ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮಾರುಕಟ್ಟೆಗೆ ಆಲ್ಕೋಹಾಲ್ ಇಲ್ಲದ ಸ್ಯಾನಿಟೈಸರ್!

|
Google Oneindia Kannada News

ನವದೆಹಲಿ, ಜೂನ್ 17: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಲಸಿಕೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರದ ಜೊತೆಗೆ ಮಾರ್ಗಸೂಚಿಗಳ ಪಾಲನೆಯು ತೀರಾ ಅತ್ಯಗತ್ಯ ಎಂದು ಗುರುತಿಸಿಕೊಂಡಿವೆ. ಇದರ ಮಧ್ಯೆ ಅತ್ಯಾಧುನಿಕ ಸ್ಯಾನಿಟೈಸರ್ ಒಂದು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಕೈಗಳಿಗೆ ಸೌಮ್ಯವಾಗಿರುವ ಮತ್ತು ಕೈಯನ್ನು ಒಣಗಿಸದಿರುವ ಪರಿಸರ ಸ್ನೇಹಿ ಹ್ಯಾಂಡ್ ಸ್ಯಾನಿಟೈಜರ್, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸಿಗಲಿದೆ. ಆಲ್ಕೋಹಾಲ್ ಮುಕ್ತ, ನೀರಿನ ದ್ರಾವಕದ, ಉರಿಯದ ಮತ್ತು ವಿಷಕಾರಿಯಲ್ಲದ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಪುಣೆ ಮೂಲದ ನವೋದ್ಯಮ ಸಂಸ್ಥೆ ಸಿಲ್ವರ್ ನ್ಯಾನೊಪರ್ಟಿಕಲ್ಸ್ ಅಭಿವೃದ್ಧಿಪಡಿಸಿದೆ. ಸ್ಯಾನಿಟೈಜರ್ ಅನ್ನು ಪದೇ ಪದೇ ಬಳಸುವುದರಿಂದ ಕೈಗಳನ್ನು ಒಣಗಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು.

Non-toxic, Gentler, Long Lasting Hand Sanitiser Enters Indian market: Read Here Details

ವಿ-ಇನ್ನೋವೇಟ್-ಬಯೋಸೊಲ್ಯೂಷನ್ಸ್ ಅಭಿವೃದ್ಧಿಪಡಿಸಿದ ಸ್ಯಾನಿಟೈಜರ್ ಆಂಟಿಮೈಕ್ರೊಬಿಯಲ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಸಿಲ್ವರ್ ನ್ಯಾನೊಪಾರ್ಟಿಕಲ್ಸ್ ಸಂಪರ್ಕಕ್ಕೆ ಬರುವ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಅಗತ್ಯವಿರುವ ಐಯಾನ್ ಅನ್ನು ಬಿಡುಗಡೆ ಮಾಡುತ್ತವೆ.

ಸ್ಯಾನಿಟೈಸರ್ ಬಳಕೆಗೆ ಪರವಾನಗಿ ನಿರೀಕ್ಷೆ:
"ಅಧ್ಯಯನದ ಫಲಿತಾಂಶಗಳ ಬಗ್ಗೆ ನಮಗೆ ತುಂಬಾ ವಿಶ್ವಾಸವಿದೆ ಮತ್ತು ನಮ್ಮ ಸ್ಯಾನಿಟೈಸರ್ ಬಳಕೆಗೆ ಭಾರತದ ಸಿಡಿಎಸ್ ಸಿ ಓ ಮೂಲಕ ಅಗತ್ಯವಿರುವ ಪರವಾನಗಿಯನ್ನು ಪಡೆಯಲು ಕಾಯುತ್ತಿದ್ದೇವೆ. ಇಂತಹ ಆವಿಷ್ಕಾರವು ದೇಶವನ್ನು 'ಆತ್ಮನಿರ್ಭರ ಭಾರತ್' ಧ್ಯೇಯದತ್ತ ತೆಗೆದುಕೊಂಡು ಹೋಗುತ್ತದೆ. ಭವಿಷ್ಯದಲ್ಲಿ ಇಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ನಮಗೆ ವಿಶ್ವಾಸವಿದೆ," ಎಂದು ವಿ-ಇನ್ನೋವೇಟ್-ಬಯೋಸೊಲ್ಯೂಷನ್ಸ್ ಸಂಸ್ಥೆಯು ಸಹ-ಸಂಸ್ಥಾಪಕ ಮತ್ತು ಸಿಒಒ ಡಾ. ಅನುಪಮಾ ಹೇಳಿದ್ದಾರೆ .

ಸಿಲ್ವರ್ ನ್ಯಾನೊ ಪಾರ್ಟಿಕಲ್ಸ್ ಸ್ಯಾನಿಟೈಸ್ ಎಂಬುದು ಎಚ್ಐವಿ, ಹೆಪಟೈಟಿಸ್ ಬಿ, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಇನ್ಫ್ಲುಯೆನ್ಸ ವೈರಸ್ ಮುಂತಾದ ಅನೇಕ ಮಾರಕ ರೋಗಾಣುಗಳ ವಿರುದ್ಧ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ. ವೈರಲ್ ನೆಗಟಿವ್-ಸ್ಟ್ರಾಂಡ್ ಆರ್ಎಎನ್ ಮತ್ತು ವೈರಲ್ ಮೊಳಕೆಯ ಸಂಶ್ಲೇಷಣೆಯನ್ನು ತಡೆಯುವ ಮೂಲಕ ಕೊರೊನಾ ರೋಗಾಣುವಿನ ಹರಡುವಿಕೆಯ ಪ್ರಮಾಣವನ್ನು ತಡೆಯುವಲ್ಲಿ ಗ್ಲುಟಾಥಿಯೋನ್ ಕ್ಯಾಪ್ಡ್-ಎಗ್ 2 ಎಸ್ ಎನ್ಸಿಗಳ (ಸಿಲ್ವರ್ ನ್ಯಾನೊ ಕ್ಲಸ್ಟರ್ಗಳು) ಪಾತ್ರವಿದೆ.
ವಿಇನ್ನೋವೇಟ್-ಬಯೋಸೊಲ್ಯೂಷನ್ಸ್ ನ ಸ್ಯಾನಿಟೈಸರ್ ತಂತ್ರಜ್ಞಾನವನ್ನು ಆಧರಿಸಿರುವ ಥೆಕೊಲಾಯ್ಡಲ್ ಬೆಳ್ಳಿ, ಮೇಲ್ಮೈ ಗ್ಲೈಕೊಪ್ರೋಟೀನ್ಗಳನ್ನು ನಿರ್ಬಂಧಿಸುವ ಮೂಲಕ ಆರ್ಎನ್ ಎ ಪುನರಾವರ್ತನೆ ಮತ್ತು ಸಾಂಕ್ರಾಮಿಕತೆಯನ್ನು ತಡೆಯುವ ಮೂಲಕ ಕೋವಿಡ್ -19 ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರಸ್ತುತ ತಂಡವು ವಿವಿಧ ರೀತಿಯ ರೋಗಾಣುಗಳ ಮೇಲೆ ಸ್ಯಾನಿಟೈಸರ್ನ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಅಧ್ಯಯನವನ್ನು ನಡೆಸುತ್ತಿದೆ.

English summary
Non-toxic, Gentler, Long Lasting Hand Sanitiser Enters Indian market: Read Here Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X