• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಗತಿಕ ದಾಖಲೆ: 200 ದಿನದಿಂದ ಈ ದೇಶದಲ್ಲಿ ಒಂದೂ ಕೊರೊನಾ ಪ್ರಕರಣವಿಲ್ಲ

|

ನವದೆಹಲಿ, ಅಕ್ಟೋಬರ್ 29: ಕೋವಿಡ್ 19 ಪ್ರಕರಣಗಳಿಂದ ಇಡೀ ಜಗತ್ತಿನಾದ್ಯಂತ ಅನೇಕ ದೇಶಗಳು ತತ್ತರಿಸಿದ್ದು, ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅದರೆ ವಿಶೇಷವೆಂದರೆ ತೈವಾನ್ ದೇಶದಲ್ಲಿ 200 ದಿನಗಳಲ್ಲಿ ಇದುವರೆಗೂ ಸ್ಥಳೀಯವಾಗಿ ಕೊರೊನಾ ವೈರಸ್ ಪ್ರಸರಣವಾದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ತೈವಾನ್‌ನಲ್ಲಿ ನಾವೆಲ್ ಕೊರನಾ ವೈರಸ್ ಪ್ರಕರಣಗಳ ಎರಡನೆಯ ಅಲೆ ಇಲ್ಲ. ಜಗತ್ತಿನ ಕೋವಿಡ್ ನಿರ್ವಹಣೆಯಲ್ಲಿ ತೈವಾನ್ ಅತ್ಯುತ್ತಮ ಸಾಧನೆ ತೋರಿದೆ. ಗುರುವಾರದ ವೇಳೆಗೆ ಯಾವುದೇ ಸ್ಥಳೀಯವಾಗಿ ಪ್ರಸರಣಗೊಂಡ ಕೋವಿಡ್ ಪ್ರಕರಣವಿಲ್ಲದೆ 200 ದಿನಗಳನ್ನು ಪೂರೈಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಏಪ್ರಿಲ್ 12ರಂದು ಕೊನೆಯ ಬಾರಿಗೆ ತೈವಾನ್‌ನಲ್ಲಿ ಸ್ಥಳೀಯವಾಗಿ ಪ್ರಸರಣಗೊಂಡ ಕೋವಿಡ್ 19 ಸೋಂಕು ವರದಿಯಾಗಿತ್ತು.

ಯಾರನ್ನೂ ಬಿಡುವುದಿಲ್ಲ, ಪ್ರತಿ ಭಾರತೀಯನಿಗೂ ಲಸಿಕೆ ಸಿಗಲಿದೆ: ಪ್ರಧಾನಿ ಮೋದಿ

ತೈವಾನ್‌ನಲ್ಲಿ ಇರುವರೆಗೂ ಕೇವಲ 553 ಕೊರೊನಾ ವೈರಸ್ ಪ್ರಕರಣಗಳು ಮತ್ತು ಏಳು ಸಾವಿನ ಪ್ರಕರಣಗಳು ಮಾತ್ರವೇ ವರದಿಯಾಗಿವೆ. ಜಗತ್ತಿನ ದೇಶಗಳು ಎರಡನೆಯ ಅಲೆಯ ಕೋವಿಡ್ ಸೋಂಕಿನ ಪ್ರಕರಣಗಳನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ತೈವಾನ್ ಕೋವಿಡ್ ನಿರ್ವಹಣೆ ಮಾಡಿರುವ ಬಗೆ ಅಚ್ಚರಿ ಮೂಡಿಸಿದೆ.

ಸಾರ್ಸ್ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ತೈವಾನ್ ಅತ್ಯಂತ ಮಾರಕ ಪರಿಸ್ಥಿತಿಯನ್ನು ಎದುರಿಸಿತ್ತು. ಅದರಿಂದ ಪಾಠ ಕಲಿತಿದ್ದ ದೇಶವು, ಕೋವಿಡ್ ಹರಡುವ ಮುನ್ನವೇ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದೆ ಓದಿ.

ಪರಿಣಾಮಕಾರಿ ನಿಯಮಗಳು

ಪರಿಣಾಮಕಾರಿ ನಿಯಮಗಳು

ತೈವಾನ್ ದೇಶವು ಕೋವಿಡ್ ನಿಯಂತ್ರಣದ ಶಿಷ್ಟಾಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಸರಿಸಿದ್ದು, ಕೊರೊನಾ ವೈರಸ್ ಸೋಂಕು ಹರಡುವ ಆರಂಭದಲ್ಲಿಯೇ ತನ್ನ ಗಡಿಗಳನ್ನು ಮುಚ್ಚಿದ್ದಲ್ಲದೆ, ಪ್ರಯಾಣ ಚಟುವಟಿಕೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು.

ಮುನ್ನೆಚ್ಚರಿಕೆ ಕ್ರಮಗಳು

ಮುನ್ನೆಚ್ಚರಿಕೆ ಕ್ರಮಗಳು

ಜತೆಗೆ ತೈವಾನ್ ಅತ್ಯಂತ ಕಠಿಣ ಸಂಪರ್ಕ ಪತ್ತೆ ಕಾರ್ಯಾಚರಣೆ ನಡೆಸಿದ್ದು ಕೂಡ ಅದಕ್ಕೆ ಅನುಕೂಲ ಮಾಡಿಕೊಟ್ಟಿತು. ತಂತ್ರಜ್ಞಾನ ಪ್ರೇರಿತ ಕ್ವಾರೆಂಟೈನ್ ಮತ್ತು ವ್ಯಾಪಕವಾಗಿ ಮಾಸ್ಕ್ ಧರಿಸುವಿಕೆಯ ಚಟುವಟಿಕೆಯನ್ನು ಅನುಸರಿಸಲಾಗಿತ್ತು. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಪರಿಣತರು ಸೂಚಿಸಿದ ಎಲ್ಲ ನಿಯಮಗಳನ್ನೂ ತೈವಾನ್ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು.

ಫ್ರಾನ್ಸ್‌ನಲ್ಲಿ ಮತ್ತೆ ಕೊವಿಡ್ ಅಬ್ಬರ: ಎರಡನೇ ಲಾಕ್‌ಡೌನ್‌ ಘೋಷಣೆ

ಗಡಿಗಳನ್ನು ಮುಚ್ಚಿದ್ದ ತೈವಾನ್

ಗಡಿಗಳನ್ನು ಮುಚ್ಚಿದ್ದ ತೈವಾನ್

ಗಡಿ ನಿಯಂತ್ರಣವು ತೈವಾನ್ ಅತ್ಯಂತ ಕಠಿಣವಾಗಿ ಅನುಸರಿಸಿದ ಅತಿ ಮಹತ್ವದ ಶಿಷ್ಟಾಚಾರ ತೀರ್ಮಾನವಾಗಿತ್ತು. ಜನವರಿಯಲ್ಲಿ ವೈರಸ್ ಹರಡುವಿಕೆ ಹೆಚ್ಚಾದಂತೆಯೇ ಅದು ತನ್ನ ಪ್ರಜೆಗಳಲ್ಲದವರಿಗೆ ಗಡಿಗಳನ್ನು ಮುಚ್ಚಿಬಿಟ್ಟಿತು. ಅಲ್ಲಿಂದ ಇಲ್ಲಿಯವರೆಗೂ ಗಡಿಯಲ್ಲಿನ ಓಡಾಟವನ್ನು ಅತ್ಯಂತ ಕಠಿಣವಾಗಿ ಅದು ನಿರ್ಬಂಧಿಸುತ್ತಿದೆ.

ಮಾಸ್ಕ್ ಉತ್ಪಾದನೆ ಹೆಚ್ಚಳ

ಮಾಸ್ಕ್ ಉತ್ಪಾದನೆ ಹೆಚ್ಚಳ

ತೈವಾನ್‌ನಲ್ಲಿ ಆರಂಭದಿಂದಲೂ ಪ್ರತಿಯೊಬ್ಬರಿಗೂ ಮಾಸ್ಕ್ ಹಂಚಿಕೆ ಮಾಡಲಾಗಿತ್ತು. ಹಾಗೆಯೇ ಪ್ರತಿಯೊಬ್ಬರೂ ಅದನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಲಾಯಿತು. ದೇಶದೊಳಗೆ ಮಾಸ್ಕ್‌ಗಳ ಲಭ್ಯತೆ ಹೆಚ್ಚಾಗಿರುವಂತೆ ನೋಡಿಕೊಳ್ಳಲು ಮಾಸ್ಕ್‌ಗಳ ರಫ್ತನ್ನು ನಿಷೇಧಿಸಿತು. ನಾಲ್ಕು ತಿಂಗಳೊಳಗೆ ದೇಶದಲ್ಲಿನ ಕಂಪೆನಿಗಳು ಪ್ರತಿ ದಿನಕ್ಕೆ 2 ಮಿಲಿಯನ್‌ನಿಂದ 20 ಮಿಲಿಯನ್‌ಗೆ ಮಾಸ್ಕ್ ಉತ್ಪಾದನೆಯನ್ನು ಹೆಚ್ಚಿಸಿದವು. ಇದರಿಂದ ನಾಗರಿಕರಿಗೆ ಮಾಸ್ಕ್ ಕೊರತೆಯಾಗದಂತೆ ನೋಡಿಕೊಂಡಿತು.

ಸಂಪರ್ಕಿತರ ಪತ್ತೆಯಲ್ಲಿ ಯಶಸ್ವಿ

ಸಂಪರ್ಕಿತರ ಪತ್ತೆಯಲ್ಲಿ ಯಶಸ್ವಿ

ಸಂಪರ್ಕಿತರ ಪತ್ತೆಯು ತೈವಾನ್ ಅತ್ಯುತ್ತಮವಾಗಿ ನಿಭಾಯಿಸಿದ ಮತ್ತೊಂದು ವಿಭಾಗ. ಪ್ರತಿ ಖಚಿತ ಪ್ರಕರಣಕ್ಕೆ ಸರಾಸರಿ 20-30 ಸಂಪರ್ಕಗಳು ಸಂಬಂಧಿಸಿರುತ್ತವೆ. ಆದರೆ ತೈವಾನ್‌ನಲ್ಲಿ ಸರ್ಕಾರವು ಪ್ರತಿ ಒಂದು ಪ್ರಕರಣಕ್ಕೆ ಕನಿಷ್ಠ 150 ಮಂದಿ ಸಂಪರ್ಕಿತರನ್ನು ಪತ್ತೆಹಚ್ಚಿತ್ತು. ಹಾಗೆ ಸೋಂಕಿತರೊಂದಿಗೆ ಯಾವುದೇ ರೀತಿ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕಠಿಣ 14 ದಿನಗಳ ಕ್ವಾರೆಂಟೈನ್‌ಗೆ ಒಳಪಡಿಸಿತು. ಅವರಲ್ಲಿ ನೆಗೆಟಿವ್ ಇದ್ದರೂ ಹೊರಗೆ ಬರಲು ಅವಕಾಶ ನೀಡಿರಲಿಲ್ಲ. ಹೆಚ್ಚಿನ ದೇಶಗಳು ಇದರಲ್ಲಿ ವಿಫಲವಾಗಿದ್ದವು.

English summary
Taiwan has set a record by not reporting any locally transmitted coronavirus cases in 200 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X