ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

News makers; ಸರ್ಕಾರವನ್ನೇ ಎದುರು ಹಾಕಿಕೊಂಡು ಬಲಿಯಾದ ದುಬೆ!

|
Google Oneindia Kannada News

ದೇಶದಲ್ಲಿಯೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಕಾನೂನು ಸುವ್ಯವಸ್ಥೆ ಕಾರಣಕ್ಕೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುವುದು ಹೊಸತಲ್ಲ. ಆದರೆ, ಈ ವರ್ಷ ರಾಜ್ಯ ಸರ್ಕಾರವನ್ನು ಎದುರುಹಾಕಿಕೊಂಡ ಕಾರಣಕ್ಕೆ ರಾಜ್ಯದ ರೌಡಿ ಶೀಟರ್ ಹೆಸರು ದೇಶದ ಜನರಿಗೆ ತಿಳಿಯಿತು.

55 ವರ್ಷದ ವಿಕಾಸ್ ದುಬೆ ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್. ಈ ವರ್ಷ ಅಪರಾಧ ಜಗತ್ತಿನಲ್ಲಿ ಸದ್ದು ಮಾಡಿದ ಹೆಸರು. ಬಂಧಿಸಲು ಬಂದ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿ ಎಂಟು ಪೊಲೀಸರನ್ನು ಬಲಿ ಪಡೆದ, ಕೊನೆಗೆ ಪೊಲೀಸ್ ಎನ್‌ ಕೌಂಟರ್‌ನಲ್ಲಿ ಹತ್ಯೆಯಾದ ವ್ಯಕ್ತಿ.

ರೌಡಿ ವಿಕಾಸ್ ದುಬೆ ಹತ್ಯೆ 'ನಕಲಿ ಎನ್‌ಕೌಂಟರ್‌' ಅಲ್ಲ: ಪೊಲೀಸರ ಮಾಹಿತಿ ರೌಡಿ ವಿಕಾಸ್ ದುಬೆ ಹತ್ಯೆ 'ನಕಲಿ ಎನ್‌ಕೌಂಟರ್‌' ಅಲ್ಲ: ಪೊಲೀಸರ ಮಾಹಿತಿ

ಉತ್ತರ ಪ್ರದೇಶದದ ಕಾನ್ಪುರದಿಂದ ಸುಮಾರು 40 ಕಿ. ಮೀ. ದೂರದಲ್ಲಿರುವ ಗ್ರಾಮ ಬಿಕ್ರೊ. ದೇಶದ ಎಷ್ಟು ಜನರು ಈ ಗ್ರಾಮದ ಹೆಸರು ಕೇಳಿದ್ದರೂ ಗೊತ್ತಿಲ್ಲ. ಆದರೆ, ಈ ವರ್ಷದ ಜುಲೈನಲ್ಲಿ 3ರಂದು 8 ಪೊಲೀಸರ ಹತ್ಯೆ ಬಳಿಕ ಗ್ರಾಮದ ಹೆಸರು ದೇಶದಲ್ಲಿ ಚಿರಪರಿಚಿತವಾಯಿತು. ಬಂಧಿಸಲು ಬಂದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿ ಬಂದೂಕುಗಳನ್ನು ದೋಚಿದ್ದು ವಿಕಾಸ್ ದುಬೆ ಮತ್ತು ಆತನ ಸಹಚರರು.

ವಿಕಾಸ್ ದುಬೆ ಎನ್ ಕೌಂಟರ್; ಪೊಲೀಸರ ಮುಂದೆ 5 ಪ್ರಶ್ನೆಗಳು ವಿಕಾಸ್ ದುಬೆ ಎನ್ ಕೌಂಟರ್; ಪೊಲೀಸರ ಮುಂದೆ 5 ಪ್ರಶ್ನೆಗಳು

ಭೂ ಕಬಳಿಕೆ, ಸುಫಾರಿ ಹತ್ಯೆ, ರಾಜಕೀಯ ನಾಯಕರ ಅಪಹರಣ, ಕೊಲೆ ಬೆದರಿಕೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದದ ವಿಕಾಸ್ ದುಬೆ ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್. 50 ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು ಬಂಧಿಸಲು ಪೊಲೀಸರು ಬಿಕ್ರೊ ಗ್ರಾಮಕ್ಕೆ ಹೋದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿ ದುಬೆ ಮತ್ತು ಆತನ ಸಹಚರರು ಪರಾರಿಯಾಗಿದ್ದರು.

News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್! News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್!

ಪೊಲೀಸರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ವಿಕಾಸ್ ದುಬೆಗೆ ತನ್ನನ್ನು ಬಂಧಿಸಲು ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿ ಮೊದಲೇ ಸಿಕ್ಕಿತ್ತು. ಪತ್ನಿ ರಿಚಾಗೆ ಮಗಳ ಜೊತೆ ತಲೆಮರೆಸಿಕೊಳ್ಳಲು ಹೇಳಿದ್ದ ದುಬೆ, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ತಯಾರಿ ಮಾಡಿಕೊಂಡಿದ್ದ. ತಡರಾತ್ರಿ ಪೊಲೀಸರ ಮೇಲೆ ಮನಬಂದಂತೆ ಗುಂಡು ಹಾರಿಸಲಾಯಿತು. 8 ಪೊಲೀಸರು ಬಲಿಯಾದರು. ದೇಶವೇ ಘಟನೆ ನೋಡಿ ಬೆಚ್ಚಿಬಿದ್ದಿತು.

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು! Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

ಯಾರು ವಿಕಾಸ್ ದುಬೆ?

ಯಾರು ವಿಕಾಸ್ ದುಬೆ?

ಉತ್ತರ ಪ್ರದೇಶದ ವಿಕಾಸ್ ದುಬೆ ಹೆಸರು 2001ರಲ್ಲಿ ಎಲ್ಲರಿಗೂ ತಿಳಿಯಿತು. ರಾಜ್ಯದ ಬಿಜೆಪಿ ನಾಯಕ ಸಂತೋಷ್ ಶುಕ್ಲಾರನ್ನು ದುಬೆ ಹತ್ಯೆ ಮಾಡಿದ. ಆದರೆ, ಆತನ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಆತನನ್ನು ಆರೋಪ ಮುಕ್ತಗೊಳಿಸಲಾಯಿತು. ಬೆದರಿಕೆ, ಕೊಲೆ, ಅಪಹರಣ ಸೇರಿದಂತೆ 50ಕ್ಕೂ ಹೆಚ್ಚು ಪ್ರಕರಣದಲ್ಲಿ ವಿಕಾಸ್ ದುಬೆ ಆರೋಪಿ. ಥಾರಾಚಂದ್ ಕಾಲೇಜಿನ ಪ್ರಾಂಶುಪಾಲರ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಸಹ ಅನುಭವಿಸಿದ್ದ. ಸಂಬಂಧಿಕ ಅನುರಾಗ್ ಹತ್ಯೆಗೆ ಸಂಚು ರೂಪಿಸಿದ್ದ. ರಾಮ್ ಬಾಬು ಯಾದವ್, ದಿನೇಶ್ ದುಬೆ ಹತ್ಯೆಯಲ್ಲಿಯೂ ವಿಕಾಸ್ ದುಬೈ ಕೈವಾಡವಿತ್ತು. ಆದರೆ, ಈ ಹತ್ಯೆ ನಡೆಯುವಾಗ ಆತ ಜೈಲಿನಲ್ಲಿದ್ದ. ಜೈಲಿನಲ್ಲಿದ್ದರೂ ಆತನ ಮಾತು ಹೊರಗಡೆ ನಡೆಯುಷ್ಟು ಪ್ರಭಾವ ಹೊಂದಿದ್ದ.

ಗ್ರಾಮದಲ್ಲಿ ತನ್ನದೇ ಆಡಳಿತ

ಗ್ರಾಮದಲ್ಲಿ ತನ್ನದೇ ಆಡಳಿತ

ಉತ್ತರ ಪ್ರದೇಶದ ಬಿಕ್ರೊ ಗ್ರಾಮದಲ್ಲಿ ವಿಕಾಸ್ ದುಬೆ ಹೇಳಿದ್ದೇ ಮಾತು, ಮಾಡಿದ್ದೇ ಕಾನೂನು ಎಂಬ ಪರಿಸ್ಥಿತಿ ಇತ್ತು. ನೂರಾರು ಮಂದಿಯ ಖಾಸಗಿ ಸೈನ್ಯವನ್ನು ಹೊಂದಿದ್ದ ಆತ ಗ್ರಾಮಸ್ಥರನ್ನು ಇನ್ನಿಲ್ಲದಂತೆ ಕಾಡುತ್ತಿದ್ದ. ಬೇಸಿಗೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಆಗ ದುಬೆ ಕುಟುಂಬಕ್ಕೆ ಸೇರಿದ ಬೋರ್‌ವೆಲ್‌ನಿಂದ ನೀರು ತೆಗೆದುಕೊಂಡು ಹೋಗುವುದು ಜನರಿಗೆ ಅನಿವಾರ್ಯವಾಗಿತ್ತು. ಆಗ ಗ್ರಾಮಸ್ಥರನ್ನು ಆತ ಬಹಳವಾಗಿ ಕಾಡುತ್ತಿದ್ದ. ಐಷಾರಾಮಿ ಬಂಗಲೆ ಕಟ್ಟಿಕೊಂಡು, ಹತ್ತಾರು ಕಾರುಗಳಲ್ಲಿ ದುಬೆ ಸಂಚಾರ ನಡೆಸುತ್ತಿದ್ದ.

ಮನೆಯನ್ನು ಕೆಡವಿ ಹಾಕಿದ್ದ ಜಿಲ್ಲಾಡಳಿತ

ಮನೆಯನ್ನು ಕೆಡವಿ ಹಾಕಿದ್ದ ಜಿಲ್ಲಾಡಳಿತ

ಜುಲೈ 3ರಂದು 8 ಪೊಲೀಸರನ್ನು ಹತ್ಯೆ ಮಾಡುವ ಮೂಲಕ ವಿಕಾಸ್ ದುಬೆ ಉತ್ತರ ಪ್ರದೇಶ ಸರ್ಕಾರವನ್ನೇ ಎದುರು ಹಾಕಿಕೊಂಡ. ತಕ್ಷಣ ಜಿಲ್ಲಾಡಳಿತ ವಿಕಾಸ್ ದುಬೆ ಐಷಾರಾಮಿ ಬಂಗಲೆಯನ್ನು ನೆಲಸಮ ಮಾಡಿತು. ಪೊಲೀಸರನ್ನು ಕೊಂದು ಪರಾರಿಯಾಗಿದ್ದ ಆತನ ಬಂಧನಕ್ಕೆ ವಿಶೇಷ ತಂಡಗಳನ್ನು ರಚನೆ ಮಾಡಿತ್ತು. ಘಟನೆ ನಡೆದಾಗಲೇ ವಿಕಾಸ್ ದುಬೆ ಎನ್ ಕೌಂಟರ್‌ನಲ್ಲಿ ಹತ್ಯೆಯಾಗುತ್ತಾನೆ ಎಂದು ನಿರೀಕ್ಷೆ ಮಾಡಲಾಗಿತ್ತು. ಹಾಗೆಯೇ ಆಯಿತು. ವಿಕಾಸ್ ದುಬೆ ಎನ್ ಕೌಂಟರ್ ನಕಲಿ ಎಂದು ಸುಪ್ರೀಂಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ.

ಉಜ್ಜೈನಿನಲ್ಲಿ ಬಂಧನ, ಎನ್ ಕೌಂಟರ್

ಉಜ್ಜೈನಿನಲ್ಲಿ ಬಂಧನ, ಎನ್ ಕೌಂಟರ್

ಜುಲೈ 3ರಂದು ಪೊಲೀಸರು ಕೊಂದು ಪರಾರಿಯಾಗಿದ್ದ ವಿಕಾಸ್ ದುಬೆ ಮಧ್ಯಪ್ರದೇಶದ ಉಜ್ಜೈನಿನಲ್ಲಿ ಜುಲೈ 9ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಜುಲೈ 10ರಂದು ಆತನನ್ನು ಕಾನ್ಪುರಕ್ಕೆ ಉತ್ತರ ಪ್ರದೇಶ ಪೊಲೀಸರು ಕರೆತರುತ್ತಿದ್ದರು. ಆದರೆ, ಕಾನ್ಪುರ ಹೊರವಲಯದಲ್ಲಿ ಪೊಲೀಸರ ವಾಹನ ಪಲ್ಟಿಯಾಗಿತ್ತು, ಆಗ ದುಬೆ ಪೊಲೀಸರ ಬಂದೂಕು ತೆಗೆದುಕೊಂಡು ಪರಾರಿಯಾಗಲು ಪ್ರಯತ್ನ ನಡೆಸಿದ್ದ. ಆಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಸಾವನ್ನಪ್ಪಿದ್ದ.

English summary
Uttar Pradesh gangster Vikas Dubey who killed 8 police on July 3 killed in police encounter. He is one of the news maker in the year 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X