ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೂಪಾಂತರಿ 'ಓಮ್ರಿಕಾನ್': ಹಸಿಹಸಿ ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ

|
Google Oneindia Kannada News

ದಕ್ಷಿಣ ಆಫ್ರಿಕಾದಿಂದ ಹೊರಟಿರುವ ಕೊರೊನಾ ಸೋಂಕಿನ ಹೊಸ ರೂಪಾಂತರಿ ಓಮಿಕ್ರಾನ್ ಎಷ್ಟು ಅಪಾಯಕಾರಿ ಎನ್ನುವ ವಿಚಾರದಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಹಾಗಂತೆ, ಹೀಗಂತೆ, ಲಾಕ್ ಡೌನ್ ಅಂತೆ ಎನ್ನುವ ಗಾಳಿಸುದ್ದಿ ಸುಂಟರಗಾಳಿಯಂತೆ ಬೀಸುತ್ತಿದೆ.

ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯ ವೇಳೆ ತಮ್ಮ ವಿಶಿಷ್ಟವಾದ ಚಿಕಿತ್ಸೆ ಮತ್ತು ಜನರಿಗೆ ಧೈರ್ಯ ತುಂಬುವ ಕೆಲಸದಿಂದ ಮನೆಮಾತಾಗಿರುವ ಖ್ಯಾತ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರು ಓಮಿಕ್ರಾನ್ ಬಗ್ಗೆ ವಿಡಿಯೋ ಒಂದರ ಮೂಲಕ ಸಂದೇಶವನ್ನು ನೀಡಿದ್ದಾರೆ.

ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದೀರಾ? ಓಮಿಕ್ರಾಮ್‌ನಿಂದ ನೀವೆಷ್ಟು ಸುರಕ್ಷಿತ ಎಂದು ತಿಳಿಯಿರಿಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದೀರಾ? ಓಮಿಕ್ರಾಮ್‌ನಿಂದ ನೀವೆಷ್ಟು ಸುರಕ್ಷಿತ ಎಂದು ತಿಳಿಯಿರಿ

ವೃತ್ತಿಯಲ್ಲಿ ತಾವೊಬ್ಬರು ವೈದ್ಯರಾಗಿದ್ದರೂ, ಕೊರೊನಾದಿಂದ ಹೇಗೆ ಖಾಸಗಿ ಲಾಬಿಗಳು ಲಾಭವನ್ನು ಮಾಡಿಕೊಳ್ಳುತ್ತಿವೆ ಎನ್ನುವುದರ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಡಾ.ರಾಜು ಅವರು ವಿವರಣೆಯನ್ನು ನೀಡಿದ್ದರು.

ಈಗ, ಓಮಿಕ್ರಾನ್ ಬಗ್ಗೆ ಮಾತನಾಡಿರುವ ಡಾ.ರಾಜು, ಈಗ ಹರಿದಾಡುತ್ತಿರುವ ಸುದ್ದಿಯನ್ನು ಯಾರೂ ನಂಬಬೇಡಿ, ಜನರು ಭಯಭೀತರಾಗುವುದಕ್ಕೆ ಯಾವುದೇ ಕಾರಣಗಳು ನನಗೆ ಕಾಣಿಸುತ್ತಿಲ್ಲ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ. ಓಮ್ರಿಕಾನ್ ಎಷ್ಟು ಅಪಾಯಕಾರಿ? ಮುಂದೆ ಓದಿ..

ಕೊರೊನಾ ಹಿಂದಿನ ಸ್ಪೂರ್ತಿದಾಯಕ/ಮಾನವೀಯತೆಯ ಕಥೆಗಳ FB ಸಂವಾದ

ಕೊರೊನಾ ಹಿಂದಿನ ಸ್ಪೂರ್ತಿದಾಯಕ/ಮಾನವೀಯತೆಯ ಕಥೆಗಳ FB ಸಂವಾದ ಅತಿಥಿ: ಡಾ.ರಾಜು ಕೃಷ್ಣಮೂರ್ತಿ (ರಾಜೂಸ್ ಹೆಲ್ತೀ ಇಂಡಿಯಾ, ಬೆಂಗಳೂರು) #Fblive #FBLiveWithOneindiaKannada #DrRajuKrishnamurthy

Posted by Oneindia Kannada on Friday, 4 June 2021

 ಮೆಡಿಸಿನ್ ಅಂತೂ ಸಿಕ್ಕಿಲ್ಲ, ಸಿಗುವುದೂ ಇಲ್ಲ

ಮೆಡಿಸಿನ್ ಅಂತೂ ಸಿಕ್ಕಿಲ್ಲ, ಸಿಗುವುದೂ ಇಲ್ಲ

"ಮೂವತ್ತಕ್ಕಿಂತ ಹೆಚ್ಚುಬಾರಿ ಹೊಸ ತಳಿಯ ಓಮಿಕ್ರಾನ್ ರೂಪಾಂತರಗೊಳ್ಳುವ ಸಾಧ್ಯತೆಯಿದೆ, ಡೆಲ್ಟಾ ವೈರಸ್ ಗಿಂತ ವೇಗವಾಗಿ ಹರಡುತ್ತದೆ, ಈ ವೈರಸಿಗೆ ಲಸಿಕೆ ಇಲ್ಲ, ಈಗ ಜನರು ತೆಗೆದುಕೊಂಡಿರುವ ವ್ಯಾಕ್ಸಿನ್ ಕೆಲಸ ಮಾಡುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಒಂದಂತೂ ಸತ್ಯ, ಕೊರೊನಾ ಮೊದಲನೇ ಅಲೆಯಾಗಲಿ, ಎರಡನೇ ಅಲೆಯಾಗಲಿ ಅದಕ್ಕೆ ಮೆಡಿಸಿನ್ ಅಂತೂ ಸಿಕ್ಕಿಲ್ಲ, ಸಿಗುವುದೂ ಇಲ್ಲ" ಎಂದು ಡಾ. ರಾಜು ಕೃಷ್ಣಮೂರ್ತಿ ವಿಡಿಯೋದಲ್ಲಿ ಹೇಳಿದ್ದಾರೆ.

 ಸುಸ್ತು, ಮೈಕೈ ನೋವು, ಗಂಟಲಲ್ಲಿ ಕಿರಿಕಿರಿ, ಒಣಕೆಮ್ಮು ಇರುತ್ತದೆ

ಸುಸ್ತು, ಮೈಕೈ ನೋವು, ಗಂಟಲಲ್ಲಿ ಕಿರಿಕಿರಿ, ಒಣಕೆಮ್ಮು ಇರುತ್ತದೆ

"ಓಮಿಕ್ರಾನ್ ವೇಗವಾಗಿ ಹರಡುತ್ತದೆ ಮತ್ತು ಅಪಾಯಕಾರಿ ಎನ್ನುವುದು ಹಸಿಹಸಿ ಸುಳ್ಳು. ಯಾಕೆಂದರೆ, ಹೊಸ ಸೋಂಕಿನ ಲಕ್ಷಣಗಳು ಏನು ಇರುತ್ತವೆ ಅಂದರೆ, ಸುಸ್ತು, ಮೈಕೈ ನೋವು, ಗಂಟಲಲ್ಲಿ ಕಿರಿಕಿರಿ, ಒಣಕೆಮ್ಮು ಇರುತ್ತದೆ. ಇದನ್ನು ನಮ್ಮ ಭಾಷೆಯಲ್ಲಿ ಶ್ವಾಸಕೋಸದ ಮೇಲ್ಬಾಗದಲ್ಲಿನ ಸಮಸ್ಯೆ, ಲಂಗ್ಸಿಗೆ ಈ ವೈರಸಿನಿಂದ ಏನೂ ಸಮಸ್ಯೆಯಾಗುವುದಿಲ್ಲ. ಇದು ಒಂದು ವೇಳೆ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಬಹುದಾಗಿತ್ತು. ಯಾವ ದೇಶದಲ್ಲಿ ಈ ವೈರಸ್ ಕಾಣಿಸಿಕೊಂಡಿದೆಯೋ ಆ ದೇಶದ ವೈದ್ಯರೇ ಹೇಳುವ ಪ್ರಕಾರ, ಇದೊಂದು ಅಪಾಯಕಾರಿ ವೈರಸ್ ಅಲ್ಲ" ಎಂದು ಡಾ. ರಾಜು ಕೃಷ್ಣಮೂರ್ತಿ ವಿಡಿಯೋದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

 ಕೋವಿಡ್ ಎನ್ನುವುದು ದುರ್ಬಳಕ್ಕೆ ಆಗಿರುವುದು ಭಾರತದಲ್ಲೇ ಹೆಚ್ಚು

ಕೋವಿಡ್ ಎನ್ನುವುದು ದುರ್ಬಳಕ್ಕೆ ಆಗಿರುವುದು ಭಾರತದಲ್ಲೇ ಹೆಚ್ಚು

"ಅತ್ಯಂತ ಬೇಸರದಿಂದ ಹೇಳುವುದಾದರೆ, ಕೋವಿಡ್ ಎನ್ನುವುದು ದುರ್ಬಳಕ್ಕೆ ಆಗಿರುವುದು ಭಾರತದಲ್ಲೇ ಹೆಚ್ಚು. ಮನೆಯಲ್ಲಿ ಒಬ್ಬರಿಗೆ ಸೋಂಕು ತಗಲಿದರೂ, ಇತರರಿಗೆಲ್ಲಾ ಅವಶ್ಯಕತೆಯಿಲ್ಲದ ಟ್ರೀಟ್ಮೆಂಟ್ ಮಾಡಲಾಗುತ್ತಿತ್ತು. ನಮ್ಮ ದೇಶದ ವೈದ್ಯರು ಸೂಚಿಸುವ ಲಸಿಕೆಯಿಂದ ವೈರಸಿಗೆ ಪರಿಹಾರ ಸಿಗದೇ, ರೋಗ ನಿಯಂತ್ರಣ ಶಕ್ತಿ ಜನರಿಗೆ ಕಮ್ಮಿಯಾಗುತ್ತಾ ಬಂತು. ಡ್ರಗ್ ಮಾಫಿಯಾ, ದುಡ್ಡು ಮಾಡಬೇಕು ಎನ್ನುವುದು ಮಾತ್ರ ಉದ್ದೇಶವಾಗಿತ್ತು" ಎಂದು ಡಾ. ರಾಜು ಕೃಷ್ಣಮೂರ್ತಿ ವಿಡಿಯೋದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

 ಹಣ ಮತ್ತು ಪಬ್ಲಿಸಿಟಿಗಾಗಿ ಕೊರೊನಾ ಬಳಕೆಯಾಯಿತು

ಹಣ ಮತ್ತು ಪಬ್ಲಿಸಿಟಿಗಾಗಿ ಕೊರೊನಾ ಬಳಕೆಯಾಯಿತು

"ಮೆಡಿಸಿನ್ ಕಂಪೆನಿಗಳು ಹತ್ತು ವರ್ಷದ ಸಂಪಾದನೆಯನ್ನು ಒಂದೆರಡು ವರ್ಷದಲ್ಲೇ ಮಾಡಿದ್ದಾವೆ, ಖಾಸಗಿ ಆಸ್ಪತ್ರೆಗಳೂ ಇದರಲ್ಲಿ ಶಾಮೀಲಾಗಿವೆ. ರಾಜಕಾರಣಿಗಳು ಈ ಸಂದರ್ಭವನ್ನು ಮಿಸ್ ಯೂಸ್ ಮಾಡಿಕೊಂಡರು, ಹಣ ಮತ್ತು ಪಬ್ಲಿಸಿಟಿಗಾಗಿ ಕೊರೊನಾ ಬಳಕೆಯಾಯಿತು. ನಿಜವಾಗಿ ಹೇಳಬೇಕೆಂದರೆ ಇಂತಹ ಸಾವಿರಾರು ವೈರಸ್ ಗಳು ನಮ್ಮಲ್ಲಿ ಬಂದು ಹೋಗಿವೆ" - ಡಾ. ರಾಜು ಕೃಷ್ಣಮೂರ್ತಿ.

 ಕೊರೊನಾ ರೂಪಾಂತರಿ ಓಮ್ರಿಕಾನ್ ಹಸಿ ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ

ಕೊರೊನಾ ರೂಪಾಂತರಿ ಓಮ್ರಿಕಾನ್ ಹಸಿ ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ

ಲಾಕ್ ಡೌನ್ ಆಗುತ್ತಂತೆ, ಕೇಸ್ ಜಾಸ್ತಿಯಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಾ.ರಾಜು ಕೃಷ್ಣಮೂರ್ತಿ, "ಇದೆಲ್ಲಾ ಸುಳ್ಳು ಅಂತಹ ಯಾವುದೇ ಸುದ್ದಿಗೆ ಭಯ ಪಡಬೇಕಾಗಿಲ್ಲ, ನಿಮ್ಮಲ್ಲೇ ಒಬ್ಬರಿಗೆ ಈ ಸೋಂಕು ತಗಲಿದ್ದೇ ಆದರೆ, ಏನು ಮಾಡಬೇಕು ಎನ್ನುವುದನ್ನು ಮುಂದಿನ ವಿಡಿಯೋದಲ್ಲಿ ಸವಿವರವಾಗಿ ತಿಳಿಸುತ್ತೇನೆ. ಒಟ್ಟಿನಲ್ಲಿ ಯಾರೂ ಭೀತಿಗೆ ಒಳಗಾಗಬೇಡಿ"ಎಂದು ಡಾ. ರಾಜು ಕೃಷ್ಣಮೂರ್ತಿ ಧೈರ್ಯ ತುಂಬಿದ್ದಾರೆ.

Recommended Video

13 ರಾಷ್ಟ್ರಗಳಿಗೆ ಒಮಿಕ್ರಾನ್ ಲಗ್ಗೆ ! | Oneindia Kannada

English summary
Omicron Is The Dangerous Virus? Well Explained By Well Known Doctor Raju Krishnamurthy. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X