ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಸಚಿವರು ಎಲ್ಲಿ, ಯಾವ ಕೊಠಡಿಗಳಲ್ಲಿ ಸಿಗುತ್ತಾರೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 6: ಗುರುವಾರ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಹತ್ತು ಸಚಿವರಿಗೆ ವಿಧಾನಸೌಧ ಮತ್ತು ವಿಕಾಸ ಸೌಧಗಳಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಆರು ಮಂದಿ ಹೊಸ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿದ್ದರೆ, ಇನ್ನು ನಾಲ್ವರಿಗೆ ವಿಕಾಸ ಸೌಧದಲ್ಲಿ ಕಚೇರಿ ಕೊಠಡಿ ಕೊಡಲಾಗಿದೆ.

ರಾಜ್ಯಪಾಲ ವಜೂಬಾಯಿ ವಾಲಾ ಅವರ ಆದೇಶಕ್ಕೆ ಅನುಸಾರವಾಗಿ ನೂತನ ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿ ಎಚ್.ಎಸ್. ಚನ್ನಬಸಪ್ಪ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ವಿಧಾನಸೌಧ, ವಿಕಾಸಸೌಧದಲ್ಲಿ ನಿಮ್ಮ ಸಚಿವರ ಕೊಠಡಿ ಗುರುತಿಸಿಕೊಳ್ಳಿವಿಧಾನಸೌಧ, ವಿಕಾಸಸೌಧದಲ್ಲಿ ನಿಮ್ಮ ಸಚಿವರ ಕೊಠಡಿ ಗುರುತಿಸಿಕೊಳ್ಳಿ

ಆಗಸ್ಟ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ 17 ಕ್ಯಾಬಿನೆಟ್ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸ ಸೌಧಗಳಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿತ್ತು. ಈಗ ನೂತನ ಸಚಿವರು ಅವರ ಅಕ್ಕಪಕ್ಕದ ಕೊಠಡಿಗಳನ್ನು ಪಡೆದುಕೊಂಡಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ ಅವರು ವಿಧಾನಸೌಧದ ಕೊಠಡಿ ಸಂಖ್ಯೆ 336ಅನ್ನು ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಈಗಾಗಲೇ ಆ ಕೊಠಡಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಅವರಿಗೆ ನೀಡಲಾಗಿರುವುದರಿಂದ, ರಮೇಶ್ ಜಾರಕಿಹೊಳಿ ಅವರಿಗೆ 342 ಮತ್ತು 342ಎ ಸಂಖ್ಯೆಯ ಕೊಠಡಿಗಳನ್ನು ನೀಡಲಾಗಿದೆ.

ಜಾರಕಿಹೊಳಿಗೆ ಸಿಗದ ಡಿಕೆಶಿ ಕೊಠಡಿ

ಜಾರಕಿಹೊಳಿಗೆ ಸಿಗದ ಡಿಕೆಶಿ ಕೊಠಡಿ

ತಮ್ಮ ಪ್ರಬಲ ಎದುರಾಳಿ ಡಿ.ಕೆ. ಶಿವಕುಮಾರ್ ಅವರ ಕೊಠಡಿಯಲ್ಲಿ ಕೂರುವ ಬೆಳಗಾವಿ ಸಾಹುಕಾರ್ ಕನಸು ಈಡೇರಿಲ್ಲ. ಡಿ.ಕೆ. ಶಿವಕುಮಾರ್ ನಿರ್ವಹಿಸಿದ್ದ ಜಲಸಂಪನ್ಮೂಲ ಖಾತೆಯ ಮೇಲೆ ಕಣ್ಣಿಟ್ಟಿರುವ ರಮೇಶ್ ಜಾರಕಿಹೊಳಿ ಅವರಿಗೆ ಬಯಸಿದ ಖಾತೆ ಸಿಕ್ಕರೆ ತಮ್ಮ ಯುದ್ಧದಲ್ಲಿ ಒಂದನ್ನು ಗೆದ್ದಂತಾಗಲಿದೆ. ಹಾಗೆಯೇ ಡಿ.ಕೆ. ಶಿವಕುಮಾರ್ ಸಚಿವರಾಗಿದ್ದಾಗ ವಾಸಿಸುತ್ತಿದ್ದ ಸರ್ಕಾರಿ ಬಂಗಲೆ ಕೂಡ ಅವರಿಗೆ ಸಿಗಲಿದೆಯೇ ಎಂದು ಕಾದುನೋಡಬೇಕು.

ಯಡಿಯೂರಪ್ಪ ಕೊಠಡಿ

ಯಡಿಯೂರಪ್ಪ ಕೊಠಡಿ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾಸೌಧದ 323 ಎ ಕೊಠಡಿಯಲ್ಲಿರುತ್ತಾರೆ. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ 340A, 341, ಡಾ. ಅಶ್ವತ್ಥ್ ನಾರಾಯಣ್ ವಿಕಾಸಸೌಧದ 242, 243 ಮತ್ತು ಲಕ್ಷ್ಮಣ ಸವದಿ ಅವರಿಗೆ ವಿಕಾಸಸೌಧದ 344, 345 ಕೊಠಡಿಗಳನ್ನು ಹಂಚಲಾಗಿದೆ.

ಕರ್ನಾಟಕದ ನೂತನ ಕ್ಯಾಬಿನೆಟ್ ಸಚಿವರ ಸಂಬಳವೆಷ್ಟು? ಭತ್ಯೆ ಎಷ್ಟು?ಕರ್ನಾಟಕದ ನೂತನ ಕ್ಯಾಬಿನೆಟ್ ಸಚಿವರ ಸಂಬಳವೆಷ್ಟು? ಭತ್ಯೆ ಎಷ್ಟು?

ವಿಧಾನಸೌಧದಲ್ಲಿ ಯಾರು?

ವಿಧಾನಸೌಧದಲ್ಲಿ ಯಾರು?

ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಕೆ. ಸುಧಾಕರ್, ಶ್ರೀಮಂತ್ ಪಾಟೀಲ್, ಬೈರತಿ ಬಸವರಾಜ್ ಮತ್ತು ಕೆ. ಗೋಪಾಲಯ್ಯ ಅವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಯಾದ ಬಳಿಕ ಈ ಕೋಠಡಿಗಳಿಗೆ ಅವರ ಖಾತೆಯ ನಾಮಫಲಕ ಅಳವಡಿಕೆಯಾಗಲಿದೆ.

ಸಿಗದ ಸಚಿವ ಸ್ಥಾನ, ಒಳಗೊಳಗೆ ಅತೃಪ್ತಿ: ಮುಂದೆ ಮಂತ್ರಿ ಆಗ್ತೀನಿ ಎಂದ ಎಂಟಿಬಿಸಿಗದ ಸಚಿವ ಸ್ಥಾನ, ಒಳಗೊಳಗೆ ಅತೃಪ್ತಿ: ಮುಂದೆ ಮಂತ್ರಿ ಆಗ್ತೀನಿ ಎಂದ ಎಂಟಿಬಿ

ವಿಕಾಸಸೌಧದಲ್ಲಿ ಯಾರು?

ವಿಕಾಸಸೌಧದಲ್ಲಿ ಯಾರು?

ನಾಲ್ವರು ಸಚಿವರಾದ ಎಸ್‌ಟಿ ಸೋಮಶೇಖರ್, ಬಿ.ಸಿ. ಪಾಟೀಲ್, ಆನಂದ್ ಸಿಂಗ್ ಮತ್ತು ಕೆ.ಸಿ. ನಾರಾಯಣ ಗೌಡ ಅವರಿಗೆ ವಿಧಾನಸೌಧದ ಪಕ್ಕದಲ್ಲಿರುವ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಲಾಗಿದೆ.

ಯಡಿಯೂರಪ್ಪ ಸಂಪುಟ: ಯಾವ ಜಾತಿಯ ಎಷ್ಟು ಸಚಿವರಿದ್ದಾರೆ?ಯಡಿಯೂರಪ್ಪ ಸಂಪುಟ: ಯಾವ ಜಾತಿಯ ಎಷ್ಟು ಸಚಿವರಿದ್ದಾರೆ?

English summary
Rooms have been allotted for 10 newly elected ministers in both Vidhana Soudha and Vikas Soudha on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X