• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಮಂತ್ರಿ ಮೋದಿ ರಕ್ಷಣಾ ಕೋಟೆ ಎಸ್ ಪಿಜಿ ಬಗ್ಗೆ ನಿಮಗೆಷ್ಟು ಗೊತ್ತು?

By ಅನಿಲ್ ಆಚಾರ್
|
   SPG ಭದ್ರತೆ ಅಂದ್ರೆ ಏನು ಅಂತ ಗೊತ್ತಾ..?| SPG | Oneindia Kannada

   ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿರುವ ಎಸ್ ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆಯನ್ನು ಕೇಂದ್ರ ಸರಕಾರವು ಹಿಂಪಡೆಯುತ್ತದೆ ಎಂಬುದೇ ದಪ್ಪಕ್ಷರಗಳ ಹೆಡ್ಡಿಂಗ್ ಆಗುತ್ತಿದೆ. ಏನು ಈ ಎಸ್ ಪಿಜಿ? ಭದ್ರತೆ ವಿಚಾರದಲ್ಲಿ ಪದೇ ಪದೇ ಕೇಳಿಬರುವ ಈ ಎಸ್ ಪಿಜಿ ಬಗ್ಗೆ ಕೆಲ ಆಸಕ್ತಿಕರ ಮಾಹಿತಿಗಳನ್ನು ಇಲ್ಲಿ ನಿಮ್ಮೆದುರು ಇಡುವ ಪ್ರಯತ್ನ ಮಾಡುತ್ತಿದ್ದೇವೆ.

   ಪ್ರಧಾನಮಂತ್ರಿಗಳು, ಮಾಜಿ ಪ್ರಧಾನಿಗಳು ಮತ್ತು ಅವರ ತುಂಬ ಹತ್ತಿರದ ಕುಟುಂಬ ಸದಸ್ಯರ ಭದ್ರತೆಗಾಗಿ ಇರುವಂಥ, ಮೂರು ಸಾವಿರಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಇರುವ ವ್ಯವಸ್ಥೆಯೇ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ ಪಿಜಿ). ಈಗ ದೇಶದಲ್ಲಿ ಆ ರಕ್ಷಣಾ ವ್ಯವಸ್ಥೆ ಹೊಂದಿರುವವರು ನಾಲ್ಕೇ ಮಂದಿ.

   ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ನೀಡಿದ Z+ ಭದ್ರತೆ ವಾಪಸ್?

   ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಿಂದ (ಸಿಎಪಿಎಫ್) ನಿಯೋಜನೆ ಮೇಲೆ ಎಸ್ ಪಿಜಿಗೆ ಸಿಬ್ಬಂದಿಯನ್ನು ತೆಗೆದುಕೊಳ್ಳಲಾಗುತ್ತದೆ. ಎಸ್ ಪಿಜಿಯಲ್ಲಿ ಅತ್ಯುನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ. ಈ ತಂಡದ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಗ್ಯಾಜೆಟ್ ಗಳು ಹಾಗೂ ವಾಹನಗಳು ಇವೆ. ಈ ಮೂರು ಸಾವಿರಕ್ಕೂ ಸ್ವಲ್ಪ ಹೆಚ್ಚಿರುವ ಸಿಬ್ಬಂದಿ ತಂಡದಿಂದ ಒಂದೇ ಒಂದು ಸಣ್ಣ ತಪ್ಪು ಕೂಡ ನಡೆಯದಷ್ಟು ಎಚ್ಚರಿಕೆ ವಹಿಸಲಾಗುತ್ತದೆ.

   ಎಸ್ ಪಿಜಿ ಅನುಸರಿಸುವ ಕ್ರಮಗಳೇ ವಿಭಿನ್ನ

   ಎಸ್ ಪಿಜಿ ಅನುಸರಿಸುವ ಕ್ರಮಗಳೇ ವಿಭಿನ್ನ

   ಸದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಈ ನಾಲ್ವರಿಗೆ ಮಾತ್ರ ಎಸ್ ಪಿಜಿ ರಕ್ಷಣೆ ನೀಡಲಾಗುತ್ತಿದೆ. ಎಸ್ ಪಿಜಿ ಅಧಿಕಾರಿಗಳಲ್ಲಿ ಅತ್ಯುನ್ನತ ಮಟ್ಟದ ನಾಯಕತ್ವ ಗುಣಗಳು ಇರುತ್ತವೆ. ವೃತ್ತಿಪರತೆ, ಭದ್ರತೆ ಬಗ್ಗೆ ಅವರ ಆಳವಾದ ಜ್ಞಾನ, ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ಸಂಸ್ಕೃತಿ ಇವೆಲ್ಲ ಎಸ್ ಪಿಜಿಯಲ್ಲಿ ಕಂಡುಬರುತ್ತವೆ. ಎಸ್ ಪಿಜಿಯವರು ಅನುಸರಿಸುವ ರಕ್ಷಣಾ ಕ್ರಮಗಳೇ ವಿಶಿಷ್ಟ, ವಿಭಿನ್ನ ಹಾಗೂ ಹೊಸತನದಿಂದ ಕೂಡಿರುತ್ತವೆ. ಕೇಂದ್ರ ಮತ್ತು ರಾಜ್ಯ ಗುಪ್ತಚರ ದಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೊಲೀಸರ ಸಹಯೋಗದಲ್ಲಿ ಎಸ್ ಪಿಜಿ ಕಾರ್ಯ ನಿರ್ವಹಿಸುತ್ತದೆ. ಕಾರ್ಯ ನಿರ್ವಹಣೆ ವಿಧಾನ, ಅಧಿಕಾರಿಗಳ ನಾಯಕತ್ವ ಸೇರಿ ಇತರ ಗುಣಗಳ ಕಾರಣಕ್ಕೆ ಭದ್ರತಾ ಲೋಪದ ಪ್ರಮಾಣ 'ಜೀರೋ'.

   24 ಗಂಟೆ ಮುಂಚಿತವಾಗಿಯೇ ಸ್ಥಳ ತಪಾಸಣೆ

   24 ಗಂಟೆ ಮುಂಚಿತವಾಗಿಯೇ ಸ್ಥಳ ತಪಾಸಣೆ

   ಎಸ್ ಪಿಜಿಗೆ ವಿಭಿನ್ನ- ವಿಶಿಷ್ಟ ರೀತಿಯ ಶಿಷ್ಟಾಚಾರಗಳಿವೆ. ಎಸ್ ಪಿಜಿಯ ಭದ್ರತೆಯಲ್ಲಿ ಇರುವ ಅತಿ ಗಣ್ಯರು ಪ್ರತಿ ಸಲ ಪ್ರಯಾಣ ಮಾಡುವಾಗಲೂ ಅವರ ಜತೆಗೆ ಎಸ್ ಪಿಜಿಯ ಹಲವು ಸಣ್ಣ ತಂಡಗಳು ಸಹ ಜತೆಯಾಗಿ ಪ್ರಯಾಣ ಮಾಡುತ್ತವೆ. ಯಾವುದೇ ಭದ್ರತಾ ಆತಂಕಗಳು ಎದುರಾಗದಂತೆ ಎಚ್ಚರ ವಹಿಸುತ್ತವೆ. ಯಾವ ಗಣ್ಯರಿಗೆ ಎಸ್ ಪಿಜಿ ಭದ್ರತೆ ಒದಗಿಸಲಾಗಿದೆಯೋ ಅವರು ಭೇಟಿ ನೀಡುವ ಸ್ಥಳಕ್ಕೆ ಇಪ್ಪತ್ನಾಲ್ಕು ಗಂಟೆ ಮುಂಚಿತವಾಗಿ ತೆರಳುವ ತಂಡ ಸಂಪೂರ್ಣ ತಪಾಸಣೆ ಕೈಗೊಳ್ಳುತ್ತದೆ. ಭದ್ರತಾ ಸಂಸ್ಥೆಗಳ ಪೈಕಿ ಎಸ್ ಪಿಜಿಗೆ ವಿಶೇಷ ಅಧಿಕಾರವೊಂದಿದೆ. ಅತಿ ಗಣ್ಯರ ರಕ್ಷಣೆ ವಿಚಾರಕ್ಕೆ ಬಂದಾಗ, ರಾಜಕೀಯ ಸಮಾವೇಶ ಅಥವಾ ಬೇರೆ ಯಾವುದೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬದಲಾವಣೆ, ಮಾರ್ಪಾಡುಗಳನ್ನು ಮಾಡಬಹುದು.

   SPG ಭದ್ರತೆ ಇರುವ ದೇಶದ ನಾಲ್ಕೇ 'ನಾಲ್ಕು' ರಾಜಕಾರಣಿಗಳು

   ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ವಾಹನಗಳು

   ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ವಾಹನಗಳು

   ಎಸ್ ಪಿಜಿ ಸಿಬ್ಬಂದಿಗೆ ತರಬೇತಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ದೈಹಿಕ ಕ್ಷಮತೆ ತರಬೇತಿ, ವಿಧ್ವಂಸಕ ಕೃತ್ಯ ತಡೆಗೆ ಪರಿಶೀಲನೆ, ಸಂವಹನ ಹಾಗೂ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ತರಬೇತಿ ನಡೆಯುತ್ತಲೇ ಇರುತ್ತದೆ. ಎಸ್ ಪಿಜಿ ಕಾಯ್ದೆ ಪ್ರಕಾರ, ಕೇಂದ್ರ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಎಸ್ ಪಿಜಿಗೆ ಅಗತ್ಯ ಇರುವ ಎಲ್ಲ ಸಹಕಾರ ನೀಡಲೇಬೇಕು. ಎಸ್ ಪಿಜಿ ಕಮ್ಯಾಂಡೋಗಳ ಬಳಿ ಅತ್ಯಾಧುನಿಕ ರೈಫಲ್ಸ್ ಗಳು ಇರುತ್ತವೆ. ಕತ್ತಲಲ್ಲೂ ಸ್ಪಷ್ಟವಾಗಿ ನೋಡಬಲ್ಲಂಥ ಕನ್ನಡಕ, ಬುಲೆಟ್ ಪ್ರೂಫ್ ಸಲಕರಣೆ, ಕೈ ಗವಸು, ಮಂಡಿ- ತೋಳಿಗೆ ಪ್ಯಾಡ್ ಇವೆಲ್ಲವನ್ನೂ ಸಿಬ್ಬಂದಿ ಹೊಂದಿರುತ್ತಾರೆ. ಜತೆಗೆ ಎಸ್ ಪಿಜಿ ಬಳಿ ಆಧುನಿಕ ವಾಹನಗಳು ಇರುತ್ತವೆ. ಅವುಗಳಲ್ಲಿ ಶಸ್ತ್ರಾಸ್ತ್ರಗಳು ಇದ್ದು, ವಾಹನಗಳು ಬುಲೆಟ್ ಪ್ರೂಫ್ ಆಗಿರುತ್ತವೆ.

   ಭಾರತೀಯ ವಾಯು ಸೇನೆಯ ವಿಮಾನ, ಹೆಲಿಕಾಪ್ಟರ್ ಬಳಕೆ

   ಭಾರತೀಯ ವಾಯು ಸೇನೆಯ ವಿಮಾನ, ಹೆಲಿಕಾಪ್ಟರ್ ಬಳಕೆ

   ಬಿಎಂಡಬ್ಲ್ಯು 7 ಸಿರೀಸ್ ಕಾರುಗಳು, ರೇಂಜ್ ರೋವರ್ಸ್, ಬಿಎಂ ಡಬ್ಲ್ಯು, ಟೊಯೋಟಾ ಹಾಗೂ ಟಾಟಾ ನಿರ್ಮಿತ ಎಸ್ ಯುವಿಗಳು ಇರುತ್ತವೆ. ಎಸ್ ಪಿಜಿಯಿಂದ ಭಾರತೀಯ ವಾಯು ಸೇನೆಯ ವಿಮಾನ, ಹೆಲಿಕಾಪ್ಟರ್ ಕೂಡ ಬಳಸಲಾಗುತ್ತದೆ. ಗಣ್ಯರನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಕರೆದೊಯ್ಯುವಾಗ, ಸಲಕರಣೆ ಹಾಗೂ ವಾಹನಗಳನ್ನು ಸೇವೆಗಾಗಿ ಬಳಸುವಾಗ ವಾಯು ಸೇನೆ ನೆರವು ಪಡೆಯುತ್ತಾರೆ. ದೇಶದ ಒಳಗೆ ಅಥವಾ ಹೊರಗೆ ಪ್ರಯಾಣಿಸುವ ಅತಿ ಗಣ್ಯರ ಜತೆಗೆ ಎಸ್ ಪಿಜಿ ಸಿಬ್ಬಂದಿ ಕೂಡ ಪ್ರಯಾಣ ಮಾಡುತ್ತಾರೆ.

   English summary
   Now more discussion happening about SPG (Special Protection Group). Here is the explainer article about SPG.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more