• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಪಲ್‌ ಚಿಪ್: ಪೆಟ್ರೋಲ್ ಬಂಕ್‌ ವಂಚನೆಯ ಹೈಟೆಕ್‌ ಮಾದರಿ ಬಯಲಿಗೆ

|

ಬೆಂಗಳೂರು, ನ.16: ರಾಜ್ಯದ ಪೆಟ್ರೋಲ್‌ ಬಂಕ್‌ಗಳಲ್ಲಿ ಹೊಸ ಮಾದರಿಯ ತಂತ್ರಜ್ಞಾನ ಆಧಾರಿತ ವಂಚನೆ ಜೋರಾಗಿ ನಡೆಯುತ್ತಿರುವ ಅನುಮಾನಕ್ಕೆ ಇತ್ತೀಚಿನ ಘಟನೆಗಳು ಕಾರಣವಾಗಿವೆ. ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ಮೊದಲು ಒತ್ತುವ ಕೀಬೋರ್ಡ್‌ಗೆ ಚಿಪ್‌ ಅಳವಡಿಸುವ ಮೂಲಕ ಗೊತ್ತೇ ಆಗದಂತೆ ಇಂಧನ ಎಗುರಿಸುವ ಹೈಟೆಕ್‌ ವಂಚನೆಯ ವಿವರಗಳು ಅಚ್ಚರಿ ಮೂಡಿಸುವಂತಿವೆ.

ಇಂತಹದೊಂದು ದಂಧೆ ಜೀವಂತವಾಗಿದೆ ಎಂಬ ಅನುಮಾನಕ್ಕೆ ಕಾರಣವಾಗಿರುವುದು ಬೆಂಗಳೂರಿನ ಕೋಲ್ಸ್‌ ಪಾರ್ಕ್‌ ಬಳಿಯ ಪೆಟ್ರೋಲ್‌ ಬಂಕ್‌ ಒಂದರ ಮೇಲೆ ಅಳತೆ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಸಿಕ್ಕ ಮಾಹಿತಿ. ಈ ಬಂಕ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಶಿಷ್ಟಾಚಾರದಂತೆ ಐದು ಲೀಟರ್ ಪೆಟ್ರೋಲ್ ಪರಿಶೀಲಿಸಿದ್ದರು. ಸುಮಾರು 30 ಎಂ.ಎಲ್ ಪೆಟ್ರೋಲ್ ಕಡಿಮೆ ಬಂದಿತ್ತು. ತಕ್ಷಣ ಕವರ್‌ ಅಪ್ ಮಾಡಲು ಬಂದ ಬಂಕ್ ಸಿಬ್ಬಂದಿಗಳು ಮತ್ತೊಂದು ಮಾದರಿಯನ್ನು ಅಧಿಕಾರಿಗಳ ಮುಂದಿಟ್ಟಿದ್ದರು.

ಪ್ರತಿ ಲೀಟರ್ ಮೇಲೆ 30ml ಕನ್ನ, ಐನಾತಿ 33 ಪೆಟ್ರೋಲ್ ಬಂಕ್ ಬಂದ್!

ಈ ಸಮಯದಲ್ಲಿ 150 ಮಿ.ಲೀಟರ್ ಪೆಟ್ರೋಲ್‌ ಜಾಸ್ತಿ ಬಿದ್ದಿತ್ತು. ಪ್ರಕರಣವನ್ನು ದಾಖಲಿಸಿದ ಇಲಾಖೆಯ ಜಾಗೃತ ದಳದ ಅಧಿಕಾರಿಗಳು ವಂಚನೆಯ ರೀತಿಯ ಬಗ್ಗೆ ವಿಸ್ತೃತ ತನಿಖೆಯ ಅಗತ್ಯವಿದೆ ಎಂದು ವರದಿ ಸಲ್ಲಿಸಿದ್ದರು. ಪ್ರಭಾವಿಗಳ ಕೈವಾಡದ ಹಿನ್ನೆಲೆಯಲ್ಲಿ ಪ್ರಕರಣ ಅಷ್ಟಕ್ಕೆ ಮರೆಸಲಾಗಿದೆ. "ಸದರಿ ಪ್ರಕರಣದಲ್ಲಿ ಬಂಕ್‌ ಮಾಲೀಕರು ಹೊಸ ಮಾದರಿಯ ವಂಚನೆ ಮಾರ್ಗ ಕಂಡುಕೊಂಡಿದ್ದಾರೆ ಎಂಬುದು ನಮಗೆ ಬಂದ ಅನುಮಾನ, ಹೆಚ್ಚಿನ ವಿಚಾರಣೆ ಸಾಧ್ಯವಾಗಲಿಲ್ಲ,'' ಎನ್ನುತ್ತಾರೆ ದಾಳಿಯ ತಂಡದಲ್ಲಿದ್ದ ಓರ್ವ ಅಧಿಕಾರಿ.

ಒಂದು ಕಡೆ ರಾಜ್ಯದ ಬಂಕ್‌ಗಳಲ್ಲಿ ಹೀಗೆ ಅಳತೆ ವ್ಯತ್ಯಾಸಗಳು ಕಂಡುಬರುತ್ತಿರುವಾಗಲೇ ಪಕ್ಕದ ತೆಲಂಗಾಣದಲ್ಲಿ ಪೆಟ್ರೋಲ್ ವಂಚನೆಯ ತಂಡವೊಂದನ್ನು ಬಂಧಿಸಲಾಯಿತು. ಇದು ಇವತ್ತಿಗೆ ಕರ್ನಾಟಕಕ್ಕೂ ಕಾಲಿಟ್ಟಿರುವ ಪೆಟ್ರೋಲ್‌ ಬಂಕ್‌ಗಳ ವಂಚನೆಯ ಹೊಸ ಮುಖವನ್ನು ತೆರೆದಿಡಲು ಕಾರಣವಾಗಿದೆ.

70 ಸಾವಿರಕ್ಕೆ ಒಂದು ಚಿಪ್‌

70 ಸಾವಿರಕ್ಕೆ ಒಂದು ಚಿಪ್‌

ತೆಲಂಗಾಣ ಪೊಲೀಸರಿಗೆ ಮೊದಲು ಲಭ್ಯವಾಗಿರುವ ಮಾಹಿತಿ, 70 ಸಾವಿರದಿಂದ 1 ಲಕ್ಷದವರೆಗೆ ಚಿಪ್‌ ಒಂದು ಮಾರಾಟವಾಗುತ್ತಿದೆ ಮತ್ತು ಪೆಟ್ರೋಲ್‌ ಬಂಕ್‌ ಮಾಲೀಕರು ಅದರ ಗ್ರಾಹಕರಾಗಿದ್ದಾರೆ. ಹಾಗಂತ ಈ ವ್ಯಾಪಾರ ಕದ್ದುಮುಚ್ಚಿ ನಡೆಯುತ್ತಿದೆ ಎಂಬದು. ಇದನ್ನು ಬೆನ್ನತ್ತಿದವರಿಗೆ ಪಕ್ಕದ ಆಂಧ್ರ ಪ್ರದೇಶರ ಅಗತ್ಯವೂ ಬಿತ್ತು. ಕೊನೆಗೆ ಜಂಟಿ ತಂಡವೊಂದನ್ನು ಪ್ರಕರಣದ ಇಳಿಸಿಲಾಯಿತು. ಹದಿನಾರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ವೇಳೆ ಮುಂಬೈ ಮೂಲದ ಶಿಬು ಥಾಮಸ್ ಮತ್ತು ಜಿಯೋ ಜೋಸೆಫ್ ಎಂಬಿಬ್ಬರುಈ ಚಿಪ್ ಗಳನ್ನು ಅಭಿವೃದ್ಧಿ ಪಡಿಸಿ ನೆರೆ ರಾಜ್ಯಗಳಿಗೆ ಮಾರಾಟ ಮಾಡಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಚಿಪ್‌ ತಯಾರಿಕೆ ಹಾಗೂ ಅಳವಡಿಕೆಯ ಮಾಹಿತಿಯನ್ನು ಪೊಲೀಸರು ಪಡೆದುಕೊಂಡರು. ಈವರೆಗೂ ಎಲ್ಲಿಯೂ ಬೆಳಕಿಗೆ ಬಾರದ ಇಂತಹದೊಂದು ವಂಚನೆ ಹೀಗೆ ನಡೆಯುತ್ತಿತ್ತು ಎಂಬುದು ಹಲವರಿಗೆ ಹೊಸ ವಿಚಾರವಾಗಿತ್ತು.

ಚಿಪ್‌ ಅಳವಡಿಕೆ ಹೇಗೆ?

ಚಿಪ್‌ ಅಳವಡಿಕೆ ಹೇಗೆ?

ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಹಾಕುವ ನಾಝಲ್‌ ಹೊಂದಿರುವ ಯಂತ್ರಗಳಿರುತ್ತವೆ. ಅವುಗಳ ಮೇಲೆ ಇರುವ ಡಿಸ್ಪ್ಲೇ ಬೋರ್ಡ್‌ನಲ್ಲಿ ಎಷ್ಟು ಲೀಟರ್ ಪೆಟ್ರೋಲ್ ಅಥವಾ ಎಷ್ಟು ಹಣಕ್ಕೆ ಎಂದು ನಮೋದಿಸಲು ಒಂದು ಕೀ ಪ್ಯಾಡ್‌ ಇರುತ್ತದೆ. ಅದರ ಒಂದು ಬಟನ್‌ ಅಡಿಯಲ್ಲಿ ಚಿಪ್‌ನ್ನು ಅಳವಡಿಸಲಾಗುತ್ತದೆ. ಇದನ್ನು ಒತ್ತಿದರೆ ಒಂದು ಲೀಟರ್‌ಗೆ ಕನಿಷ್ಟ 30 ಎಂಎಲ್‌ ಕಡಿಮೆ ಇಂಧನ ಬೀಳುತ್ತದೆ. ಒಬ್ಬ ಗ್ರಾಹಕನ ದೃಷ್ಟಿಯಿಂದ ನೋಡಿದರೆ ಇದು ಅತ್ಯಂತ ಅಲ್ಪ ಪ್ರಮಾಣ. ಆದರೆ ದಿನ ಕೊನೆಯಲ್ಲಿ ಹೀಗೆ ಕದ್ದ ನೂರಾರು ಲೀಟರ್‌ ಇಂಧನ ಬಂಕ್‌ಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಇದು ಕಳ್ಳಹಾದಿಯಲ್ಲಿ ಯಾವ ಲೆಕ್ಕ ಪತ್ರವೂ ಇಲ್ಲದೆ ಮಾರಾಟವಾಗುತ್ತದೆ. ಇದು ತೆಲಂಗಾಣ ಪೊಲೀಸರು ಜಾಲವನ್ನು ಭೇದಿಸುವವರೆಗೆ ಆಯಿಲ್ ಕಾರ್ಪೋರೇಷನ್ ಅಧಿಕಾರಿಗಳಿಗಾಗಲೀ, ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆಯ ಜಾಗೃತ ದಳದ ಗಮನಕ್ಕೂ ಬಂದಿರಲಿಲ್ಲ. ಒಂದು ಅಂದಾಜಿನ ಪ್ರಕಾರ ಬಂಕ್ ವೊಂದರಲ್ಲಿ ದಿನಕ್ಕೆ 20 ಸಾವಿರ ಲೀಟರ್ ಇಂಧನ ಮಾರಾಟವಾದರೆ, 600 ಲೀಟರ್ ಇಂಧನ ಕದಿಯಲಾಗಿರುತ್ತದೆ.

ಪೆಟ್ರೋಲ್ ಬಂಕ್ ಅಳತೆ ಮೋಸದ ಹಿಂದಿನ ಹುಬ್ಬಳ್ಳಿ ಪ್ರಶಾಂತ ಎಂಥ ಕಿಲಾಡಿ

ಕರ್ನಾಟಕ ಲಿಂಕ್

ಕರ್ನಾಟಕ ಲಿಂಕ್

ಪ್ರಕರಣದಲ್ಲಿ ಬಂಧಿತರು ನೀಡಿರುವ ಮಾಹಿತಿ ಪ್ರಕಾರ, ತೆಲಂಗಾಣ, ಆಂಧ್ರ ಮಾತ್ರ ಅಲ್ಲ ಕರ್ನಾಟಕ ತಮಿಳುನಾಡು ರಾಜ್ಯಗಳಿಗೆ ಚಿಪ್‌ಗಳನ್ನು ನೀಡಲಾಗಿದೆ. ಈ ಮಾಹಿತಿ ಪಡೆದುಕೊಂಡ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದರು. ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಗಳನ್ನು ತಪಾಸಣೆಗೆ ಒಳಪಡಿಸಬೇಕಿತ್ತು. ಕೆಳ ಹಂತದ ಅಧಿಕಾರಿಗಳು ಸಂಶಯಾಸ್ಪದ ಪೆಟ್ರೋಲ್ ಬಂಕ್ ಗಳ ಪಟ್ಟಿಯನ್ನು ತರಿಸಿ ಹಿರಿಯ ಅಧಿಕಾರಿಗಳಿಗೆ ನೀಡಿದ್ದರು. ಆದರೆ, "ಪೆಟ್ರೋಲ್ ಬಂಕ್ ಮಾಲೀಕರ ಮುಲಾಜಿನಲ್ಲಿರುವ ಕೆಲವು ಅಧಿಕಾರಿಗಳು ಸಾಮೂಹಿಕ ತಪಾಸಣೆ ಕಾರ್ಯಕ್ಕೆ ಅಡ್ಡಗಾಲು ಹಾಕಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಹಾಕುವ ಸತ್ಯಾಸತ್ಯತೆ ಪರಿಶೀಲನೆಯೇ ನಡೆದಿಲ್ಲ,'' ಎಂದು ಹೆಸರು ಹೇಳಲು ಇಚ್ಛಿಸದ ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ 'ಒನ್ ಇಂಡಿಯಾ ಕನ್ನಡ' ಗೆ ತಿಳಿಸಿದ್ದಾರೆ.

ಪೆಟ್ರೋಲ್ ಬಂಕಲ್ಲಿ ಗ್ರಾಹಕರ ಜೇಬಿಗೆ ಕತ್ತರಿ, ವಂಚನೆಗೆ ನಾನಾ ದಾರಿ

  ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada
  ಮುಂದಿರುವ ದಾರಿ ಏನು?

  ಮುಂದಿರುವ ದಾರಿ ಏನು?

  ಕರ್ನಾಟಕ ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಿ, ವಂಚನೆಗೆ ಇಳಿದ ಬಂಕ್‌ಗಳನ್ನು ಹುಡುಕಬೇಕಿದೆ. ಅದಕ್ಕಿಂತ ಹೆಚ್ಚಾಗಿ ಯಾವುದೇ ಬಂಕ್‌ನಲ್ಲಿ ಇಂಧನ ಖರೀದಿಸುವ ಗ್ರಾಹಕರಿಗೆ ಅನುಮಾನ ಬಂದರೆ ಸ್ಥಳದಲ್ಲಿಯೇ ಪರಿಶೀಲನೆ ನಡೆಸುವ ಹಕ್ಕು ಇದೆ. ಜತೆಗೆ ಕಲಬೆರೆಕೆಯಂತಹ ವಿಚಾರಗಳು ಬಂದಾಗ ಫಿಲ್ಟರ್ ಪೇಪರ್ ಟೆಸ್ಟ್ ಕೂಡ ಮಾಡಬಹುದು. ಬಂಕ್‌ನವರಿಂದಲೇ ಫಿಲ್ಟರ್ ಪೇಪರ್ ಪಡೆದು, ಅದರ ಮೇಲೆ ಒಂದು ಹನಿ ಪೆಟ್ರೋಲ್ ಸುರಿಯಬಹುದು. ಅದು ಬಣ್ಣ ಬದಲಿಸಿದರೆ ಕಲಬೆರಿಕೆ ಅಂತ ಅರ್ಥ. ಅಲ್ಲಿಯೇ ರಿಜಿಸ್ಟರ್‌ನಲ್ಲಿ ದೂರು ದಾಖಲಿಸಬಹುದು. ಅಳತೆ ಮತ್ತು ಮಾಪನ ಇಲಾಖೆ ಅಧಿಕಾರಿಗಳಿಗೆ ಮತ್ತು ಆಯಿಲ್ ಕಾರ್ಪೋರೇಷನ್ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ವಿಶೇಷ ಅಂದರೆ, ಗ್ರಾಹಕ ಕೇಳಿದಾಗ ಪೆಟ್ರೋಲ್ ಬಂಕ್ ಮಾಲೀಕರು ಯಾವುದೇ ಸಬೂಬು ನೀಡದೇ ಪೆಟ್ರೋಲ್ ಅಳತೆ ತಪಾಸಣೆ ಮಾಡಬೇಕು. ಐದು ಲೀಟರ್ ಪೆಟ್ರೋಲ್ ಅಥವಾ ಡೀಸಲ್ ತುಂಬಿಸಿದಾಗ 25 ಎಂ.ಎಲ್ ಕಡಿಮೆ ಅಥವಾ ಜಾಸ್ತಿಯಿದ್ದರೆ ಅದನ್ನು ಪರಿಗಣಿಸಬಹುದು. ಅದಕ್ಕೂ ಮೀರಿ ವ್ಯತ್ಯಾಸವಾದರೆ ದೂರು ದಾಖಲಿಸಬೇಕು.

  ಪೆಟ್ರೋಲ್ ಬಂಕ್ ವಂಚನೆ ಜಾಲದಿಂದ ಸಾವಿರಾರು ಕೋಟಿ ಮೋಸ!

  English summary
  New electronic chip is in the market to cheat customers at Fuel Stations, Recent incidents have led to growing suspicion that a new type of technology-based fraud has been rampant in the state's petrol bunkers. The details of the high-tech deception that fuels the idea of a chip plugged into a keyboard pressed before filling petrol or diesel are astonishing.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X