ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ನೇಷನ್ ಸಮೀಕ್ಷೆ: ಬಿಜೆಪಿ-ಶಿವಸೇನಾ vs ಕಾಂಗ್ರೆಸ್-ಎನ್ಸಿಪಿ

|
Google Oneindia Kannada News

ಲೋಕಸಭೆ ಚುನಾವಣೆ 2019ಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಮೈತ್ರಿಕೂಟಗಳ ಲೆಕ್ಕಾಚಾರ ಜೋರಾಗಿದೆ. ಈ ನಡುವೆ, ನ್ಯೂಸ್ ನೇಷನ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಮಹಾರಾಷ್ಟ್ರದಲ್ಲಿ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.

ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ! ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ!

ಆದರೆ, ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಮೈತ್ರಿಕೂಟಕ್ಕೆ ಈ ಬಾರಿ ಕಡಿಮೆ ಸ್ಥಾನಗಳು ಲಭಿಸಲಿವೆ. ಕಾಂಗ್ರೆಸ್ -ಎನ್ ಸಿಪಿ ಮೈತ್ರಿಗೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಸಿಕ್ಕರೂ ಬಿಜೆಪಿ -ಶಿವಸೇನಾ ಎದುರು ತಲೆ ಬಾಗಿಸಬೇಕಾಗಿದೆ ಎಂದು ನ್ಯೂಸ್ ನೇಷನ್ ರಾಷ್ಟ್ರೀಯ ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶ ನಂತರ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ 2014ರಲ್ಲಿ 48 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಶಿವಸೇನಾ 41 ಸ್ಥಾನಗಳಿಸಿದ್ದವು. ಈ ಬಾರಿ ಎನ್ಸಿಪಿ ಮುಖಂಡ ಶರದ್ ಪವಾರ್ ಅವರು ಚುನಾವಣೆ ಸ್ಪರ್ಧಿಸುತ್ತಿಲ್ಲ, ಟಿಕೆಟ್ ಹಂಚಿಕೆ ಗೊಂದಲದಿಂದ ಕಾಂಗ್ರೆಸ್ -ಎನ್ ಸಿಪಿ ಮುಖಂಡರ ನಡುವೆ ವೈಮನಸ್ಯ ಮುಂದುವರೆದಿದೆ.

ಇದಲ್ಲದೆ ಈ ಸಮೀಕ್ಷೆಯಲ್ಲಿ ಪ್ರಧಾನಿ ಪಟ್ಟಕ್ಕೆ ಯಾರು ಅರ್ಹರು ಎಂಬ ಪ್ರಶ್ನೆಗೆ ಉತ್ತರಿಸಿದ ದೇಶದ ಜನತೆ ಮೋದಿ ಪರ ಮತ ಹಾಕಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಎನ್ಡಿಎ ಜನಪ್ರಿಯತೆ ಕುಸಿದಿದೆ ಎಂದು ನ್ಯೂಸ್ ನೇಷನ್ ಹೇಳಿದೆ.

ಬಿಜೆಪಿ ಮೈತ್ರಿಕೂಟಕ್ಕೆ 8 ಸ್ಥಾನಗಳು ಕಡಿಮೆ

ಬಿಜೆಪಿ ಮೈತ್ರಿಕೂಟಕ್ಕೆ 8 ಸ್ಥಾನಗಳು ಕಡಿಮೆ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ 33 ಸ್ಥಾನಗಳು ಲಭಿಸಲಿದ್ದು, ಕಾಂಗ್ರೆಸ್- ಎನ್ ಸಿಪಿಗೆ 15 ಸ್ಥಾನಗಳು ಸಿಗಲಿವೆ ಎಂದು ನ್ಯೂಸ್ ನೇಷನ್ ಸಮೀಕ್ಷೆ ವರದಿ ಮಾಡಿದೆ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಮೈತ್ರಿಕೂಟಕ್ಕೆ -8 ಸ್ಥಾನ ಹಾಗೂ ಕಾಂಗ್ರೆಸ್ -ಎನ್ ಸಿಪಿ ಮೈತ್ರಿಕೂಟಕ್ಕೆ +9 ಸ್ಥಾನಗಳು ಲಭಿಸಲಿವೆ.

2014ರ ಫಲಿತಾಂಶ ಏನಾಗಿತ್ತು?

2014ರ ಫಲಿತಾಂಶ ಏನಾಗಿತ್ತು?

2014ರಲ್ಲಿ 48 ಲೋಕಸಭಾ ಕ್ಷೇತ್ರಗಳ ಪೈಕಿ 41 ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಗೆಲುವು ಲಭಿಸಿತ್ತು. ಬಿಜೆಪಿ 23 ಸ್ಥಾನ ಹಾಗೂ ಶಿವಸೇನಾ 18 ಸ್ಥಾನ ಗಳಿಸಿದ್ದವು. ಕಾಂಗ್ರೆಸ್ ಕೇವಲ 2 ಹಾಗೂ ಎನ್ಸಿಪಿ 4 ಸ್ಥಾನ ಮಾತ್ರ ಗಳಿಸಿತ್ತು.

ಸೀಟು ಹಂಚಿಕೆ ಹೇಗಿದೆ?

ಸೀಟು ಹಂಚಿಕೆ ಹೇಗಿದೆ?

ಫೆಬ್ರವರಿ 18ರ ಮೈತ್ರಿ ಘೋಷಣೆಯಂತೆ ಬಿಜೆಪಿ 25 ಸ್ಥಾನ ಹಾಗೂ ಶಿವಸೇನಾ 23 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಮೈತ್ರಿ ಮುಂದುವರೆಯಲಿವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದರು. 288 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಕೂಡಾ ಹತ್ತಿರದಲ್ಲಿದೆ. ಸದ್ಯ 18 ಸಂಸದರನ್ನು ಹೊಂದಿರುವ ಶಿವಸೇನಾ ತನ್ನ ಪ್ರಾಬಲ್ಯ ಮುಂದುವರೆಸುವ ನಿರೀಕ್ಷೆಯಿದೆ.

ಮಹಾರಾಷ್ಟ್ರದ ಚುನಾವಣೆ

ಮಹಾರಾಷ್ಟ್ರದ ಚುನಾವಣೆ

ಏಪ್ರಿಲ್ 11ರಿಂದ ವಿದರ್ಭ ಪ್ರದೇಶದಿಂದ ಆರಂಭವಾಗುವ ಚುನಾವಣೆ ನಾಲ್ಕು ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 11ರಂದು ಏಳು ಕ್ಷೇತ್ರ, ಏಪ್ರಿಲ್ 18ರಂದು ಮರಾಠ್ ವಾಡದ 9 ಕ್ಷೇತ್ರ, ಏಪ್ರಿಲ್ 23ರಂದು 14 ಕ್ಷೇತ್ರ, ಏಪ್ರಿಲ್ 29 ರಂದು 17 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರಗಳಲ್ಲಿ 8,73,30,484 ಮತದಾರರಿದ್ದಾರೆ. ನಗರ ಪ್ರದೇಶಗಳಲ್ಲಿ 11,000 ಮತಗಟ್ಟೆಗಳು ಹಾಗೂ 6,000 ಮತಗಟ್ಟೆಗಳು ಗ್ರಾಮೀಣಭಾಗದಲ್ಲಿವೆ.

English summary
he BJP-Shiv Sena combine is likely to win 33 seats in Maharashtra in the Lok Sabha 2019, while the Congress-NCP alliance may improve its tally by bagging 15 seats, according to the News Nation national opinion poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X