ ಸಂಖ್ಯೆಗಳನ್ನು ಒಂದಷ್ಟು ಕಡಿಮೆ ಮಾಡಲು ಸಾಧ್ಯವಾಗಿದೆ. ಹೀಗಾಗಿ ಈಗಿರುವ ಒಂದೇ ಒಂದು ನಿರೀಕ್ಷೆಯೆಂದರೆ ಲಸಿಕೆ.

ಈ ವರ್ಷದ ಅಂತ್ಯಗೊಳಗೇ ಕೆಲವು ದೇಶಗಳು ಕೋವಿಡ್ ಲಸಿಕೆಯ ಬಳಕೆಯನ್ನು ಆರಂಭಿಸಬಹುದು. ಭಾರತದಲ್ಲಿಯೂ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದ್ದು, ಶೀಘ್ರವೇ ಹಂತ ಹಂತವಾಗಿ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಕೊರೊನಾ ಲಸಿಕೆ: ಹೆಚ್ಚುವರಿ ಪ್ರಯೋಗಕ್ಕೆ ಮುಂದಾದ ಆಸ್ಟ್ರಾಜೆನಿಕಾಕೊರೊನಾ ಲಸಿಕೆ: ಹೆಚ್ಚುವರಿ ಪ್ರಯೋಗಕ್ಕೆ ಮುಂದಾದ ಆಸ್ಟ್ರಾಜೆನಿಕಾ

ಜಗತ್ತಿನಾದ್ಯಂತ ನೂರಾರು ದೇಶಗಳಲ್ಲಿ, ಅನೇಕ ಕಂಪೆನಿಗಳು ತಮ್ಮದೇ ಕೊರೊನಾ ವೈರಸ್ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇನ್ನು ಕೆಲವು ಔಷಧ ಕಂಪೆನಿಗಳು, ವಿಜ್ಞಾನಿಗಳು ಬೇರೆ ಬೇರೆ ದೇಶಗಳಲ್ಲಿ ಸ್ಥಳೀಯ ಕಂಪೆನಿಗಳ ಸಹಭಾಗಿತ್ವದಲ್ಲಿ ಲಸಿಕೆ ಉತ್ಪಾದಿಸುತ್ತಿವೆ. ಹೀಗೆ ಜಗತ್ತಿನಾದ್ಯಂತ 200 ಕ್ಕೂ ಅಧಿಕ ಲಸಿಕೆಗಳು ಸಿದ್ಧವಾಗುತ್ತಿವೆ. ಮುಂದೆ ಓದಿ.

48 ಲಸಿಕೆಗಳು ಪ್ರಯೋಗ ಹಂತದಲ್ಲಿ

48 ಲಸಿಕೆಗಳು ಪ್ರಯೋಗ ಹಂತದಲ್ಲಿ

ಪ್ರಸ್ತುತ 48 ಬಗೆಯ ಕೊರೊನಾ ಲಸಿಕೆಗಳು 1 ರಿಂದ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿದ್ದು, 11 ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿವೆ. 164 ಲಸಿಕೆಗಳು ಪ್ರಿಕ್ಲಿನಿಕಲ್ ಮೌಲ್ಯಮಾಪನದಲ್ಲಿವೆ.

ಮೂರು ಲಸಿಕೆಗಳು ಮುಂಚೂಣಿಯಲ್ಲಿ

ಮೂರು ಲಸಿಕೆಗಳು ಮುಂಚೂಣಿಯಲ್ಲಿ

ಮೂರು ಲಸಿಕೆ ಕಂಪೆನಿಗಳು ಮೂರನೇ ಹಂತದ ಡೇಟಾಗಳನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಅನುಮೋದನೆಗೆ ಕೋರಿಕೆ ಸಲ್ಲಿಸಿವೆ. ಫೈಜರ್/ಬಯೋಎನ್‌ಟೆಕ್/ಫೋಸನ್ ಫಾರ್ಮಾದ ಲಸಿಕೆ ಶೇ 95ರಷ್ಟು ಪರಿಣಾಮಕಾರಿ ಎಂದಿವೆ. ಮಾಡೆರ್ನಾ/ಎನ್‌ಐಎಐಡಿ ಮೂಲದ ಸಂಸ್ಥೆ ಶೇ 95ರಷ್ಟು ಪರಿಣಾಮಕಾರಿ ಎಂದಿದೆ. ಆಕ್ಸ್‌ಫರ್ಡ್/ಆಸ್ಟ್ರಾಜೆನಿಕಾ ಲಸಿಕೆ ಶೇ 70ರಷ್ಟು ದಕ್ಷತೆಯನ್ನು ಪ್ರತಿಪಾದಿಸಿವೆ.

ಆಕ್ಸ್‌ಫರ್ಡ್ ಲಸಿಕೆಯ ದಾಖಲೆಯಲ್ಲಿ 'ಪ್ರಮಾದ': ತಪ್ಪೊಪ್ಪಿಕೊಂಡ ಕಂಪೆನಿಆಕ್ಸ್‌ಫರ್ಡ್ ಲಸಿಕೆಯ ದಾಖಲೆಯಲ್ಲಿ 'ಪ್ರಮಾದ': ತಪ್ಪೊಪ್ಪಿಕೊಂಡ ಕಂಪೆನಿ

ಭಾರತದಲ್ಲಿ ಪ್ರಯೋಗಗಳು

ಭಾರತದಲ್ಲಿ ಪ್ರಯೋಗಗಳು

ಆಕ್ಸ್‌ಫರ್ಡ್/ಆಸ್ಟ್ರಾಜೆನಿಕಾಗಳು ಭಾರತದಲ್ಲಿ ಸೆರಮ್ ಸಂಸ್ಥೆ ಜತೆಗೂಡಿ ಪ್ರಯೋಗ ನಡೆಸುತ್ತಿದ್ದು, ಈ ಲಸಿಕೆಗೆ ಕೋವಿಶೀಲ್ಡ್ ಎಂದು ಹೆಸರಿಡಲಾಗಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಕೋವ್ಯಾಕ್ಸಿನ್ ಲಸಿಕೆ ಸಿದ್ಧಪಡಿಸುತ್ತಿವೆ. ಸಿನೋವ್ಯಾಕ್ ಬಯೋಟೆಕ್ ತನ್ನ ಮೂರನೇ ಹಂತದ ಪ್ರಯೋಗವನ್ನು ಬ್ರೆಜಿಲ್, ಟರ್ಕಿ ಮತ್ತು ಇಂಡೋನೇಷ್ಯಾದಲ್ಲಿ ನಡೆಸುತ್ತಿದೆ. ರಷ್ಯಾದ ಸ್ಪುಟ್ನಿಕ್ V ಲಸಿಕೆ ಭಾರತ ಸೇರಿದಂತೆ 4-5 ದೇಶಗಳಲ್ಲಿ ಪ್ರಯೋಗದಲ್ಲಿದೆ. ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ಬಯಾಲಾಜಿಕಲ್ ಪ್ರೊಡಕ್ಟ್ಸ್ ಯುಎಇದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿದೆ.

ಸೆರಮ್ ಸಂಸ್ಥೆ ಉತ್ಪಾದನೆ

ಸೆರಮ್ ಸಂಸ್ಥೆ ಉತ್ಪಾದನೆ

ಭಾರತದಲ್ಲಿ ಸೆರಮ್ ಸಂಸ್ಥೆಯು 3 ಬಿಲಿಯನ್ ಡೋಸ್‌ಗಳಷ್ಟು ಲಸಿಕೆ ಉತ್ಪಾದಿಸುತ್ತಿದೆ. ಆರಂಭದಲ್ಲಿ ತಿಂಗಳಿಗೆ 70 ಮಿಲಿಯನ್ ಡೋಸ್‌ಗಳಷ್ಟು ಲಸಿಕೆ ಉತ್ಪಾದನೆ ಯೋಜನೆ ಹಾಕಿಕೊಂಡಿದ್ದ ಸಂಸ್ಥೆ, ಈಗ ಅದನ್ನು 100 ಮಿಲಿಯನ್‌ಗೆ ಹೆಚ್ಚಿಸಿದೆ. ಭಾರತ್ ಬಯೋಟೆಕ್ ಮತ್ತು ಜಿಡಸ್ ಕ್ಯಾಡಿಲಾಗಳು ಕೂಡ ಭಾರತದಲ್ಲಿ ಪ್ರಯೋಗ ನಡೆಸುತ್ತಿದ್ದು, ಇವು ಯಶಸ್ವಿಯಾದರೆ ಮತ್ತಷ್ಟು ಲಸಿಕೆ ಸಿಗಲಿವೆ.

ಭಾರತದಲ್ಲಿ ಲಸಿಕೆ ಅಧಿಕ ಉತ್ಪಾದನೆ

ಭಾರತದಲ್ಲಿ ಲಸಿಕೆ ಅಧಿಕ ಉತ್ಪಾದನೆ

ಭಾರತವು ಲಸಿಕೆ ಅಭಿವೃದ್ಧಿಗೆ ಅಗತ್ಯವಿರುವ ಅಂಶವಾದ ಮೈಕ್ರೋಬಯಲ್ ಈಸ್ಟ್‌ನ ಅತಿ ದೊಡ್ಡ ಉತ್ಪಾದಕವಾಗಿದೆ. ಭಾರತದಲ್ಲಿ 16 ಲಸಿಕೆ ಉತ್ಪಾದನಾ ಕೇಂದ್ರಗಳಿವೆ. ಒಟ್ಟಾರೆ ಯುರೋಪ್‌ನಲ್ಲಿಯೂ 16 ಕೇಂದ್ರಗಳಿವೆ. ಅಮೆರಿಕದಲ್ಲಿ ಆರು ಕೇಂದ್ರಗಳಿವೆ. ಹಾಗೆಯೇ ಭಾರತವು ಆರು ಮಿಲಿಯನ್ ಪ್ರಮಾಣದಲ್ಲಿ ಔಷಧ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಯುರೋಪ್ 1.1 ಮಿಲಿಯನ್ ಮತ್ತು ಉತ್ತರ ಅಮೆರಿಕ 0.5 ಮಿಲಿಯನ್ ಸಾಮರ್ಥ್ಯ ಹೊಂದಿವೆ. 2021ರ ಅಂತ್ಯದ ವೇಳೆಗೆ ಜಾಗತಿಕ ಲಸಿಕೆ ಉತ್ಪಾದಕರು 2-4 ಬಿಲಿಯನ್ ಡೋಸ್‌ಗಳಷ್ಟು ಕೊರೊನಾ ಲಸಿಕೆ ಉತ್ಪಾದಿಸಬಲ್ಲರು.

Recommended Video

Narendra Modi-ಬ್ರಿಟನ್ ಪ್ರಧಾನಿ Boris Johnson ಮಹತ್ವದ ಮಾತುಕತೆ | Oneindia Kannada

English summary
More than 200 Covid 19 vaccines around the world currently in development. 48 candidate vaccines in clinical trails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X