ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಯರ್ ಪ್ರಿಯರೇ ಓದಿ: ಇದೊಂದು ರಾಷ್ಟ್ರದಲ್ಲಿ ಮೂತ್ರದಿಂದ ಬಿಯರ್ ಉತ್ಪಾದನೆ!

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಬಿಯರ್ ಅಂದರೆ ಬಾಯಿ ಬಾಯಿ ಬಿಡುವ ಮಂದಿಗೇನೂ ಕಡಿಮೆಯಿಲ್ಲ. ಫ್ರೆಂಡ್ಸ್ ಪಾರ್ಟಿ ಅಂದ್ರೆ ಬಿಯರ್, ವೈನ್, ಸ್ಕಾಚ್ ರೀತಿಯ ಡ್ರಿಂಕ್ಸ್ ಇರುವುದು ಕಾಮನ್. ಆದರೆ ಈ ದೇಶದಲ್ಲಿ ಬಿಯರ್ ಕುಡಿಯುವುದಕ್ಕೂ ಮುನ್ನ ಎಚ್ಚರಿಕೆ ವಹಿಸಬೇಕು.

ನೀವು ಕುಡಿಯುವ ಬಿಯರ್ ಅನ್ನು ಕೊಳಚೆ ನೀರು ಮತ್ತು ಮೂತ್ರದಿಂದ ಸಿದ್ಧಪಡಿಸಲಾಗುತ್ತದೆ. ಶುದ್ಧೀಕರಿಸಿದ ಕೊಳಚೆ ನೀರು ಮತ್ತು ಮೂತ್ರ ಮಿಶ್ರಿತ ನೀರಿನಿಂದಲೇ ಬಿಯರ್ ಉತ್ಪಾದಿಸುತ್ತಿರುವುದಾಗಿ ಸ್ವತಃ ಉತ್ಪಾದನಾ ಸಂಸ್ಥೆಯೇ ಹೇಳಿಕೊಂಡಿದೆ. ಸಿಂಗಾಪುರ ನೆಲದಲ್ಲಿ ಇಂಥದೊಂದು ವಿನೂತನ ಪ್ರಯತ್ನ ನಡೆಯುತ್ತಿದ್ದು, ಅದಕ್ಕೂ ಕಾರಣವಿದೆ.

ಮದ್ಯಪ್ರಿಯರಿಗೆ ಮೋಜಿನ ಸುದ್ದಿ; ಕಡಿಮೆ ರೇಟಲ್ಲಿ ಎಣ್ಣೆ ಬೇಕಾ, ಈ ರಾಜ್ಯಕ್ಕೆ ಬನ್ನಿ! ಮದ್ಯಪ್ರಿಯರಿಗೆ ಮೋಜಿನ ಸುದ್ದಿ; ಕಡಿಮೆ ರೇಟಲ್ಲಿ ಎಣ್ಣೆ ಬೇಕಾ, ಈ ರಾಜ್ಯಕ್ಕೆ ಬನ್ನಿ!

ಸಿಂಗಾಪುರ ನೆಲದಲ್ಲಿ ಬಿಯರ್ ಅನ್ನು ಮೂತ್ರ ಮತ್ತು ಕೊಳಚೆ ನೀರಿನಿಂದ ಉತ್ಪಾದಿಸುತ್ತಿರುವುದು ಏಕೆ?, ಕೊಳಚೆ ನೀರಿನಲ್ಲಿ ಬಿಯರ್ ತಯಾರಿಸುವ ವಿಧಾನ ಹೇಗೆ ಇರುತ್ತದೆ?, ಮೂತ್ರ ಬಳಸಿ ಬಿಯರ್ ಉತ್ಪಾದಿಸುತ್ತಿರುವುದರ ಹಿಂದಿನ ಉದ್ದೇಶವೇನು?, ಬಿಯರ್ ಕುಡಿಯುವ ಜನರು ಕಡ್ಡಾಯವಾಗಿ ಓದಲೇಬೇಕಾಗಿರುವ ಒಂದು ವಿಶೇಷ ಸ್ಟೋರಿ ಇದು.

ನ್ಯೂಬ್ರೂ ಬಿಯರ್ ಕುರಿತು ಓದಿ ತಿಳಿಯಿರಿ

ನ್ಯೂಬ್ರೂ ಬಿಯರ್ ಕುರಿತು ಓದಿ ತಿಳಿಯಿರಿ

ಸಿಂಗಾಪುರದಲ್ಲಿ ಮಾದಕ ಪಾನೀಯಗಳ ಉತ್ಪಾದನೆಯನ್ನು ಪರಿಸರ ಸ್ನೇಹಿ ಎಂಬ ಸಂದೇಶವನ್ನು ಸಾರುವುದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ನ್ಯೂಬ್ರೂ ಬಿಯರ್ ಅನ್ನು ಮೂತ್ರ ಮತ್ತು ಕೊಳಚೆ ನೀರಿನಿಂದ ಉತ್ಪಾದಿಸಲಾಗುತ್ತದೆ. ಈ ಬಿಯರ್ ಹಸಿವನ್ನುಂಟು ಮಾಡುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ, ಆದರೆ ಇದು ಖಂಡಿತವಾಗಿಯೂ ಹಸಿರಿನ ಮಾರ್ಗವನ್ನು ತೋರುತ್ತದೆ. ಸಿಂಗಾಪುರದಲ್ಲಿ ಪ್ರಸ್ತುತ ನ್ಯೂಬ್ರೂ ಅನ್ನು "ಹಸಿರು ಬಿಯರ್" ಎಂದು ಪ್ರಚಾರ ಮಾಡಲಾಗಿದೆ. BBC ವರದಿಯ ಪ್ರಕಾರ, ಒಳಚರಂಡಿಯಿಂದ ಮರುಬಳಕೆ ಮಾಡುವ ದ್ರವವನ್ನು ಶುದ್ಧೀಕರಿಸಿ, ಸೋಸಿ (ಫಿಲ್ಟರ್) ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ.

ಮೂತ್ರ, ಕೊಳಚೆ ನೀರು ಬಳಸಿ ಬಿಯರ್ ತಯಾರಿಸುವುದು ಏಕೆ?

ಮೂತ್ರ, ಕೊಳಚೆ ನೀರು ಬಳಸಿ ಬಿಯರ್ ತಯಾರಿಸುವುದು ಏಕೆ?

ಜಗತ್ತಿನಲ್ಲಿ ಮುಂಬರುವ ವರ್ಷಗಳಲ್ಲಿ ನೀರಿನ ಬಿಕ್ಕಟ್ಟು ಸೃಷ್ಟಿಯಾಗಲಿದ್ದು, ಅದನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲ ರೀತಿ ಪ್ರಯತ್ನ ಮತ್ತು ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆ ನೀರು ಸಂರಕ್ಷಿಸುವ ಮತ್ತು ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ. ಆದರೆ ಬಿಯರ್ ತಯಾರಿಸುವುದಕ್ಕೆ ಅತಿಹೆಚ್ಚು ನೀರು ಬೇಕಾಗುತ್ತದೆ, ಈ ಪಾನೀಯದಲ್ಲಿ ಶೇ.90ರಷ್ಟು H2O ಆಗಿರುತ್ತದೆ. ಹೀಗಾಗಿ ಅನಿವಾರ್ಯ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಸಿಂಗಾಪುರದ ನೀರಿನ ಏಜೆನ್ಸಿಯು ದೇಶದ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಪಾನೀಯವನ್ನು ಪ್ರಾರಂಭಿಸಿದೆ.

ಕೊಳತೆ ನೀರು, ಮೂತ್ರದಿಂದ ಬಿಯರ್ ತಯಾರಿಕೆ ಹೇಗೆ?

ಕೊಳತೆ ನೀರು, ಮೂತ್ರದಿಂದ ಬಿಯರ್ ತಯಾರಿಕೆ ಹೇಗೆ?

ನ್ಯೂಬ್ರೂ ಎನ್ನುವುದು ಸಿಂಗಾಪುರ ನೀರು ಸರಬರಾಜ ಮಂಡಳಿಯು ಶುದ್ಧೀಕರಿಸಿ, ಸೋಸಿ, ಪೂರೈಕೆ ಮಾಡಿರುವ ಶುದ್ಧ ನೀರಿನಲ್ಲಿ ಉತ್ಪಾದಿಸಿದ ಬಿಯರ್ ಆಗಿದೆ. ಈ ಬಿಯರ್ ಉತ್ಪಾದನೆಗಾಗಿ ಪೂರೈಕೆ ಆಗುವ ಹೊಸ ನೀರನ್ನು ಕಟ್ಟುನಿಟ್ಟಾದ ಪರೀಕ್ಷಿಸಿ, ಹಲವು ಹಂತಗಳಲ್ಲಿ ಶೋಧಿಸಿ, ಕುಡಿಯುವುದಕ್ಕೆ ಸುರಕ್ಷಿತವಾಗಿದೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಲಾಗುತ್ತದೆ.

ಇಂಡಿಪೆಂಡೆಂಟ್ ವರದಿ ಪ್ರಕಾರ, ಕೊಳಚೆನೀರನ್ನು "ಅಲ್ಟ್ರಾ-ಕ್ಲೀನ್" ನೀರಾಗಿ ಸಂಸ್ಕರಿಸಲಾಗುತ್ತದೆ, ಮೊದಲು ಉಷ್ಣವಲಯದ ಹೊಂಬಣ್ಣದ ಏಲ್‌ನ ಶೇ. 95 ಪ್ರತಿಶತವನ್ನು ತಯಾರಿಸಲು ಬಳಸಲಾಗುತ್ತದೆ.

ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಸಿಂಗಾಪುರ ಇಂಟರ್ ನ್ಯಾಷನಲ್ ವಾಟರ್ ವೀಕ್ (SIWW) ಜೊತೆಗೆ ನ್ಯೂಬ್ರೂ ಅನ್ನು ಕಳೆದ ತಿಂಗಳು ರಾಷ್ಟ್ರೀಯ ವಾಟರ್ ಏಜೆನ್ಸಿ PUB ಮತ್ತು ಸ್ಥಳೀಯ ಕ್ರಾಫ್ಟ್ ಬಿಯರ್ ಬ್ರೂವರಿ ಬ್ರೂವರ್ಕ್ಜ್ ಪ್ರಾರಂಭಿಸಿತು.

ಸಿಂಗಾಪುರದಲ್ಲಿ ಉತ್ಪಾದಿಸುವ ಈ ಬಿಯರ್ ರುಚಿ ಹೇಗಿರುತ್ತೆ?

ಸಿಂಗಾಪುರದಲ್ಲಿ ಉತ್ಪಾದಿಸುವ ಈ ಬಿಯರ್ ರುಚಿ ಹೇಗಿರುತ್ತೆ?

ನ್ಯೂಬ್ರೂ ಬಿಯರ್ ಅನ್ನು ಕ್ರಾಫ್ಟ್ ಬಿಯರ್ ಆಗಿದ್ದು, ಅದು ಸುಟ್ಟ ಜೇನುತುಪ್ಪದಂತಹ ರುಚಿಯನ್ನು ನೀಡುತ್ತದೆ. ಜಲಮಂಡಳಿಯು ಕೊಳಚೆ ನೀರನ್ನು ಶುದ್ಧೀಕರಿಸಿ ಕುಡಿಯಲು ಯೋಗ್ಯ ನೀರನ್ನಾಗಿಸುತ್ತಿದೆ. ಶುಷ್ಕ ಹವಾಮಾನದ ವಿರುದ್ಧ ನೀರಿನ ಪೂರೈಕೆಯನ್ನು ಮಾಡುವುದು ಈ ಪ್ರಕ್ರಿಯೆ ಮುಖ್ಯ ಗುರಿಯಾಗಿದೆ ಎಂದು ಜಲ ಮಂಡಳಿ ಹೇಳುತ್ತದೆ. ಶುಷ್ಕ ಅವಧಿಗಳಲ್ಲಿ, ಮರುಬಳಕೆಯ ಕೊಳಚೆನೀರನ್ನು ಜಲಾಶಯಗಳಿಗೆ ಸೇರಿಸಲಾಗುತ್ತದೆ, ಅಲ್ಲಿ ನೀರನ್ನು ಸಂಸ್ಕರಿಸಲಾಗುತ್ತದೆ. ನಂತರದಲ್ಲಿ ಕೊಳಾಯಿ(ನೆಲ್ಲಿ) ನೀರಾಗಿ ಬಳಸಲಾಗುತ್ತದೆ.

ಸಿಂಗಾಪುರ ನಲ್ಲಿ ನ್ಯೂಬ್ರೂ ಮೊದಲ ಕ್ರಾಫ್ಟ್ ಬಿಯರ್ ಅಲ್ಲ

ಸಿಂಗಾಪುರ ನಲ್ಲಿ ನ್ಯೂಬ್ರೂ ಮೊದಲ ಕ್ರಾಫ್ಟ್ ಬಿಯರ್ ಅಲ್ಲ

ಜಲಮಂಡಳಿ ಶುದ್ಧೀಕರಿಸಿದ ನೀರಿನಲ್ಲಿ ಉತ್ಪಾದಿಸುತ್ತಿರುವ ನ್ಯೂಬ್ರೂ, ಸಿಂಗಾಪುರದಲ್ಲಿನ ಮೊದಲ ಕ್ರಾಫ್ಟ್ ಬಿಯರ್ ಅಲ್ಲ. ಅಸಲಿಗೆ ಕ್ರಾಫ್ಟ್ ಬಿಯರ್ ಎನ್ನುವುದು ಹಸಿರು ಆಹಾರಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದಲ್ಲಿ ಬಿಯರ್ ಅನ್ನು ಉತ್ಪಾದಿಸುವ ಕಂಪನಿಗಳಾಗಿರುತ್ತವೆ. ಅದೇ ರೀತಿಯಲ್ಲಿ ಬಿಯರ್ ಅನ್ನು ಭಟ್ಟಿ ಇಳಿಸುವ ಹಲವು ಕಂಪನಿಗಳೂ ಇವೆ.

ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಸ್ಯಾನ್ ಡಿಯಾಗೋದಲ್ಲಿ, ಕ್ರಾಫ್ಟ್ ಬಿಯರ್ ಕಂಪನಿ ಸ್ಟೋನ್ ಬ್ರೂಯಿಂಗ್ 2017 ರಲ್ಲಿ ಸ್ಟೋನ್ ಫುಲ್ ಸರ್ಕಲ್ ಪೇಲ್ ಅನ್ನು ಹೊರತಂದಿತು. ಇದು ಶುದ್ಧೀಕರಿಸಿದ ನೀರಿನಿಂದ ತಯಾರಿಸಿದ ಬಿಯರ್ ಆಗಿದೆ. ಜನರು ಆಲ್ಕೊಹಾಲ್ ಯುಕ್ತ ಪಾನೀಯಗಳ ಮೂಲಕ ಆಹಾರ ವ್ಯರ್ಥದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ಕ್ರಸ್ಟ್ ಗ್ರೂಪ್ ತನ್ನ ರೆಸ್ಟೋರೆಂಟ್ ಮತ್ತು ಹೋಟೆಲ್ ಪಾಲುದಾರರಿಂದ ಹೆಚ್ಚುವರಿ ಬ್ರೆಡ್ ಮತ್ತು ಇತರ ಪದಾರ್ಥಗಳಿಂದ ತಯಾರಿಸಿದ ಕುಶಲಕರ್ಮಿ ಬಿಯರ್‌ಗಳ ಸಾಲನ್ನು ಆಹಾರ ತ್ಯಾಜ್ಯದ ಕುರಿತು ಜಾಗೃತಿ ಮೂಡಿಸಲು ಹೊರತಂದಿದೆ.

ರೆಸ್ಟೋರೆಂಟ್ ಸೂಪರ್ ಲೊಕೊ ಗ್ರೂಪ್ ತನ್ನ ಲೊಕೊ ಅರ್ಥ್ ತಿಂಗಳ ಮೆನುವಿನಲ್ಲಿ ಏಪ್ರಿಲ್ 22ರಂದು ವಿಶ್ವ ಭೂಮಿಯ ದಿನವನ್ನು ಆಚರಿಸಲು ಉಷ್ಣವಲಯದ ಹಣ್ಣಿನ ತ್ಯಾಜ್ಯವನ್ನು ಬಳಸಿ "ಜೀರೊ ಟು ಹೀರೋ" ಕಾಕ್‌ಟೈಲ್ ಅನ್ನು ಪರಿಚಯಿಸಿತು.

Recommended Video

ಫೀಲ್ಡ್ ಗೆ ನುಗ್ಗಿದ ಅಭಿಮಾನಿಯನ್ನು ಕುರಿಮರಿಯಂತೆ ಹೊತ್ತೊಯ್ದ ಪೊಲೀಸರು:Kohli ಮಾಡಿದ್ದೇನು? |#cricket |Oneindia

English summary
Newbrew : The brewery's unique craft beer is made using Newater, Singapore's brand of clean, high-quality water recycled from sewage and urine. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X