ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ಲಕ್ಷಣ ಹೇಗಿರುತ್ತದೆ?: ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಿಷ್ಟು..

|
Google Oneindia Kannada News

ನವದೆಹಲಿ, ಡಿಸೆಂಬರ್‌ 02: ಓಮಿಕ್ರಾನ್‌ ರೂಪಾಂತರ ಹೊಂದಿರುವ ರೋಗಿಗಳ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ದಕ್ಷಿಣ ಆಫ್ರಿಕಾದ ವೈದ್ಯರು ಹೊಸ ಕೋವಿಡ್‌ ರೂಪಾಂತರ ಓಮಿಕ್ರಾನ್‌ನ ಲಕ್ಷಣಗಳು ಅಸಾಮಾನ್ಯ ಆದರೆ ಸೌಮ್ಯವಾಗಿರುತ್ತವೆ ಎಂದು ತಿಳಿಸಿದ್ದಾರೆ. ಈ ಓಮಿಕ್ರಾನ್‌ ರೂಪಾಂತರವು ವಿಶ್ವದಲ್ಲೇ ಎಚ್ಚರಿಕೆಯ ಕರೆಗಂಟೆ ಆಗಿರುವ ನಡುವೆ ದಕ್ಷಿಣ ಆಫ್ರಿಕಾದ ವೈದ್ಯರು ಈ ರೂಪಾಂತರ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ರಾಜಧಾನಿ ಪ್ರಿಟೋರಿಯಾದಲ್ಲಿ ಓಮಿಕ್ರಾನ್‌ ರೋಗಿಗಳ ಬಗ್ಗೆ ಅಧ್ಯಯನವನ್ನು ಮಾಡಿ‌ದ್ದಾರೆ. ಆ ಬಳಿಕ ಈ ಓಮಿಕ್ರಾನ್‌ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. "ಈ ಹೊಸ ರೂಪಾಂತರ ಓಮಿಕ್ರಾನ್‌ ಕಾಣಿಸಿಕೊಳ್ಳುವ ಮೊದಲೇ ಈ ಹೊಸ ರೂಪಾಂತರದ ಸಾಧ್ಯತೆಯ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿತ್ತು," ಎಂದು ಡಾ ಏಂಜೆಲಿಕ್ ಕೋಟ್ಜಿ ಹೇಳಿದರು. ಡಾ ಏಂಜೆಲಿಕ್ ಕೋಟ್ಜಿ ಈ ಹಿಂದೆ ಓಮಿಕ್ರಾನ್‌ ಬಗ್ಗೆ ಎಚ್ಚರಿಕೆಯನ್ನು ಮೊದಲ ಬಾರಿಗೆ ನೀಡಿದವರು ಆಗಿದ್ದಾರೆ.ನ

ಓಮಿಕ್ರಾನ್‌ ದೃಢ: ಶೀಘ್ರ ಹೊಸ ಮಾರ್ಗಸೂಚಿ ಬಿಡುಗಡೆ ಎಂದ ಸಿಎಂ ಬೊಮ್ಮಾಯಿಓಮಿಕ್ರಾನ್‌ ದೃಢ: ಶೀಘ್ರ ಹೊಸ ಮಾರ್ಗಸೂಚಿ ಬಿಡುಗಡೆ ಎಂದ ಸಿಎಂ ಬೊಮ್ಮಾಯಿ

ಈ ಓಮಿಕ್ರಾನ್‌ ಕಾಣಿಸಿಕೊಂಡಿರುವ ಜನರಲ್ಲಿ ತೀವ್ರ ಆಯಾಸದಿಂದ ಬಳಲುತ್ತಿರುವ ವಿವಿಧ ಹಿನ್ನೆಲೆ ಹಾಗೂ ಜನಾಂಗೀಯ ಯುವಕರು ಇದ್ದಾರೆ. ಸೋಂಕಿತರಲ್ಲಿ ಅತಿ ಹೆಚ್ಚು ನಾಡಿಮಿಡಿತ ಹೊಂದಿರುವ ಆರು ವರ್ಷದ ಮಗು ಕೂಡಾ ಸೇರಿದೆ. ಆದರೆ ಈ ಓಮಿಕ್ರಾನ್‌ ರೋಗಿಗಳಲ್ಲಿ ಯಾರೂ ಕೂಡಾ ರುಚಿ ಅಥವಾ ವಾಸನೆಯ ನಷ್ಟದಿಂದ ಯಾರೂ ಬಳಲುತ್ತಿಲ್ಲ ಎಂದರು.

ಓಮಿಕ್ರಾನ್‌ನ ಲಕ್ಷಣಗಳು ಹೇಗಿದೆ?

ಓಮಿಕ್ರಾನ್‌ನ ಲಕ್ಷಣಗಳು ಹೇಗಿದೆ?

"ಓಮಿಕ್ರಾನ್‌ ಸೋಂಕಿತರಿಗೆ ಇರುವ ಲಕ್ಷಣಗಳು ಬೇರೆಯೇ ಆಗಿದೆ. ಈ ಲಕ್ಷಣಗಳು ಬಹಳ ಸೌಮ್ಯವಾಗಿದೆ. ಈ ಹಿಂದೆ ನಾವು ನೋಡಿದ ಬೇರೆ ರೂಪಾಂತರಗಳಿಗಿಂತ ಭಿನ್ನವಾಗಿದೆ," ಎಂದು ಡಾ ಏಂಜೆಲಿಕ್ ಕೋಟ್ಜಿ ತಿಳಿಸಿದರು. ಡಾ ಏಂಜೆಲಿಕ್ ಕೋಟ್ಜಿ 33 ವರ್ಷಗಳ ಕಾಲ ಮ್ಮ ಅಭ್ಯಾಸವನ್ನು ನಡೆಸುವುದರ ಜೊತೆಗೆ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷರಾಗಿದ್ದಾರೆ. ನವೆಂಬರ್ 18 ರಂದು ನಾಲ್ಕು ಕುಟುಂಬ ಸದಸ್ಯರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡ ಬಳಿಕ ಡಾ ಏಂಜೆಲಿಕ್ ಕೋಟ್ಜಿ ದೇಶದ ಲಸಿಕೆ ಸಲಹಾ ಸಮಿತಿಗೆ ಈ ಬಗ್ಗೆ ಅಧಿಕ ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ ಸುಮಾರು ಎರಡು ಡಜನ್‌ ರೋಗಿಗಳು ಹೊಸ ರೂಪಾಂತರದ ರೋಗ ಲಕ್ಷಣಗನ್ನು ಹೊಂದಿದ್ದು, ಅವರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಪೈಕಿ ಅಧಿಕ ಮಂದಿ ಆರೋಗ್ಯವಂತ ಪುರುಷರು ಆಗಿದ್ದಾರೆ. ಅವರದಲ್ಲಿ ಅಧಿಕವಾಗಿ ದಣಿವು ಕಾಣಿಸಿಕೊಂಡಿದೆ. ಇನ್ನು ಅರ್ಧದಷ್ಟು ಜನರು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿಲ್ಲ," ಎಂದು ಡಾ ಏಂಜೆಲಿಕ್ ಕೋಟ್ಜಿ ಹೇಳಿದರು.

ಓಮಿಕ್ರಾನ್‌ ಕುತೂಹಲಕಾರಿ ಪ್ರಕರಣ!

ಓಮಿಕ್ರಾನ್‌ ಕುತೂಹಲಕಾರಿ ಪ್ರಕರಣ!

"ಈ ನಡುವೆ ನಾವು ಒಂದು ಕುತೂಹಲಕಾರಿ ಪ್ರಕರಣವನ್ನು ಹೊಂದಿದ್ದೇವೆ, ಸುಮಾರು ಆರು ವರ್ಷ ವಯಸ್ಸಿನ ಮಗುವಿನಲ್ಲಿ ಕೋವಿಡ್‌ನ ಹೊಸ ರೂಪಾಂತರ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಮಗುವಿನ ತಾಪಮಾನ ಅಧಿಕವಾಗಿದೆ ಹಾಗೂ ಹೆಚ್ಚಿನ ನಾಡಿಮಿಡತ ಇದೆ. ಆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕೇ ಎಂಬ ಗೊಂದಲವೂ ಕೂಡಾ ಇತ್ತು. ಆದರೆ ಎರಡು ದಿನದಲ್ಲಿ ಆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ," ಎಂದು ತಿಳಿಸಿದರು.

ಲಸಿಕೆ ಪಡೆಯದ ವಯಸ್ಸಾದವರಿಗೆ ಓಮಿಕ್ರಾನ್‌ ಬಂದರೆ ಅಪಾಯ

ಲಸಿಕೆ ಪಡೆಯದ ವಯಸ್ಸಾದವರಿಗೆ ಓಮಿಕ್ರಾನ್‌ ಬಂದರೆ ಅಪಾಯ

ಇನ್ನು ಈ ಓಮಿಕ್ರಾನ್‌ ಹಿನ್ನೆಲೆ ಯಾರೆಲ್ಲಾ ಅಧಿಕ ಜಾಗರೂಕರಾಗಿರಬೇಕು ಎಂಬ ಬಗ್ಗೆಯೂ ಡಾ ಏಂಜೆಲಿಕ್ ಕೋಟ್ಜಿ ವಿವರಣೆ ನೀಡಿದ್ದಾರೆ. "ಹೆಚ್ಚಾಗಿ ಮಧುಮೇಹ ಅಥವಾ ಹೃದ್ರೋಗದಂತಹ ಸಹ ರೋಗಿಗಳಲ್ಲಿ ಹೆಚ್ಚಿನ ಲಕ್ಷಣಗಳು ಕಂಡು ಬರಬಹುದು. ಅವರು ಜಾಗೃತರಾಗಿರಬೇಕು. ಇನ್ನು ಈ ಸಂದರ್ಭದಲ್ಲಿ ನಾವು ಚಿಂತಿಸಬೇಕಾದ ಸಂಗತಿಯೆಂದರೆ ವಯಸ್ಸಾದವರದ್ದು. ಕೋವಿಡ್‌ ಲಸಿಕೆಯನ್ನು ಹಾಕದ ವಯಸ್ಸಾದವರಿಗೆ ಕೋವಿಡ್‌ ಸೋಂಕು ಬಂದರೆ ಅಧಿಕ ಅಪಾಯವಿದೆ. ಲಸಿಕೆ ಹಾಕದ ಹಿನ್ನೆಲೆಯಿಂದಾಗಿ ನಾವು ತೀವ್ರವಾದ ಕಾಯಿಲೆ ಹೊಂದಿರುವ ಅನೇಕ ಜನರನ್ನು ನಾವು ನೋಡಲಿದ್ದೇವೆ," ಎಂದು ವಿವರಿಸಿದರು.

ದೇಶದ ಮೊದಲ ಓಮಿಕ್ರಾನ್‌ ಪ್ರಕರಣ ಕರ್ನಾಟಕದಲ್ಲಿ ಪತ್ತೆ

ದೇಶದ ಮೊದಲ ಓಮಿಕ್ರಾನ್‌ ಪ್ರಕರಣ ಕರ್ನಾಟಕದಲ್ಲಿ ಪತ್ತೆ

ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಕಂಡು ಬಂದಿದೆ. ಓಮಿಕ್ರಾನ್ ಪ್ರಕರಣ ಪತ್ತೆಯಾಗಿರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ದಕ್ಷಿಣ ಆಫ್ರಿಕಾದಿಂದ ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿರುವ 66 ವರ್ಷದ ಓರ್ವ ವೃದ್ಧ ಹಾಗೂ 46 ವರ್ಷದ ವ್ಯಕ್ತಿಗೆ ಸೋಂಕು ಕಂಡು ಬಂದಿತ್ತು. ಓಮಿಕ್ರಾನ್ ಪ್ರಕರಣ ಪತ್ತೆ ಹಚ್ಚಲು ಜಿನೋಮ್ ಪರೀಕ್ಷೆ ಸೇರಿದಂತೆ ಹೆಚ್ಚಿನ ತಪಾಸಣೆಗೆ ಸ್ಯಾಂಪಲ್ ಗಳನ್ನು ಕಳಿಸಲಾಗಿತ್ತು. ಇಂದು(ಡಿ.2) ಓಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

English summary
Omicron symptoms are unusual but mild says South African doctor who raised alarm about omicron variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X