ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹ ವೆಬ್‌ಸೈಟ್‌ಗಳಲ್ಲಿ ಫೋಸ್ ಕೊಟ್ಟ ಪೋಲಿಗೆ 18 ಪತ್ನಿಯರು

|
Google Oneindia Kannada News

ನವದೆಹಲಿ ಫೆಬ್ರವರಿ 22: ವಿವಾಹ ವೆಬ್‌ಸೈಟ್‌ಗಳಲ್ಲಿ ಫೋಸ್ ಕೊಟ್ಟ ಭೂಪನೊಬ್ಬ ಭಾರತದಾದ್ಯಂತ 18 ಮಹಿಳೆಯರನ್ನು ವಿವಾಹವಾದ ಘಟನೆ ಬೆಳಕಿಗೆ ಬಂದಿದೆ. ಒಡಿಶಾ ಮೂಲದ ಬಿಭು ಪ್ರಕಾಶ್ ಸ್ವೈನ್ ಎಂಬಾತ 18 ಮಹಿಳೆಯರನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. 67ರ ಹರೆಯದ ಈತ 51 ವರ್ಷದ ವೈದ್ಯನಂತೆ ಪೋಸು ಕೊಟ್ಟು ವಿವಾಹ ವೆಬ್‌ಸೈಟ್‌ಗಳನ್ನು ಜಾಲಾಡಿ ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಈತ ದೇಶಾದ್ಯಂತ ಮಹಿಳೆಯರಿಗೆ ತಾನು ಪ್ರೊಫೆಸರ್‌, ವಕೀಲ, ವೈದ್ಯಾಧಿಕಾರಿ ಮತ್ತು ಅರೆಸೈನಿಕ ಅಧಿಕಾರಿ ಎಂದು ಹೇಳಿಕೊಂಡು ಮದುವೆ ಮಾಡಿಕೊಳ್ಳುವಂತೆ ಮನವೊಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೊತೆಗೆ ತಾನು ಅಧಿಕ ಸಂಬಳ ಪಡೆಯುವ ಕೆಲಸದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಮಾತ್ರವಲ್ಲದೆ ತನ್ನ ರುಜುವಾತುಗಳು ಮತ್ತು ಕುಟುಂಬದ ಹಿನ್ನೆಲೆಯ ನಕಲಿ ಗುರುತಿನ ಚೀಟಿಗಳು ಮತ್ತು ನೇಮಕಾತಿ ಪತ್ರಗಳನ್ನು ಬಳಸುತ್ತಿದ್ದನೆಂದು ತಿಳಿದು ಬಂದಿದೆ. "ಈತ ಹಣಕ್ಕಾಗಿ ಮತ್ತು ಲೈಂಗಿಕ ಸಂತೋಷಕ್ಕಾಗಿ ಇದನ್ನು ಮಾಡಿದ್ದಾನೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಸತ್ಪತಿ AFP ಗೆ ತಿಳಿಸಿದ್ದಾರೆ.

ಪತ್ನಿಯರು ಬೇಕೆಂದು ತೆಂಗಿನ ಮರವೇರಿ ಕುಳಿತ ವ್ಯಕ್ತಿ!
ಪ್ರಕರಣವನ್ನು ಸತ್ಪತಿ ಅವರ ತಂಡವು ಇತ್ತೀಚಿನ ದಿನಗಳಲ್ಲಿ ಸ್ವೇನ್ ಅವರನ್ನು ಜಾಡು ಹಿಡಿದುಕೊಂಡು ಬಂಧಿಸಿದೆ. ಅವರ ಗುರುತು ಪತ್ತೆ ಹಚ್ಚುವ ಮೂಲಕ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದಿದ್ದಾರೆ. ಈ ವೇಳೆ ಈತ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಎರಡು ಮದುವೆಗಳ ಯೋಜನೆಗಳನ್ನು ಮಾಡಿಕೊಂಡಿರುವುದಾಗಿ ಬೆಳಕಿಗೆ ಬಂದಿದೆ.

ಹಣ, ಆಭರಣಕ್ಕಾಗಿ ಮನವೊಲಿಸುತ್ತಿದ್ದ ಆರೋಪಿ

ಹಣ, ಆಭರಣಕ್ಕಾಗಿ ಮನವೊಲಿಸುತ್ತಿದ್ದ ಆರೋಪಿ

ಈ ವ್ಯಕ್ತಿ ಯಾವಾಗಲೂ ಮನವೊಲಿಸುವ ಮೂಲಕ ಒಂಟಿ, ವಿಧವೆ ಅಥವಾ ವಿಚ್ಛೇದಿತ ಮಹಿಳೆಯರನ್ನು ಮಾತ್ರ ಗುರಿಯಾಗಿಸಿಕೊಂಡು ಮದುವೆಯಾಗುತ್ತಿದ್ದದ್ದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಸತ್ಪತಿ ಹೇಳಿದರು. ಹೀಗೆ ಸಂತೋಷದಿಂದ ಮಹಿಳೆಯರನ್ನು ನಂಬಿಸಿ ಮನವೊಲಿಸಿ ಮದುವೆ ಮಾಡಿಕೊಳ್ಳುತ್ತಿದ್ದ ಬಿಭು ಪ್ರಕಾಶ್ ಸ್ವೈನ್, ತನ್ನ ಹೊಸ ಹೆಂಡತಿಯರ ಹಣವನ್ನು ಅಥವಾ ಆಭರಣಗಳನ್ನು ಎರವಲು ಪಡೆಯಲು ತುರ್ತು ಪರಿಸ್ಥಿತಿಯ ನೆಪ ಹೇಳುತ್ತಿದ್ದನು. ಜೊತೆಗೆ ಸಹಾಯ ಮಾಡಲು ಮನವೊಲಿಸುತ್ತಿದ್ದನು ಎನ್ನಲಾಗಿದೆ.

ನಂತರ ಅವನು ತನ್ನ ಮುಂದಿನ ಗುರಿಯತ್ತ ಸಂಚು ಮಾಡುತ್ತಿದ್ದನು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮರು ಮದುವೆಯಾದ ಮಹಿಳೆಯರು, ವಿಧವೆಯರು, ವಿಚ್ಛೇದಿತರು ಮೋಸ ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಾರೆ. ಇದೇ ಬಂಡವಾಳವನ್ನಾಗಿಸಿಕೊಂಡ ಬಿಭು ಪ್ರಕಾಶ್ ಸ್ವೈನ್ ನೊಂದ ಮಹಿಳೆಯರ ಮನವೊಲಿಸಿ ಮದುವೆಯಾಗುತ್ತಿದ್ದನೆಂದು ತಿಳಿದು ಬಂದಿದೆ.

ಮೇ 2021 ರಲ್ಲಿ ಸ್ವೈನ್ ವಿರುದ್ಧ ದೂರು

ಮೇ 2021 ರಲ್ಲಿ ಸ್ವೈನ್ ವಿರುದ್ಧ ದೂರು

ಸ್ವೈನ್ 18 ಕ್ಕೂ ಹೆಚ್ಚು ಮಹಿಳೆಯರನ್ನು ವಿವಾಹವಾಗಿದ್ದು ಅವರ ಮೊಬೈಲ್ ನಂಬರ್‌ಗಳನ್ನು ಮೇಡಂ ದೆಹಲಿ, ಮೇಡಂ ಅಸ್ಸಾಂ, ಮೇಡಂ ಯುಪಿ ಎಂದು ಸೇವ್ ಮಾಡಿಕೊಂಡಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮೇ 2021 ರಲ್ಲಿ ಸ್ವೇನ್ ಅವರ ಬಹು ಜೀವನದ ಬಗ್ಗೆ 48 ವರ್ಷದ ಹೆಂಡತಿಯ ದೂರಿನ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಪೊಲೀಸರಿಗೆ ಹೆಂಡತಿ ನೀಡಿದ ಮಾಹಿತಿ ಪ್ರಕಾರ ಆತ ಈಗಾಗಲೇ ಕನಿಷ್ಠ ಏಳು ಮಹಿಳೆಯರನ್ನು ಮದುವೆಯಾಗಿದ್ದನಂತೆ. ದೂರು ನೀಡಿದ ಸಂತ್ರಸ್ತೆ, ಮೋಸ ಹೋಗಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. "ಸದ್ದಿಲ್ಲದೆ ತನ್ನ ಇತರ ಹೆಂಡತಿಯರ ಸಂಪರ್ಕ ವಿವರಗಳನ್ನು ತನ್ನ ಫೋನ್‌ನಿಂದ ಹಿಂಪಡೆದಿದ್ದಾನೆ. ಅವರನ್ನು ಪ್ರತ್ಯೇಕವಾಗಿ ಸಂಪರ್ಕಿಸಿದ್ದಾನೆ" ಎಂದು ಹೇಳಿಕೊಂಡಿದ್ದಾರೆ.

ಪತ್ನಿಯ ದೂರಿನ ಬಳಿಕ ಪೊಲೀಸರು ವಂಚನೆಯ ದೀರ್ಘ ಇತಿಹಾಸದ ಬಗ್ಗೆ ಸಂಶೋಧನೆಗಳನ್ನು ಮಾಡಿದಾಗ ಇದು ಬೆಳಕಿಗೆ ಬಂದಿದೆ ಎಂದು ಸತ್ಪತಿ ಹೇಳಿದರು.

ವೈದ್ಯ, ಪ್ರಾಧ್ಯಾಪಕ ಎಂದು ಮೋಸ

ವೈದ್ಯ, ಪ್ರಾಧ್ಯಾಪಕ ಎಂದು ಮೋಸ

ಒಡಿಶಾದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಸ್ವೈನ್, 1978 ರಲ್ಲಿ ಮೊದಲು ವಿವಾಹವಾದರು ಮತ್ತು ಮೂರು ಮಕ್ಕಳನ್ನು ಹೊಂದಿದ್ದಾರೆ. ಅವರಲ್ಲಿ ಇಬ್ಬರು ವೈದ್ಯರು ಮತ್ತು ಒಬ್ಬರು ದಂತವೈದ್ಯರಾಗಿದ್ದಾರೆ. ಲ್ಯಾಬ್ ಟೆಕ್ನಿಷಿಯನ್ ಆಗಿ ತರಬೇತಿ ಪಡೆದ ಅವರು ತಮ್ಮ ಕುಟುಂಬದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಬಳಿಕ ಭುವನೇಶ್ವರಕ್ಕೆ ತೆರಳಿದರು, ಅಲ್ಲಿ ಅವರು ತಮ್ಮನ್ನು ವೈದ್ಯ ಎಂದು ಪರಿಚಯಿಸಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ 2002 ರಲ್ಲಿ ತಮ್ಮ ಎರಡನೇ ಪತ್ನಿ ವೈದ್ಯೆಯನ್ನು ವಿವಾಹವಾದರು. ವಿವಾಹವಾಗಲು ಈತ ಅನೇಕ ಹೆಸರುಗಳನ್ನು ಬಳಸಿದ್ದಾನೆ. ಆನ್‌ಲೈನ್‌ನಲ್ಲಿ ಮಹಿಳೆಯರನ್ನು ಹುಡುಕುತ್ತಿರುವಾಗ ತಾನು ವೈದ್ಯ ಅಥವಾ ಪ್ರಾಧ್ಯಾಪಕ ಎಂದು ಪರಿಚಯಿಸಿಕೊಂಟಿದ್ದಾನೆ.

ಇನ್ನಿತರರಿಗಾಗಿ ಹುಡುಕಾಟ

ಇನ್ನಿತರರಿಗಾಗಿ ಹುಡುಕಾಟ

ಅವನ ಕುತಂತ್ರಗಳು ಒಬ್ಬ ವ್ಯಕ್ತಿಯ ಕೆಲಸವನ್ನು ಅವಮಾನಿಸಿದೆ ಎಂದು ಪೊಲೀಸರು ಹೇಳುತ್ತಾರೆ. ಇವನೊಂದಿಗೆ ಇವನ ಹಣವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿದ ಜನರನ್ನು ಪೊಲೀಸರು ಹುಡುಕುತ್ತಿದ್ದಾರೆ. ಮಾತ್ರವಲ್ಲದೆ ಅವರು 128 ನಕಲಿ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 13 ಬ್ಯಾಂಕ್‌ಗಳಿಗೆ ₹ 1 ಕೋಟಿ ರು ವಂಚಿಸಿದ್ದಾರೆ.

English summary
Bibhu Prakash Swain believed in soulmates and true love, or so he told at least 18 women he allegedly married and conned across India before his arrest -- weeks before his next two weddings
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X