ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!

|
Google Oneindia Kannada News

ರಾಜಕೀಯ ನಾಯಕರು ಇರುವುದು ಹಾಗೆಯೇ. ಅವರಿಗೆ ಅಪಾರವಾದ ಅಭಿಮಾನಿ ವರ್ಗ ಇರುತ್ತದೆ. ಅವರ ಕುರಿತು ತಿಳಿದುಕೊಳ್ಳಲು ಜನರು ಸಹ ಕುತೂಹಲ ಹೊಂದಿರುತ್ತಾರೆ. ಅವರ ವಯಸ್ಸು, ಆಸ್ತಿ, ಸ್ಥಾನಮಾನ ಎಲ್ಲವೂ ಜನರಲ್ಲಿ ಅಚ್ಚರಿ ಹುಟ್ಟಿಸುವ ಅಂಶಗಳು.

ಪ್ರತಿ ವರ್ಷದ ಕೊನೆಯಲ್ಲಿ ರಾಜಕಾರಣಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ವರ್ಷದ ಜನರು ಯಾರ ಬಗ್ಗೆ ಹೆಚ್ಚು ಮಾಹಿತಿ ಹುಡುಕಿದ್ದಾರೆ? ಎಂಬುದು ಅದರಲ್ಲಿ ತಿಳಿಯುತ್ತದೆ. ಹೀಗೆ ಜನರು ಹುಡುಕಿದವರು ದೊಡ್ಡ ಹುದ್ದೆಯಲ್ಲಿ ಇರುವವರೇ ಆಗಬೇಕಿಲ್ಲ, ಚಿಕ್ಕ ರಾಜ್ಯವೊಂದರ ಸಚಿವರು ಸಹ ಜನರಲ್ಲಿ ಕುತೂಹಲ ಮೂಡಿಸಿರುತ್ತಾರೆ.

News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್! News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್!

Yahoo 2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ರಾಜಕಾರಣಿಗಳ ಟಾಪ್ 10 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಮಾರ್ಚ್‌ ತಿಂಗಳಿನಿಂದ ದೇಶಾದ್ಯಂತ ಕೋವಿಡ್ ಪರಿಸ್ಥಿತಿ ಇತ್ತು. ಲಾಕ್ ಡೌನ್ ನಡುವೆ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೂ ಸಹ ನೆಚ್ಚಿನ ನಾಯಕನ ಬಗ್ಗೆ ತಿಳಿದುಕೊಳ್ಳಲು ಹುಡುಕಾಟ ನಡೆಸಿದ್ದಾರೆ.

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು! Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಜನಪ್ರಿಯರಾಗಿರುವುದು ಪ್ರಧಾನಿ ನರೇಂದ್ರ ಮೋದಿ. ವಾರಣಾಸಿ ಕ್ಷೇತ್ರದ ಸಂಸದರ ಬಗ್ಗೆ ತಿಳಿದುಕೊಳ್ಳಲು ಈ ವರ್ಷ ಜನರು ಅತಿ ಹೆಚ್ಚು ಸರ್ಚ್ ಮಾಡಿದ್ದಾರೆ. ಹಾಗಾದರೆ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು ಯಾರು ನೋಡೋಣ ಬನ್ನಿ.

Unforgettable 2020: ZERO ಕೊವಿಡ್ 19 ಕೇಸ್ ದಾಖಲಿಸಿದ ದೇಶಗಳುUnforgettable 2020: ZERO ಕೊವಿಡ್ 19 ಕೇಸ್ ದಾಖಲಿಸಿದ ದೇಶಗಳು

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

Yahooನಲ್ಲಿ 2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ರಾಜಕಾರಣಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ, ಅಪಾರ ಅಭಿಮಾನಿಗಳನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ದೇಶವನ್ನು ಉದ್ದೇಶಿಸಿ ಹಲವು ಬಾರಿ ಭಾಷಣ ಮಾಡಿದ್ದಾರೆ. ಪ್ರತಿ ತಿಂಗಳು ರೇಡಿಯೋ ಕಾರ್ಯಕ್ರಮದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಮಾಡಿದ ರಾಜಕಾರಣಿಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಸಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು ಮತ್ತು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅಮಿತ್ ಶಾ

ಅಮಿತ್ ಶಾ

Yahooನಲ್ಲಿ 2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ರಾಜಕಾರಣಿಗಳ ಪೈಕಿ 3ನೇ ಸ್ಥಾನದಲ್ಲಿ ಅಮಿತ್ ಶಾ ಇದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿಯಲ್ಲಿನ ಪ್ರಭಾವಿ ರಾಜಕಾರಣಿಗಳ ಪೈಕಿ ಒಬ್ಬರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವರು ಚುನಾವಣೆಯಲ್ಲಿ ತಂತ್ರಗಳನ್ನು ರೂಪಿಸುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಬಿಜೆಪಿಯವರು ಅವರನ್ನು ಚುನಾವಣಾ ಚಾಣಾಕ್ಯ ಎಂದೇ ಕರೆಯುತ್ತಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸದಾ ಸುದ್ದಿಯಲ್ಲಿ ಇರುವವರು. ರಾಜ್ಯದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಎನ್‌ಸಿಪಿ ಜೊತೆ ಸೇರಿ ಮೈತ್ರಿ ಸರ್ಕಾರವನ್ನು ಮಾಡಿದ್ದಾರೆ. ಅನೇಕ ವಿವಾದಗಳಿಂದಲೂ ಸಹ ಉದ್ಧವ್ ಠಾಕ್ರೆ ಸುದ್ದಿಯಲ್ಲಿರುತ್ತಾರೆ. ಶಿವಸೇನೆಯ ಪ್ರಭಾವಿ ನಾಯಕನನ್ನು ಜನರು Yahooನಲ್ಲಿ ಈ ವರ್ಷ ಸರ್ಚ್‌ ಮಾಡಿದ್ದಾರೆ.

ಅರವಿಂದ ಕೇಜ್ರಿವಾಲ್

ಅರವಿಂದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಗ್ಗೆ Yahooನಲ್ಲಿ ಈ ವರ್ಷ ಜನರು ಹುಡುಕಾಟ ನಡೆಸಿದ್ದಾರೆ. ಟಾಪ್‌ ಸರ್ಚ್‌ನಲ್ಲಿ ಕೇಜ್ರಿವಾಲ್ 5ನೇ ಸ್ಥಾನದಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಕೋವಿಡ್ ನಿಯಂತ್ರಣಕ್ಕೆ ತರಲು ದೆಹಲಿಯಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡರು.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೈರ್ ಬ್ರಾಂಡ್ ನಾಯಕಿ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರನ್ನು ಎದುರುಹಾಕಿಕೊಂಡು, ಅವರ ವಿರುದ್ಧ ಟೀಕೆ ಮಾಡುತ್ತಾ ಸದಾ ಸುದ್ದಿಯಲ್ಲಿ ಇರುತ್ತಾರೆ. Yahooನಲ್ಲಿ ಜನರು ಸರ್ಚ್‌ ಮಾಡಿದ ಪ್ರಭಾವಿಗಳ ಪೈಕಿ 6ನೇ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ.

ದಿ. ಪ್ರಣಬ್ ಮುಖರ್ಜಿ

ದಿ. ಪ್ರಣಬ್ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಸ್ಟ್ 31ರಂದು ವಿಧಿವಶರಾದರು. ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದ ಅವರು ದಾದಾ ಎಂದೇ ಖ್ಯಾತಿ ಪಡೆದಿದ್ದರು. Yahooನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ರಾಜಕೀಯ ನಾಯಕರಲ್ಲಿ 7ನೇ ಸ್ಥಾನವನ್ನು ಪಡೆದಿದ್ದಾರೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಬಿಜೆಪಿ ನಾಯಕಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. Yahooನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ರಾಜಕಾರಣಿಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ವಿವಿಧ ಉದ್ಯಮಗಳಿಗೆ, ಬ್ಯಾಂಕುಗಳಿಗೆ ಹಲವಾರು ಘೋಷಣೆಗಳನ್ನು ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಸುಧಾರಿಸಲು ಶ್ರಮಿಸಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ

Yahooನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ರಾಜಕಾರಣಿಗಳ ಪಟ್ಟಿಯಲ್ಲಿ ಸೋನಿಯಾ ಗಾಂಧಿ 9ನೇ ಸ್ಥಾನದಲ್ಲಿದ್ದಾರೆ. ಎಐಸಿಸಿಯ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಈ ವರ್ಷ ಆರೋಗ್ಯದ ಕಾರಣಕ್ಕಾಗಿಯೂ ಹೆಚ್ಚು ಸುದ್ದಿಯಾಗಿದ್ದರು.

ಜ್ಯೋತಿರಾದಿತ್ಯ ಸಿಂಧಿಯಾ

ಜ್ಯೋತಿರಾದಿತ್ಯ ಸಿಂಧಿಯಾ

ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಬಗ್ಗೆ ಈ ವರ್ಷ Yahooನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ. ರಾಜಕಾರಣಿಗಳ ಪಟ್ಟಿಯಲ್ಲಿ ಇವರು 10ನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ತೊರೆದರು, ಇವರ ಜೊತೆ 20ಕ್ಕೂ ಹೆಚ್ಚು ಶಾಸಕರು ಸಹ ಪಕ್ಷ ತೊರೆದಿದ್ದರಿಂದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವೇ ಪತನಗೊಂಡಿತು. ಬಳಿಕ ಬಿಜೆಪಿ ಸೇರಿದ ಸಿಂಧಿಯಾ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.

English summary
Here are the list of Newsmakers of 2020. Yahoo's list of 10 most searched politicians in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X