ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳು, ವೃದ್ಧರನ್ನು ಕಾಡುತ್ತಿರುವ ನೊರೊವೈರಸ್‌ ಎಂದರೇನು? ಹೇಗೆ ಹರಡುತ್ತೆ?

|
Google Oneindia Kannada News

ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನೊರೊವೈರಸ್ ಬಗ್ಗೆ ಪುಬ್ಲಿಕ್ ಹೆಲ್ತ್ ಇಂಗ್ಲೆಂಡ್ ಎಚ್ಚರಿಕೆ ಸಂದೇಶ ರವಾನಿಸಿದೆ. ಬೇಸಿಗೆಯಲ್ಲಿ ಈ ಸೋಂಕು ಹೆಚ್ಚಾಗಿ ಹರಡಿದ್ದು, ಕೆಲವು ವಾರಗಳಿಂದ ನರ್ಸರಿ, ಪ್ರಿಸ್ಕೂಲ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಈ ಸೋಂಕು ಹರಡುತ್ತಿದೆ. ನೊರೊವೈರಸ್ ತಡೆಯಲು ಮುನ್ನೆಚ್ಚರಿಕೆವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕಳೆದ ಒಂದೂವರೆ ವರ್ಷದಿಂದ ಇಡೀ ವಿಶ್ವವೇ ಕೊರೊನಾ ಸೋಂಕಿನ ಹೊಡೆತಕ್ಕೆ ಸಿಲುಕಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ 9 ತಿಂಗಳವರೆಗೂ ಸೇಫ್ ಎಂದ ಅಧ್ಯಯನಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ 9 ತಿಂಗಳವರೆಗೂ ಸೇಫ್ ಎಂದ ಅಧ್ಯಯನ

ಪದೇ ಪದೇ ರೂಪಾಂತರಗೊಂಡು ಕಾಡುತ್ತಿರುವ ಕೊರೊನಾ ಹತೋಟಿಗೆ ಸಿಗದೇ ಸತಾಯಿಸುತ್ತಿದೆ. ಇದರ ನಡುವೆಯೇ ಚೀನಾದಲ್ಲಿ ಕಾಣಿಸಿಕೊಂಡ ಮಂಕಿ ಬಿ ವೈರಸ್ ಕೂಡಾ ಆತಂಕಕ್ಕೆ ಕಾರಣವಾಗಿದೆ.

 ನೊರೊವೈರಸ್‌ನಿಂದ ವಾಂತಿಯಾಗುತ್ತೆ

ನೊರೊವೈರಸ್‌ನಿಂದ ವಾಂತಿಯಾಗುತ್ತೆ

ನೊರೊವೈರಸ್ ದೇಹದೊಳಗೆ ಹೊಕ್ಕರೆ ವಾಂತಿ ಹಾಗೂ ಅತಿಸಾರ ಶುರುವಾಗುತ್ತದೆ, ಈ ಸೋಂಕು ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ ಎನ್ನಲಾಗಿದೆ. ನೊರೊವೈರಸ್ ಸೋಂಕಿತರ ವಾಂತಿ ಹಾಗೂ ವಿಸರ್ಜಿಸಿದ ಕಲ್ಮಶಗಳಲ್ಲಿ ಸಕ್ರಿಯವಾಗಿರುತ್ತದೆ. ನಂತರ ಇದು ಯಾವುದೇ ಸ್ವರೂಪದಲ್ಲಿ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ಆಹಾರ, ಅಶುದ್ಧ ನೀರಿನ ಮೂಲಕವೂ ಸೋಂಕು ತಗುಲುತ್ತದೆ. ವೈರಾಣು ಇರುವ ನೀರಿನಲ್ಲಿಯೇ ಬೆಳೆಯಲ್ಪಟ್ಟ ಆಹಾರ ಪದಾರ್ಥಗಳಿಗೆ ಇದು ಅಂಟಿಕೊಂಡಿರುವ ಸಾಧ್ಯತೆಯೂ ಇದ್ದು, ಅವುಗಳನ್ನು ಸ್ವಚ್ಛಗೊಳಿಸದೇ ಸೇವಿಸಿದಾಗ ಅಥವಾ ಅವುಗಳನ್ನು ಮುಟ್ಟಿದ ನಂತರ ಕೈ ತೊಳೆಯದೇ ಮುಖವನ್ನು ಸ್ಪರ್ಶಿಸಿಕೊಂಡಾಗ, ಊಟ ಮಾಡಿದಾಗ ವೈರಾಣು ದೇಹವನ್ನು ಪ್ರವೇಶಿಸುತ್ತದೆ.

 ನೊರೊವೈರಸ್ ಹೇಗೆ ಹರಡುತ್ತೆ?

ನೊರೊವೈರಸ್ ಹೇಗೆ ಹರಡುತ್ತೆ?

*ಸೋಂಕಿತ ವ್ಯಕ್ತಿಯು ತಮ್ಮ ಕೈಗಳಿಂದ ಮುಟ್ಟುತ್ತಾರೆ, ಕೈಗಳಲ್ಲಿ ವಾಂತಿ ಅಥವಾ ಮಲದ ಕಣಗಳು ಇರುತ್ತವೆ, ಇದರಿಂದ ಸೋಂಕು ಬೇರೊಬ್ಬರಿಗೆ ತಗುಲಬಹುದು.
*ಸೋಂಕಿತರಿರುವ ಮನೆಯಲ್ಲಿ ಆಹಾರವನ್ನು ತೆರೆದಿಟ್ಟರೆ ಅದರಿಂದ ಬೇರೊಬ್ಬರಿಗೆ ಸೋಂಕು ಹರಡಬಹುದು.
*ಸೋಂಕಿತ ವ್ಯಕ್ತಿಯಿಂದ ವಾಂತಿಯ ಸಣ್ಣ ಕಣವು ಗಾಳಿ ಮೂಲಕ ಆಹಾರದ ಮೇಲೆ ಇಳಿಯುತ್ತದೆ.
*ಕಲುಷಿತ ನೀರಿನಿಂದ ಬೆಳೆದ ತರಕಾರಿ ಮೂಲಕ ಸೋಂಕು ಹರಡಬಹುದು.
*ನೀರನ್ನು ಕ್ಲೋರಿನ್ ಮೂಲಕ ಸಂಸ್ಕರಿಸದೇ ಇದ್ದಾಗ ಅಂತಹ ನೀರಿನಿಂದಲೂ ಸೋಂಕು ಹರಡುತ್ತದೆ.
ಆತಂಕಕಾರಿ ವೈರಾಣುಗಳ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿದ್ದು, ಇಂಗ್ಲೆಂಡ್​ನಲ್ಲಿ ಈಗಾಗಲೇ ತಳಮಳ ಹುಟ್ಟುಹಾಕಿದೆ. ನೊರೊವೈರಸ್ ಅಥವಾ ವಾಮಿಟಿಂಗ್ ಬಗ್ ಎಂದು ಕರೆಯಲ್ಪಡುವ ಈ ವೈರಾಣು ಇಂಗ್ಲೆಂಡ್​ನಲ್ಲಿ ದಿನೇ ದಿನೇ ವ್ಯಾಪಿಸುತ್ತಿದೆ.
ಈ ವೈರಾಣುವಿನಿಂದ ಹೆಚ್ಚಿನವರು ಯಾವುದೇ ಚಿಕಿತ್ಸೆ ಇಲ್ಲದೇ ಗುಣಮುಖರಾಗುವ ಸಾಧ್ಯತೆ ಇದೆಯಾದರೂ ವೃದ್ಧರು, ಚಿಕ್ಕ ಮಕ್ಕಳು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಎದುರಾಗಬಹುದು. ಹೀಗಾಗಿ ಆರೋಗ್ಯವಂತರು, ಸದೃಢವಾಗಿರುವವರು ಈ ಕಾಯಿಲೆಯನ್ನು ಆರಾಮಾಗಿ ಎದುರಿಸಬಹುದಾದರೂ ಮಕ್ಕಳು ಹಾಗೂ ವೃದ್ಧರ ವಿಚಾರದಲ್ಲಿ ಅಗತ್ಯ ಎಚ್ಚರಿಕೆ ಬೇಕೇಬೇಕು.

 ಅಮೆರಿಕದಲ್ಲಿ ಆಹಾರದಿಂದ ಉಂಟಾಗುವ ಸಮಸ್ಯೆಗೆ ಇದೇ ವೈರಾಣು ಕಾರಣ

ಅಮೆರಿಕದಲ್ಲಿ ಆಹಾರದಿಂದ ಉಂಟಾಗುವ ಸಮಸ್ಯೆಗೆ ಇದೇ ವೈರಾಣು ಕಾರಣ

ನೊರೊವೈರಸ್ ಒಂದು ಸಾಂಕ್ರಾಮಿಕ ಕಾಯಿಲೆಗೆ ಕಾರಣವಾದ ವೈರಾಣುವಾಗಿದ್ದು, ಅಮೆರಿಕಾದಲ್ಲಿ ಆಹಾರದಿಂದ ಉಂಟಾಗುವ ಹೆಚ್ಚಿನ ಸಮಸ್ಯೆಗಳಿಗೆ ಇದೇ ವೈರಾಣು ಮೂಲವಾಗಿದೆ ಎಂದು ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್) ಹೇಳಿದೆ. ಇದನ್ನು ಹೊಟ್ಟೆ ಜ್ವರ ಎಂದೂ ಕರೆಯಲಾಗುತ್ತಿದ್ದು, ಸಾಧಾರಣವಾಗಿ ಇದು ಕಾಲದಲ್ಲೂ ಕಾಣಿಸಿಕೊಳ್ಳುವುದಿಲ್ಲ.

 ಗುಣಲಕ್ಷಣಗಳೇನು?

ಗುಣಲಕ್ಷಣಗಳೇನು?

ನೊರೊವೈರಸ್ ದೇಹಕ್ಕೆ ಹೊಕ್ಕು 12ರಿಂದ 48 ಗಂಟೆಗಳೊಳಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸುಮಾರು ಮೂರ್ನಾಲ್ಕು ದಿನಗಳ ಕಾಲ ಇರುವ ಈ ಕಾಯಿಲೆ ಹೊಟ್ಟೆನೋವು, ಅತಿಸಾರ, ವಾಕರಿಕೆ, ವಾಂತಿ, ಜ್ವರ, ಹೊಟ್ಟೆನೋವು, ಮೈಕೈ ನೋವು, ಸುಸ್ತಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಈ ಯಾವ ಗುಣಲಕ್ಷಣಗಳನ್ನೂ ತೋರಿಸದೆಯೂ ವೈರಾಣು ಬಾಧಿಸುವ ಸಾಧ್ಯತೆ ಇರುತ್ತದೆ ಎನ್ನುವುದನ್ನೂ ತಜ್ಞರು ಹೇಳುತ್ತಾರೆ.

English summary
The Public Health England (PHE) has issued a warning of an increase in the number of cases of the vomiting bug norovirus. The official PHE data revealed that the highly infectious norovirus is widespread in the summer season and has been spreading drastically over the past few weeks among preschool children in nurseries and childcare facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X