ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್!

|
Google Oneindia Kannada News

ಕರ್ನಾಟಕ ಹಲವು ವನ್ಯ ಜೀವಿಗಳಿಗೆ ಆಶ್ರಯ ತಾಣ. ಅಪರೂಪದ ಪ್ರಾಣಿಗಳು ಕ್ಯಾಮರಾ ಕಣ್ಣಿಗೆ ಸಿಕ್ಕಿ, ನಮ್ಮ ರಾಜ್ಯದಲ್ಲಿಯೂ ಇಂತಹ ಪ್ರಾಣಿಗಳಿವೆಯೇ? ಎಂಬ ಅಚ್ಚರಿಯನ್ನು ರಾಜ್ಯದ ಜನರಲ್ಲಿ ಮೂಡಿಸುತ್ತವೆ. ಈ ವರ್ಷ ಹೀಗೆ ಗಮನ ಸೆಳೆದಿದ್ದು ಕರಿಚಿರತೆ.

2020ರ ಜುಲೈನಲ್ಲಿ ಇಂಟರ್‌ನೆಟ್‌ನಲ್ಲಿ ಕರಿಚಿರತೆಯ ಚಿತ್ರವೊಂದು ವೈರಲ್ ಆಗಿತ್ತು. ಇದು ನಮ್ಮ ಕರ್ನಾಟಕದ ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿಚಿರತೆ ಎಂಬುದು ನಮ್ಮ ನಾಡಿನ ಹೆಮ್ಮೆ. ಈ ಚಿರತೆಯನ್ನು ಸೆರೆ ಹಿಡಿದಿದ್ದು ವನ್ಯಜೀವಿ ಛಾಯಾಗ್ರಾಹಕ, ಚಿರತೆಗಳ ಬಗ್ಗೆ ಅಪಾರವಾದ ಅಧ್ಯಯನ ಮಾಡಿರುವ ಶಾಜ್ ಜುಂಗ್.

ಮೈಸೂರು: ಪ್ರವಾಸಿಗರಿಗೆ ಮತ್ತೆ ದರ್ಶನ ನೀಡಿದ ಕರಿ ಚಿರತೆಮೈಸೂರು: ಪ್ರವಾಸಿಗರಿಗೆ ಮತ್ತೆ ದರ್ಶನ ನೀಡಿದ ಕರಿ ಚಿರತೆ

ಸುಮಾರು ಐದು ವರ್ಷಗಳ ಕಾಲ ಕಬಿನಿ ವ್ಯಾಪ್ತಿಯಲ್ಲಿ ತಿರುಗಾಡಿದ ಪ್ರಯತ್ನದ ಫಲವಾಗಿ ಕರಿಚಿರತೆ ಶಾಜ್ ಜುಂಗ್ ಕ್ಯಾಮರಾ ಕಣ್ಣಿಗೆ ಸಿಕ್ಕಿದೆ. ಇದಕ್ಕೆ ಮುದ್ದಾಗಿ 'ಸಾಯಾ' ಎಂದು ಹೆಸರಿಟ್ಟಿದ್ದಾರೆ. ಗೂಗಲ್‌ನಲ್ಲಿ ಕರಿಚಿರತೆ ಅಥವ ಬ್ಲಾಕ್ ಪ್ಯಾಂಥರ್ ಎಂದು ಟೈಪ್ ಮಾಡಿದರೆ ಶಾಜ್ ಜುಂಗ್ ತೆಗೆದ ಚಿತ್ರವೇ ಮೊದಲು ಕಾಣಸಿಗುತ್ತದೆ.

ಕಬಿನಿ ಹಿನ್ನೀರಿನ ಕಪ್ಪು ಚಿರತೆಯ ಹಳೇ ಫೋಟೊ ವೈರಲ್ಕಬಿನಿ ಹಿನ್ನೀರಿನ ಕಪ್ಪು ಚಿರತೆಯ ಹಳೇ ಫೋಟೊ ವೈರಲ್

News makers Of 2020 Shaaz Jung Man Behind Viral Black Panther Photo

'ಸಾಯಾ' ಚಿತ್ರ ಸೆರೆಯಾದ ಕೆಲವು ದಿನಗಳ ಬಳಿಕ ತನ್ನ ಸಂಗಾತಿ 'ಕ್ಲಿಯೋಪಾತ್ರ' ಜೊತೆಗೆ 'ಸಾಯಾ' ಮತ್ತೊಮ್ಮೆ ಕಾಣಿಸಿಕೊಂಡಿತ್ತು. ಇದನ್ನು ಸೆರೆ ಹಿಡಿದವರು ಮಿಥುನ್ ಹೆಚ್. ಸಂಗಾತಿ ಜೊತೆಗಿನ ಚಿತ್ರಕ್ಕಿಂತ ಒಂಟಿಯಾಗಿದ್ದ 'ಸಾಯಾ' ಚಿತ್ರ ಇಂಟರ್‌ನೆಟ್‌ನಲ್ಲಿ ಇಂದಿಗೂ ಪಾರಮ್ಯ ಉಳಿಸಿಕೊಂಡಿದೆ.

ಶಾಜ್ ಜುಂಗ್ ಕ್ಯಾಮರಾಕ್ಕೆ ಕರಿಚಿರತೆ ಸುಲಭವಾಗಿ ಸಿಕ್ಕಿಲ್ಲ. ಈ ಚಿತ್ರ ಕ್ಲಿಕ್ಕಿಸುವ ಹಿಂದೆ ವರ್ಷಗಳ ಶ್ರಮವಿದೆ, ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕಬಿನಿ, ನಾಗರಹೊಳೆ ಕಾಡಿನಲ್ಲಿ ಅಲೆದಾಟ ಮಾಡಿದ ಕಷ್ಟವಿದೆ.

ಶ್ರೀಮಂತ ಕುಟುಂಬದ ಜುಂಗ್ ಮನಸ್ಸು ಮಾಡಿದ್ದರೆ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಕಾಡಿನ ಬಗ್ಗೆ ಅವರ ಪ್ರೀತಿ ಕರಿಚಿರತೆ ಹಿಂದೆ ಬೀಳುವಂತೆ ಮಾಡಿತು.

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು! Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

ವನ್ಯಜೀವಿ ತಜ್ಞರ ಪ್ರಕಾರ ಭಾರತದಲ್ಲಿರುವ ಏಕೈಕ ಕರಿಚಿರತೆ ಇದು. ಇದಕ್ಕೆ ಸುಮಾರು 5 ವರ್ಷಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಇಂತಹ ಅಪರೂಪದ ಪ್ರಾಣಿ ಕರ್ನಾಟಕದಲ್ಲಿದೆ ಎಂದು ಜಗತ್ತಿಗೆ ತಿಳಿಸಿದವರು ಶಾಜ್ ಜುಂಗ್. ಇವರ ಪ್ರೀತಿಯ 'ಸಾಯಾ' ನಮ್ಮ ನಾಡಿನ ಹೆಮ್ಮೆಯಾಗಿದೆ.

News makers Of 2020 Shaaz Jung Man Behind Viral Black Panther Photo

ಹೈದರಾಬಾದ್ ಮೂಲದ ಶಾಜ್ ಜುಂಗ್ ಮತ್ತು ಅವರ ಕುಟುಂಬ ಕಬಿನಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ರೆಸಾರ್ಟ್‌ಗಳನ್ನು ಹೊಂದಿದೆ. ಕರಿಚಿರತೆ ಬಗ್ಗೆ ನ್ಯಾಷನಲ್ ಜಿಯಾಗ್ರಾಫಿಕ್ ನಡೆಸುತ್ತಿರುವ ಡಾಕ್ಯುಮೆಂಟರಿಗೆ ಇವರು ಛಾಯಾಚಿತ್ರ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಚಿರತೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ.

ಶಾಜ್ ಜುಂಗ್ ಸತತ ಐದು ವರ್ಷಗಳ ಕಾಲ ಕರ್ನಾಟಕದ ಕಾಡುಗಳಲ್ಲಿ ಚಿರತೆಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇದೇ ಅಧ್ಯಯನ ಅವರನ್ನು ನ್ಯಾಷನಲ್ ಜಿಯಾಗ್ರಾಫಿಕ್ ತನಕ ತೆಗೆದುಕೊಂಡು ಹೋಗಿ ನಿಲ್ಲಿಸಿದೆ. ಇವರು ಕ್ಲಿಕ್ಕಿಸಿದ ಅನೇಕ ಚಿತ್ರಗಳು ಬಿಬಿಸಿಯಂತಹ ಪತಿಷ್ಠಿತ ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ.

2010ರಲ್ಲಿ ಪದವಿ ಪೂರೈಸಿದ ಶಾಜ್ ಜುಂಗ್ ತಂದೆ-ತಾಯಿಗೆ ಸಹಾಯ ಮಾಡಲು ನಾಗರಹೊಳೆಗೆ ಬಂದರು. ಶಾಜ್ ತಂದೆ ಸಾದ್ ಬಿನ್ ಜುಂಗ್ ಮತ್ತು ತಾಯಿ ಸಂಗೀತಾ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಕರ್ನಾಟಕದಲ್ಲಿ ಬೆಳೆಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಜೊತೆಯಲ್ಲಿಯೇ ಕಬಿನಿಯಲ್ಲಿ ಶಾಂಗ್ ಸುತ್ತಾಡಿದರು.

ತಂದೆ-ತಾಯಿ ಮಾತ್ರವಲ್ಲ ಶಾಜ್ ಜುಂಗ್ ಪತ್ನಿ ನಯನತಾರಾ ಸಹ ಪತಿಯ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹುಟ್ಟಿ ಬೆಳೆದ ಅವರು ಜುಂಗ್ ವಿವಾಹವಾದ ಬಳಿಕ ಪತಿಯ ಜೊತೆ ಬಂದು ಕಾಡಿನ ಪರಿಸರಕ್ಕೆ ಹೊಂದಿಕೊಂಡಿದ್ದಾರೆ. ಕರಿಚಿರತೆಗಳ ಬಗ್ಗೆ ಮಾಡುತ್ತಿರುವ ಡಾಕ್ಯುಮೆಂಟರಿಗೆ ಸಹಾಯ ಮಾಡುತ್ತಿದ್ದಾರೆ.

English summary
Shaaz Jung is a wildlife photographer and owner of resorts in Kabini, South Africa. Shaaz Jung clicked the black Panther photo which goes viral in social media in July 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X