ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರ ರಸ್ತೆಯಲ್ಲಿ ಸಂಚಾರ ನಿಷೇಧ ತೆರವಿನ ಹಿಂದೆ ರಾಜಕೀಯ ದುರುದ್ದೇಶ

By ಜೋಸೆಫ್ ಹೂವರ್
|
Google Oneindia Kannada News

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿಷೇಧ ಹೇರುವಂತೆ ಪರಿಸರವಾದಿಗಳು, ವನ್ಯಜೀವಿ ತಜ್ಞರು ಹಿಡಿದಿರುವ ಪಟ್ಟು ಕರ್ನಾಟಕ ಮತ್ತು ಕೇರಳ ಸರ್ಕಾರಗಳ ನಿದ್ದೆ ಕೆಡಿಸಿದೆ.

ಸುಪ್ರೀಂ ಕೋರ್ಟ್ ಈ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿದ್ದರೂ, ಆ ನಿಷೇಧವನ್ನು ತೆರವುಗೊಳಸಲು ದಿನ ದಿನವೂ ಸಾವಿರಾರು ಮಂದಿ ಬೀದಿಗಿಳಿದು ಹೋರಾಟ ಮಾಡುತ್ತಿರುವುದಕ್ಕೆ ಕಾರಣವಿದೆ!

ರಾತ್ರಿ ಸಮಯದಲ್ಲಿ ನಡೆಯುವ ಹಲವು ಕಳ್ಳಸಾಗಣೆ, ಅರಣ್ಯ ದರೋಡೆಗಳಿಗೆ ನ್ಯಾಯಾಲಯದ ಆದೇಶ ತೊಡಕಾಗಿತ್ತು. ತುರ್ತು ಮತ್ತು ಭದ್ರತಾ ಸಿಬ್ಬಂದಿ ವಾಹನಗಳನ್ನು ಬಿಟ್ಟು ಬೇರೆಲ್ಲ ವಾಹನಗಳಿಗೂ ಈ ರಸ್ತೆಯಲ್ಲಿ ಸಂಪೂರ್ಣ ನಿಷೇಧ ವಿಧಿಸಬೇಕು ಎಂಬ ಕೂಗೂ ಎದ್ದಿತ್ತು. ಆದರೆ ಸರ್ಕಾರವೇ ಸಾವಿರಾರು ಜನರನ್ನು ಪ್ರೇರೇಪಿಸಿ, ಈ ಆದೇಶ ಜಾರಿಗೆ ಬರದಂತೆ ಮಾಡಿತ್ತು.

ಬಂಡೀಪುರ-ಕೇರಳ ರಾತ್ರಿ ಸಂಚಾರ ತೆರವುಗೊಳಿಸದಂತೆ ವಾಟಾಳ್ ಪ್ರತಿಭಟನೆಬಂಡೀಪುರ-ಕೇರಳ ರಾತ್ರಿ ಸಂಚಾರ ತೆರವುಗೊಳಿಸದಂತೆ ವಾಟಾಳ್ ಪ್ರತಿಭಟನೆ

Night Traffic Ban In Bandipur Tiger Reserve Premise: A Matter Of Debate Now

ಆದರೆ ಇದೀಗ ವೈಲ್ಡ್ ಲೈಫ್ ಫಸ್ಟ್ ಎಂಬ ಎನ್ ಜಿಒ ವೊಂದು ಮನೋಹರ್ ವ್ಯಾಸ್ ಮತ್ತು ಪಿಕೆ ಮನೋಹರ್ ಎಂಬುವವರ ಮೂಲಕ ದಾವೆಗೆ ಸೇರಿಸುವಂತೆ ಹಾಕಲಾಗಿದ್ದ ಅರ್ಜಿ (Impleading Application) ಅರ್ಜಿ ಭಾರತ ಸರ್ಕಾರದ ಅಟಾರ್ನಿ ಜನರಲ್ ಹರೀಶ್ ಸಾಳ್ವೆ ಅವರ ಗಮನ ಸೆಳೆದಿತ್ತು. ಕರ್ನಾಟಕ ಮತ್ತು ಕೇರಳ ಗಡಿಯ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುವ ಎನ್ ಎಚ್ 766 ರಲ್ಲಿ ಸಂಪೂರ್ಣ ಸಂಚಾರ ನಿಷೇಧಿಸಬೇಕೆಂಬ ಒತ್ತಾಯವನ್ನು ಸುಪ್ರೀಂ ಕೋರ್ಟ್ ಮುಂದಿಡುವುದಕ್ಕೆ ಅದು ನೆರವಾಗಿತ್ತು.

ಕರ್ನಾಟಕ ಕೇರಳ ನಡುವೆ ರಾತ್ರಿ ಮಾತ್ರ ಸಂಚಾರ ಬಂದ್ಕರ್ನಾಟಕ ಕೇರಳ ನಡುವೆ ರಾತ್ರಿ ಮಾತ್ರ ಸಂಚಾರ ಬಂದ್

ಆದರೆ ಕೇರಳ ಮತ್ತು ಕರ್ನಾಟಕದ ಶಾಸಕರು, ಪ್ರಭಾವಿಗಳ ನಡೆವೆ ನಡೆದ ಮಾತುಕತೆಯ ನಂತರ ಈ ರಸ್ತೆಯನ್ನು ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಮಾತ್ರ ಮುಚ್ಚಬೇಕು, ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ, ಆ ಆದೇಶವನ್ನೇ ಜಾರಿಗೆ ಬರುವಂತೆ ಮಾಡಿದರು.

ಇದೀಗ ಇದ್ದಕ್ಕಿದ್ದಂತೆ ರಾತ್ರಿ ಸಂಚಾರ ನಿಷೇಧವನ್ನೂ ತೆರವುಗೊಳಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಕುರಿತಂತೆ 2018 ರಲ್ಲೇ ವೈಲ್ಡ್ ಲೈಫ್ ಫಸ್ಟ್ ಅರ್ಜಿ ಸಲ್ಲಿಸಿದ್ದರೂ, ಅದನ್ನು ಸುಪ್ರೀಂ ಕೋರ್ಟ್ ಇಂದಿಗೂ ಕೈಗೆಟ್ಟಿಕೊಂಡಿಲ್ಲ. ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಬಾರದೆಂದು ಹಲವು ಪರಿಸರ ವಾದಿಗಳು, ವನ್ಯಜೀವಿ ತಜ್ಞರು ಬೀದಿಗಿಳಿದಿದ್ದು, ಇದೀಗ ಈ ಹೋರಾಟಕ್ಕೆ ರಾಹುಲ್ ಗಾಂಧಿ ಅವರಂಥ ಹಲವು ಮುಖಂಡರು ಕೈಜೋಡಿಸಿದ್ದಾರೆ. ಇದು ದಕ್ಷಿಣ ಭಾರತದ ಸೂಕ್ಷ್ಮ ಪರಿಸರವಾದ ಪಶ್ಚಿಮ ಘಟ್ಟದ ಉಳಿವಿಗಾಗಿ ಅತೀ ದೊಡ್ಡ ಪರಿಸರ ಹೋರಾಟವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ಖಾಯಂ ಆಗುತ್ತಾ?ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ಖಾಯಂ ಆಗುತ್ತಾ?

ಆದರೆ ಈ ಹೋರಾಟವನ್ನು ಆರಂಭಿಸಿದ ವೈಲ್ಡ್ ಲೈಫ್ ಫಸ್ಟ್ ಅನ್ನೂ ಟೀಕಿಸುವ ಪ್ರಕ್ರಿಯೆಯೂ ಆರಂಭವಾಗಿದ್ದು, ಪ್ರಚಾರಕ್ಕೋಸ್ಕರ ಎನ್ ಜಿ ಓ ಹೀಗೆಲ್ಲ ಮಾಡುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ. ಹೋರಾಟದಲ್ಲಿ ಇವೆಲ್ಲ ಸಹಜ ತಾನೆ...?

English summary
Night Traffic Ban In Bandipur Tiger Reserve Premise Is Becomming a Matter Of Debate Now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X