ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ಉಗ್ರ ದಾಳಿ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿದ ಎನ್ ಐಎ

|
Google Oneindia Kannada News

Recommended Video

Pulwama : ಪುಲ್ವಾಮಾ ಉಗ್ರ ದಾಳಿ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿದ ಎನ್ ಐಎ | Oneindia Kannada

ಪುಲ್ವಾಮಾ ಉಗ್ರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಇನ್ನೇನು ಸಂಪೂರ್ಣ ಮಾಹಿತಿ ಹೊರಗೆಡವಲಿದೆ. ಈ ಕೃತ್ಯದಲ್ಲಿ ನಾಲ್ವರಿಂದ ಐವರು ಜೈಶ್-ಇ-ಮೊಹ್ಮದ್ ಉಗ್ರರ ಕೈವಾಡ ಇರುವ ಬಗ್ಗೆ ಸಾಕ್ಷ್ಯ ಬೊಟ್ಟು ಮಾಡಿ ತೋರುತ್ತಿದೆ.

ಇದರ ಜತೆಗೆ ಆತ್ಮಹತ್ಯಾ ದಾಳಿಕೋರ ಅದಿಲ್ ಅಹ್ಮದ್ ದರ್ ಮತ್ತು ಸ್ಥಳೀಯ ವ್ಯಕ್ತಿ ಕೂಡ ಇದ್ದಾನೆ ಎಂದು ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವಂಥ ವ್ಯಕ್ತಿ ತಿಳಿಸಿದ್ದಾರೆ. ಇನ್ನು ದಾಳಿಗಾಗಿ ಬಳಸಿದ ಮಾರುತಿ ಇಕೋ ವಾಹನವನ್ನು ಸಹ ಗುರುತಿಸಲಾಗಿದೆ. ಈ ವಾಹನವು ಎಂಟುಉ ವರ್ಷದ ಹಿಂದೆ ಕಾಶ್ಮೀರದಲ್ಲಿ ನೋಂದಣಿ ಆಗಿದೆ.

ಉಗ್ರ ಚಟುವಟಿಕೆಗೆ ಹೊಸ ತಂತ್ರ, ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ ಉಗ್ರ ಚಟುವಟಿಕೆಗೆ ಹೊಸ ತಂತ್ರ, ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ

ಈ ವಾಹನವನ್ನು ಒಂದು ಗುಂಪು ಬಳಸುತ್ತಿತ್ತು. ಈ ಬಗ್ಗೆ ಅದರ ಮಾಲೀಕನಿಗೂ ಗೊತ್ತಿತ್ತು. ಸದ್ಯಕ್ಕೆ ಆತ ನಾಪತ್ತೆ ಆಗಿದ್ದಾನೆ. ಇನ್ನು ಹೆಸರು ಹೇಳಲು ಇಚ್ಛಿಸದ ಎನ್ ಐಎ ಅಧಿಕಾರಿಯೊಬ್ಬರು ಮಾತನಾಡಿ, ಈ ದಾಳಿಯಲ್ಲಿ ಪಾಕಿಸ್ತಾನಿ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿವೆ. ಬಾಂಬರ್ ವಾಹನದಲ್ಲಿ ಇಪ್ಪತ್ತೈದು ಕೇಜಿಗಿಂತ ಸ್ವಲ್ಪ ಹೆಚ್ಚ್ಯ್ ಆರ್ ಡಿಎಕ್ಸ್ ತುಂಬಿ ಕಂಟೇನರ್ ನಲ್ಲಿ ಇಡಲಾಗಿತ್ತು ಎನ್ನಲಾಗಿದೆ.

ಜೈಶ್-ಇ-ಮೊಹ್ಮದ್ ಸಂಘಟಿಸಿದ ಈ ದಾಳಿಗೆ ಸ್ಫೋಟಕವನ್ನು ಹೇಗೆ ಸಾಗಿಸಲಾಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಗಳು ಶಂಕಿಸುವ ಪ್ರಕಾರ ಗಡಿಯಾಚೆಯಿಂದಲೇ ಸ್ಫೋಟಕಗಳು ಬಂದಿವೆ. "ನಮ್ಮ ಬಳಿ ವಾಹನದ ಸಂಪೂರ್ಣ ಮಾಹಿತಿ ಇದೆ. ಅದೇ ಗುಂಪಿನ ಜತೆಗೆ ಹಲವಾರು ಬಾರಿ ಕಾಣಿಸಿಕೊಂಡಿದೆ" ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ನಾಪತ್ತೆ ಆದಾಗಲೇ ಜೈಶ್ ಸಂಪರ್ಕಕ್ಕೆ

ನಾಪತ್ತೆ ಆದಾಗಲೇ ಜೈಶ್ ಸಂಪರ್ಕಕ್ಕೆ

ಕಳೆದ ವರ್ಷ ಮಾರ್ಚ್ ನಿಂದ ನಾಪತ್ತೆ ಆಗಿದ್ದ ದರ್, ಆಗಿನಿಂದಲೇ ಜೈಶ್-ಇ-ಮೊಹ್ಮದ್ ಸಂಘಟನೆ ಜತೆಗೆ ಸಕ್ರಿಯನಾಗಿದ್ದ. ಕಾಕಪೋರ್ ನಲ್ಲಿ ಅದಿಲ್ ದರ್ ನ ಮನೆಗೆ ಕಳೆದ ವರ್ಷದ ಮೇ ತಿಂಗಳಲ್ಲಿ ಬೆಂಕಿ ಹಚ್ಚಲು ಸಿಆರ್ ಪಿಎಫ್ ಸಿಬ್ಬಂದಿ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆಗಿನಿಂದ ಅವನ ಸಿಟ್ಟು ನಿರ್ದಿಷ್ಟವಾಗಿ ಸಿಆರ್ ಪಿಎಫ್ ಮೇಲಿತ್ತು.

ಜಮ್ಮು-ಕಾಶ್ಮೀರದ ಸೇನಾ ನೆಲೆಗಳ ಮೇಲೆ ದಾಳಿ ಎಚ್ಚರಿಕೆ

ಜಮ್ಮು-ಕಾಶ್ಮೀರದ ಸೇನಾ ನೆಲೆಗಳ ಮೇಲೆ ದಾಳಿ ಎಚ್ಚರಿಕೆ

ಕಳೆದ ವರ್ಷ ಶ್ರೀನಗರ್ ನಲ್ಲಿ ಭದ್ರತಾ ಪಡೆಗಳ ಮೇಲೆ ಗ್ರನೇಡ್ ದಾಳಿಯಾಗಿತ್ತು. ಆ ಸಂದರ್ಭದಲ್ಲಿ ಜೈಶ್ ನ ವಕ್ತಾರ ಹೇಳಿದ್ದ ಮಾತನ್ನೇ ಉದಾಹರಿಸಿ, ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ನಮ್ಮ ಸಹೋದ್ಯೋಗಿ ಅದಿಲ್ ಅಹ್ಮದ್ ದರ್ ಅಲಿಯಾಸ್ ಕಾಕಾಪೋರ್ ನ ವಕಾಸ್ ನ ಮನೆಗೆ ರಾತ್ರಿ ಬೆಂಕಿ ಹಚ್ಚಲಾಗಿದೆ. ಸರಕಾರದ ಪಡೆ ನಡೆಸಿದ ನಾಚಿಕೆಗೇಡಿನ ಕೃತ್ಯ ಎಂದು ಆತ ಹೇಳಿದ್ದಾಗಿ ವರದಿ ಆಗಿತ್ತು. ಜಮ್ಮು-ಕಾಶ್ಮೀರದ ಸೇನಾ ನೆಲೆಗಳನ್ನೇ ಗುರಿ ಮಾಡಿಕೊಂಡು ದಾಳಿ ನಡೆಸುವುದಾಗಿ ಕೂಡ ಆತ ಹೇಳಿದ್ದ ಎನ್ನಲಾಗಿದೆ.

ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ

ಇನ್ನೆರಡು ವಾರದಲ್ಲಿ ದಾಳಿ ಬಗ್ಗೆ ಸಂಪೂರ್ಣ ಮಾಹಿತಿ

ಇನ್ನೆರಡು ವಾರದಲ್ಲಿ ದಾಳಿ ಬಗ್ಗೆ ಸಂಪೂರ್ಣ ಮಾಹಿತಿ

ಯಾವಾಗ ದರ್ ನ ಮನೆಗೆ ಬೆಂಕಿ ಬಿದ್ದಿತೋ ಆಗ ಜೈಶ್ ನ ಸ್ಥಳೀಯ ವ್ಯಕ್ತಿ ಆತನ ತಲೆಯಲ್ಲಿ ದ್ವೇಷದ ಬೀಜ ಬಿತ್ತಿದ್ದಾರೆ. ಗಡಿಯಾಚೆಯಿಂದ ಬಂದ ಸೂಚನೆ ಮೇರೆಗೆ ಅತಿರೇಕದ ನಿರ್ಣಯಕ್ಕೆ ಬರಲಾಗಿದೆ. ಈ ದಾಳಿಯಲ್ಲಿ ಯರ್ಯಾರು ಪಾಲ್ಗೊಂಡಿದ್ದಾರೆ ಎಂಬ ಗುರುತು ತಿಳಿಸುವುದಕ್ಕೆ ಎನ್ ಐಎ ಅಧಿಕಾರಿಗಳು ನಿರಾಕರಿಸಿದ್ದಾರೆ. ಇನ್ನೆರಡು ವಾರದಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ಮತ್ತೊಮ್ಮೆ ಪೇಂಟ್ ಮಾಡಲಾದ ವಾಹನ ಬಳಕೆ

ಮತ್ತೊಮ್ಮೆ ಪೇಂಟ್ ಮಾಡಲಾದ ವಾಹನ ಬಳಕೆ

ನಮ್ಮ ಬಳಿ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಹೀಗೆ ಬಿಡಿಬಿಡಿಯಾದ ಸಾಕ್ಷಿಗಳಿವೆ. ಆದ್ದರಿಂದ ನಾನಾ ಕೋನಗಳನ್ನು ಒಂದು ಬಿಂದುವಿನಲ್ಲಿ ತಂದು, ಇಡೀ ಪ್ರಕರಣದ ಪಿತೂರಿ ಹೊರಗೆಡವಲಿದ್ದೇವೆ. ಗಡಿಯಾಚೆಯಿಂದ ಯಾರೋ ಆರ್ ಡಿಎಕ್ಸ್ ತಂದಿದ್ದಾನೆ. ಮತ್ತೊಬ್ಬ ವ್ಯಕ್ತಿ ಸಲಕರಣೆ ಜೋಡಿಸಿದ್ದಾನೆ. ಆ ವಾಹನವನ್ನು ಮತ್ತೆ ಪೇಂಟ್ ಮಾಡಿ, ಸ್ಥಳ ಹಾಗೂ ಗುರಿಯ ನಿರ್ಧಾರ ಮಾಡಲಾಗಿದೆ. ನಮ್ಮ ಬಳಿ ದಾಳಿಯ ಸಂಪೂರ್ಣ ಚಿತ್ರಣವಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟಕ್ಕೆ ಉಗ್ರರು ಬಳಸುತ್ತಿರುವ ಹೊಸ ಟೆಕ್ನಿಕ್ ಏನು ಗೊತ್ತಾ?ಸ್ಫೋಟಕ್ಕೆ ಉಗ್ರರು ಬಳಸುತ್ತಿರುವ ಹೊಸ ಟೆಕ್ನಿಕ್ ಏನು ಗೊತ್ತಾ?

English summary
The National Investigation Agency (NIA) is close to cracking the Pulwama terror attack case, with evidence pointing to an elaborate operation by four or five Jaish-e-Mohammed (JeM) militants, including suicide bomber Adil Ahmad Dar and a local handler, according to people familiar with the developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X