• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಕ್ರಗ್ರಹ ಇನ್ನೂ ಬದುಕಿದೆ! ಬಾಹ್ಯಾಕಾಶ ವಿಜ್ಞಾನಿಗಳಿಂದ ಸ್ಫೋಟಕ ಮಾಹಿತಿ!

|
Google Oneindia Kannada News

ಮಾನವನ ವಿಕಾಸದ ಜೊತೆಗೆ ಶುಕ್ರ ಗ್ರಹ ಕೂಡ ಬೆಳೆದು ಬಂದಿದೆ. ಲಕ್ಷಾಂತರ ವರ್ಷಗಳಿಂದ ಮಾನವನಿಗೂ ಮತ್ತು ಫಳಫಳ ಹೊಳೆಯುವ ಶುಕ್ರ ಗ್ರಹಕ್ಕೂ ಅವಿನಾಭಾವ ಸಂಬಂಧವಿದೆ. ಆದ್ರೆ ಶುಕ್ರ ಗ್ರಹವನ್ನು ಇಷ್ಟುದಿನ ನಿರ್ಜೀವ ಎಂದು ತಿಳಿಯಲಾಗಿತ್ತು. ಆ ಮಾತು ಈಗ ಸುಳ್ಳಾಗಿದೆ, ನಾನಿನ್ನೂ ಜೀವಂತವಾಗಿ ಇದ್ದೀನಿ ಎಂದು ಶುಕ್ರ ತೋರಿಸಿಕೊಟ್ಟಿದೆ. ಯೆಸ್, ಶುಕ್ರ ಗ್ರಹದಲ್ಲಿ ಭೂಮಿ ಮೇಲೆ ನಡೆಯುವ ಪ್ರಕ್ರಿಯೆಗಳು ನಡೆಯುತ್ತಿವೆ..!

ಭೂಮಿ ಅಂತರಾಳದಲ್ಲಿ ನೂರಾರು ಪ್ರಕ್ರಿಯೆ ಉಂಟು ಮಾಡುವ 'ಟೆಕ್ಟಾನಿಕ್ ಪ್ಲೇಟ್'ಗಳು ಶುಕ್ರ ಗ್ರಹದಲ್ಲೂ ಕಂಡುಬಂದಿವೆ. ಅಮೆರಿಕದ 'ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್' ನಡೆಸಿರುವ ಅಧ್ಯಯನ ಸ್ಫೋಟಕ ಸತ್ಯ ಹೊರಹಾಕಿದೆ. ಈ ಮೂಲಕ ಶುಕ್ರ ಗ್ರಹದಲ್ಲಿ ಜೀವಿಗಳು ಬದುಕಿವೆಯಾ ಅಥವಾ ಮುಂದೆ ಒಂದು ದಿನ ಅಲ್ಲಿ ಬದುಕಬಹುದಾ ಎಂಬ ಪ್ರಶ್ನೆಗೂ ಉತ್ತರ ಸ್ಪಷ್ಟವಾಗುತ್ತಿದೆ.

'ಟೆಕ್ಟಾನಿಕ್ ಪ್ಲೇಟ್' ಅಥವಾ 'ಟೆಕ್ಟಾನಿಕ್ ತಟ್ಟೆ' ಸೂರ್ಯನ ಸುತ್ತಮುತ್ತ ಭೂಮಿಯನ್ನು ಬಿಟ್ಟರೆ ಬೇರೆ ಯಾವುದೇ ಗ್ರಹದಲ್ಲೂ ಕಂಡು ಬಂದಿಲ್ಲ. ಆದರೆ ಈಗ ಶುಕ್ರ ಅಂದರೆ ಭೂಮಿಗೆ ಸಮೀಪದಲ್ಲೇ ಇರುವ ಮತ್ತು ಭೂಮಿ ಗಾತ್ರ ಹೋಲುವ ಗ್ರಹದಲ್ಲಿ ಕಂಡುಬಂದಿದೆ. ಇದು ಕುತೂಹಲ ಕೆರಳಿಸಿದ್ದು, ಮತ್ತಷ್ಟು ಅಧ್ಯಯನ ಮುಂದುವರಿದಿದೆ.

ಅದು ಮಾಯಾ ಜಗತ್ತು..!

ಅದು ಮಾಯಾ ಜಗತ್ತು..!

‘ಟೆಕ್ಟಾನಿಕ್ ಪ್ಲೇಟ್' ಎಲ್ಲವನ್ನೂ ಬದಲಾಯಿಸಬಲ್ಲದು, ಭೂಮಿ ಮೇಲೆ ಭೂಕಂಪನ ಸೇರಿದಂತೆ ಖಂಡಗಳು ಅದಲು-ಬದಲಾಗಿ ಹೋಗಿದ್ದು. ಜ್ವಾಲಾಮುಖಿ ಸ್ಫೋಟಕ್ಕೂ ಕೆಲವೊಮ್ಮೆ ಇದೇ ‘ಟೆಕ್ಟಾನಿಕ್ ಪ್ಲೇಟ್' ಕಾರಣ. ವಿಚಿತ್ರ ಎಂದರೆ ಸೌರಮಂಡಲದಲ್ಲಿ ಈವರೆಗೂ ಭೂಮಿ ಗ್ರಹ ಮಾತ್ರ ‘ಟೆಕ್ಟಾನಿಕ್ ಪ್ಲೇಟ್'ಗಳನ್ನು ಹೊಂದಿದೆ ಎಂದು ನಂಬಲಾಗಿತ್ತು. ಆದ್ರೆ ಶುಕ್ರ ಗ್ರಹದ ಮ್ಯಾಪ್‌ ಪರಿಶೀಲನೆ ನಡೆಸುವಾಗ, ‘ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್' ಸಂಶೋಧಕರಿಗೆ ಡೌಟ್ ಬಂದಿದೆ.

ಶುಕ್ರ ಗ್ರಹದ ಕೆಲ ಪ್ರದೇಶಗಳು ಒಂದಕ್ಕೊಂದು ಒತ್ತುತ್ತಿರುವುದು ಹಾಗೂ ಬದಲಾವಣೆ ಸಂಭವಿಸಿದ್ದು ಕಂಡಿದೆ. ತಡ ಮಾಡದೆ ಕೂಡಲೇ ಹೆಚ್ಚಿನ ಅಧ್ಯಯನ ನಡೆಸಿದ್ದು, ಶುಕ್ರ ಗ್ರಹದಲ್ಲೂ ‘ಟೆಕ್ಟಾನಿಕ್ ಪ್ಲೇಟ್'ಗಳು ಬದುಕಿರುವುದು ಗೊತ್ತಾಗಿದೆ. ಇಷ್ಟೆಲ್ಲದರ ನಡುವೆ ಇಡೀ ಜಗತ್ತು ಶುಕ್ರ ಗ್ರಹದ ಅಧ್ಯಯನಕ್ಕೆ ಸಿಕ್ಕಾಪಟ್ಟೆ ಒತ್ತು ನೀಡುತ್ತಿದ್ದು, ನಾಸಾ ಮತ್ತೆ ಮುಂಚೂಣಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಮಂಗಳ ಗ್ರಹದ ರೀತಿ ಶುಕ್ರ ಗ್ರಹವೂ ಮಾನವರ ಬಾಹ್ಯಾಕಾಶ ಅಧ್ಯಯನದ ಕೇಂದ್ರ ಬಿಂದುವಾಗಿದೆ.

 2 ನೌಕೆಗಳು ಹಾರಲಿವೆ..!

2 ನೌಕೆಗಳು ಹಾರಲಿವೆ..!

ಶುಕ್ರ ಗ್ರಹದ ಅಧ್ಯಯನಕ್ಕಾಗಿ ನಾಸಾ ಈಗ ಸಿದ್ಧಪಡಿಸಿರುವ ಯೋಜನೆ ಪ್ರಕಾರ ಒಟ್ಟು 2 ನೌಕೆಗಳು ಶುಕ್ರನ ಕಕ್ಷೆಗೆ ಹಾರಲಿವೆ. ಅದರಲ್ಲಿ ಮೊದಲ ನೌಕೆ 2028ಕ್ಕೆ ಉಡಾವಣೆಯಾಗಲಿದೆ. 2030ಕ್ಕೆ ‘ನಾಸಾ' ಮತ್ತೊಂದು ನೌಕೆಯನ್ನ ಉಡಾವಣೆ ಮಾಡಲಿದೆ. ಈ ಎರಡೂ ಯೋಜನೆಗಳು ಶುಕ್ರ ಗ್ರಹದ ಅಧ್ಯಯನ ನಡೆಸುವುದಲ್ಲದೆ ಶುಕ್ರನ ಮೇಲೆ ಜೀವಿಗಳ ಕುರುಹು ಸಿಗುತ್ತಾ ಎಂದು ತಡಕಾಡಲಿವೆ. ಅಕಸ್ಮಾತ್ ಶುಕ್ರನಲ್ಲಿ ಜೀವಿಗಳ ಕುರುಹು ಪತ್ತೆ ಹಚ್ಚಿದ್ದೇ ಆದರೆ, ನಾಸಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಹೀಗಾಗಿ 30 ವರ್ಷಗಳ ಬಳಿಕ ಮಹತ್ವದ ಘೋಷಣೆ ಹೊರಡಿಸಿದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ.

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ.

ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.

ಜೀವಿಗಳ ಬಗ್ಗೆ ಸುಳಿವು..?

ಜೀವಿಗಳ ಬಗ್ಗೆ ಸುಳಿವು..?

ಅಷ್ಟಕ್ಕೂ ಭೂಮಿಯಲ್ಲಿರುವ ಫಾಸ್​ಫೈನ್ ಗ್ಯಾಸ್‌ನ ಗುಣಗಳನ್ನು ಗಮನಿಸಿದರೆ ಶುಕ್ರ ಗ್ರಹದಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಗುತ್ತದೆ. ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್​ಫೈನ್ ಅನಿಲ ಸೃಷ್ಟಿಯಾಗುತ್ತದೆ. ಈಗ ಶುಕ್ರನ ಮೋಡಗಳಲ್ಲೂ ಕೂಡ ಈ ಫಾಸ್​ಫೈನ್ ಗ್ಯಾಸ್ ಕಂಡುಬಂದಿದೆ.

ಹೀಗಾದರೆ ಶುಕ್ರ ಗ್ರಹದಲ್ಲೂ ಸೂಕ್ಷ್ಮಜೀವಿಗಳು ಬದುಕುತ್ತಿರಬಹುದು ಎಂಬ ಆಶಯ ವಿಜ್ಞಾನಿಗಳಲ್ಲಿ ಮೂಡಿದೆ. 3 ಹ್ರೈಡ್ರೋಜನ್ ಅಣುಗಳ ಜೊತೆ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಫಾಸ್​ಫೈನ್ ಉತ್ಪತ್ತಿಯಾಗುತ್ತದೆ. ಆದರೆ ಮಾನವರಿಗೆ ತುಂಬಾ ವಿಷಕಾರಿಯಾಗಿರುತ್ತದೆ. ಶುಕ್ರನ ಮೇಲೆ ಕೆಲ ತಿಂಗಳ ಹಿಂದೆ ಫಾಸ್​ಫೈನ್ ಅನಿಲ ಕಂಡುಬಂದಿತ್ತು. ಇದಾದ ಬಳಿಕ ಇಡೀ ಜಗತ್ತು ಶುಕ್ರಗ್ರಹದ ಮೇಲೆ ತನ್ನ ದೃಷ್ಟಿ ನೆಟ್ಟಿದೆ.

ಭೂಮಿಗೆ ಅತ್ಯಂತ ಸಮೀಪದ ಗ್ರಹ

ಭೂಮಿಗೆ ಅತ್ಯಂತ ಸಮೀಪದ ಗ್ರಹ

ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. ಭೂಮಿಯಿಂದ ಶುಕ್ರ ಗ್ರಹ ಸುಮಾರು 140 ಮಿಲಿಯನ್ ಕಿಲೋಮೀಟರ್ ಅಂದರೆ 14 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಅಂತರ ಭಾರಿ ಎನಿಸಿದರೂ, ಸೌರಮಂಡಲದಲ್ಲಿ ಬೇರೆ ಯಾವುದೇ ಗ್ರಹವೂ ಭೂಮಿಗೆ ಇಷ್ಟು ಹತ್ತಿರದಲ್ಲಿ ಇಲ್ಲ. ರಾತ್ರಿ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವಷ್ಟು ಶುಕ್ರ ಗ್ರಹ ಭೂಮಿಗೆ ಹತ್ತಿರದಲ್ಲಿದೆ. ಹೀಗಾಗಿ ಪ್ರಸಕ್ತ ಸಂಶೋಧನಾ ವರದಿ ಖಗೋಳ ವಿಜ್ಞಾನದಲ್ಲೇ ದೊಡ್ಡ ತಿರುವು ಎನ್ನಬಹುದಾಗಿದೆ. ಅಕಸ್ಮಾತ್ ಮಾನವನೂ ಕೂಡ ಶುಕ್ರಗ್ರಹದಲ್ಲಿ ಬದುಕಲು ಸಾಧ್ಯವಾದರೆ, ಭವಿಷ್ಯದಲ್ಲಿ ದೊಡ್ಡ ಜಾದೂ ನಡೆದುಹೋಗಲಿದೆ.

  ISRO ಮುಂದಿನ ಮಹತ್ವದ ಯೋಜನೆಗೆ ವಿಶ್ವ ಸಂಸ್ಥೆಯ ಬೆಂಬಲ | Oneindia Kannada
  ಜೀವಿಗಳು ಇದ್ದು ನಾಶವಾಗಿ ಹೋದವಾ..?

  ಜೀವಿಗಳು ಇದ್ದು ನಾಶವಾಗಿ ಹೋದವಾ..?

  ಶುಕ್ರನಲ್ಲಿ ಜೀವಿಗಳು ಬದುಕಿದ್ದರೆ ಯಾವ ಆಧಾರದಲ್ಲಿ ಅಸ್ತಿತ್ವದಲ್ಲಿದ್ದಿರಬಹುದು ಎಂಬ ಪ್ರಶ್ನೆ ಸಂಶೋಧಕರನ್ನು ಕಾಡುತ್ತಿದೆ. ಈ ಮಧ್ಯೆ ಶುಕ್ರನ ಮೇಲ್ಮೈನಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ ಎಂದು ಬಹುತೇಕರು ಈಗಲೂ ಪ್ರತಿಪಾದಿಸುತ್ತಿದ್ದಾರೆ. ಆದರೆ, ಲಕ್ಷಾಂತರ ವರ್ಷಗಳ ಹಿಂದೆ ಶುಕ್ರ ಗ್ರಹದಲ್ಲಿಯೂ ಜೀವ ಜಗತ್ತು ಇದ್ದಿರಬಹುದು. ಆದರೆ ‘ಗ್ರೀನ್ ಹೌಸ್ ಎಫೆಕ್ಟ್' ಅಥವಾ ಹಸಿರುಮನೆ ಅನಿಲಗಳ ಪರಿಣಾಮದಿಂದಾಗಿ ಶುಕ್ರ ಗ್ರಹದಲ್ಲಿದ್ದ ಜೀವಜಗತ್ತು ನಾಶವಾಗಿರಬಹುದು ಎಂಬ ಪ್ರತಿಪಾದನೆ ಕೂಡ ವಿಜ್ಞಾನಿಗಳದ್ದಾಗಿದೆ. ಇದಕ್ಕೆಲ್ಲಾ ಉತ್ತರ ಸಿಗಲು ಶುಕ್ರ ಗ್ರಹದ ಮೇಲೆ ಮತ್ತಷ್ಟು ಅಧ್ಯಯನಗಳು ನಡೆಯಬೇಕಿದೆ.

  English summary
  National Academy of Sciences said they found tectonic movement on planet Venus.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X