ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಸ್.ಎಲ್.ಭೈರಪ್ಪ ಅಂತವರ ಕೆಟ್ಟ ಮಾನಸಿಕ ಸಂತತಿಗೆ ನನ್ನ ಧಿಕ್ಕಾರವಿದೆ'

By ಡಾ.ಹೆಚ್.ಸಿ.ಮಹದೇವಪ್ಪ
|
Google Oneindia Kannada News

ಹಳೆಯ ಪುಸ್ತಕದಲ್ಲಿ "ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ" ಎಂಬ ಸಾಲು ಇದೆ. ಆದರೆ ಹೊಸ ಪುಸ್ತಕದಲ್ಲಿ ಈ ಸಾಲನ್ನೇ ಕಿತ್ತುಹಾಕಲಾಗಿದ್ದು ಸಂವಿಧಾನ ರಚನೆಯಲ್ಲಿ ಯಾವ ಶ್ರಮವೂ ಇಲ್ಲದ ಸದಸ್ಯರೊಬ್ಬರನ್ನು ಅವರೇ ಸಂವಿಧಾನ ರಚಿಸಿದರು ಎನ್ನುವ ಭಾವನೆ ಬರುವಂತೆ ಪರಿಚಯಿಸಲಾಗಿದೆ.

ಭಾರತಕ್ಕೆ ಸಂವಿಧಾನ ಬರೆದುಕೊಟ್ಟಿದ್ದು ಅಂಬೇಡ್ಕರ್ ಮಾತ್ರವೇ ಎಂದು ಕರಡು ಸಮಿತಿಯ ಎಲ್ಲಾ ಸದಸ್ಯರೂ ಹೇಳಿದ್ದಾರೆ. ಹೀಗಿರುವಾಗ ಬಾಬಾ ಸಾಹೇಬರ ಕುರಿತು ಗೊತ್ತಿದ್ದ ತಪ್ಪು ಮಾಹಿತಿ ನೀಡುವ ತಿರುಚಿದ ಪಠ್ಯವನ್ನು ಮಕ್ಕಳೇಕೆ ಓದಬೇಕು?

ಶಾಲಾ ಪಠ್ಯ ಪುಸ್ತಕ ವಿವಾದ; ಡಾ. ಎಸ್. ಎಲ್. ಭೈರಪ್ಪ ಪ್ರತಿಕ್ರಿಯೆಶಾಲಾ ಪಠ್ಯ ಪುಸ್ತಕ ವಿವಾದ; ಡಾ. ಎಸ್. ಎಲ್. ಭೈರಪ್ಪ ಪ್ರತಿಕ್ರಿಯೆ

ಇನ್ನು ಬಹು ಮುಖ್ಯವಾಗಿ ನಮ್ಮ ನಡುವಿನ ಸಾಹಿತಿ ಎನಿಸಿಕೊಂಡ ಎಸ್.ಎಲ್.ಭೈರಪ್ಪನವರು ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು ಎಂದು ಆಗ್ರಹಿಸಿದ್ದು, ಇಂದಿರಾ ಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು ಎಂದು ಹೇಳಿದ್ದಾರೆ.

New School Text Book, Senior Congress Leader H C Mahadevappa Criticized S L Bhyrappa

ಆದರೆ ಬಾಬಾ ಸಾಹೇಬರ ವಿಷಯದಲ್ಲಿ ಮತ್ತು ಇನ್ನಿತರ ಸಂಗತಿಗಳ ಸಂದರ್ಭದೊಳಗೆ ವಾಸ್ತವ ಸಂಗತಿಗಳನ್ನು ಮರೆಮಾಚುವ ಸ್ಪಷ್ಟವಾದ ಸಂಗತಿಗಳು ಕಾಣಿಸುತ್ತಿದ್ದರೂ ಆ ಬಗ್ಗೆ ಮಾತನಾಡದೇ ಭೈರಪ್ಪನವರು ಜಾಣ ಮೌನ ವಹಿಸಿರುವುದು ಅವರ ಮಾನಸಿಕತೆ ಹಾಗೂ ಜಾತಿಗ್ರಸ್ಥ ಮನಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಭೈರಪ್ಪನವರೇ, ಇಂದಿರಾ ಗಾಂಧಿ ಕಾಲದಲ್ಲಿ ಬುದ್ದಿವಂತರು ಹಾಗೂ ಮಹಾನ್ ವಿದ್ವಾಂಸರಿದ್ದರು. ಅವರಿಗೆ ನೀವು ಆ ಕಾಲಕ್ಕೆ ಹೊಂದುತ್ತಿದ್ದ ಅಜ್ಞಾನಿ ಚಕ್ರತೀರ್ಥ ಎಂಬ ಸಂಗತಿಯು ತಿಳಿದಿದ್ದರಿಂದಲೇ ನಿಮ್ಮನ್ನು ಅವರು ಹೊರಗಿಟ್ಟಿದ್ದಾರೆ. ನನ್ನ ಪ್ರಕಾರ ನಿಮ್ಮಂತಹ ಜಾತಿವಾದಿ ಪೂರ್ವಾಗ್ರಹ ಪೀಡಿತರನ್ನು ಅವರು ಹೊರಗಿಟ್ಟಿದ್ದೇ ಸರಿಯಾದ ನಡೆ ಎಂಬುದು ನನ್ನ ಅಭಿಪ್ರಾಯ.

New School Text Book, Senior Congress Leader H C Mahadevappa Criticized S L Bhyrappa

ಓರ್ವ ಬರಹಗಾರ ತನ್ನ ಬರಹ ಸಾಮರ್ಥ್ಯವನ್ನು ಮತ್ತು ಆಲೋಚನಾ ಶಕ್ತಿಯನ್ನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಬಳಸಿದರೆ ಆತ ಸಮಾಜದ್ರೋಹಿ ಆಗಿರುತ್ತಾನೆ. ಕಣ್ಣೆದುರಿಗೇ ಹತ್ತಾರು ಪಠ್ಯದ ಅಪದ್ಧಗಳು ಇದ್ದಾಗ ಅದನ್ನು ಸರಿಪಡಿಸದೇ ಜ್ಞಾನ ಭ್ರಷ್ಟತೆಯನ್ನು ಎಸಗುತ್ತಿರುವ ಭೈರಪ್ಪನವರು ಹಿಂದೆ ಹೇಳಿದಂತೆಯೇ ಓರ್ವ ಸಾಮಾಜಿಕ ವಂಚಕ.

ಜ್ಞಾನ ಮತ್ತು ಸಂಸ್ಕಾರಕ್ಕೆ ಯಾವುದೇ ಜಾತಿಯಿಲ್ಲ, ಉತ್ತಮ ಸಂಸ್ಕಾರ & ಜ್ಞಾನ ಉಳ್ಳವನು ತಮ್ಮ ಜಾತಿಗೆ ಸೇರಬಲ್ಲ ಎಂಬ ಮಾತು ರೂಢಿಯಲ್ಲಿದ್ದರೂ ಜಾತಿ ಆಧಾರಿತವಾಗಿ ಬರಹಗಾರರ ಬರಹಗಳನ್ನು ಬಳಸಿಕೊಂಡು ಪಠ್ಯವನ್ನು ರಚಿಸಿರುವುದು ಇವರ ಮಾನಸಿಕ ಅಧ:ಪತನಕ್ಕೆ ಸಾಕ್ಷಿಯಾಗಿದೆ.

ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಎಸ್.ಎಲ್. ಭೈರಪ್ಪಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಎಸ್.ಎಲ್. ಭೈರಪ್ಪ

ಶಿಕ್ಷಣ, ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಮನರಂಜನೆ ಕ್ಷೇತ್ರವನ್ನು ಭ್ರಷ್ಟಗೊಳಿಸಿ ಎಲ್ಲದರಲ್ಲೂ ವೈದಿಕಶಾಹಿಯ ದುರ್ಬುದ್ಧಿಯನ್ನು ತುರುಕಿ ಸಮಾಜವನ್ನು ಮೌಢ್ಯ ಮತ್ತು ಅಜ್ಞಾನ ಹಾಗೂ ಅಸಮಾನತೆಯ ಕಡೆಗೆ ಕೊಂಡೊಯ್ಯಲು ಹೊರಟಿರುವ ಭೈರಪ್ಪ ಅಂತವರ ಕೆಟ್ಟ ಮಾನಸಿಕ ಸಂತತಿಗೆ ನನ್ನ ಧಿಕ್ಕಾರವಿದೆ!

English summary
New School Text Book, Senior Congress Leader H C Mahadevappa Criticized S L Bhyrappa. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X