ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ; ಮಟ್ಕಾ ಜಾಲದ ಕಿಂಗ್ ಪಿನ್ ಗಳ ಮಟ್ಟ ಹಾಕಲು ಸಾಧ್ಯವೇ?

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ಮನೆಹಾಳು ಆಟ ಎಂದೇ ಕುಖ್ಯಾತಿಯಾಗಿರುವ ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ನಂಬರ್ ಗೇಮ್ ಹಿಂದೆ ಬಿದ್ದು ಎದ್ದವರು ಕಡಿಮೆ. ನಗರ, ಪಟ್ಟಣ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಅಡ್ಡಾಗಳಿವೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಶುರು ಮಾಡಿದರೆ ಕರ್ನಾಟಕದ ನೆತ್ತಿನ ಬೀದರ್ ತನಕವೂ ಓಸಿ ದಂಧೆ ಅವ್ಯಾಹತವಾಗಿ ಹರಡಿದೆ.

ಇಂದಿನ ಪಬ್ಜಿಯಂತೆ ವಿಡಿಯೋ ಗೇಮ್ಸ್ ಚಟದಂತೆ ಮಟ್ಕಾ ಚಟಕ್ಕೆ ದೀಪಕ್ಕೆ ಮುತ್ತಿಕೊಳ್ಳುವ ಮಳೆ ಹುಳದಂತೆ ಮನೆ ಮಂದಿಯೆಲ್ಲಾ ದಾಸರಾಗಿರುವ ನಿದರ್ಶನಗಳಿವೆ. ಬಡವ ಬಲ್ಲಿದ ಎಂಬ ಯಾವುದೇ ಅಂತರವಿಲ್ಲದೆ ಆಕರ್ಷಿಸುವ ಈ ಆಟದ ಪರಿಸ್ಥಿತಿ, ಚಟದಿಂದ ಬಲಿಯಾದವರು, ಕರ್ನಾಟಕದಲ್ಲಿ ದಂಧೆ ಯಾವ ಪರಿಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಒನ್ಇಂಡಿಯಾ ಫೋಕಸ್ ತಂಡ ಬೆಳಕು ಚೆಲ್ಲಲಿದ್ದು, ವಿವಿಧ ಜಿಲ್ಲೆಗಳ ಪ್ರತಿನಿಧಿಗಳಿಂದ ಬಂದ ವರದಿಗಳ ಸರಣಿ ಲೇಖನ ಇಲ್ಲಿದೆ...

ದಾವಣಗೆರೆ: ದಾವಣಗೆರೆ ಎಂದರೆ ಬೆಣ್ಣೆ ನಗರ ಎಂದೇ ಕರೆಯುತ್ತಾರೆ. ಆದರೆ ಇದೇ ಬೆಣ್ಣೆ ‌ನಗರಿಗೆ ಒಂದು ಕರಾಳ ಮುಖವೂ ಇದೆ. ಮಟ್ಕಾ ಎನ್ನುವ ದಂಧೆ ಬಹು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬರುತ್ತಿರುವುದು ಊರಿಗೆ ಒಂದು ಕಳಂಕವೂ ಆಗಿದೆ.

Oneindia Focus: Matka Menance in Davanagere District

ದಾವಣಗೆರೆಯ ನಿಟ್ಟುವಳ್ಳಿ ಭರತ್ ಕಾಲೋನಿ, ಲೆನಿನ್ ‌ನಗರ, ಕೆಟಿಜೆ ನಗರ, ಶೇಖರಪ್ಪನ ನಗರ, ಬೇತೂರು ರಸ್ತೆ. ಅಜಾದ್ ನಗರ, ಬಾಷಾ ನಗರ್, ಅಹಮದ್ ‌ನಗರ, ರಾಮನಗರ, ಜಾಲಿ‌ನಗರ ಹೊಂಡಾ ಸರ್ಕಲ್ ಸೇರಿದಂತೆ ಹಲವು ತಾಣಗಳು ಮಟ್ಕಾ ದಂಧೆಯ ಅಡ್ಡಾಗಳಾಗಿವೆ. ಮಟ್ಕಾ ದಂಧೆಗೆ ಕೂಲಿ‌ ಕಾರ್ಮಿಕರು, ಅಮಾಲಿಗಳೇ ಬಲುಪಶುಗಳು. ಈಗೀಗ ಯುವಕರೂ ಇದರಲ್ಲಿ ತೊಡಗಿಕೊಂಡಿರುವುದು ಆತಂಕ ಉಂಟು ಮಾಡಿದೆ. ಪ್ರತಿನಿತ್ಯ ದುಡಿಯುವ ಹಣವನ್ನು ಈ ದಂಧೆಯಲ್ಲಿ ಕಳೆದುಕೊಂಡು ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ದಾವಣಗೆರೆಯಲ್ಲಿ ಎರಡು ಲೈನ್ ಗಳಲ್ಲಿ ಮಟ್ಕಾ ಪ್ರಮುಖವಾಗಿ ನಡೆಯುತ್ತದೆ. ಮಧ್ಯಾಹ್ನ ಗೋವಾದ ಕಲ್ಯಾಣಿ, ರಾತ್ರಿ ಬಾಂಬೆ ಲೈನ್ ನಲ್ಲಿ ಜೂಜುಕೋರರು ಹಣ ಕಟ್ಟುತ್ತಾರೆ. ಕೊಳೆಗೇರಿಗಳಲ್ಲಿ ಮಟ್ಕಾ ದಂಧೆ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದೆ.

ಇತ್ತೀಚಿನ ಕೆಲ ವರ್ಷಗಳಿಂದ ‌ಪೊಲೀಸರು ಈ ದಂಧೆ ನಿಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ದಂಧೆಕೋರರನ್ನು ಮಟ್ಟ ಹಾಕಲು ಪೊಲೀಸರು ಹೊಂಚು ಹಾಕುತ್ತಿದ್ದರೂ, ದಂಧೆಕೋರರು ಚಾಣಾಕ್ಷ್ಯತನ ತೋರುತ್ತಿದ್ದಾರೆ. 2009-10ರಲ್ಲಿ ದಾವಣಗೆರೆ ಎಸ್ ಪಿಯಾಗಿದ್ದ ಎಸ್ ಪಿ ಸಂದೀಪ್ ಪಾಟೀಲ್ ಸಾಕಷ್ಟು ದಂಧೆಕೋರರನ್ನು ಗಡಿಪಾರು ಮಾಡಿರುವ ನಿದರ್ಶನಗಳು ಸಹ ಇವೆ.

ಖಡಕ್ ಪೊಲೀಸ್ ಅಧಿಕಾರಿ ಎಂದೇ ಪ್ರಸಿದ್ಧಿಯಾಗಿದ್ದ ಆರ್ ಚೇತನ್ ಅವರೂ ದಂಧೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಯತ್ನ ನಡೆಸಿದ್ದರು. ಅವರ ನಂತರ ಬಂದ ಎಸ್ ಪಿ ಹನುಮಂತರಾಯ ಅವರು ಮಟ್ಕಾ ದಂಧೆಯನ್ನು ಸಂಪೂರ್ಣ ಮಟ್ಟ ಹಾಕುವ ಆಶಯ ಹೊಂದಿದ್ದಾರೆ. ಒಂದು ವರ್ಷದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಮಟ್ಕಾ ಪ್ರಕರಣಗಳು‌ ದಾಖಲಾಗಿದ್ದು, ಪೊಲೀಸರು ಬೀಸುವ ಬಲೆಗೆ ಕೇವಲ ಸಣ್ಣ ಪುಟ್ಟ ದಂಧೆಕೋರರಷ್ಟೇ ಸಿಗುತ್ತಿದ್ದಾರೆ. ಕಿಂಗ್ ಪಿನ್ ಗಳನ್ನು ‌ಮಟ್ಟ ಹಾಕುವ ಹಾಗೂ ಸಂಪೂರ್ಣವಾಗಿ ಈ ದಂಧೆ ನಿಲ್ಲಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಲೇ ಇವೆ.

English summary
Oneindia Focus: Matka Menance in Davanagere District, Though there are so much effort from police to curb matka menance, it is still existed,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X