ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಚೋಟಾ ಮುಂಬೈ" ಹುಬ್ಬಳ್ಳಿಯಲ್ಲಿ ಎಗ್ಗಿಲ್ಲದೆ ನಡೆದಿದೆ ಮಟ್ಕಾ ದಂಧೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಮನೆಹಾಳು ಆಟ ಎಂದೇ ಕುಖ್ಯಾತಿಯಾಗಿರುವ ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ನಂಬರ್ ಗೇಮ್ ಹಿಂದೆ ಬಿದ್ದು ಎದ್ದವರು ಕಡಿಮೆ. ನಗರ, ಪಟ್ಟಣ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಅಡ್ಡಾಗಳಿವೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಶುರು ಮಾಡಿದರೆ ಕರ್ನಾಟಕದ ನೆತ್ತಿನ ಬೀದರ್ ತನಕವೂ ಓಸಿ ದಂಧೆ ಅವ್ಯಾಹತವಾಗಿ ಹರಡಿದೆ.

ಇಂದಿನ ಪಬ್ಜಿಯಂತೆ ವಿಡಿಯೋ ಗೇಮ್ಸ್ ಚಟದಂತೆ ಮಟ್ಕಾ ಚಟಕ್ಕೆ ದೀಪಕ್ಕೆ ಮುತ್ತಿಕೊಳ್ಳುವ ಮಳೆ ಹುಳದಂತೆ ಮನೆ ಮಂದಿಯೆಲ್ಲಾ ದಾಸರಾಗಿರುವ ನಿದರ್ಶನಗಳಿವೆ. ಬಡವ ಬಲ್ಲಿದ ಎಂಬ ಯಾವುದೇ ಅಂತರವಿಲ್ಲದೆ ಆಕರ್ಷಿಸುವ ಈ ಆಟದ ಪರಿಸ್ಥಿತಿ, ಚಟದಿಂದ ಬಲಿಯಾದವರು, ಕರ್ನಾಟಕದಲ್ಲಿ ದಂಧೆ ಯಾವ ಪರಿಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಒನ್ಇಂಡಿಯಾ ಫೋಕಸ್ ತಂಡ ಬೆಳಕು ಚೆಲ್ಲಲಿದ್ದು, ವಿವಿಧ ಜಿಲ್ಲೆಗಳ ಪ್ರತಿನಿಧಿಗಳಿಂದ ಬಂದ ವರದಿಗಳ ಸರಣಿ ಲೇಖನ ಇಲ್ಲಿದೆ...

ಉತ್ತರ ಕನ್ನಡ: ಮಟ್ಕಾ ಹೈಟೆಕ್ ಆಟಕ್ಕೆ ಯುವಜನರೇ ದಾಳ ಉತ್ತರ ಕನ್ನಡ: ಮಟ್ಕಾ ಹೈಟೆಕ್ ಆಟಕ್ಕೆ ಯುವಜನರೇ ದಾಳ

ಹುಬ್ಬಳ್ಳಿ: ಚೋಟಾ ಮುಂಬೈ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ, ಮುಂಬೈನಂತೆಯೇ ಅಕ್ರಮ ದಂಧೆಗೂ ಫೇಮಸ್. ಅಕ್ರಮ ಚಟುವಟಿಕೆಯಿಂದ ಪ್ರತಿನಿತ್ಯ ಸುದ್ದಿಯಲ್ಲಿರುವ ಈ ನಗರ ಈಗ ಹೆಚ್ಚಿಗೆ ಸದ್ದು ಮಾಡುತ್ತಿರುವುದು ಮಟ್ಕಾ ದಂಧೆಯಿಂದ. ನಗರದ ಜನತಾ ಬಜಾರ್, ಹಳೇ ಹುಬ್ಬಳ್ಳಿಯ ಆನಂದ ನಗರ, ಉಣಕಲ್, ಸೇರಿದಂತೆ ನಗರದ ಬಹುತೇಕ ಕಡೆ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

Oneindia Focus: Matka Menance in Hubballi District

ಜನತಾ ಬಜಾರ್ ದಂಧೆಯ ಅಡ್ಡಾ: ನಗರದ ಪ್ರಮುಖ ಮಾರುಕಟ್ಟೆಯಾದ ಜನತಾ ಬಜಾರ್ ನಲ್ಲಿ ಮಟ್ಕಾ ದಂಧೆ ತಡೆಯುವವರೇ ಇಲ್ಲ. ಮಟ್ಕಾ ಕುಳಗಳಿಗೆ ಅಲ್ಲಿನ ವ್ಯಾಪಾರಿಗಳೇ ಟಾರ್ಗೆಟ್. ಮುಂಜಾನೆಯಿಂದ ಸಂಜೆಯವರೆಗೆ ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿರುವ ಬಡ ಜನರನ್ನು ಟಾರ್ಗೆಟ್ ಮಾಡಿಕೊಂಡು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ನೀಡುತ್ತೇವೆ ಎಂದು ನೂರಾರು ಜನರ ಜೀವನ ಹಾಳು ಮಾಡುವ ಕೆಲಸಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ದುಡ್ಡು ಮಾಡುವ ಆಸೆಗೆ ಬಿದ್ದ ವ್ಯಾಪಾರಿಗಳು ಇದರಿಂದ ಸಾಲ ಮಾಡಿಕೊಂಡು, ವ್ಯಾಪಾರದಲ್ಲೂ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳು ಹೆಜ್ಜೆಗೊಂದರಂತೆ ಸಿಗುತ್ತವೆ.

ಸಾಂಸ್ಕೃತಿಕ ನಗರಿಗೆ ದಾಂಗುಡಿಯಿಟ್ಟ ಆನ್ ಲೈನ್ ಮಟ್ಕಾ ದಂಧೆಸಾಂಸ್ಕೃತಿಕ ನಗರಿಗೆ ದಾಂಗುಡಿಯಿಟ್ಟ ಆನ್ ಲೈನ್ ಮಟ್ಕಾ ದಂಧೆ

ಹುಬ್ಬಳ್ಳಿ, ಧಾರವಾಡ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಮಟ್ಕಾ ದಂಧೆ ಕಡಿಮೆಯಿಲ್ಲ. ತಿಳಿದೂ ತಿಳಿಯದವರಂತೆ ಇರುವ ಕೆಲವು ಪೊಲೀಸರಿಂದ ಈ ಜಾಲ ಇನ್ನಷ್ಟು ಬೆಳೆಯುತ್ತಿರುವುದೂ ಸುಳ್ಳಲ್ಲ. ಅವ್ಯಾಹತವಾಗಿ ನಡೆಯುತ್ತಿರುವ ಮಟ್ಕಾ ದಂಧೆ ಮೇಲೆ ಪೊಲೀಸರು ಆಗೊಮ್ಮೆ ಈಗೊಮ್ಮೆ ದಾಳಿ ಮಾಡುತ್ತಾರೆ. ಈ ಅಕ್ಟೋಬರ್ ತಿಂಗಳಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ, ಮೆಹಬೂಬ್ ಬಳ್ಳಾರಿ ಹಾಗೂ ಶೌಕತ್ ತಂಬೂರಿ ಎನ್ನುವ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 7 ಸಾವಿರ ನಗದನ್ನು ವಶ ಪಡೆಸಿಕೊಂಡಿದ್ದರು. ಆದರೆ ಅವರು ಜೈಲಿನಿಂದ ಹೊರ ಬಂದು ಮತ್ತೆ ಈ ದಂಧೆಯಲ್ಲೇ ಮುಂದುವರೆದಿದ್ದಾರೆ.

ಪೊಲೀಸ್ ಕಮಿಷನರ್ ಕಟ್ಟುನಿಟ್ಟಿನ ಆದೇಶ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆರ್ ದಿಲೀಪ್ ಅವರು ಮಟ್ಕಾ ದಂಧೆ ವಿರುದ್ಧ ಸಮರ ಸಾರಿದ್ದಾರೆ. ಅವಳಿ ನಗರದಲ್ಲಿ ಮಟ್ಕಾ ದಂಧೆಯನ್ನು ಆಡಿಸುವವರು ಹಾಗೂ ಆಡುವವರು ಕಂಡುಬಂದರೆ 9480802000 ಕಾಲ್ ಮಾಡಿ ಅಥವಾ ಮೆಸೇಜ್ ಮಾಡಲು ತಿಳಿಸಿದ್ದಾರೆ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದೂ ತಿಳಿಸಿದ್ದಾರೆ.

ಗೃಹ ಸಚಿವರಿಂದಲೂ ಆದೇಶ
ಈಚೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹುಬ್ಬಳ್ಳಿಯ ನವನಗರದ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದ್ದರು. ಆ ಸಭೆಯಲ್ಲಿ ಅಧಿಕಾರಿಗಳಿಗೆ ಅಕ್ರಮ ಮಟ್ಕಾ ದಂಧೆಗೆ ಬ್ರೇಕ್ ಹಾಕುವಂತೆ ಆದೇಶ ಮಾಡಿದ್ದರು. ಆದರೆ ಇಷ್ಟೆಲ್ಲಾ ಆದರೂ ಮಟ್ಕಾ ದಂಧೆಗೆ ಫುಲ್ ಸ್ಟಾಪ್ ಇಡಲು ಇನ್ನೂ ಸಾಧ್ಯವಾಗಿಲ್ಲ.

English summary
Oneindia Focus: Matka Menance in Hubballi District, Hubballi which has called as Chota mumbai is also famous for its illegal matka business. There is no proper controll over this menance in district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X