• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಚುನಾವಣೆ ಫಲಿತಾಂಶ: ಬಹಿರಂಗವಾದ ಅಚ್ಚರಿ ಮಾಹಿತಿ

|

ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಲ್ಲಿ ಏನೇನು ತಂತ್ರ, ಪ್ರಚಾರ ಮಾಡಬೇಕಾಗಿತ್ತೋ ಅದ್ಯಾವುದನ್ನು ಸಮರ್ಪಕವಾಗಿ ಮಾಡದ ರಾಜ್ಯ ಬಿಜೆಪಿ ನಾಯಕರು ಚುನಾವಣೆ ಫಲಿತಾಂಶ ಬರುತ್ತಿದ್ದಂತೆಯೇ ಆಪರೇಷನ್ ಕಮಲ ಮೂಲಕ ಮೈತ್ರಿ ಸರ್ಕಾರವನ್ನು ಕೆಡವಲು ತಂತ್ರ ರೂಪಿಸಿದ್ದರು ಎಂಬ ಮಾಹಿತಿ ಇದೀಗ ಬಹಿರಂಗವಾಗುತ್ತಿದೆ.

ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೋಟ್ಯಂತರ ರೂ. ಹಣದ ಆಮಿಷವೊಡ್ಡಿದ್ದರು ಎಂಬುದು ಇದೀಗ ಕೇಳಿ ಬರುತ್ತಿರುವ ಸುದ್ದಿಯಾಗಿದೆ. ಇದನ್ನು ಒಂದು ಕಡೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೂ ಮಾಧ್ಯಮದವರ ಮುಂದೆ ಬಹಿರಂಗಪಡಿಸಿದ್ದಾರೆ.

5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?

ಮೇಲಿಂದ ಮೇಲೆ ಬಿಜೆಪಿ ನಾಯಕರ ಈ ವರ್ತನೆಗಳು ಅಸಹ್ಯ ಮೂಡಿಸುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿವೆ.

ದೀಪಾವಳಿ ವಿಶೇಷ ಪುರವಣಿ

ಹೀಗಿರುವಾಗ ಮೈತ್ರಿ ಸರ್ಕಾರದ ಲೋಪಗಳನ್ನು ಮುಂದಿಟ್ಟುಕೊಂಡು ಮತ್ತು ಅನುಕಂಪವನ್ನು ಮತದಾರರಿಂದ ಗಿಟ್ಟಿಸಿಕೊಂಡು ಮುನ್ನಡೆಯುವ ಬದಲು ಮೈತ್ರಿ ಸರ್ಕಾರವನ್ನು ಕೆಡವಿ ತಾವು ಅಧಿಕಾರ ಹಿಡಿಯುವ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ನಾಯಕರು ಆಗಾಗ್ಗೆ ಮೈತ್ರಿ ಸರ್ಕಾರಕ್ಕೆ ಡೆಡ್ ಲೈನ್ ನೀಡುತ್ತಿರುವುದು ಮಾತ್ರ ಒಳ್ಳೆಯ ಬೆಳವಣಿಗೆಯಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.

 ತಾವೇ ಬೆತ್ತಲಾದ ನಿದರ್ಶನ

ತಾವೇ ಬೆತ್ತಲಾದ ನಿದರ್ಶನ

ವಿಧಾನಸಭಾ ಚುನಾವಣೆ ಬಳಿಕ 104 ಸ್ಥಾನ ಪಡೆದ ಬಿಜೆಪಿಯನ್ನು ಬದಿಗೆ ತಳ್ಳಿದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ರಚಿಸಿದವು. ಈ ವೇಳೆ ಬಿಜೆಪಿ ತೆಪ್ಪಗಿದ್ದು, ರಾಜ್ಯದ ಜನತೆಯಿಂದ ಅನುಕಂಪದ ಅಲೆಯನ್ನು ಸೃಷ್ಟಿಸುವ, ಮೈತ್ರಿ ಸರ್ಕಾರದ ಲೋಪದೋಷಗಳನ್ನು ತೆರೆದಿಡುವ ಕೆಲಸವನ್ನು ಪ್ರಬಲ ವಿರೋಧ ಪಕ್ಷವಾಗಿ ಮಾಡಬಹುದಿತ್ತು.

ಆದರೆ ಅದ್ಯಾವುದನ್ನು ಮಾಡದ ಬಿಜೆಪಿ ಕೇವಲ ಕಾಲೆಳೆಯುವ ಕೆಲಸವನ್ನಷ್ಟೆ ಮಾಡುತ್ತಾ ಬಂದಿದ್ದು, ಅಧಿಕಾರದ ಹಪಾಹಪಿಯನ್ನು ರಾಜ್ಯದ ಜನರ ಮುಂದೆ ತೆರೆದಿಟ್ಟಿದ್ದಲ್ಲದೆ, ಪ್ರತಿ ಬಾರಿಯೂ ಮಾಡಿದ ತಂತ್ರ ವಿಫಲಗೊಂಡು ತಾವೇ ಬೆತ್ತಲಾದ ನಿದರ್ಶನಗಳು ಬೇಕಾದಷ್ಟಿವೆ.

ಮೈತ್ರಿ ಸರ್ಕಾರ ರಚನೆಯಾದಲ್ಲಿಂದ ಇಲ್ಲಿವರೆಗೂ ಬಿಜೆಪಿಯ ಹೆಚ್ಚಿನ ನಾಯಕರು ಮಾತನಾಡುವಾಗಲೆಲ್ಲ ಸರ್ಕಾರ ಬೀಳುತ್ತದೆ ಎಂಬ ಮಾತುಗಳನ್ನೇ ಆಡುತ್ತಾ ಬರುತ್ತಿದ್ದಾರೆ. ಜತೆಗೆ ಉಪಚುನಾವಣೆ ಘೋಷಣೆಯಾದ ಬಳಿಕವೂ ಚುನಾವಣೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲೇ ಇಲ್ಲ ಅದಕ್ಕೆ ಸಾಕ್ಷಿ ರಾಮನಗರದ ಅಭ್ಯರ್ಥಿ ಕೈಕೊಟ್ಟಿದ್ದು.

 ಉಪಚುನಾವಣೆಯ ಸೋಲಿಗೆ ಕಾರಣ

ಉಪಚುನಾವಣೆಯ ಸೋಲಿಗೆ ಕಾರಣ

ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಹಿರಂಗ ಪಡಿಸಿರುವ ವಿಚಾರವನ್ನೇ ನೋಡುವುದಾದರೆ ಬಿಜೆಪಿ ನಾಯಕರಿಗೆ ಹೇಗಾದರೂ ಮಾಡಿ ಸರ್ಕಾರ ರಚಿಸಲೇಬೇಕು ಎಂಬ ಬಯಕೆ ಇವತ್ತು ಉಪಚುನಾವಣೆಯ ಸೋಲಿಗೆ ಕಾರಣವಾಗಿದೆ ಎಂದರೂ ತಪ್ಪಾಗಲಾರದು.

ಮುಂದಿನ ವಿಧಾನಸಭಾ ಚುನಾವಣೆಯನ್ನು ಕಾಯುವ ತಾಳ್ಮೆ ಬಿ.ಎಸ್.ಯಡಿಯೂರಪ್ಪ ಅವರಿಗಿಲ್ಲದಾಗಿದೆ. ಈ ಅವಧಿಯಲ್ಲಿಯೇ ತಾನು ಮುಖ್ಯಮಂತ್ರಿಯಾಗಿ ಬಿಡಬೇಕು ಎಂಬುದು ಅವರ ಇರಾದೆಯಾಗಿದೆ. ಅದಕ್ಕಾಗಿ ಏನೆಲ್ಲ ತಂತ್ರ ಮಾಡಬೇಕು ಎಂಬುದಕ್ಕಷ್ಟೆ ಸೀಮಿತರಾಗಿಬಿಟ್ಟರಾ ಎಂಬ ಸಂಶಯ ಕಾಡತೊಡಗಿದೆ.

5 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು

 ಹಗುರವಾಗಿ ಪರಿಗಣಿಸುವಂತಿಲ್ಲ

ಹಗುರವಾಗಿ ಪರಿಗಣಿಸುವಂತಿಲ್ಲ

ಮೈತ್ರಿ ಸರ್ಕಾರದ ಶಾಸಕರಿಗೆ ಬಿಜೆಪಿ ನಾಯಕರು ಹಣ ಮತ್ತು ಅಧಿಕಾರದ ಆಮಿಷವೊಡ್ಡಿದ್ದರು ಎಂಬುದು ಡಿಕೆಶಿ ಮತ್ತು ಎಚ್ಡಿಕೆ ಅವರು ಮಾಡುತ್ತಿರುವ ಆರೋಪವಾಗಿದೆ. ಇದನ್ನು ಹಗುರವಾಗಿಯೂ ಪರಿಗಣಿಸುವಂತಿಲ್ಲ. ಏಕೆಂದರೆ ಸದ್ಯಕ್ಕೆ ಮೈತ್ರಿ ಸರ್ಕಾರ ಉಪಚುನಾವಣೆಯಲ್ಲಿ ಗೆದ್ದ ಸಂಭ್ರಮದಲ್ಲಿದೆ.

ಜತೆಗೆ ಮೈತ್ರಿ ಸರ್ಕಾರದಲ್ಲಿದ್ದ ಅಸಮಾಧಾನ ಎಲ್ಲವೂ ಸರಿ ಹೋಯಿತು ಎಂದು ಹೇಳಲಾಗುವುದಿಲ್ಲ. ಇವತ್ತಲ್ಲ ನಾಳೆ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲೇ ಬೇಕಾಗುತ್ತದೆ. ಆಗಲೇ ಶುರುವಾಗುವುದು ಜಟಾಪಟಿ.

ಹುಂಬತನದ ಆ ದಿನಗಳಿಂದ ಇಲ್ಲಿಯವರೆಗೆ ಎಷ್ಟೆಲ್ಲ ಬದಲಾದರು ಡಿಕೆಶಿ!

 ಬಿರುಕು ಸೃಷ್ಟಿಯಾಗಲು ಇಷ್ಟು ಸಾಕು

ಬಿರುಕು ಸೃಷ್ಟಿಯಾಗಲು ಇಷ್ಟು ಸಾಕು

ಅತೃಪ್ತರು ಮೈತ್ರಿ ಸರ್ಕಾರಕ್ಕೆ ಪ್ರಾಮಾಣಿಕರಾಗಿ ಉಳಿಯುತ್ತಾರೆ ಎನ್ನಲಾಗುವುದಿಲ್ಲ. ಅವರನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ಎಲ್ಲಾದರೂ ಕುಟುಂಬ ವ್ಯಾಮೋಹವೋ ಇನ್ಯಾವುದೋ ಕಾರಣಕ್ಕೆ ಅನಿತಾಕುಮಾರಸ್ವಾಮಿ ಅವರಿಗೇನಾದರೂ ಸಚಿವ ಸ್ಥಾನವನ್ನು ಕರುಣಿಸಿಬಿಟ್ಟರೆ ಮೈತ್ರಿ ಸರ್ಕಾರದಲ್ಲಿ ಬಿರುಕು ಸೃಷ್ಠಿಯಾಗಲು ಅಷ್ಟೇ ಸಾಕು.

ರಾಜ್ಯದಲ್ಲಿ ಈಗ ನಡೆದ ಉಪಚುನಾವಣೆ ಹಲವು ಆಯಾಮಗಳನ್ನು ಹುಟ್ಟು ಹಾಕಿದೆ. ಗೆದ್ದವರು ಬೀಗುವಂತೆಯೂ ಇಲ್ಲ. ಸೋತವರು ಕೈಕಟ್ಟಿ ಕುಳಿತುಕೊಳ್ಳುವಂತೆಯೂ ಇಲ್ಲ. ಎಲ್ಲವನ್ನೂ ಕಾದು ನೋಡಲೇಬೇಕಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior BJP leaders contacted Congress MLAs by phone and showed millions of rupees money desire.This information is now revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more