• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏ.1 ರಿಂದ ಕ್ರಿಪ್ಟೋಕರೆನ್ಸಿ ಜಾಹೀರಾತುಗಳಿಗೆ ಹೊಸ ನಿಯಮ: ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಫೆಬ್ರವರಿ 23: ಕ್ರಿಪ್ಟೋಕರೆನ್ಸಿ ಜಾಹೀರಾತುಗಳು ತಪ್ಪುದಾರಿಗೆಳೆಯುತ್ತಿವೆ ಎಂದು ಸರಕಾರದ ಈಗಾಗಲೇ ಕಳವಳ ವ್ಯಕ್ತಪಡಿಸಿದೆ. ಈ ನಡುವ ಎಜಾಹೀರಾತುದಾರರು ಈಗ "ಹೆಚ್ಚು ಅಪಾಯಕಾರಿ" ಮತ್ತು ಅನಿಯಂತ್ರಿತ ಕ್ರಿಪ್ಟೋಕರೆನ್ಸಿಗಳನ್ನು ಪ್ರಚಾರ ಮಾಡುವಾಗ ಹಕ್ಕು ನಿರಾಕರಣೆ (disclaimer) ಅನ್ನು ಹಾಕಬೇಕಾಗಿದೆ ಎಂದು ಉದ್ಯಮದ ಸ್ವಯಂ ನಿಯಂತ್ರಣ ಸಂಸ್ಥೆ ಬುಧವಾರ ತಿಳಿಸಿದೆ.

ಡಿಜಿಟಲ್ ಕರೆನ್ಸಿಯ ಕ್ರಿಪ್ಟೋಕರೆನ್ಸಿ ಮತ್ತು ನಿಯಂತ್ರಣ ಮಸೂದೆಯು ಇನ್ನೂ ಜಾರಿಗೆ ಬಂದಿಲ್ಲ. ಆದರೆ ಇದರ ಮೇಲೆ ಸರ್ಕಾರ ನಿಯಂತ್ರಣವನ್ನು ಸಾಧಿಸುತ್ತಿದೆ. ಡಿಜಿಟಲ್ ಸ್ವತ್ತುಗಳ ವಹಿವಾಟಿನಿಂದ ಬರುವ ಲಾಭಕ್ಕೆ ಶೇಕಡಾ 30 ತೆರಿಗೆ ವಿಧಿಸಲಾಗುವುದು ಎಂದು ಈಗಾಗಲೇ ಬಜೆಟ್‌ ಮಂಡನೆ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಈಗ ಸರ್ಕಾರವು ಕ್ರಿಪ್ಟೋಕರೆನ್ಸಿ ಜಾಹೀರಾತುಗಳ ಮೇಲೆ ನಿಯಂತ್ರಣ ಮಾಡಲು ಮುಂದಾಗಿದೆ. ಕ್ರಿಪ್ಟೋಕರೆನ್ಸಿ ಜಾಹೀರಾತುಗಳು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧ?, ನಿರ್ಮಲಾ ಸೀತಾರಾಮನ್ ಹೇಳುವುದು ಹೀಗೆ ಭಾರತದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧ?, ನಿರ್ಮಲಾ ಸೀತಾರಾಮನ್ ಹೇಳುವುದು ಹೀಗೆ

ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ಈ ಬಗ್ಗೆ ಪ್ರತಿಕ್ರಿಯೆ ನೀಡಿ, "ಸಾಮಾನ್ಯವಾಗಿ ಕ್ರಿಪ್ಟೋ ಅಥವಾ ಟೋಕನ್‌ಗಳು (ಎನ್‌ಎಫ್‌ಟಿ) ಎಂದು ಕರೆಯಲ್ಪಡುವ ಎಲ್ಲಾ ವರ್ಚುವಲ್ ಡಿಜಿಟಲ್ ಸ್ವತ್ತುಗಳು (VDA ಗಳು), ಹಕ್ಕು ನಿರಾಕರಣೆಯನ್ನು "ಪ್ರಮುಖ ಮತ್ತು ತಪ್ಪಿಸಿಕೊಳ್ಳಲಾಗದ" ರೀತಿಯಲ್ಲಿ ನೀಡಬೇಕಾಗಿದೆ," ಎಂದು ತಿಳಿಸಿದೆ.

ಉದ್ಯಮದ ಮಧ್ಯಸ್ಥಗಾರರು, ಸರ್ಕಾರ ಮತ್ತು ಹಣಕಾಸು ನಿಯಂತ್ರಕರೊಂದಿಗೆ ಸಮಾಲೋಚನೆಯ ನಂತರ ಮಾಡಿದ ಪ್ರಕಟಣೆಯ ಮಾರ್ಗಸೂಚಿಗಳು ಇದಾಗಿದೆ. ಅಂತಹ ಆಸ್ತಿಗಳ ಬಗ್ಗೆ ಸರ್ಕಾರವು ಇನ್ನೂ ಕಾನೂನನ್ನು ಹೊರತಂದಿಲ್ಲ. ಇನ್ನೂ, ಅಂತಹ ವಹಿವಾಟುಗಳಿಂದ ಮಾಡಿದ ಲಾಭದ ಮೇಲೆ ತೆರಿಗೆಯನ್ನು ಪ್ರಸ್ತಾಪಿಸಿದೆ. ಕ್ರಿಪ್ಟೋ ಹೂಡಿಕೆದಾರರು ಉದ್ಯಮವನ್ನು ಕಾನೂನುಬದ್ಧಗೊಳಿಸುವ ಕ್ರಮವಾಗಿ ಸ್ವಾಗತಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಟ್‌ಕಾಯಿನ್ ಆಸೆ ತೋರಿಸಿ 13.7 ಲಕ್ಷ ರೂ. ವಂಚನೆ ಬೆಂಗಳೂರಿನಲ್ಲಿ ಬಿಟ್‌ಕಾಯಿನ್ ಆಸೆ ತೋರಿಸಿ 13.7 ಲಕ್ಷ ರೂ. ವಂಚನೆ

ಕ್ರಿಪ್ಟೋ ನಿಷೇಧದ ಬಗ್ಗೆ ಆರ್‌ಬಿಐ ದೃಢ ನಿಲುವು

ಇದಕ್ಕೆ ವ್ಯತಿರಿಕ್ತವಾಗಿ, ಆರ್‌ಬಿಐ ಅಂತಹ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧಕ್ಕೆ ಕರೆ ನೀಡುವುದರಲ್ಲಿ ದೃಢವಾಗಿದೆ. ಹಣಕಾಸಿನ ಸ್ಥಿರತೆ ಮತ್ತು ವಿನಿಮಯ ನಿರ್ವಹಣೆಯ ಸವಾಲಿನ ಬೆದರಿಕೆಯನ್ನು ಆರ್‌ಬಿಐ ಒತ್ತಿ ಹೇಳಿದೆ. "ವರ್ಚುವಲ್ ಡಿಜಿಟಲ್ ಸ್ವತ್ತುಗಳು ಮತ್ತು ಸೇವೆಗಳ ಜಾಹೀರಾತಿಗೆ ನಿರ್ದಿಷ್ಟ ಮಾರ್ಗದರ್ಶನದ ಅಗತ್ಯವಿದೆ. ಇದು ಹೊಸ ಮತ್ತು ಇನ್ನೂ ಉದಯೋನ್ಮುಖ ಹೂಡಿಕೆಯ ಮಾರ್ಗವಾಗಿದೆ ಎಂದು ಪರಿಗಣಿಸುತ್ತದೆ. ಆದ್ದರಿಂದ, ಗ್ರಾಹಕರಿಗೆ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಮತ್ತು ಎಚ್ಚರಿಕೆಯಿಂದ ಮುಂದುವರಿಯಲು ಅವರಿಗೆ ಹೇಳುವ ಅವಶ್ಯಕತೆಯಿದೆ," ಎಂದು ಎಎಸ್‌ಸಿಐ ಅಧ್ಯಕ್ಷ ಸುಭಾಷ್ ಕಾಮತ್ ಹೇಳಿದ್ದಾರೆ. ಬೇರೆ ಏನೇನಿದೆ ನಿರ್ಬಂಧ?

ಹಕ್ಕು ನಿರಾಕರಣೆ ಅಥವಾ disclaimer ವೀಡಿಯೊ ಜಾಹೀರಾತುಗಳಲ್ಲಿ ಕನಿಷ್ಠ 5 ಸೆಕೆಂಡುಗಳ ಕಾಲ ಪರದೆಯ ಮೇಲೆ ಇರಬೇಕು. ಆದರೆ ಎರಡು ನಿಮಿಷಗಳ ದೀರ್ಘವಾದ ಜಾಹೀರಾತುಗಳಿಗಾಗಿ, ಅದನ್ನು ಜಾಹೀರಾತಿನ ಪ್ರಾರಂಭ ಮತ್ತು ಅಂತ್ಯದಲ್ಲಿ ಹಾಕಬೇಕಾಗಿದೆ. ಅಕ್ಷರಗಳ ಮೇಲೆ ಮಿತಿ ಇದ್ದರೆ "ಕ್ರಿಪ್ಟೋ ಉತ್ಪನ್ನಗಳು ಮತ್ತು ಎನ್‌ಎಫ್‌ಟಿಗಳು ಅನಿಯಂತ್ರಿತ ಮತ್ತು ಅಪಾಯಕಾರಿ" ಎಂದು ಹಾಕಬೇಕಾಗಿದೆ. ವಿಡಿಎ ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತುಗಳಲ್ಲಿ "ಕರೆನ್ಸಿ", "ಸೆಕ್ಯುರಿಟೀಸ್", "ಕಸ್ಟೋಡಿಯನ್" ಮತ್ತು "ಡಿಪಾಸಿಟರಿಗಳು" ಪದಗಳನ್ನು ಬಳಸುವುದರಿಂದ ಜಾಹೀರಾತುದಾರರನ್ನು ನಿರ್ಬಂಧಿಸಲಾಗಿದೆ.

12 ತಿಂಗಳಿಗಿಂತ ಕಡಿಮೆ ಅವಧಿಯ ರಿಟರ್ನ್‌ಗಳನ್ನು ಸೇರಿಸಬಾರದು ಎಂದು ಮಾರ್ಗಸೂಚಿಗಳು ಹೇಳಿದ್ದು, ಅಪ್ರಾಪ್ತ ವಯಸ್ಕರನ್ನು ಜಾಹೀರಾತುಗಳಲ್ಲಿ ತೋರಿಸಬಾರದು ಎಂದು ಹೇಳಿದೆ. ಭವಿಷ್ಯದಲ್ಲಿ ಲಾಭದ ಹೆಚ್ಚಳವನ್ನು ಭರವಸೆ ನೀಡುವ ಅಥವಾ ಖಾತರಿಪಡಿಸುವ ಹೇಳಿಕೆಗಳನ್ನು ಯಾವುದೇ ಜಾಹೀರಾತು ಹೊಂದಿರಬಾರದು ಎಂದು ಕೂಡಾ ಎಎಸ್‌ಸಿಐ ಹೇಳಿದೆ. ಜಾಹೀರಾತಿನಲ್ಲಿ ಯಾವುದೂ ವರ್ಗಕ್ಕೆ ಸಂಬಂಧಿಸಿದ ಅಪಾಯಗಳನ್ನು ಇಲ್ಲ ಎಂಬಂತೆ ಬಿಂಬಿಸಬಾರದು. ವಿಡಿಎ ಉತ್ಪನ್ನಗಳನ್ನು ಯಾವುದೇ ಇತರ ನಿಯಂತ್ರಿತ ಆಸ್ತಿ ವರ್ಗಕ್ಕೆ ಹೋಲಿಸಬಾರದು ಕೂಡಾ ತಿಳಿಸಲಾಗಿದೆ. (ಒನ್‌ಇಂಡಿಯಾ ಸುದ್ದಿ)

English summary
New rules for Cryptocurrency ads from April 1, Here's Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X