ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

News Makers 2020: ಶಹೀನ್ ಬಾಗ್‌ ಪ್ರತಿಭಟನೆಯ ಬಿಲ್ಕಿಸ್ ದಾದಿ

|
Google Oneindia Kannada News

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಿಂದ 2020ರ ಮಾರ್ಚ್ 24ರವರೆಗೂ ನಿರಂತರ ಹಾಗೂ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಅದರಲ್ಲಿ ದೆಹಲಿಯ ಶಹೀನ್ ಬಾಗ್‌ನಲ್ಲಿ ಸಂಪೂರ್ಣವಾಗಿ ಮಹಿಳೆಯರೇ ಕುಳಿತು ನಡೆಸಿದ ಪ್ರತಿಭಟನೆ ಜಗತ್ತಿನ ಗಮನ ಸೆಳೆದಿತ್ತು. ದೇಶದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ಜಾರಿಯಾಗುವ ಮಾರ್ಚ್ 24ರವರೆಗೂ 101 ದಿನಗಳ ಕಾಲ ಶಹೀನ್ ಬಾಗ್ ಪ್ರತಿಭಟನೆ ನಡೆದಿತ್ತು. ಅದರಲ್ಲಿ ಹೆಚ್ಚು ಸುದ್ದಿಯಾದವರು ಬಿಲ್ಕಿಸ್ ದಾದಿ.

82 ವರ್ಷದ ಬಿಲ್ಕಿಸ್ ಬಾನೊ ಅವರು ಶಹೀನ್ ಬಾಗ್ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರ ಜತೆ ಕುಳಿತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಸಿದ ಪ್ರತಿಭಟನೆ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಬಿಲ್ಕಿಸ್ ದಾದಿ ಎಂದೇ ಹೆಸರಾದ ಬಿಲ್ಕಿಸ್ ಬಾನೊ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಇಳಿವಯಸ್ಸಿನಲ್ಲಿಯೂ ದೆಹಲಿನ ನಡುಗುವ ಚಳಿಯಲ್ಲಿ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸ್ಫೂರ್ತಿ ನೀಡಿದ್ದರು.

News makers; ಸರ್ಕಾರವನ್ನೇ ಎದುರು ಹಾಕಿಕೊಂಡು ಬಲಿಯಾದ ದುಬೆ!News makers; ಸರ್ಕಾರವನ್ನೇ ಎದುರು ಹಾಕಿಕೊಂಡು ಬಲಿಯಾದ ದುಬೆ!

ಪ್ರತಿಷ್ಠಿತ ಟೈಮ್ ನಿಯತಕಾಲಿಕೆ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಿದ '2020ರ ಜಗತ್ತಿನ ನೂರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು' ಪಟ್ಟಿಯಲ್ಲಿ ಬಿಲ್ಕಿಸ್ ಬಾನೊ ಅವರು ಸ್ಥಾನ ಪಡೆದಿದ್ದರು.

News Makers 2020: Shaheen Bagh Activist Fame Bilkis Dadi

'ನಮಗೆ ವಯಸ್ಸಾಗಿದೆ. ನಾವು ಇದನ್ನು ನಮಗಾಗಿ ಮಾಡುತ್ತಿಲ್ಲ. ಇದು ನಮ್ಮ ಮಕ್ಕಳಿಗಾಗಿ. ಇಲ್ಲದಿದ್ದರೆ ನಮ್ಮ ಜೀವವನ್ನು ಪಣವಾಗಿಟ್ಟುಕೊಂಡು ಇಲ್ಲಿ ಕೊರೆಯುವ ಚಳಿಯಲ್ಲಿ ಹಗಲು ರಾತ್ರಿ ಕಳೆಯಬೇಕು? ಎಲ್ಲ ವಿರೋಧಗಳ ನಡುವೆಯೂ ಅವರು ಬಾಬ್ರಿ ಮಸೀದಿ ತೀರ್ಪು, ತ್ರಿವಳಿ ತಲಾಖ್ ಕಾನೂನು, ಅಪನಗದೀಕರಣಗಳನ್ನು ಜಾರಿ ಮಾಡಿದ್ದರು. ಅದಕ್ಕೆ ನಾವು ಏನೂ ಅನ್ನಲಿಲ್ಲ. ಆದರೆ ನಮ್ಮನ್ನು ವಿಭಜಿಸುವ ಈ ಕಾನೂನನ್ನು ಒಪ್ಪುವುದಿಲ್ಲ' ಎಂದು ಬಿಲ್ಕಿಸ್ ದಾದಿ ಹೇಳಿದ್ದರು.

ಪ್ರಸ್ತುತ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿಯೂ ಬಿಲ್ಕಿಸ್ ದಾದಿ ಸುದ್ದಿಯಾಗಿದ್ದರು. ಅಕ್ಟೋಬರ್ 1ರಂದು ದೆಹಲಿ-ಹರ್ಯಾಣ ನಡುವಿನ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಅವರನ್ನು ಸೇರಿಕೊಳ್ಳಲು ಬಿಲ್ಕಿಸ್ ದಾದಿ ಹೊರಟಿದ್ದರು. ಆದರೆ ಕೊರೊನಾ ವೈರಸ್ ಸೋಂಕಿನ ಭೀತಿಯ ಕಾರಣ ಅವರನ್ನು ತಡೆದು ಅವರ ಒಳಿತಿಗಾಗಿ ವಾಪಸ್ ಹೋಗುವಂತೆ ಸೂಚಿಸಲಾಗಿತ್ತು. ಅವರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಪೊಲೀಸರು ದೆಹಲಿಯಲ್ಲಿನ ಅವರ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು.

News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ!News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ!

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು, ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೃದ್ಧೆಯೊಬ್ಬರನ್ನು ಶಹೀನ್ ಬಾಗ್ ದಾದಿ ಎಂದು ತಪ್ಪಾಗಿ ಕರೆಯುವ ಮೂಲಕ ಟೀಕೆಗೆ ಗುರಿಯಾಗಿದ್ದರು. ನೂರು ರೂಪಾಯಿ ಮತ್ತು ಬಿರಿಯಾನಿ ಕೊಟ್ಟರೆ ಪ್ರತಿಭಟನೆಗೆ ಬರುತ್ತಾರೆ ಎಂದು ಕಂಗನಾ ಅವರು ಬಿಲ್ಕಿಸ್ ಬಾನೊ ಅವರನ್ನು ಲೇವಡಿ ಮಾಡಿದ್ದರು.

English summary
News Makers 2020: Shaheen Bagh activist Bilkis Dadi aka Bilkis Bano got fame during the protest against Citizenship amendment act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X