ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ಆತಂಕ: ವಿವಿಧ ದೇಶಗಳ ಪ್ರಯಾಣ ಮಾರ್ಗಸೂಚಿ ಹೀಗಿದೆ..

|
Google Oneindia Kannada News

ವಿಶ್ವದಲ್ಲಿ ಓಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಲೇ ಇದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ವಿಶ್ವದ ಹಲವಾರು ದೇಶಗಳಲ್ಲಿ ಈಗಾಗಲೇ ಆತಂಕವನ್ನು ಮೂಡಿಸಿದೆ. ಹಾಗೆಯೇ ಕೋವಿಡ್‌ನ ಹೊಸ ಅಲೆಯ ಆತಂಕವನ್ನು ಉಂಟು ಮಾಡಿದೆ.

ಯುನೈಟೆಡ್‌ ಸ್ಟೇಟ್ಸ್‌, ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯಾ ಮೊದಲಾದ ದೇಶದಲ್ಲಿ ಓಮಿಕ್ರಾನ್‌ ಹಿನ್ನೆಲೆಯಿಂದಾಗಿ ಈಗಾಗಲೇ ಪ್ರಯಾಣ ಮಾರ್ಗಸೂಚಿಯನ್ನು ಕಠಿಣ ಮಾಡಲಾಗಿದೆ. ಯುಕೆಯಲ್ಲಿ ಓಮಿಕ್ರಾನ್‌ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ವಿಶ್ವದಲ್ಲೆ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ವರದಿ ಆಗಿರುವ ಯುಕೆಯಲ್ಲಿ ಈ ಹೊಸ ರೂಪಾಂತರ ಎಚ್ಚರಿಕೆಯ ಕರೆಗಂಟೆಯಾಗಿದೆ. ಇನ್ನು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಈವರೆಗೂ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿಗೆ ಓಮಿಕ್ರಾನ್‌ ಸೋಂಕು ತಗುಲಿದೆ ಎಂದು ವರದಿ ಆಗಿದೆ. ಆದರೆ ಕೇವಲ ಹತ್ತು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಓಮಿಕ್ರಾನ್ ಎಚ್ಚರಿಕೆ: ಅನಗತ್ಯ ಪ್ರಯಾಣ, ಕೂಟಗಳಿಂದ ದೂರವಿರಿ ಓಮಿಕ್ರಾನ್ ಎಚ್ಚರಿಕೆ: ಅನಗತ್ಯ ಪ್ರಯಾಣ, ಕೂಟಗಳಿಂದ ದೂರವಿರಿ

ಇನ್ನು ಯುಕೆ ಮಾತ್ರವಲ್ಲದೇ ಆಸ್ಟ್ರೇಲಿಯಾ, ಯುಎಸ್‌ನಲ್ಲೂ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ಏರಿಕೆ ಕಾಣುತ್ತಿದೆ. ಭಾರತದಲ್ಲಿ 101 ಓಮಿಕ್ರಾನ್‌ ಪ್ರಕರಣಗಳು ಈವರೆಗೆ ದಾಖಲು ಆಗಿದೆ. ಈ ಪೈಕಿ ಮಹಾರಾಷ್ಟ್ರ, ದೆಹಲಿ, ಮುಂಬೈನಲ್ಲಿ ಹೆಚ್ಚು ಓಮಿಕ್ರಾನ್‌ ಪ್ರಕರಣ ವರದಿ ಆಗಿದೆ. ಇನ್ನು ಓಮಿಕ್ರಾನ್ ಹಿನ್ನೆಲೆಯಿಂದಾಗಿ ವಿಶ್ವದ ಹಲವಾರು ದೇಶಗಳು ಪ್ರಯಾಣ ಮಾರ್ಗಸೂಚಿಯನ್ನು ಬದಲಾವಣೆ ಮಾಡಿಕೊಂಡಿದೆ. ಹಾಗಾದರೆ ಯಾವ ದೇಶದಲ್ಲಿ ಹೇಗಿದೆ ಮಾರ್ಗಸೂಚಿ ಎಂದು ತಿಳಿಯಲು ಮುಂದೆ ಓದಿ...

ಯುನೈಟೆಡ್‌ ಸ್ಟೇಟ್ಸ್‌ ಮಾರ್ಗಸೂಚಿ

ಯುನೈಟೆಡ್‌ ಸ್ಟೇಟ್ಸ್‌ ಮಾರ್ಗಸೂಚಿ

ಗುರುವಾರ ನ್ಯೂಯಾರ್ಕ್‌ನಲ್ಲಿ 18,276 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿ ಆಗಿದೆ. ಈ ನಡುವೆ ಓಮಿಕ್ರಾನ್‌ ಕೂಡಾ ಕಾಣಿಸಿಕೊಂಡಿದೆ, ಆ ನಿಟ್ಟಿನಲ್ಲಿ ಯುಎಸ್‌ ಪ್ರಯಾಣ ಮಾರ್ಗಸೂಚಿಯನ್ನು ಬಿಗಿಗೊಳಿಸಿದೆ. ಯುಎಸ್‌ ಮಣ್ಣಿಗೆ ಕಾಲಿಡುವ 24 ಗಂಟೆಯೊಳಗೆ ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಯುಎಸ್‌ ತಿಳಿಸಿದೆ. ಮುಂದಿನ ವರ್ಷ ಮಾರ್ಚ್‌ವರೆಗೆ ಬಸ್‌, ರೈಲು, ವಿಮಾನದಲ್ಲಿ ಮಾಸ್ಕ್‌ ಧರಿಸುವುದನ್ನು ಯುಎಸ್‌ ಕಡ್ಡಾಯಗೊಳಿಸಿದೆ. ಇನ್ನು ಎಲ್ಲ ಜನರು ಕೋವಿಡ್‌ ಲಸಿಕೆಯನ್ನು ಪಡೆದುಕೊಳ್ಳಿ ಎಂದು ಅಧ್ಯಕ್ಷ ಜೋ ಬೈಡೆನ್‌ ಮನವಿ ಮಾಡಿದ್ದಾರೆ. ಹಾಗೆಯೇ ವಯಸ್ಕರು ಬೂಸ್ಟರ್‌ ಶಾಟ್‌ ಪಡೆಯುವಂತೆ ಹಾಗೂ ಮಕ್ಕಳು ಕೋವಿಡ್‌ ಲಸಿಕೆಯನ್ನು ಪಡೆಯುವಂತೆಯೂ ಒತ್ತಾಯ ಮಾಡಿದ್ದಾರೆ.

ಯುನೈಟೆಡ್‌ ಕಿಂಗ್‌ಡಮ್‌ ಪ್ರಯಾಣ ಮಾರ್ಗಸೂಚಿ

ಯುನೈಟೆಡ್‌ ಕಿಂಗ್‌ಡಮ್‌ ಪ್ರಯಾಣ ಮಾರ್ಗಸೂಚಿ

ಯುಕೆಯಲ್ಲಿ ಸತತ ಎರಡನೇ ದಿನ ಕೋವಿಡ್‌ ಪ್ರಕರಣ ಸ್ಫೋಟವಾಗಿದೆ. ಬ್ರಿಟನ್‌ನಲ್ಲಿ 88,376 ಹೊಸ ಕೋವಿಡ್‌ ಪ್ರಕರಣಗಳು ವರದಿ ಆಗಿದ್ದು, ಇಲ್ಲಿ ಕೋವಿಡ್‌ ಪ್ರಕರಣ ವರದಿ ಆದಾಗಿನಿಂದ ಅತೀ ಹೆಚ್ಚು ಪ್ರಕರಣ ಇದಾಗಿದೆ. ಯುಕೆ ಪ್ರಧಾನಿ ಬೊರಿಸ್ ಜಾನ್ಸನ್‌ರ ವಕ್ತಾರ ಮಾಕ್ಸ್‌ ಬ್ಲೇನ್‌, "ವಿಶ್ವದಲ್ಲಿ ಈಗ ಓಮಿಕ್ರಾನ್‌ ಪ್ರಕರಣವು ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಪ್ರಯಾಣ ಮಾರ್ಗಸೂಚಿಯನ್ನು ಕಠಿಣಗೊಳಿಸಿದ್ದೆವು. ಕೆಂಪು ಪಟ್ಟಿಯಲ್ಲಿರುವ ದೇಶದಿಂದ ನಮ್ಮ ದೇಶಕ್ಕೆ ಬರುವುದಕ್ಕೆ ನಿರ್ಬಂಧವನ್ನು ಹೇರಿದ್ದೆವು, ಅದನ್ನು ಸಡಿಲಿಕೆ ಮಾಡಲಾಗುವುದು," ಎಂದು ಓಮಿಕ್ರಾನ್‌ ಆತಂಕದ ನಡುವೆ ಹೇಳಿದ್ದಾರೆ. ಯುಕೆಯು ಹನ್ನೊಂದು ಆಫ್ರಿಕನ್‌ ದೇಶಗಳ ಮೇಲಿನ ನಿರ್ಬಂಧವನ್ನು ಹಿಂಪಡೆಯುತ್ತದೆ. ದಕ್ಷಿಣ ಆಫ್ರಿಕಾದ ಮೇಲಿನ ನಿರ್ಬಂಧವನ್ನು ಕೂಡಾ ಹಿಂಪಡೆಯಲು ಯುಕೆ ಮುಂದಾಗಿದೆ. ಪ್ರಸ್ತುತ ಕೇವಲ ಬ್ರಿಟಿಷ್‌ ಹಾಗೂ ಐರಿಷ್‌ ನಾಗರಿಕರು ಮಾತ್ರ ಈ ಕೆಂಪು ಪಟ್ಟಿಯಲ್ಲಿರುವ ದೇಶದಿಂದ ಯುಕೆಗೆ ಪ್ರಯಾಣ ಮಾಡಬಹುದಾಗಿದೆ. ಆದರೆ ಹೊಟೇಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿದೆ.

ಆಸ್ಟ್ರೇಲಿಯಾ ಮಾರ್ಗಸೂಚಿ

ಆಸ್ಟ್ರೇಲಿಯಾ ಮಾರ್ಗಸೂಚಿ

ಆಸ್ಟ್ರೇಲಿಯಾದಲ್ಲಿ ಶುಕ್ರವಾರ 2,213 ಹೊಸ ಕೋವಿಡ್‌ ಪ್ರಕರಣಗಳು ವರದಿ ಆಗಿದೆ. ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಆರಂಭದಿಂದಲೇ ಇದು ಅತೀ ಅಧಿಕ ಪ್ರಕರಣವಾಗಿದೆ. ನ್ಯೂ ಸೌತ್‌ ವೇಲ್ಸ್‌ನಲ್ಲಿ ಕೋವಿಡ್‌ ಸ್ಪೋಟವಾಗಿದೆ. ಗುರುವಾರ 1,742 ಪ್ರಕರಣಗಳು ವರದಿ ಆಗಿದೆ. ಆಸ್ಟ್ರೇಲಿಯಾವು ಎಂಟು ದಕ್ಷಿಣ ಆಫ್ರಿಕನ್‌ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧವನ್ನು ಹೇರಿದೆ. ಈ ನಿಷೇಧಿತ ರಾಷ್ಟ್ರದಲ್ಲಿ ಇರುವವರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಮಾಡಲು ಅವಕಾಶವಿಲ್ಲ. ಈ ನಿಷೇಧಿತ ದೇಶದಲ್ಲಿ ಇರುವ ಆಸ್ಟ್ರೇಲಿಯ ಪ್ರಜೆಗಳು, ಆಸ್ಟ್ರೇಲಿಯಾದ ಖಾಯಂ ನಾಗರಿಕರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ.

ಫ್ರಾನ್ಸ್‌ ಪ್ರಯಾಣ ಮಾರ್ಗಸೂಚಿ

ಫ್ರಾನ್ಸ್‌ ಪ್ರಯಾಣ ಮಾರ್ಗಸೂಚಿ

ಫ್ರಾನ್ಸ್‌ನಲ್ಲಿ ಓಮಿಕ್ರಾನ್‌ ಪ್ರಕರಣಗಳ ಏರಿಕೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಫ್ರಾನ್ಸ್‌ ಬ್ರಿಟನ್‌ನಿಂದ ಹಾಗೂ ಬ್ರಿಟನ್‌ಗೆ ಪ್ರಯಾಣವನ್ನು ನಿರ್ಬಂಧ ಮಾಡಲು ಮುಂದಾಗಿದೆ. ಈ ಹೊಸ ಪ್ರಯಾಣ ನಿರ್ಬಂಧವು ಮುಂದಿನ ವಾರದಿಂದ ಜಾರಿಗೆ ಬರಲಿದೆ ಎಂದು ಸರ್ಕಾರವು ಗುರುವಾರ ಹೇಳಿದೆ. ಇನ್ನು ಯುಕೆಯಿಂದ ಫ್ರೆಂಚ್‌ ನಾಗರಿಕರು ಹಾಗೂ ಇಯು ರಾಷ್ಟ್ರದವರು ಬರಬಹುದು ಎಂದು ಕೂಡಾ ಸರ್ಕಾರ ಹೇಳಿದೆ. ಆದರೆ ಪ್ರಯಾಣಿಕರು ಪ್ರಯಾಣ ಮಾಡುವ 24 ಗಂಟೆಯೊಳಗೆ ಮಾಡಿದ ಕೋವಿಡ್‌ ಪರೀಕ್ಷಾ ವರದಿಯನ್ನು ಹೊಂದಿರಬೇಕಾಗಿದೆ. ಹಾಗೆಯೇ ಫ್ರಾನ್ಸ್‌ಗೆ ಬರುವವರು ಕ್ವಾರಂಟೈನ್‌ ಆಗುವುದು ಕಡ್ಡಾಯವಾಗಿದೆ.

ಜರ್ಮನಿ ಮಾರ್ಗಸೂಚಿ

ಜರ್ಮನಿ ಮಾರ್ಗಸೂಚಿ

ವಿದೇಶದಿಂದ ಜರ್ಮನಿಗೆ ಆಗಮಿಸುವ 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರು ಕೋವಿಡ್‌ ನೆಗೆಟಿವ್‌ ವರದಿ ಅಥವಾ ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಪಡೆದ ಪ್ರಮಾಣಪತ್ರ ಅಥವಾ ಕೋವಿಡ್‌ ಸೋಂಕಿನಿಂದ ಗುಣಮುಖರಾದ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ದಾಖಲೆಗಳನ್ನು ಜರ್ಮನಿಗೆ ಬರುವ ಮುನ್ನವೇ ವಿಮಾನ ನಿಲ್ದಾಣದಲ್ಲಿ ತೋರಿಸುವುದು ಮುಖ್ಯವಾಗಿದೆ.

ಭಾರತದಲ್ಲಿ ಹೇಗಿದೆ ಮಾರ್ಗಸೂಚಿ?

ಭಾರತದಲ್ಲಿ ಹೇಗಿದೆ ಮಾರ್ಗಸೂಚಿ?

ಡಿಸೆಂಬರ್‌ 20 ರಿಂದ ಭಾರತಕ್ಕೆ ಆಗಮಿಸುವವರಿಗೆ ಭಾರತ ಸರ್ಕಾರವು ಹೊಸ ಪ್ರಯಾಣ ಮಾರ್ಗಸೂಚಿಯನ್ನು ಹೊರಡಿಸಿದೆ. ಓಮಿಕ್ರಾನ್‌ ಸೋಂಕಿನ ಆತಂಕದ ನಡುವೆ, ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. "ಅಧಿಕ ಅಪಾಯಯುತ ಎಂದು ಗುರುತಿಸಲಾದ ದೇಶದಿಂದ ಬರುವವರು ಮೊದಲೇ ಏರ್‌ ಸುವಿಧ ಪೋರ್ಟಲ್‌ ಮೂಲಕ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಅತೀ ಅಪಾಯಯುತ ದೇಶದಿಂದ ಆಗಮಿಸುವವರು ಪ್ರಯಾಣ ಮಾಡುವುದಕ್ಕೂ ಮುನ್ನವೇ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಹಾಗೆಯೇ ಈ ಅಪಾಯಯುತ ದೇಶಕ್ಕೆ 14 ದಿನದೊಳಗೆ ಪ್ರಯಾಣ ಮಾಡಿದವರು ಕೂಡಾ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಮೊದಲೇ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಈ ಪ್ರೀ ಬುಕ್ಕಿಂಗ್‌ ಟೆಸ್ಟ್‌ ನಡೆಯಲಿದೆ. ಇನ್ನು "ಈ ರೀತಿಯಾಗಿ ಪ್ರೀ ಬುಕ್ಕಿಂಗ್‌ ಮಾಡದವರಿಗೆ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ಹೇರಲ್ಲ," ಎಂದು ಸಚಿವಾಲಯ ತಿಳಿಸಿದೆ.

English summary
Omicron scare: Here's details about travel restrictions in various countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X