• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈರುಳ್ಳಿ ದಾಸ್ತಾನು: ಇಸ್ರೇಲ್, ಬ್ರೆಜಿಲ್ ನಿಂದ ಭಾರತ ಕಲಿಯಬೇಕಿದೆ

|
Google Oneindia Kannada News

ಒಂದು ಕಾಲದಲ್ಲಿ ಬೇಡಿಕೆಯೇ ಇಲ್ಲದೆ 20 ರೂಪಾಯಿಗೆಲ್ಲ ಚೀಲದ ತುಂಬ ಸಿಗುತ್ತಿದ್ದ ಈರುಳ್ಳಿ ಇಂದು ಒಂದು ಕೆಜಿಗೆ ಕನಿಷ್ಠ 100 ರೂಪಾಯಿ ಆಗಿದೆ. ದಿನಬಳಕೆಗೆ ಅಗತ್ಯವೆನ್ನಿಸಿರುವ ತರಕಾರಿಗಳ ಪೈಕಿ ಟೊಮಾಟೋ, ಈರುಳ್ಳಿ, ಆಲೂಗೆಡ್ಡೆ(TOP)ಪೈಕಿ ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರಿದೆ.

ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದೆ ಎಂಬ ಮಾತಿದೆ. ಈರುಳ್ಳಿ ಆಮದು ಕುರಿತಂತೆ ತನ್ನ ನೀತಿಯನ್ನು ಭಾರತ ಬದಲಾಯಿಸಿಕೊಂಡಿದೆ. ಆದರೆ, 2018-19ರ ಬಜೆಟ್ ನಲ್ಲಿ ಘೋಷಿಸಿದ TOP ಯೋಜನೆ ಇನ್ನೂ ಜಾರಿಗೊಂಡಿಲ್ಲ.

ಈರುಳ್ಳಿ ಬೆಲೆ ಏರಿಕೆಗೆ ಕೇವಲ ಪ್ರವಾಹ ಮತ್ತು ಮಳೆಯಷ್ಟೇ ಕಾರಣವಲ್ಲ. ಸಾಲು ಸಾಲು ಹಬ್ಬಗಳು ಸಹ ಈರುಳ್ಳಿ ಬೆಲೆ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ಆದರೆ ಹಬ್ಬಗಳು ಮುಗಿದ ನಂತರವೂ ಬೆಲೆ ಮಾತ್ರ ಕಡಿಮೆಯಾಗದಿರುವುದು ಗ್ರಾಹಕನಿಗೆ ಭಾರೀ ತಲೆನೋವೆನ್ನಿಸಿದೆ.

ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?

ಒಟ್ಟಾರೆ, ಆಮದು, ರಫ್ತು ಸಮತೋಲನವಲ್ಲದೆ, ಕೈಗೆ ಬಂದ ಈರುಳ್ಳಿ ಬೆಲೆಯನ್ನು ಸರಿಯಾಗಿ ದಾಸ್ತಾನು ಮಾಡದಿರುವುದು ಮುಖ್ಯ ಕಾರಣ, ಈ ನಿಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಅಧುನಿಕ ತಂತ್ರಜ್ಞಾನ ಬಳಸಿ ಇಸ್ರೇಲ್, ಬ್ರೆಜಿಲ್ ಮಾದರಿಯಲ್ಲಿ ತರಕಾರಿ ದಾಸ್ತಾನು ಮಾಡುವುದನ್ನು ಭಾರತ ಅನುಸರಿಸಬೇಕಿದೆ ಎಂದು ಕೈಗಾರಿಕಾ ಸಂಸ್ಥೆ ಫಿಕ್ಕಿ(FICCI) ಅಭಿಪ್ರಾಯಪಟ್ಟಿದೆ.

ಈರುಳ್ಳಿ ಬೆಲೆ ಬಗ್ಗೆ ಗಮನಿಸಬೇಕಾದ ಅಂಶಗಳು

ಈರುಳ್ಳಿ ಬೆಲೆ ಬಗ್ಗೆ ಗಮನಿಸಬೇಕಾದ ಅಂಶಗಳು

* ಸರ್ಕಾರದ ಟೋಮೋಟೋ, ಈರುಳ್ಳಿ, ಆಲೂಗೆಡ್ಡೆ(TOP) ಯೋಜನೆ ಜಾರಿಗೊಂಡರೆ ಬೆಳೆಗಾರರಿಗೆ ನೆಮ್ಮದಿ ಸಿಗಬಹುದು. ರೈಲ್ವೆ ನೆರವಿನಿಂದ ಸಾರಿಗೆ ವೆಚ್ಚ ತಗ್ಗಿಸಬಹುದು.

* ಈರುಳ್ಳಿ ರಫ್ತು ಮೇಲಿನ ನಿಷೇಧ ಸಾಧ್ಯವಿಲ್ಲದ ಕಾರಣ, ಬದಲಿ ಮಾರ್ಗ ಕಂಡುಕೊಳ್ಳಬೇಕು, ಅಗತ್ಯ ವಸ್ತು ಕಾಯ್ದೆಯಡಿಯಿಂದ ಈರುಳ್ಳಿ ತೆಗೆದು ಹಾಕುವ ಬಗ್ಗೆ ಕೂಡಾ ಚರ್ಚೆ ನಡೆಸಲಾಗಿದೆ. ರೈತರಿಂಡ ನೇರವಾಗಿ, ಪಾರದರ್ಶಕವಾಗಿ ಖರೀದಿ ಮೂಲಕ ಕೃಷಿ ಮಾರುಕಟ್ಟೆ ಸುಧಾರಣೆಗೆ ಒತ್ತು ನೀಡಬಹುದು.

ಸಮರ್ಪಕವಾದ ದಾಸ್ತಾನು ಕ್ರಮಗಳಿಲ್ಲ

ಸಮರ್ಪಕವಾದ ದಾಸ್ತಾನು ಕ್ರಮಗಳಿಲ್ಲ

ಹೆಚ್ಚು ನೀರಿನ ಅಂಶ ಹೊಂದಿರುವ ಈರುಳ್ಳಿ ದಾಸ್ತಾನು ಸುಲಭವಾಗಿದ್ದರೂ, ದಾಸ್ತಾನು ಹೆಚ್ಚಿದ್ದಂತೆ ಸಮಸ್ಯೆಗಳೂ ಅಧಿಕ. ಅಕಾಲಿಕ ಮಳೆ, ಅತಿ ಹೆಚ್ಚು ಮಳೆ ಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಕಟಾವು ನಂತರದ ಸಮಪರ್ಕ ದಾಸ್ತಾನು ವ್ಯವಸ್ಥೆ ಇಲ್ಲದೆ ಶೇ 40 ರಷ್ಟು ಈರುಳ್ಳಿ ಹಾಳಾಗುತ್ತಿವೆ.

ಮನೆ ಬಳಕೆ ಈರುಳ್ಳಿಗಳನ್ನು ಎರಡರಿಂದ ಮೂರು ದಿನ ಹೆಚ್ಚೆಂದರೆ ವಾರ, ಎರಡು ವಾರ ತನಕ ಇಟ್ಟುಕೊಳ್ಳಬಹುದು. ಆದರೆ, ತೇವವನ್ನು ಹೀರಿಕೊಳ್ಳುವ ಗುಣ ಹೊಂದಿರುವುದರಿಂದ ಬಿಸಿಲು ಕಾಣದಿದ್ದರೆ ಈರುಳ್ಳಿ ಕೊಳತೆ ಹೋಗುತ್ತದೆ. ಹೀಗಾಗಿ, ಬೆಳೆ ಮೇಲೆ ನಿಯಂತ್ರಣದ ಜೊತೆಗೆ ದಾಸ್ತಾನು ಕ್ರಮಗಳ ಬಗ್ಗೆ ಕೂಡಾ ಸರ್ಕಾರ ಪ್ರತ್ಯೇಕವಾಗಿ ಅಧ್ಯಯನ ನಡೆಸುವುದು ಅಗತ್ಯ. ಕಡಿಮೆ ವೆಚ್ಚದಲ್ಲಿ ಎಲ್ಲಾ ಹವಾಮಾನದಲ್ಲೂ ಸುರಕ್ಷಿತವಾಗಿ ದಾಸ್ತಾನು ಮಾಡಬಲ್ಲ ತಂತ್ರಜ್ಞಾನ ಹೊಂದಿರುವ ಇಸ್ರೇಲ್ ಹಾಗೂ ಬ್ರೆಜಿಲ್ ಕ್ರಮ ಅನುಸರಿಸಲು ಯೋಗ್ಯವಾಗಿದೆ ಎಂದು ಫಿಕ್ಕಿ ಹೇಳಿದೆ.

ಇಸ್ರೇಲ್ ಮಾದರಿ ದಾಸ್ತಾನು

ಇಸ್ರೇಲ್ ಮಾದರಿ ದಾಸ್ತಾನು

ಇಸ್ರೇಲ್ ದೇಶದಲ್ಲಿ ಬಂಪರ್ ಉತ್ಪಾದನೆ ಬಂದ ಸಂದರ್ಭಗಳಲ್ಲಿ ಬೆಲೆ ಮೇಲೆ ನಿಯಂತ್ರಣ ಹೊಂದಲು ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತದೆ. ವೇರ್ ಹೌಸ್ ಗಳಲ್ಲಿ ಸಂಪೂರ್ಣವಾಗಿ ಗಾಳಿ ಹೊರ ಹಾಕುವ ವ್ಯವಸ್ಥೆ ಮಾಡಲಾಗಿರುತ್ತದೆ. ಇದಕ್ಕಾಗಿ ಕಡಿಮೆ ವೆಚ್ಚದಲ್ಲಿ ಸಾಧನ ಹಾಗೂ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ, ಭಾರತದಲ್ಲಿ ಹವಾಮಾನ ವ್ಯವಸ್ಥೆಗೆ ತಕ್ಕಂತೆ ಅಲ್ಲಿನ ವ್ಯವಸ್ಥೆಯನ್ನು ಹೊಂದಿಸಿಕೊಳ್ಳಬಹುದು. ಕಡಿಮೆ ವೆಚ್ಚದಲ್ಲಿ ಉಗ್ರಾಣಗಳನ್ನು ನಿರ್ಮಿಸುವುದರ ಜೊತೆಗೆ ಈ ರೀತಿ ಬೆಲೆ ನಿಯಂತ್ರಣಕ್ಕೆ ಸಿಗದಿರುವ ತರಕಾರಿಗಳ ದಾಸ್ತಾನಿಗೆ ಪ್ರತ್ಯೇಕ ಘಟಕಗಳನ್ನು ಹೊಂದುವುದು ಉತ್ತಮ.

ಬ್ರೆಜಿಲ್ ಮಾದರಿ ದಾಸ್ತಾನು

ಬ್ರೆಜಿಲ್ ಮಾದರಿ ದಾಸ್ತಾನು

ಬ್ರೆಜಿಲ್ ನಲ್ಲಿ ಕಡಿಮೆ ವೆಚ್ಚದಲ್ಲಿ ಪ್ರತ್ಯೇಕ ಉಗ್ರಾಣಗಳನ್ನು ನಿರ್ಮಿಸಲಾಗುತ್ತದೆ. ಉತ್ಪಾದನೆಗೆ ತಕ್ಕಂತೆ ಉಗ್ರಾಣಗಳಿದ್ದು, ಹವಾ ನಿಯಂತ್ರಿತ ವ್ಯವಸ್ಥೆ ಸೂಕ್ತವಾಗಿ ಬಳಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಬಹು ಬೆಳೆ ಉತ್ಪಾದನೆ ದಾಸ್ತಾನು ಕ್ರಮಗಳನ್ನು ಅನುಸರಿಸಲಾಗುತ್ತದೆ.

ಭಾರತದಲ್ಲಿ ಸ್ಟಾರ್ ಅಪ್ ಸಂಸ್ಥೆ ಇನ್ಫಿಕೋಲ್ಡ್ ಐಎನ್ ಸಿ ಈ ರೀತಿ ವ್ಯವಸ್ಥೆಯನ್ನು ಜಾರಿಗೆ ತಂದು ಬಹು ಬೆಳೆಗೆ ಕೂಲಿಂಗ್ ವ್ಯವಸ್ಥೆ ಒದಗಿಸುತ್ತಿದೆ. ಇದಲ್ಲದೆ, ಸರ್ಕಾರದ ಅಧೀನದ ತೋಟಗಾರಿಕೆ ಇಲಾಖೆಗಳಿಂದ ಕೆಲವೆಡೆ ಬಿದಿರು ಬಳಸಿ ಸ್ಟೋರೇಜ್ ಘಟಕ ನಿರ್ಮಿಸಲಾಗಿದೆ. ಆದರೆ, ಮಳೆಗಾಲದಲ್ಲಿ ಹೆಚ್ಚು ಸೂಕ್ತವಾದ ದಾಸ್ತಾನು ವ್ಯವಸ್ಥೆ ಇನ್ನೂ ಜಾರಿಯಲ್ಲಿಲ್ಲ. ಭಾರತದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಬಿಟ್ಟರೆ ಮಿಕ್ಕೆಲ್ಲಾ ತಿಂಗಳಲ್ಲಿ ಈರುಳ್ಳಿ ಎಲ್ಲೆಡೆ ಲಭ್ಯವಿರಲಿದೆ.

ಈರುಳ್ಳಿ ಉಗ್ರಾಣ ವ್ಯವಸ್ಥೆ ಹೇಗಿದೆ

ಈರುಳ್ಳಿ ಉಗ್ರಾಣ ವ್ಯವಸ್ಥೆ ಹೇಗಿದೆ

ಈರುಳ್ಳಿ ಉಗ್ರಾಣ ವ್ಯವಸ್ಥೆಯಲ್ಲಿ ಸರಿಯಾದ ಗಾಳಿ, ಬೆಳಕು ಇಲ್ಲದ ದೊಡ್ಡ ದೊಡ್ಡ ಉಗ್ರಾಣಗಳಲ್ಲಿ ಟನ್ ಗಟ್ಟಲೇ ತುಂಬಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಶೇ 20-40 ರಷ್ಟು ನಷ್ಟವೇ ಅಧಿಕವಾಗಿರುತ್ತದೆ. ಜೊತೆಗೆ ಪ್ರತಿಕೂಲ ಹವಾಮಾನವೂ ದೊಡ್ಡ ಸವಾಲು ನೀಡುತ್ತದೆ. ಸೂಕ್ತ ತಂತ್ರಜ್ಞಾನ ಬಳಕೆಯಿಂದ ಹಾಲಿ ಉಗ್ರಾಣದಲ್ಲೇ ಶೇ 5 ರಿಂದ 10 ರಷ್ಟು ನಷ್ಟ ತಗ್ಗಿಸಬಹುದು. ತೇವಾಂಶ ನಿಯಂತ್ರಣ, ಸ್ವಚ್ಛತೆ, ಪ್ರತ್ಯೇಕತೆ ಮುಂತಾದ ಸರಳ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮುಖ್ಯ.

ಕೃಷಿ ಸಂಶೋಧನಾ ಕೌನ್ಸಿಲ್(ಐಸಿಎಆರ್), ಐಐಟಿ, ರಾಜ್ಯ ಕೃಷಿ ವಿವಿಗಳು, ಕೃಷಿ ಸಂಶೋಧನಾ ಸಂಸ್ಥೆ(ಐಎಆರ್ ಐ) ಮುಂತಾದ ಅನೇಕ ಸಂಶೋಧನಾ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಈರುಳ್ಳಿ, ಆಲೂಗೆಡ್ಡೆ, ಬೆಳೆ ಕಾಳು ದಾಸ್ತಾನಿನಲ್ಲಿ ಇರುವ ಸಮಸ್ಯೆ, ವಿದೇಶಿ ತಂತ್ರಜ್ಞಾನ ಬಳಕೆ ಬಗ್ಗೆ ವರದಿಗಳನ್ನು ನೀಡಿವೆ. ಸರ್ಕಾರ ಇದನ್ನು ಬಳಸಿಕೊಳ್ಳುವ ಅಗತ್ಯವಿದೆ.

ಶೇ 25 ರಷ್ಟು ಈರುಳ್ಳಿ ನಷ್ಟ

ಶೇ 25 ರಷ್ಟು ಈರುಳ್ಳಿ ನಷ್ಟ

ಆಪತ್ಕಾಲದ ಶೇಖರಣೆಯಾಗಿರುವ 57,000 ಟನ್ ಈರುಳ್ಳಿಯಲ್ಲಿ ಶೇ 25 ರಷ್ಟು ನಷ್ಟವನ್ನು ಸರ್ಕಾರ ಎದುರಿಸುತ್ತಿದೆ. ಇದರಲ್ಲಿ ದಾಸ್ತಾನು ಸಮಸ್ಯೆಯೇ ಮುಖ್ಯ ಕಾರಣವಾಗಿದೆ.

ಭಾರತದ ಶೇ 60ರಷ್ಟು ಈರುಳ್ಳಿ ಬೆಳೆಯುವ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಅನಿಯಮಿತ ಮಳೆ, ಅಕಾಲಿಕ ಮಳೆ, ಜಲ ಪ್ರವಾಹ ಎಲ್ಲವೂ ಈರುಳ್ಳಿ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿವೆ. ಪ್ರತಿಕೂಲ ಹವಾಮಾನ, ಬೆಳೆ ಪದ್ಧತಿ ಅವಧಿ ಮೇಲಿನ ನಿಯಂತ್ರಣ ಎಲ್ಲವೂ ಸರ್ಕಾರದ ಹಿಡಿತದಲ್ಲಿಲ್ಲ, ಆದರೆ, ಕೈಲಿರುವ ಈರುಳ್ಳಿ ಉಳಿಸಿಕೊಳ್ಳುವುದು, ರಫ್ತು ಮಾಡುವುದು, ಆಮದು ಮೇಲೆ ನಿಯಂತ್ರಣ ಹೊಂದುವುದು ಸರ್ಕಾರದ ಕೈಲಿದೆ.

English summary
Onion storage:should explore low-cost modern technology models from countries like Israel and Brazil to store the commodity, industry body Ficci.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X