ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಾನಾವೈರಸ್ ನಿವಾರಣೆಗೆ Antivirus ಇಡ್ಲಿ-ವಡಾ, ಸಮೋಸಾ!

|
Google Oneindia Kannada News

ನವದೆಹಲಿ, ನವೆಂಬರ್.04: ಕೊರೊನಾವೈರಸ್ ಸೋಂಕು ನಿವಾರಣೆ ಮತ್ತು ನಿಯಂತ್ರಣಕ್ಕೆ ಲಸಿಕೆ ಅಥವಾ ಔಷಧಿ ಯಾವಾಗ ಬರುತ್ತದೆಯೋ ಎಂದು ಇಡೀ ಜಗತ್ತು ಎದುರು ನೋಡುತ್ತಿದೆ. ಕೊವಿಡ್-19 ಮಹಾಮಾರಿ ಅಟ್ಟಹಾಸಕ್ಕೆ ಯಾವಾದ ಕಡಿವಾಣ ಬೀಳುತ್ತದೆ ಎಂದು ಆಸೆಗಣ್ಣಿನಿಂದ ಜನರು ಕಾಯುತ್ತಿದ್ದಾರೆ.

ವಿಶ್ವದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಈಗಾಗಲೇ 4,79,69,285ರ ಗಡಿ ದಾಟಿದೆ. 12,22,513 ಜನರು ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಕೊಂಚ ನೆಮ್ಮದಿಯ ವಿಚಾರ ಎಂದರೆ 3,44,21,227 ಸೋಂಕಿತರು ಯಾವುದೇ ಅಧಿಕೃತ ಲಸಿಕೆ ಇಲ್ಲದೇ ಕೊವಿಡ್-19 ಸೋಂಕಿನಿಂದ ಬಚಾವ್ ಆಗಿದ್ದಾರೆ.

ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ: ಬರೋಬ್ಬರಿ 6725 ಪ್ರಕರಣಗಳು ಪತ್ತೆ ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ: ಬರೋಬ್ಬರಿ 6725 ಪ್ರಕರಣಗಳು ಪತ್ತೆ

ಕೊರೊನಾವೈರಸ್ ಲಸಿಕೆ ಮತ್ತು ಔಷಧಿಯ ಬಗ್ಗೆ ಒಂದು ಗುಂಪಿನ ಜನರು ಯೋಚನೆ ಮಾಡುತ್ತಿದ್ದಾರೆ. ಕೊವಿಡ್-19 ಸೋಂಕು ನಮಗೇನೂ ಮಾಡುತ್ತೆ ಬಿಡು ಎಂದು ಮತ್ತೊಂದು ಗುಂಪು ದಿನನಿತ್ಯದ ಕಾರ್ಯಗಳಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಪ್ರತಿನಿತ್ಯ ಕೊವಿಡ್-19 ಸೋಂಕಿಗೆ 'Antivirus' ಇಡ್ಲಿ, ವಡಾ, ಸಮೋಸಾ, ಉಪ್ಮಾ, ಪೂರಿ, ದೋಸೆಯು ಸಖತ್ ಸದ್ದು ಮಾಡುತ್ತಿದೆ. ಏನಪ್ಪಾ ಆಂಟಿವೈರಸ್ ಇಡ್ಲಿ-ವಡಾ ಸಮೋಸಾ ಕಥೆ ಎನ್ನುವ ಕುತೂಹಲ ತಣಿಸುವ ಸ್ಟೋರಿ ಇಲ್ಲಿದೆ ನೋಡಿ.

ಕೊರೊನಾ ಭೀತಿಯಲ್ಲಿ ಊಟವಿಲ್ಲ, ತಿಂಡಿಯಿಲ್ಲ!

ಕೊರೊನಾ ಭೀತಿಯಲ್ಲಿ ಊಟವಿಲ್ಲ, ತಿಂಡಿಯಿಲ್ಲ!

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಆಹಾರ ಸೇವನೆಗೂ ಹಿಂದೇಟು ಹಾಕುತ್ತಿರುವ ಕಾಲವಿದೆ. ಪ್ರತಿಯೊಬ್ಬರನ್ನು ಅನುಮಾನದಿಂದ ನೋಡುವಂತಾ ಸನ್ನಿವೇಶವನ್ನು ಕೊವಿಡ್-19 ಎಂಬ ಸಾಂಕ್ರಾಮಿಕ ಪಿಡುಗು ಸೃಷ್ಟಿಸಿದೆ. ಭಾರತ ಲಾಕ್ ಡೌನ್ ಸಡಿಲಿಕೆಯ ನಂತರದಲ್ಲಿ ಹೋಟೆಲ್ ಗಳು ಪುನಾರಂಭಗೊಂಡಿವೆ. ಆದರೂ ಜನರು ಹೋಟೆಲ್ ಗಳಿಗೆ ತೆರಳುವುದಕ್ಕೆ ಭಯ ಪಡುತ್ತಿದ್ದಾರೆ.

ಬೀದಿ ಬದಿ ಅಂಗಡಿಯಲ್ಲಿ ಟಿಫನ್ ತಿನ್ನಲು ಭಯವೇ?

ಬೀದಿ ಬದಿ ಅಂಗಡಿಯಲ್ಲಿ ಟಿಫನ್ ತಿನ್ನಲು ಭಯವೇ?

ಬೀದಿ ಬದಿ ತಿಂಡಿ ತಿನ್ನುವುದಕ್ಕೆ, ಹೋಟೆಲ್ ಗಳಲ್ಲಿ ಊಟ ಮಾಡುವುದಕ್ಕೆ ಜನರು ಭಯ ಪಡುತ್ತಿದ್ದಾರೆ. ಎಲ್ಲಿ, ಯಾವಾಗ, ಯಾರಿಂದ, ಯಾವ ಮೂಲದಿಂದ ಮಹಾಮಾರಿ ಅಂಟಿಕೊಳ್ಳುತ್ತದೆಯೋ ಎಂಬ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಸತ್ಯವನ್ನು ಕಂಡುಕೊಂಡ ಹೋಟೆಲ್ ಮಾಲೀಕನೊಬ್ಬ ಡಿಫರೆಂಟ್ ಐಡಿಯಾ ಮಾಡಿದ್ದಾರೆ. ತಮ್ಮ ಹೋಟೆಲ್ ಗೆ ಮಾಲೀಕನಿಟ್ಟ ಹೆಸರೇ ಇಂದು ಆತನ ಹೋಟೆಲ್ ನ್ನು ಫೇಮಸ್ ಮಾಡಿದೆ.

ಆನ್ ಲೈನ್ ನಲ್ಲಿ

ಆನ್ ಲೈನ್ ನಲ್ಲಿ "Antivirus Tiffen Center" ಸದ್ದು

ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದಲ್ಲಿದ್ದ ಜನರನ್ನು ಸೆಳೆಯುವುದಕ್ಕಾಗಿ ಒಡಿಶಾದ ಹೋಟೆಲ್ ಮಾಲೀಕರೊಬ್ಬರು ತಮ್ಮ ಹೋಟೆಲ್ ಗೆ "Antivirus Tiffen Center" ಎಂದು ಹೆಸರು ಇಟ್ಟಿದ್ದಾರೆ. "Antivirus Tiffen Center" ಹೋಟೆಲ್ ನಲ್ಲಿ ಸಿಗುವ ಇಡ್ಲಿ, ವಡಾ, ದೋಸೆ, ಪೂರಿ, ಸಮೋಸಾದಿಂದ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಸಾಧ್ಯವೇ ಎಂಬ ಬರಹಗಳ ಜೊತೆಗೆ ಈ ಹೋಟೆಲ್ ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Recommended Video

Arnab Goswami sent to 14 days Judicial Custody : ಯಾರಾದ್ರೂ ಸಹಾಯ ಮಾಡಿ please !!
ದೇಶದಲ್ಲಿ ತಗ್ಗಿದ ಕೊವಿಡ್-19 ಅಟ್ಟಹಾಸ

ದೇಶದಲ್ಲಿ ತಗ್ಗಿದ ಕೊವಿಡ್-19 ಅಟ್ಟಹಾಸ

ಇನ್ನು, ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ಪ್ರಮಾಣ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 38310 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 83,13,877ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,23,611 ಮಂದಿ ಪ್ರಾಣ ಬಿಟ್ಟಿದ್ದಾರೆ. 76,56,478 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 5,33,787 ಸಕ್ರಿಯ ಪ್ರಕರಣಗಳಿವೆ.

English summary
Odisha Tiffin Center Selling 'Anti-virus' Idlis, Samosas; Picture Goes Viral on Social Media. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X