ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 3ನೇ ವಾರ ಅತಿ ಹೆಚ್ಚು ಓದಲ್ಪಟ್ಟ ಸುದ್ದಿಚಿತ್ರ

By Mahesh
|
Google Oneindia Kannada News

ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಜನವರಿ 13 ರಿಂದ ಜನವರಿ 20ರ ತನಕದ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಗ್ರಹ ಇಲ್ಲಿದೆ.

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ).

ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ನೋಡಬಹುದು.

ಜನವರಿ 3ನೇ ವಾರದಲ್ಲಿ ಗ್ರಾಚ್ಯುಟಿ ಮಸೂದೆ ಬಗ್ಗೆ ವಿವರಣೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ ಆಫರ್, ಕರ್ನಾಟಕ ವಿಧಾನಸಭೆ ಚುನಾವಣೆ, ಸಿಎಚ್‌ಎಸ್ ಸಂಸ್ಥೆ ನಡೆಸಿರುವ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ, ಸಂಸದ ಪ್ರತಾಪ್ ಸಿಂಹ, ಸಂಸದ ಅನಂತಕುಮಾರ್ ಹೆಗಡೆ ಅವರದ್ದೇ ಸುದ್ದಿ ಸದ್ದು ಮಾಡಿತು. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ಓದಿ...

ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ?

ಗ್ರಾಚ್ಯುಟಿ ಲೆಕ್ಕಾಚಾರ ಹೇಗೆ?

ಮುಂದಿನ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಗ್ರಾಚ್ಯುಟಿ ತಿದ್ದುಪಡಿ ಮಸೂದೆ 2017ಕ್ಕೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಉದ್ಯೋಗಿಗಳಿಗೆ 20 ಲಕ್ಷ ರೂ.ವರೆಗೂ ತೆರಿಗೆ ಮುಕ್ತ ಗ್ರಾಚ್ಯುಟಿ ಪಡೆಯಲು ಅರ್ಹರಾಗಲಿದ್ದಾರೆ. ಸದ್ಯ ಐದು ಅಥವಾ ಅದಕ್ಕಿಂತ ಹೆಚ್ಚು ಸೇವಾ ಅವಧಿ ಹೊಂದಿರುವ ಉದ್ಯೋಗಿಗಳು ಉದ್ಯೋಗ ತೊರೆದಾಗ, ನಿವೃತ್ತಿ ಹೊಂದಿದಾಗ 10 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಗ್ರಾಚ್ಯುಟಿ ಗಳಿಸಬಹುದಾಗಿದೆ. ಇಷ್ಟಕ್ಕೂ ಗ್ರಾಚ್ಯುಟಿ ಎಂದರೇನು? ಇದರ ಲೆಕ್ಕ ಹಾಕುವುದು ಹೇಗೆ? ಮುಂದೆ ಓದಿ...

ಚಂದ್ರಬಾಬು ನಾಯ್ಡು ನೀಡಿದ ಆಫರ್

ಚಂದ್ರಬಾಬು ನಾಯ್ಡು ನೀಡಿದ ಆಫರ್

ಇಲ್ಲಿ ಓದಿಇಲ್ಲಿ ಓದಿ

ಎಸ್ ಬಿಐ ಉದ್ಯೋಗ

ಎಸ್ ಬಿಐ ಉದ್ಯೋಗ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಶುಕ್ರವಾರ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕ್ಲರ್ಕ್ ದರ್ಜೆಯ ಒಟ್ಟು 9,000 ಜೂನಿಯರ್ ಅಸೋಸಿಯೇಟ್ ಹುದ್ದೆ (ಗ್ರಾಹಕ ಸೇವೆ ಮತ್ತು ಸೇಲ್ಸ್) ಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಇಂದಿನಿಂದಲೇ (ಜನವರಿ 20) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರಲಿದೆ.

ಅಶ್ವಿನಿಯಿಂದ ಆರಂಭವಾಗಿ ಗುಣ ಹಾಗೂ ಸ್ವಭಾವ

ಅಶ್ವಿನಿಯಿಂದ ಆರಂಭವಾಗಿ ಗುಣ ಹಾಗೂ ಸ್ವಭಾವ

ಪೂರ್ಣ ಮಾಹಿತಿಪೂರ್ಣ ಮಾಹಿತಿ

ನಮ್ಮ ಟೀಮ್ ನಿಂದಲೂ ಒಂದು ಸಮೀಕ್ಷೆ

ನಮ್ಮ ಟೀಮ್ ನಿಂದಲೂ ಒಂದು ಸಮೀಕ್ಷೆ

"ನಮ್ಮ ಟೀಮ್ ನಿಂದಲೂ ಒಂದು ಸಮೀಕ್ಷೆ ಮಾಡಿಸಿದ್ದೀವಿ. ಅದನ್ನೂ ಬಿಡುಗಡೆ ಮಾಡ್ತೀವಿ. ಆಗ ನೀವೇ ನೋಡಿ. ಅದು ಬರೀ ಸಂಖ್ಯೆಗಳಲ್ಲ, ಕ್ರಮಬದ್ಧವಾಗಿ ಸಮೀಕ್ಷೆ ಮಾಡಿಸಿದ್ದೀವಿ" ಎಂದರು ನಟ ಹಾಗೂ ಕೆಪಿಜೆಪಿ ಪಕ್ಷದ ಮುಖ್ಯಸ್ಥ ಉಪೇಂದ್ರ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕು ತಿಂಗಳಷ್ಟೇ ಸಮಯ ಇದೆ.

ಈ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡದಿಂದ ಉಪೇಂದ್ರ ಸಂದರ್ಶನ ಮಾಡಲಾಗಿದೆ. ಈ ವರೆಗಿನ ಚುನಾವಣೆ ಸಮೀಕ್ಷೆಗಳ ಪ್ರಕಾರ ಕೆಪಿಜೆಪಿಯು ಯಾವುದೇ ಸ್ಥಾನ ಗಳಿಸುವುದಿಲ್ಲ ಅಂತಲೇ ಬರುತ್ತಿದೆ. ಈ ಬಗ್ಗೆ ನೀವೇನಂತೀರಾ ಎಂಬ ಪ್ರಶ್ನೆಗೆ ಈ ಮೇಲಿನಂತೆ ಉಪೇಂದ್ರ ಉತ್ತರಿಸಿದರು.

ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ

ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ

ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಭಾರತೀಯ ಜನತಾ ಪಕ್ಷವನ್ನು ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಪ್ರತಾಪ್ ಅವರನ್ನು ಸೆಳೆಯುವಲ್ಲಿ ಜೆಡಿಎಸ್ ಯುವ ನೇತಾರ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಂಸದ ಎಚ್ ವಿಶ್ವನಾಥ್ ಅವರು ಯಶಸ್ವಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೆಲ್ಲವೂ ಶುದ್ಧ ಸುಳ್ಳು ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಸಂಸದ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.

ಪಕ್ಷದ ಐಕಾನ್ ಸಿದ್ದರಾಮಯ್ಯ

ಪಕ್ಷದ ಐಕಾನ್ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಲೇ ಬೇಕೆಂಬ ಹಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿದ್ದಿದ್ದಾರೆ. ಇದಕ್ಕಾಗಿಯೇ ರಾಜ್ಯಾದ್ಯಂತ ಸಾವಿರಾರು ಕಿ.ಮೀ. ಪ್ರವಾಸ ಮಾಡುತ್ತಾ, ಹುರುಪಿನಿಂದಲೇ ಓಡಾಡುತ್ತಿದ್ದಾರೆ. ಸಾಧನಾ ಸಮಾವೇಶದ ಮೂಲಕ ತಮ್ಮ ಸರ್ಕಾರದ ಸಾಧನೆಗಳ ಜತೆಯಲ್ಲಿ ತಮ್ಮ ವರ್ಚಸ್ಸನ್ನೂ ಇಮ್ಮಡಿಗೊಳಿಸಿಕೊಳ್ಳುತ್ತ ಪಕ್ಷದ ಐಕಾನ್ ಆಗುತ್ತಿದ್ದಾರೆ. ಹೇಗೆ ಎಂಬುದನ್ನು ಮುಂದೆ ಓದಿ...

ಕೆ.ಸಿ.ವೀರೇಂದ್ರ ಸ್ಪರ್ಧೆ

ಕೆ.ಸಿ.ವೀರೇಂದ್ರ ಸ್ಪರ್ಧೆ

ಚಿತ್ರದುರ್ಗ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ನಟ ದೊಡ್ಡಣ್ಣ ಅಳಿಯ ಮತ್ತು ಉದ್ಯಮಿ ಕೆ.ಸಿ.ವೀರೇಂದ್ರ ಅವರು ಚಿತ್ರದುರ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಬಗ್ಗೆ ಓದಿಬಗ್ಗೆ ಓದಿ

ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ

ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ

"ಪೊಲೀಸರ ಬ್ಯಾರಿಕೇಡ್ ಮುರಿದು ಅನಂತಕುಮಾರ್ ಹೆಗಡೆ ಮುಖಕ್ಕೆ ಮಸಿ ಬಳಿಯುವುದು ಖಚಿತ. ಸಂವಿಧಾನ ಬದಲಾವಣೆ ಮಾಡುವ ಸಲುವಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ ಹೇಳಿಕೆ ನೀಡಿದ್ದ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ದಲಿತ ಮುಖಂಡ ಹಣಮಂತ ಯಳಸಂಗಿ ಬುಧವಾರ ಇಲ್ಲಿ ಆಗ್ರಹಿಸಿದರು.

ಮುಂದೆ ಓದಿ...ಮುಂದೆ ಓದಿ...

ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ

ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ

ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಸಿಎಚ್‌ಎಸ್ ಸಂಸ್ಥೆ ನಡೆಸಿರುವ ಸಮೀಕ್ಷೆಯ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಅಭಿಪ್ರಾಯಪಟ್ಟಿದ್ದಾರೆಅಭಿಪ್ರಾಯಪಟ್ಟಿದ್ದಾರೆ

English summary
Top read trending stories of Last Week (Jan 13- Jan 20) on Oneindia Kannada are here. The list includes stories on Weekly Astrology, Union Budget, SBI jobs, Upendra Interview, political developments and news across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X