ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕ ಕಿಮ್‌ ಫ್ಯಾಷನ್‌ ಅನುಕರಣೆ ತಪ್ಪಿಸಲು ಉ.ಕೊರಿಯಾದಲ್ಲಿ ಚರ್ಮದ ಕೋಟು ನಿಷೇಧ!

|
Google Oneindia Kannada News

ಪ್ಯೊಂಗ್ಯಾಂಗ್, ನವೆಂಬರ್‌ 25: ಉತ್ತರ ಕೊರಿಯಾ ದೇಶದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಫ್ಯಾಷನ್‌ ಅನ್ನು ಯಾರೂ ಕೂಡಾ ಅನುಕರಣೆ ಮಾಡಬಾರದು ಎಂಬ ನಿಟ್ಟಿನಲ್ಲಿ ಉತ್ತರ ಕೊರಿಯಾದಲ್ಲಿ ಚರ್ಮದ ಕೋಟನ್ನು ನಿಷೇಧ ಮಾಡಲಾಗಿದೆ. ಲೆದರ್‌ ಕೋಟ್‌ (ಚರ್ಮದ ಕೋಟು) ಧರಿಸಿರುವ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಉತ್ತರ ಕೊರಿಯಾದ ಅಧಿಕಾರಿಗಳು, "ದೇಶದ ನಾಯಕ ಕಿಮ್ ಜಾಂಗ್ ಉನ್‌ರ ಫ್ಯಾಷನ್‌ ಆಯ್ಕೆಗಳನ್ನು ಅನುಕರಣೆ ಮಾಡುವುದು ಅಗೌರವ ತೋರಿದಂತೆ" ಎಂದು ತಿಳಿಸಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 2019 ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಚರ್ಮದ ಕೋಟು ಧರಿಸಿದ ಬಳಿಕ ಉತ್ತರ ಕೊರಿಯಾದಲ್ಲಿ ಚರ್ಮದ ಕೋಟುಗಳು ಪ್ರಸಿದ್ಧವಾಗಿದೆ. ಆರಂಭದಲ್ಲಿ ಚೀನಾದಿಂದ ಚರ್ಮದ ಕೋಟುಗಳನ್ನು ಆಮದು ಮಾಡಿಕೊಂಡು ಶ್ರೀಮಂತರು ಧರಿಸುತ್ತಿದ್ದರು, ಆದರೆ ಬಳಿಕ ಉಡುಪು ತಯಾರಕರು ನಕಲಿ ಚರ್ಮದ ಕೋಟುಗಳನ್ನು ರಫ್ತು ಮಾಡಿಕೊಂಡು ಸ್ಥಳೀಯವಾಗಿ ಮಾರಾಟ ಮಾಡಲು ಆರಂಭ ಮಾಡಿದರು. ಈಗ ಉತ್ತರ ಕೊರಿಯಾದ ಎಲ್ಲಾ ಪ್ರದೇಶದಲ್ಲಿ ಚರ್ಮದ ಕೋಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಹಲವಾರು ಯುವಕರು ತಮ್ಮದೇ ಆದ ಚರ್ಮದ ಕೋಟುಗಳನ್ನು ಧರಿಸಿ ಓಡಾಡುವುದು ಕಂಡು ಬರುತ್ತದೆ.

2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕಿಮ್‌ ಜಾಂಗ್ ಉನ್ ಮನವಿ2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕಿಮ್‌ ಜಾಂಗ್ ಉನ್ ಮನವಿ

ಆದರೆ ಈಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರ ಫ್ಯಾಷನ್‌ ಅನ್ನು ಎಲ್ಲರೂ ಕೂಡಾ ಅನುಕರಣೆ ಮಾಡುವುದನ್ನು ತಪ್ಪಿಸಲು ಚರ್ಮದ ಕೋಟುಗಳನ್ನು ಧರಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಫ್ಯಾಷನ್ ಪೊಲೀಸರು ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಮಾರಾಟಗಾರರು ಹಾಗೂ ನಾಗರಿಕರಿಂದ ಚರ್ಮದ ಕೋಟುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

 ಈ ವರ್ಷ ಮತ್ತೆ ಬೇರೆ ನೋಟದಲ್ಲಿ ಕಾಣಿಸಿಕೊಂಡ ಕಿಮ್‌

ಈ ವರ್ಷ ಮತ್ತೆ ಬೇರೆ ನೋಟದಲ್ಲಿ ಕಾಣಿಸಿಕೊಂಡ ಕಿಮ್‌

ಈ ನಡುವೆ ಈ ವರ್ಷ ಕಿಮ್ ಜಾಂಗ್ ಉನ್‌ ಮಾಧ್ಯಮದಲ್ಲಿ ಹೊಸ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫ್ಯಾಷನ್‌ ಸದ್ಯ ಜನಪ್ರಿಯವಾಗಿದೆ. ತನ್ನ ಹೆಸರು ಹೇಳಲು ಬಯಸದ ರಾಜಧಾನಿ ಪ್ಯೊಂಗ್ಯಾಂಗ್‌ನ ಉತ್ತರದಲ್ಲಿರುವ ದಕ್ಷಿಣ ಪ್ಯೊಂಗ್‌ಯಾಂಗ್ ಪ್ರಾಂತ್ಯದ ಪ್ಯೊಂಗ್‌ಸಾಂಗ್ ನಗರದ ನಿವಾಸಿ ಈ ಮಾಹಿತಿಯನ್ನು ನೀಡಿದ್ದಾರೆ. ಇನ್ನು "ಈ ವರ್ಷದ ಜನವರಿಯಲ್ಲಿ ನಡೆದ 8 ನೇ ಪಕ್ಷದ ಕಾಂಗ್ರೆಸ್‌ ಮಿಲಿಟರಿ ಪರೇಡ್‌ನಲ್ಲಿ, ಅತ್ಯುನ್ನತ ಘನತೆ (ಕಿಮ್‌) ಹಾಗೂ ಎಲ್ಲಾ ಉನ್ನತ ಶ್ರೇಣಿಯ ಅಧಿಕಾರಿಗಳು ಚರ್ಮದ ಕೋಟ್‌ಗಳನ್ನು ಧರಿಸಿರುವುದು ಕಂಡು ಬಂದಿದೆ," ಎಂದು ಮೂಲವು ಕಿಮ್‌ಗೆ ಅತ್ಯುನ್ನತ ಘನತೆ ಎಂದು ಸಂಭೋದಿಸಿ ಮಾಹಿತಿ ನೀಡಿದೆ.

 ಬಲದ ಪ್ರತೀಕವಾದ ಚರ್ಮದ ಕೋಟು!

ಬಲದ ಪ್ರತೀಕವಾದ ಚರ್ಮದ ಕೋಟು!

ಇನ್ನು ಈ ಚರ್ಮದ ಕೋಟು ಧರಿಸಬಹುದಾದ ಅಧಿಕಾರಿಗಳ ಪೈಕಿ ಕಿಮ್ ಜಾಂಗ್‌ ಉನ್‌ರ ಸಹೋದರಿ ಕಿಮ್‌ ಯೋ ಜಾಂಗ್‌ ಕೂಡಾ ಸೇರಿದ್ದಾರೆ. ದೇಶವನ್ನು ಕಿಮ್‌ ಬಳಿಕ ಕಿಮ್‌ ಯೋ ಜಾಂಗ್‌ ಮುನ್ನಡೆಸುವ ಸಾಧ್ಯತೆ ಇದೆ ಎಂದು ವರದಿಗಳು ಉಲ್ಲೇಖ ಮಾಡಿದೆ. ಹಾಗಾಗಿ ಈಗ ಈ ಚರ್ಮದ ಕೋಟುಗಳು ತಾವು ಪ್ರಖ್ಯಾತ, ಪ್ರಾಬಲ್ಯ ಹೊಂದಿರುವ ಮಹಿಳೆಯರು ಎಂಬ ಸಂಕೇತ ಎಂಬಂತಾಗಿದೆ. "ಚರ್ಮದ ಕೋಟುಗಳು ಬಲದ ಪ್ರತೀಕ ಎಂಬಂತೆ ಬಿಂಬಿತವಾಗಲು ಆರಂಭವಾದ ಬಳಿಕ ಖಾಸಗಿ ಬಟ್ಟೆ ವ್ಯಾಪಾರಿಗಳು ಈ ಕೋಟು ಉತ್ಪಾದಕರ ಬಳಿ ಈ ವರ್ಷದ ಸೆಪ್ಟೆಂಬರ್‌ ಒಳಗಾಗಿ ಚರ್ಮದ ಕೋಟುಗಳನ್ನು ಆಮದು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಅವರು ಈ ದೇಶದ ಅತ್ಯುನ್ನತ ಘನತೆ (ಕಿಮ್‌) ಹಾಗೂ ಅಧಿಕಾರಿಗಳ ಬಟ್ಟೆಯ ವಿನ್ಯಾಸವನ್ನು ನಕಲು ಮಾಡಿಕೊಂಡಿದ್ದಾರೆ. ಬಳಿಕ ಅದೇ ವಿನ್ಯಾಸದಲ್ಲಿ ಕೋಟುಗಳನ್ನು ತಯಾರಿ ಮಾಡಿ ಮಾರಾಟ ಮಾಡಿದ್ದಾರೆ," ಎಂದು ಕೂಡಾ ಮೂಲವು ಹೇಳಿದೆ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ತೂಕ ಇಳಿಕೆಯ ಬಳಿಕ ವಿಡಿಯೋ ವೈರಲ್‌ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ತೂಕ ಇಳಿಕೆಯ ಬಳಿಕ ವಿಡಿಯೋ ವೈರಲ್‌

 ಕೋಟು ನಿಷೇಧ ಬೆನ್ನಲ್ಲೇ ಯುವಕರ ಪ್ರತಿಭಟನೆ

ಕೋಟು ನಿಷೇಧ ಬೆನ್ನಲ್ಲೇ ಯುವಕರ ಪ್ರತಿಭಟನೆ

ಇನ್ನು ಚರ್ಮದ ಕೋಟನ್ನು ಉತ್ತರ ಕೊರಿಯಾದಲ್ಲಿ ನಿಷೇಧ ಮಾಡುತ್ತಿದ್ದಂತೆ ಅಲ್ಲಿನ ಯುವಕರು ಪ್ರತಿಭಟನೆ ಆರಂಭ ಮಾಡಿದ್ದಾರೆ. "ನಾವು ನಮ್ಮ ಹಣದಿಂದ ಈ ಚರ್ಮದ ಕೋಟನ್ನು ಖರೀದಿ ಮಾಡಿದ್ದೇವೆ. ಈಗ ಅದನ್ನು ಒಮ್ಮೆಲೇ ಹಿಂದಕ್ಕೆ ಪಡೆದುಕೊಳ್ಳವುದು ಎಂದರೆ ಏನು ಅರ್ಥ. ಅದು ಸರಿಯಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ದೇಶದ ನಾಯಕ ಕಿಮ್ ಜಾಂಗ್ ಉನ್‌ರ ಫ್ಯಾಷನ್‌ ಆಯ್ಕೆಗಳನ್ನು ಅನುಕರಣೆ ಮಾಡುವುದು ಅಗೌರವ ತೋರಿದಂತೆ ಎಂಬ ನಿಟ್ಟಿನಲ್ಲಿ ಜನರು ಚರ್ಮದ ಕೋಟನ್ನು ಧರಿಸುವುದನ್ನು ತಡೆಯಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜನರು ಕೋಟುಗಳನ್ನು ಧರಿಸಿದ್ದರೆ ಅದನ್ನು ವಶಕ್ಕೆ ಪಡೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ," ಎಂದು ಹೇಳಿದ್ದಾರೆ. ಇನ್ನು ಈ ನಡುವೆ ಉತ್ತರ ಕೊರಿಯಾದ ನಟ ಜಾಂಗ್‌ ಡಾಂಗ್‌ ಗನ್‌ ಕೂಡಾ ಚರ್ಮದ ಕೋಟನ್ನು ಧರಿಸಿರುವ ಚಿತ್ರಗಳು ವೈರಲ್‌ ಆಗುತ್ತಿದೆ.

 ಚರ್ಮದ ಕೋಟಿನ ಬೆಲೆಯೆಷ್ಟು ಗೊತ್ತಾ?

ಚರ್ಮದ ಕೋಟಿನ ಬೆಲೆಯೆಷ್ಟು ಗೊತ್ತಾ?

ಉತ್ತರ ಕೊರಿಯಾದಲ್ಲಿ ಚರ್ಮದ ಕೋಟುಗಳು ಬಹಳ ದುಬಾರಿ ಆಗಿದೆ. ನಿಜವಾದ ಚರ್ಮದ ಕೋಟು ಆದರೆ ಅದರ ಬೆಲೆಯು ಸುಮಾರು 170,000 ವೋನ್ (ಯು.ಎಸ್ ಡಾಲರ್‌ 34) ಆಗಿದೆ. ನಕಲಿ ಚರ್ಮದ ಕೋಟು ಆದರೆ, ಸುಮಾರು 80,000 ವೋನ್ ಅಂದರೆ 16 ಡಾಲರ್‌ ಆಗಿದೆ. ದಕ್ಷಿಣ ಕೊರಿಯಾದ ಪತ್ರಿಕೆಯಾದ ಕೊರಿಯಾ ಜುಂಗಾಂಗ್ ಡೈಲಿ ಪ್ರಕಾರ, 2018 ರಲ್ಲಿ ಉತ್ತರ ಕೊರಿಯಾದ ಸರಾಸರಿ ಮಾಸಿಕ ವೇತನವು ಸುಮಾರು 4,000 ವೋನ್ (ಯುಎಸ್ ಡಾಲರ್‌ 0.66) ಆಗಿದೆ. ಹೀಗಿರುವಾಗ ಈಗ ಈ ದುಬಾರಿ ಉಡುಪನ್ನು ಆಡಳಿತವು ತಮ್ಮಿಂದ ಕಿತ್ತುಕೊಳ್ಳುವುದು ಜನರಿಗೆ ಅಸಮಾಧಾನವನ್ನು ಉಂಟು ಮಾಡಿದೆ.

(ಒನ್‌ಇಂಡಿಯಾ ಸುದ್ದಿ)

English summary
North Korea bans leather coats to stop citizens from copping leader's iconic look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X