ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ರೂಪಾಂತರ ಯಾವೆಲ್ಲಾ ದೇಶದಲ್ಲಿ ಪತ್ತೆಯಾಗಿದೆ?, ಇಲ್ಲಿದೆ ಪಟ್ಟಿ

|
Google Oneindia Kannada News

ಕೋವಿಡ್‌ನ ಹೊಸ ರೂಪಾಂತರ ಓಮಿಕ್ರಾನ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆ "ಕಾಳಜಿಯ ರೂಪಾಂತರ" ಎಂದು ಕರೆದಿದೆ. ಈ ಹೊಸ ರೂಪಾಂತರದ ಬಗ್ಗೆ ಈಗಾಗಲೇ ಅಧ್ಯಯನವು ಆರಂಭ ಆಗಿದೆ. ಈ ಹೊಸ ರೂಪಾಂತರವು ವಿಶ್ವದಾದ್ಯಂತ ಒಂದು ಎಚ್ಚರಿಕೆಯ ವಾತಾವರಣವನ್ನು ಸೃಷ್ಟಿ ಮಾಡಿದೆ.

ಈ ಹೊಸ ರೂಪಾಂತರದ ಬಗ್ಗೆ ಇನ್ನೂ ಕೂಡಾ ಸಂಶೋಧನೆಗಳು ನಡೆಯುತ್ತಿದೆ. ಈ ನಡುವೆ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಈ ಹೊಸ ರೂಪಾಂತರವು ಕಾಳಜಿಯುತವಾದ ರೂಪಾಂತರ ಎಂದು ಕರೆದಿದೆ. ಈ ಹೊಸ ರೂಪಾಂತರ ಓಮಿಕ್ರಾನ್ ಹರಡುವಿಕೆ, ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಕೊರೊನಾ ವೈರಸ್‌ ರೂಪಾಂತರವು ಈ ಹಿಂದಿನ ರೂಪಾಂತರಗಳಿಗಿಂತ ಅಧಿಕ ಸಾಂಕ್ರಾಮಿಕ ಎಂದು ನಂಬಲಾಗಿದೆ. ಆದರೆ ಈ ಓಮಿಕ್ರಾನ್‌ ಗಂಭೀರವಾದ ಅಥವಾ ಹೆಚ್ಚು ಸೌಮ್ಯವಾದ ಲಕ್ಷಣವನ್ನು ಹೊಂದಿರಲಿದೆಯೇ ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ.

ಕೋವಿಡ್‌ನ ಈ ರೂಪಾಂತರಗಳ ಬಗ್ಗೆ ನೀವು ತಿಳಿಯಲೇಬೇಕು..ಕೋವಿಡ್‌ನ ಈ ರೂಪಾಂತರಗಳ ಬಗ್ಗೆ ನೀವು ತಿಳಿಯಲೇಬೇಕು..

ಹೊಸ ಕೋವಿಡ್‌ ರೂಪಾಂತರದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ..ಹೊಸ ಕೋವಿಡ್‌ ರೂಪಾಂತರದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ..

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರಿಗೆ ಕೊರೊನಾವೈರಸ್ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರಿಗೆ ಕೊರೊನಾವೈರಸ್

"ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ವಿರುದ್ಧದ ಹೋರಾಟಕ್ಕೆ ನಮಗೆ ವಿಜ್ಞಾನ ಆಧಾರಿತ ತಂತ್ರದ ಅಗತ್ಯವಿದೆ. ಡೆಲ್ಟಾಕ್ಕಿಂತಲೂ ಅತಿ ವೇಗವಾಗಿ ಈ ರೂಪಾಂತರ ಹರಡುವ ಸಾಧ್ಯತೆಗಳು ಇದೆ. ಈ ಬಗ್ಗೆ ಅಧಿಕ ಮಾಹಿತಿ ಶೀಘ್ರವೇ ಲಭಿಸಲಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಸಂಶೋಧಕಿ ಡಾ. ಸೌಮ್ಯ ಸ್ವಾಮಿನಾಥನ್‌ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ಹೊಸ ರೂಪಾಂತರ ಓಮಿಕ್ರಾನ್‌ B.1.1.529 ಈಗ ಸುತ್ತಮುತ್ತಲಿನ ಕೆಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ಹಾಗಾದರೆ ಈವರೆಗೆ ಯಾವೆಲ್ಲಾ ದೇಶಗಳಲ್ಲಿ ಈ ಓಮಿಕ್ರಾನ್‌ ಕಾಣಿಸಿಕೊಂಡಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಹೊಸ ರೂಪಾಂತರ

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಹೊಸ ರೂಪಾಂತರ

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕೋವಿಡ್‌ನ ಹೊಸ ರೂಪಾಂತರ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಇದರ ಹೊಸ ರೂಪಾಂತರ B.1.1.529 ಆಗಿದೆ. ನವೆಂಬರ್‌ 24 ರಂದು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಈ ಹೊಸ ಕೋವಿಡ್‌ ರೂಪಾಂತರವು ಕಾಣಿಸಿಕೊಂಡಿದೆ. ಹಲವಾರು ದೇಶಗಳು ಈಗ ದಕ್ಷಿಣ ಆಫ್ರಿಕಾಕ್ಕೆ ನಿರ್ಬಂಧವನ್ನು ವಿಧಿಸಿದೆ. ಈ ನಡುವೆ ಈ ನಿರ್ಬಂಧ ವಿಧಿಸಿರುವುದಕ್ಕೆ ದಕ್ಷಿಣ ಆಫ್ರಿಕಾ ಅಸಮಾಧಾನ ವ್ಯಕ್ತಪಡಿಸಿದೆ.

ಬ್ರಿಟನ್‌ನಲ್ಲಿ ಓಮಿಕ್ರಾನ್‌

ಬ್ರಿಟನ್‌ನಲ್ಲಿ ಓಮಿಕ್ರಾನ್‌

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಓಮಿಕ್ರಾನ್‌ ಕೊರೊನಾವೈರಸ್‌ ರೂಪಾಂತರದ ಎರಡು ಪ್ರಕರಣಗಳು ಬ್ರಿಟನ್‌ನಲ್ಲಿಯೂ ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಿಂದ ಬಂದ ಪ್ರಯಾಣಿಕರಲ್ಲಿ ಕೊರೊನಾ ವೈರಸ್‌ನ ಈ ಹೊಸ ರೂಪಾಂತರ ಓಮಿಕ್ರಾನ್‌ ಶನಿವಾರ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಸಜಿದ್‌ ಜಾವಿದ್‌ ಶನಿವಾರ ಮಾಹಿತಿ ನೀಡಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಓಮಿಕ್ರಾನ್‌

ಹಾಂಗ್‌ಕಾಂಗ್‌ನಲ್ಲಿ ಓಮಿಕ್ರಾನ್‌

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ B.1.1.529 ಪತ್ತೆಯಾದ ಬೆನ್ನಲ್ಲೇ ಹಾಂಗ್‌ಕಾಂಗ್‌ನಲ್ಲಿ ಇಬ್ಬರಲ್ಲಿ ಈ ಹೊಸ ರೂಪಾಂತರ ಓಮಿಕ್ರಾನ್‌ ಪತ್ತೆಯಾಗಿದೆ. ಈ ಕಾರಣದಿಂದಾಗಿ ಹಾಂಗ್‌ಕಾಂಗ್‌ ದಕ್ಷಿಣ ಆಫ್ರಿಕ ದೇಶಗಳ ಎಲ್ಲಾ ಪ್ರಯಾಣಿಕರಿಗೆ ಹಾಗೂ ವಿಮಾನಗಳಿಗೆ ನಿರ್ಬಂಧವನ್ನು ವಿಧಿಸಿದೆ.

ಬೆಲ್ಜಿಯಂನಲ್ಲಿ ಓಮಿಕ್ರಾನ್‌

ಬೆಲ್ಜಿಯಂನಲ್ಲಿ ಓಮಿಕ್ರಾನ್‌

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್‌ ರೂಪಾಂತರ ಓಮಿಕ್ರಾನ್‌ ಬೆಲ್ಜಿಯಂನಲ್ಲಿಯೂ ಪತ್ತೆಯಾಗಿದೆ. ಶುಕ್ರವಾರ ಬೆಲ್ಜಿಯಂನಲ್ಲಿ ಕೋವಿಡ್‌ ಹೊಸ ರೂಪಾಂತರ ದೃಢಪಟ್ಟಿದೆ. ದೇಶದಲ್ಲಿ ಕೋವಿಡ್‌ನ ನಾಲ್ಕನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಆರೋಗ್ಯ ಸಚಿವ ಫ್ರಾಂಕ್ ವಂಡೆನ್ಬ್ರೂಕ್ ಪ್ರಕಾರ, ಕೋವಿಡ್‌ ಲಸಿಕೆಯನ್ನು ಪಡೆಯದ ವ್ಯಕ್ತಿಯಲ್ಲಿ ಈ ರೂಪಾಂತರವು ಪತ್ತೆಯಾಗಿದೆ.

ಬೋಟ್ಸ್ವಾನಲ್ಲಿ ಓಮಿಕ್ರಾನ್‌

ಬೋಟ್ಸ್ವಾನಲ್ಲಿ ಓಮಿಕ್ರಾನ್‌

ಬೋಟ್ಸ್ವಾನದಲ್ಲಿ ಮೂವರಲ್ಲಿ ಕೋವಿಡ್‌ನ ಹೊಸ ರೂಪಾಂತರವು ಪತ್ತೆಯಾಗಿದೆ. ಈ ರೂಪಾಂತರವನ್ನು ಬೋಟ್ಸ್ವಾನ ರೂಪಾಂತರ ಎಂದು ಕೂಡ ಕರೆಯಲಾಗು‌ತ್ತದೆ. ಈ ರೂಪಾಂತರ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದರೂ ಕೂಡಾ ಇದು ಬೋಟ್ಸ್ವಾನದಲ್ಲಿ ಹುಟ್ಟಿಕೊಂಡಿದೆ ಎಂಬ ಅಭಿಪ್ರಾಯಗಳು ಕೂಡಾ ವ್ಯಕ್ತವಾಗಿದೆ. ಈ ಹಿನ್ನೆಲೆಯಿಂದಾಗಿ ಈ ಹೊಸ ರೂಪಾಂತರವನ್ನು ಬೋಟ್ಸ್ವಾನ ರೂಪಾಂತರ ಎಂದು ಕರೆಯಲಾಗುತ್ತಿದೆ. ಈ ರೂಪಾಂತರದಲ್ಲಿ ಸುಮಾರು 50 ಕ್ಕೂ ಅಧಿಕ ತಳಿಗಳು ಇರುವ ಕಾರಣ ಇದು ಅಧಿಕ ಪರಿಣಾಮವನ್ನು ಉಂಟು ಮಾಡಲಿದೆ ಎಂದು ನಂಬಲಾಗಿದೆ.

ಜರ್ಮನಿ ಓಮಿಕ್ರಾನ್‌

ಜರ್ಮನಿ ಓಮಿಕ್ರಾನ್‌

ಜರ್ಮನಿಗೆ ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಈತನಿಗೆ ಹೊಸ ಕೋವಿಡ್ ರೂಪಾಂತರ ಇರಬಹುದು ಎಂದು ನಂಬಲಾಗಿತ್ತು. ಈಗ ಇಬ್ಬರಲ್ಲಿ ಹೊಸ ರೂಪಾಂತರ ಓಮಿಕ್ರಾನ್‌ ಖಚಿತವಾಗಿದೆ.

ಇಸ್ರೇಲ್‌ನಲ್ಲಿ ಓಮಿಕ್ರಾನ್‌

ಇಸ್ರೇಲ್‌ನಲ್ಲಿ ಓಮಿಕ್ರಾನ್‌

ಇಸ್ರೇಲ್‌ನಲ್ಲಿಯೂ ಕೂಡಾ ಹೊಸ ಕೋವಿಡ್‌ ರೂಪಾಂತರ ಓಮಿಕ್ರಾನ್‌ ಪತ್ತೆಯಾಗಿದೆ. ಮಾಲಾವಿಯಿಂದ ಬಂದ ವ್ಯಕ್ತಿಯಲ್ಲಿ ಈ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಬೇರೆ ಇಬ್ಬರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇನ್ನು ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧವನ್ನು ಕೂಡಾ ವಿಧಿಸಲಾಗಿದೆ.

English summary
Omicron strain: List Of Countries That Have Reported New Variant Of Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X