• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಳಯ: ಭೂಮಿಗೆ ಇನ್ನೂ 100 ವರ್ಷ ಯಾವುದೇ ಕಂಟಕ ಇರುವುದಿಲ್ಲ..!

|
Google Oneindia Kannada News

ಕೊರೊನಾ ಕೊರೊನಾ ಅಂತಾ ಕೊರಗುತ್ತಾ 2020ನ್ನು ಹೇಗೋ ತಳ್ಳಿದ್ದು ಆಯ್ತು. 2021ರಲ್ಲಿ ನೆಮ್ಮದಿಯಾಗಿ ಬದುಕಬಹುದು ಅಂತಾ ಮಾನವರು ಕನಸು ಕಟ್ಟಿದ್ದಾರೆ. ಆದ್ರೆ ಹೊಸವರ್ಷ ಆರಂಭವಾಗಿ 3 ತಿಂಗಳು ಕಳೆದಿಲ್ಲ ಭೂಮಿಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಿದೆ.

'2001- F032' ಕ್ಷುದ್ರಗ್ರಹ ಭೂಮಿಯಿಂದ ತುಂಬಾ ಹತ್ತಿರದಲ್ಲೇ ಹಾದು ಹೋಗಿತ್ತು. ಈಗ ಇಂತಹದ್ದೇ ಮತ್ತೊಂದು ಸಂದೇಶ ತಂದಿದ್ದಾರೆ ವಿಜ್ಞಾನಿಗಳು. ಆದರೆ ಈ ಬಾರಿ ಶಾಕಿಂಗ್ ಸುದ್ದಿಯಲ್ಲ, ಬದಲಾಗಿ ಸಿಹಿಸುದ್ದಿಯೇ ಸಿಕ್ಕಿದೆ. ಗ್ರೀಕ್ ದೇವತೆ 'ಅಪೋಫಿಸ್' ಹೆಸರಿನ ಕ್ಷುದ್ರಗ್ರಹ ಸದ್ಯಕ್ಕೆ ಭೂಮಿಗೆ ಬಡಿಯುವುದಿಲ್ಲ ಎಂದು ವಿಜ್ಞಾನಿಗಳು ಗ್ಯಾರಂಟಿ ಕೊಟ್ಟಿದ್ದಾರೆ.

ಭೂಮಿ ಜಸ್ಟ್ ಮಿಸ್! ಕೂದಲೆಳೆ ಅಂತರದಲ್ಲಿ ದೂರವಾಯ್ತು ಮಹಾ ಕಂಟಕ!ಭೂಮಿ ಜಸ್ಟ್ ಮಿಸ್! ಕೂದಲೆಳೆ ಅಂತರದಲ್ಲಿ ದೂರವಾಯ್ತು ಮಹಾ ಕಂಟಕ!

ಆದರೆ ಈ ಮೊದಲು 2068ರಲ್ಲಿ ಭೂಮಿಗೆ ಬಡಿಯಬಹುದು ಎಂದು ಅಂದಾಜು ಮಾಡಲಾಗಿತ್ತು. ಹೊಸ ಅಧ್ಯಯನ ವರದಿಗಳ ಪ್ರಕಾರ ಸದ್ಯ ಭೂಮಿಗೆ ಕಂಟಕ ಇಲ್ಲ. ಆದರೆ 100 ವರ್ಷಗಳ ನಂತರ ಕಂಟಕ ಎದುರು ಬಂದರೂ ಅಚ್ಚರಿ ಇಲ್ಲವಂತೆ. ಅಷ್ಟೊತ್ತಿಗೆ ಮಾನವ ತಂತ್ರಜ್ಞಾನದಲ್ಲಿ ಎತ್ತರಕ್ಕೆ ಬೆಳೆದಿದ್ದರೆ ಈ ಕ್ಷುದ್ರಗ್ರಹ ಅಪಾಯದಿಂದ ತಪ್ಪಿಸಿಕೊಳ್ಳಬಹುದು, ಇಲ್ಲವಾದರೆ ಸಂಕಷ್ಟ ಗ್ಯಾರಂಟಿ.

ಇಡೀ ಭೂಮಿಯೇ ಸರ್ವನಾಶ..!

ಇಡೀ ಭೂಮಿಯೇ ಸರ್ವನಾಶ..!

ಅಕಸ್ಮಾತ್ ಅಪೋಫಿಸ್ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಊಹೆಗೂ ನಿಲುಕದ ವಿನಾಶ ಸೃಷ್ಟಿಸಬಹುದು. ಇದನ್ನ ಡೈನಾಮೈಟ್‌ನ ಸ್ಫೋಟಕ್ಕೆ ಹೋಲಿಸುವುದಾದರೆ, ಸುಮಾರು 880 ಮಿಲಿಯನ್ ಟನ್ ಡೈನಾಮೈಟ್ ಅಂದರೆ ಹಿರೋಶಿಮಾ ನಗರವನ್ನೇ ಛಿದ್ರ ಮಾಡಿದ್ದ ನ್ಯೂಕ್ಲಿಯರ್ ಬಾಂಬ್‌ ರೀತಿ 65 ಸಾವಿರ ಅಣುಬಾಂಬ್‌ ಅನ್ನು ಒಂದೇ ಟೈಂಗೆ ಸ್ಫೋಟಿಸಿದಷ್ಟು ಪ್ರಭಾವ ಬೀರಲಿದೆ. ಆಗ ಯಾವುದೇ ತಂತ್ರಜ್ಞಾನ ಕೂಡ ಮಾನವನನ್ನು ಉಳಿಸಿಕೊಳ್ಳಲು ನೆರವಿಗೆ ಬರುವುದಿಲ್ಲ. ಹೀಗಾಗಿ ವಿಜ್ಞಾನಿಗಳು ಅಪೋಫಿಸ್ ಕ್ಷುದ್ರಗ್ರಹದ ಬಗ್ಗೆ ಸಿಕ್ಕಾಪಟ್ಟೆ ಟೆನ್ಷನ್ ತೆಗೆದುಕೊಂಡಿದ್ದರು. ಆದರೆ ಇದೀಗ ಒಂದಷ್ಟು ರಿಲೀಫ್ ಸಿಕ್ಕಿದೆ.

3 ಫುಟ್‌ಬಾಲ್ ಫೀಲ್ಡ್‌ಗೆ ಸಮ..!

3 ಫುಟ್‌ಬಾಲ್ ಫೀಲ್ಡ್‌ಗೆ ಸಮ..!

ಗ್ರೀಕ್ ದೇವತೆ ‘ಅಪೋಫಿಸ್' ಹೆಸರಿನ ಕ್ಷುದ್ರಗ್ರಹ ಸಾಮಾನ್ಯದಲ್ಲ, ಸುಮಾರು 3 ಫುಟ್‌ಬಾಲ್ ಫೀಲ್ಡ್‌ಗೆ ಇದು ಸಮವಾಗಿರುತ್ತದೆ. ಅಷ್ಟಕ್ಕೂ ಈ ಕ್ಷುದ್ರಗ್ರಹ ತನ್ನ ಗುರುತ್ವಾಕರ್ಷಣ ವಕ್ರಪಥ ಬಿಟ್ಟು ಪ್ರತಿವರ್ಷವೂ 170 ಮೀಟರ್ ಜಾರುತ್ತಿರುವುದು ಅಧ್ಯಯನಗಳಲ್ಲಿ ಕನ್ಫರ್ಮ್ ಆಗಿತ್ತು. ಇದೇ ಕಾರಣಕ್ಕೆ ಭಾರಿ ಆತಂಕ ವಿಜ್ಞಾನ ಲೋಕದಲ್ಲಿ ಆವರಿಸಿತ್ತು. ಆದರೆ ಇದೀಗ ಸಿಕ್ಕಿರುವ ಡೇಟಾ ಪ್ರಕಾರ ಭೂಮಿಗೆ ‘ಅಪೋಫಿಸ್'ನಿಂದ 100 ವರ್ಷಗಳ ಕಾಲ ಅಪಾಯ ಇಲ್ಲ ಎನ್ನಲಾಗುತ್ತಿದೆ. ಸಂಕಷ್ಟದ ನಡುವೆ ಇದು ನೆಮ್ಮದಿಯ ವಿಚಾರವಾಗಿದೆ ಎನ್ನುತ್ತಿದ್ದಾರೆ ಬಾಹ್ಯಾಕಾಶ ವಿಜ್ಞಾನಿಗಳು.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.

ಊಹೆಗೂ ನಿಲುಕದಷ್ಟು ಸಂಪತ್ತು..!

ಊಹೆಗೂ ನಿಲುಕದಷ್ಟು ಸಂಪತ್ತು..!

ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.

English summary
Scientists confirmed that there is no problem for Earth till 100 years from asteroid Apophis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X