ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಮೋದಿ- ನಿತೀಶ್ ಜೋಡಿಯ ಮೋಡಿ, ಬಿಹಾರದಲ್ಲಿ ಕೇಸರಿ ಅಲೆ

|
Google Oneindia Kannada News

Recommended Video

lok sabha election 2019: ಮೋದಿ- ನಿತೀಶ್ ಜೋಡಿಯ ಮೋಡಿ, ಬಿಹಾರದಲ್ಲಿ ಕೇಸರಿ ಅಲೆ | Oneindia Kannada

ಪಾಟ್ನಾ, ಮಾರ್ಚ್ 19: ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದ ನಂತರ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ, ಚುನಾವಣಾ ಮೈತ್ರಿಯ ಉಗಮ ಸ್ಥಾನ ಬಿಹಾರದಲ್ಲಿ ಈ ಬಾರಿ ಮೋದಿ-ನಿತೀಶ್ ಅಲೆ ಸ್ಥಿರವಾಗಿದ್ದು, ಪಕ್ಷದ ಬಲ ಇನ್ನಷ್ಟು ವೃದ್ಧಿಸಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷೆ ವರದಿ ಮಾಡಿದೆ.

ಉತ್ತರ ಪ್ರದೇಶದಲ್ಲಿ 80 ಸ್ಥಾನ, ಮಹಾರಾಷ್ಟ್ರದಲ್ಲಿ 48, ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಸ್ಥಾನಗಳಿವೆ. ಬಿಹಾರದ 40 ಸ್ಥಾನಗಳ ಪೈಕಿ ಬಿಜೆಪಿ -ಜೆಡಿಯು ಬಣಕ್ಕೆ 29 ಸ್ಥಾನ ಲಭಿಸಲಿದೆ. ಕಾಂಗ್ರೆಸ್ -ಆರ್ ಜೆಡಿ ಬಣಕ್ಕೆ 10 ಸ್ಥಾನ ದೊರಕಲಿದೆ ಎಂದು ಸಮೀಕ್ಷೆ ಹೇಳಿದೆ.

ಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿ ಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿ

ಬಿಹಾರದಲ್ಲಿ ಬಿಜೆಪಿಗೆ ಶೇ 45ರಷ್ಟು ಮತಗಳಿಕೆ ಸಾಧ್ಯತೆಯಿದ್ದರೆ, ಆರ್ ಜೆ ಡಿಮೈತ್ರಿಕೂಟಕ್ಕೆ ಶೇ 38ರಷ್ಟು ಮತ ಗಳಿಕೆಯಾಗಲಿದೆ. ಶೇ 11ರಷ್ಟು ಮತಗಳು ಉಳಿದ ಪಕ್ಷಗಳ ಪಾಲಾಗಲಿವೆ ಎಂದು 2019ರ ಮಾರ್ಚ್ ತಿಂಗಳ ಸಮೀಕ್ಷೆ ತಿಳಿಸುತ್ತದೆ.

ರಾಜಸ್ಥಾನ ಲೋಕ ಸಮೀಕ್ಷೆ: ಅಸೆಂಬ್ಲಿ ಆಘಾತದ ನಂತರ ಬಿಜೆಪಿ ಚೇತರಿಕೆ ರಾಜಸ್ಥಾನ ಲೋಕ ಸಮೀಕ್ಷೆ: ಅಸೆಂಬ್ಲಿ ಆಘಾತದ ನಂತರ ಬಿಜೆಪಿ ಚೇತರಿಕೆ

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಆಡಳಿತ ಕಳೆದುಕೊಂಡರೂ ಲೋಕಸಭೆಯಲ್ಲಿ ಬಿಜೆಪಿಗೆ ಗೆಲುವು ಎಂದು ಈಗಾಗಲೇ ಸಮೀಕ್ಷೆಯಿಂದ ತಿಳಿದು ಬಂದಿದೆ. ಬಿಹಾರದಲ್ಲಿ ಎನ್ಡಿಎ ಮಿತ್ರಪಕ್ಷ ಜೆಡಿಯು ಅಧಿಕಾರದಲ್ಲಿದೆ.

ಪಾಟ್ನಾ ವಿವಿ ಚುನಾವಣೆ ಗೆದ್ದರೂ ಎಬಿವಿಪಿಗೆ ದಕ್ಕದ ಅಧ್ಯಕ್ಷಗಿರಿ ಪಾಟ್ನಾ ವಿವಿ ಚುನಾವಣೆ ಗೆದ್ದರೂ ಎಬಿವಿಪಿಗೆ ದಕ್ಕದ ಅಧ್ಯಕ್ಷಗಿರಿ

ಏಪ್ರಿಲ್ 11 ರಿಂದ ಮೇ 19ರ ಅವಧಿಯಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.

2014ರಲ್ಲಿ ಬಿಹಾರದಲ್ಲಿ ಬಿಜೆಪಿ 22 ಸ್ಥಾನ

2014ರಲ್ಲಿ ಬಿಹಾರದಲ್ಲಿ ಬಿಜೆಪಿ 22 ಸ್ಥಾನ

2014ರಲ್ಲಿ ಬಿಹಾರದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ಸಿಗೆ ಕೇವಲ 2 ಸ್ಥಾನ ಸಿಕ್ಕಿತ್ತು. ಎನ್ ಸಿಪಿ 1, ಜೆಡಿಯು 2, ಎಲ್ ಜೆ ಎಸ್ ಪಿ 6, ಆರ್ ಜೆ ಡಿ 4 ಹಾಗೂ ಆರ್ ಎಲ್ ಎಸ್ ಪಿ 3 ಸ್ಥಾನಗಳಿಸಿದ್ದವು.

ಎನ್ಡಿಎ ಗೆ 270ಸ್ಥಾನಗಳು ಸಿಗಲಿದೆ

ಎನ್ಡಿಎ ಗೆ 270ಸ್ಥಾನಗಳು ಸಿಗಲಿದೆ

ನ್ಯೂಸ್ ನೇಷನ್ ಸಮೀಕ್ಷೆಯಂತೆ ಎನ್ಡಿಎ ಗೆ 270ಸ್ಥಾನಗಳು ಸಿಗಲಿದ್ದು, 272ರ ಮ್ಯಾಜಿಕ್ ನಂಬರ್ ದಾಟಲು 2 ಸ್ಥಾನ ಕಡಿಮೆ ಬೀಳಲಿದೆ. ಯುಪಿಎಗೆ 134 ಸ್ಥಾನಗಳು ಸಿಗಲಿದ್ದು, ಇತರೆ ಪಕ್ಷಗಳು 139 ಸ್ಥಾನಗಳು ಲಭಿಸಲಿವೆ. ಚುನಾವಣೋತ್ತರ ಮೈತ್ರಿ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಬಹುದು ಎಂದು ಹೇಳಿದೆ.

ಪ್ರಶಾಂತ್ ಕಿಶೋರ್ ಪ್ರಭಾವ

ಪ್ರಶಾಂತ್ ಕಿಶೋರ್ ಪ್ರಭಾವ

2014ರಲ್ಲಿ ಮೋದಿ ಗೆಲ್ಲಲು ಕಾರಣವಾಗಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಸದ್ಯ ಜೆಡಿಯುನ ಉಪಾಧ್ಯಕ್ಷರಾಗಿದ್ದು, ಎನ್ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡಲು ತಂತ್ರ ರೂಪಿಸಿದ್ದಾರೆ. ಆದರೆ, ಇತ್ತೀಚೆಗೆ ನಡೆದ ಕಾಲೇಜು ಮಟ್ಟ ಚುನಾವಣೆಯಲ್ಲಿ ಜೆಡಿಯು ಬೆಂಬಲಿತ ಅಭ್ಯರ್ಥಿ ಗೆದ್ದರೂ ಅಧಿಕಾರ ಸಿಗದಂತಾಗಿತ್ತು. ಹೀಗಾಗಿ,ಈಗ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಬಗ್ಗೆ ಎನ್ಡಿಎಗೆ ಹೆಚ್ಚಿನ ಸಹಮತವಿಲ್ಲ

ರಾಜಸ್ಥಾನ

ರಾಜಸ್ಥಾನ

ನ್ಯೂಸ್ ನೇಷನ್ ಸಮೀಕ್ಷೆಯಂತೆ 2019ರ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆಯಿದೆ. ಜೊತೆಗೆ ಬಿಜೆಪಿ ಶೇ40 ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ 9 ಸ್ಥಾನ ಹಾಗೂ ಶೇ 35ರಷ್ಟು ಮತಗಳನ್ನು ಗಳಿಸಲಿದೆ. ಇದೇ ರೀತಿ ಮಧ್ಯಪ್ರದೇಶದಲ್ಲೂ ಮೋದಿ ಅಲೆಯಿಂದ ಬಿಜೆಪಿ ಗೆಲುವು ಸಾಧಿಸುವ ನಿರೀಕ್ಷೆಯಿದೆ

English summary
News Nation has conducted an opinion poll to gauge the voting intention in Bihar. The survey predicts that the BJP-led NDA is going to emerge as the biggest gainer in 2019 Lok Sabha Elections by bagging 29 seats in the politically crucial state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X