ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಸಾಮಾಜಿಕ ಜಾಲತಾಣದಲ್ಲಿ ಜನತಾ ಕರ್ಫ್ಯೂ ನೆನಪು!

|
Google Oneindia Kannada News

ನವದೆಹಲಿ, ಮಾರ್ಚ್ 22: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿಗೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಒಂದು ವರ್ಷದ ಹಿಂದೆ ಇದೇ ಮಾರ್ಚ್ 22ರಂದು ಭಾರತೀಯರೆಲ್ಲ ಸ್ವಯಂಪ್ರೇರಿತರಾಗಿ 14 ಗಂಟೆಗಳ ಕಾಲ ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದರು.

ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಂದು ಸಾರ್ವಜನಿಕರು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೂ ಮನೆಯಿಂದ ಹೊರ ಬಾರದಂತೆ ಮನವಿ ಮಾಡಿಕೊಂಡಿದ್ದರು. ಸಂಜೆ 5 ಗಂಟೆಗೆ ಮನೆಯ ಬಾಲ್ಕನಿಗಳಲ್ಲಿ ಬಂದು ಚಪ್ಪಾಳೆ ತಟ್ಟಬೇಕು. ಆ ಮೂಲಕ ಕೊರೊನಾವೈರಸ್ ವಾರಿಯರ್ಸ್ ಸೇವೆಗೆ ಗೌರವ ಸೂಚಿಸಬೇಕು ಎಂದು ಮನವಿ ಮಾಡಿದ್ದರು.

"ಇಂದು ನಾನು ಪ್ರತಿಯೊಬ್ಬ ಸಾರ್ವಜನಿಕರಿಂದ ಹೆಚ್ಚಿನ ಸಹಕಾರವನ್ನು ಬಯಸುತ್ತಿದ್ದೇನೆ. ಜನರು ತಮಗೆ ತಾವೇ ಹಾಕಿಕೊಳ್ಳುವ ಕರ್ಫ್ಯೂ ಅನ್ನು ಜನತಾ ಕರ್ಫ್ಯೂ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ ಜನತಾ ಕರ್ಫ್ಯೂಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಸಾಮಾಜಿಕ ಜಾಲತಾಣ ಹಳೆ ನೆನಪುಗಳನ್ನು ಕೆದಕುತ್ತಿದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ಸಂದೇಶಗಳು ನೆನಪಿಸುತ್ತಿರುವ ಜನತಾ ಕರ್ಫ್ಯೂನ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಭಾರತೀಯರನ್ನು 14 ಗಂಟೆ ಮನೆಯಲ್ಲೇ ಕೂಡಿ ಹಾಕಿದ ಕೊರೊನಾ!ಭಾರತೀಯರನ್ನು 14 ಗಂಟೆ ಮನೆಯಲ್ಲೇ ಕೂಡಿ ಹಾಕಿದ ಕೊರೊನಾ!

ಹಾಸ್ಯದ ಮೂಲಕ ಜನತಾ ಕರ್ಫ್ಯೂ ಮೆಲುಕು

ಮಾರ್ಚ್ 22ರಂದು ಕೆಲವು ಜನರು ಗೋ ಕೊರೊನಾ ಗೋ ಎಂದು ಕೂಗಿದ ಪರಿ ಹೀಗಿತ್ತು.

ಪೋಗೋ ನೋಡುತ್ತಿರುವ ನಮ್ಮ ತಂಡ ಹೇಗಿದೆ?

ಪುಟ್ಟ ಮಕ್ಕಳು ಪೋಗೋ ನೋಡುತ್ತಿರುವ ಸಂದರ್ಭದಲ್ಲಿ ಬೆಕ್ಕು ಕೂಡಾ ಅವರೊಂದಿಗೆ ಇಣುಕಿ ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚಪ್ಪಾಳೆ ತಟ್ಟಿ ಅಂದ್ರೆ ಪ್ಲೇಟು ಬಾರಿಸುವುದೇ?

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧೆಯವರೆಗೂ ದೊಡ್ಡ ದೊಡ್ಡ ಪ್ಲೇಟುಗಳನ್ನು ಬಾರಿಸುತ್ತಾ ನಿಂತಿರುವುದು ಇಲ್ಲಿ ಕಂಡು ಬಂದಿದೆ.

ಪೀಸ್ ಪೀಸ್: ಇದು ತಾಟು ಪ್ಲೇಟುಗಳ ಕಥೆ

ಚಪ್ಪಾಳೆ ತಟ್ಟಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದರೆ, ಇಲ್ಲಿ ಮಕ್ಕಳು ಊಟದ ಪ್ಲೇಟುಗಳನ್ನು ನೆಲಕ್ಕೆ ಬಡಿಯುತ್ತಿರುವ ದೃಶ್ಯ ಹೀಗಿತ್ತು.

ಕೊರೊನಾವೈರಸ್ ಬಗ್ಗೆ ಸುಮಧುರ ಸಂಗೀತ

ಹಿಂದಿ ಹಾಡಿಗೆ ಕೊರೊನಾ ಸಾಹಿತ್ಯವನ್ನು ಮಿಶ್ರಣ ಮಾಡಿ ಸಂಯೋಜಿಸಿದ ಹಾಡು ಮತ್ತು ದೃಶ್ಯದ ಪರಿ ಹೀಗಿದೆ.

ದೇಶದಲ್ಲಿ ವಿವಿಧ ಹಂತಗಳಲ್ಲಿ ಲಾಕ್ ಡೌನ್ ಜಾರಿ

ದೇಶದಲ್ಲಿ ವಿವಿಧ ಹಂತಗಳಲ್ಲಿ ಲಾಕ್ ಡೌನ್ ಜಾರಿ

ಜನತಾ ಕರ್ಫ್ಯೂ ಯಶಸ್ವಿಯಾದ ಎರಡು ದಿನಗಳ ನಂತರ ದೇಶಾದ್ಯಂತ ಮೊದಲ ಹಂತದ ಲಾಕ್ ಡೌನ್ ಘೋಷಿಸಲಾಯಿತು. ಮಾರ್ಚ್ 24 ರಿಂದ 21 ದಿನಗಳವರೆಗೂ ಲಾಕ್ ಡೌನ್ ಘೋಷಿಸಲಾಗಿದ್ದು, ನಂತರದಲ್ಲಿ ಅದನ್ನು ಮೂರು ಬಾರಿ ವಿಸ್ತರಿಸಲಾಯಿತು. ಕೊನೆಯದಾಗಿ ಮೇ 18ರಂದು ಆರಂಭವಾದ ಭಾರತ ಲಾಕ್ ಡೌನ್ ಮೇ 31ಕ್ಕೆ ಅಂತ್ಯವಾಯಿತು. ಜೂನ್ 1ರಿಂದ ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಯಿತು.

English summary
Janata Curfew Completes 1 Year: Netizens In Twitter Remembers The Day With Memes. Take A Look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X